ಪ್ರೇಮದ ಊರಲಿ ನಟ ಶ್ರೀರಾಮ್ 
ಸಿನಿಮಾ ಸುದ್ದಿ

'ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲೂ ಬಾರದು': ಯಶ್ ಅಭಿಮಾನಿಗಳಿಗೆ ಪ್ರೇಮದ ಊರಲಿ ನಟ ಶ್ರೀರಾಮ್ ಹೇಳಿದ್ದೇನು? Video

ಬೆಂಗಳೂರಿನ ಬಿಎಚ್ ಇಎಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶ್ರೀರಾಮ್, ಕನ್ನಡ ಚಿತ್ರರಂಗದ ಬೆಳವಣಿಗೆಯ ಕುರಿತು ಮತ್ತು ದಿವಂಗತ ನಟ ಸಾರ್ವಭೌಮ ಡಾ.ರಾಜ್ ಕುಮಾರ್..

ಬೆಂಗಳೂರು: ಇತ್ತೀಚೆಗೆ ತೆರೆಕಂಡು ಭಾರಿ ಯಶಸ್ಸು ಸಾಧಿಸಿರುವ ಪ್ರೇಮದ ಊರಲಿ ಚಿತ್ರದ ನಾಯಕ ನಟ ಕನ್ನಡ ಚಿತ್ರರಂಗದ ಕುರಿತು ನೀಡಿರುವ ಹೇಳಿಕೆಯೊಂದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಬಿಎಚ್ ಇಎಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶ್ರೀರಾಮ್, ಕನ್ನಡ ಚಿತ್ರರಂಗದ ಬೆಳವಣಿಗೆಯ ಕುರಿತು ಮತ್ತು ದಿವಂಗತ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಕುರಿತು ಮಾತನಾಡಿದರು.

ಈ ವೇಳೆ ನಾವು ಯಾರೋ ಸಿನಿಮಾರಂಗವನ್ನೇ ಎತ್ತಿ ನಿಲ್ಲಿಸಿ ಬಿಟ್ಟಿದ್ದೀವಿ ಅಥವಾ ಏನೋ ಮಾಡಿಬಿಟ್ಟಿದ್ದೀವಿ ಅನ್ನೋದ್ ಅಲ್ಲ.. ಅಣ್ಣಾವ್ರ ಕಾಲದಿಂದಲೂ ಸಿನಿಮಾರಂಗ ಬಹಳ ಎತ್ತರದಲ್ಲೇ ಇದೆ. ಅಣ್ಣಾವ್ರು ಮತ್ತೆ ಇತರೆ ದೊಡ್ಡವರು ಎಲ್ಲ ಮಾಡಿ ಹೆಸರು ಮಾಡಿ ಹೋಗಿದ್ದಾರೆ.

ನಾವು ಚಿಕ್ಕದಾಗಿ ಪುಟ್ಟದಾಗಿ ಅಳಿಲು ಸೇವೆ ಮಾಡುತ್ತಿದ್ದೇವೆ ಅಷ್ಟೇ. ಅದಕ್ಕೆ ನಿಮ್ಮ ಬೆಂಬಲ ಪ್ರೀತಿ ಯಾವಾಗಲೂ ಹೀಗೇ ಇರಬೇಕು ಎಂದು ಮನವಿ ಮಾಡಿದರು.

ಶ್ರೀರಾಮ್ ಹೇಳಿದ್ದೇನು?

ಪ್ರೇಮದ ಊರಲಿ ಚಿತ್ರದ ಸಕ್ಸಸ್ ಕುರಿತು ಮಾತನಾಡಿದ ನಟ ಶ್ರೀರಾಮ್, ಚಿತ್ರವನ್ನು ತಮ್ಮ ಭುಜದ ಮೇಲಿಟ್ಟುಕೊಂಡು ಮೆರವಣಿಗೆ ಮಾಡಿದ್ದೀರಿ. ಇದೇ ಕಾರಣಕ್ಕೆ ಸಿನಿಮಾ ಇಂದು ಈ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟಿದೆ. ಈ ಗೆಲುವು ಕೇವಲ ನಮ್ಮದಲ್ಲ. ಇದು ಎಲ್ಲರ ಗೆಲುವು. ಇಂತಹ ಸಿನಿಮಾಗಳು ಹಲವಾರು ಬರಲಿ. ತಿಂಗಳಿಗೆ ಒಂದು ಸಿನಿಮಾ ಆದರೂ ಇದೇ ರೀತಿಯ ಗೆಲ್ಲಲಿ. ಆಗ ನಾವಷ್ಟೇ ಅಲ್ಲ. ಇಡೀ ಚಿತ್ರರಂಗ ಶ್ರೀಮಂತವಾಗುತ್ತದೆ ಎಂದು ಹೇಳಿದ್ದಾರೆ.

ಯಶ್ ಅಭಿಮಾನಿಗಳ ವಿರೋಧ

ಇನ್ನು ನಟ ಶ್ರೀರಾಮ್ ಅವರ ಹೇಳಿಕೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ವಿರೋಧಕ್ಕೂ ಕಾರಣವಾಗಿದೆ. ಈ ಹಿಂದೆ ನಟ ಯಶ್ ಕನ್ನಡ ಚಿತ್ರವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಮಾತನಾಡಿದ್ದರು.

ಅಂತೆಯೇ ಅವರ ಕೆಜಿಎಫ್, ಟಾಕ್ಸಿಕ್ ಮತ್ತು ಇತ್ತೀಚೆಗೆ ತೆರೆ ಕಂಡ ರಾಮಾಯಣ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ ನಟ ಶ್ರೀರಾಮ್ ಅವರು ನಟ ಯಶ್ ಅವರನ್ನೇ ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದು ಎಂದು ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ನಟ ಸ್ಪಷ್ಟನೆ

ಯಶ್ ಅಭಿಮಾನಿಗಳ ವಿರೋಧದ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದಿರುವ ಚರ್ಚೆಗಳಿಗೆ ನಟ ಶ್ರೀರಾಮ್ ಸ್ಪಷ್ಟನೆ ನೀಡಿದ್ದಾರೆ. ಯಾರ್ ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲೂ ಬಾರದು...!! ಎಂದು ಹೇಳಿರುವ ಅವರು ಯಶ್ ಅಭಿಮಾನಿಗಳಿಗೆ ನೇರ ಸಂದೇಶ ನೀಡಿದ್ದಾರೆ.

'ಯಾರು ಯಾರಿಗೂ ಟಾಂಗ್ ಕೊಟ್ಟಿಲ್ಲ. ಕೊಡಲೂ ಬಾರದು. ಅದು ಕೇವಲ ನನ್ನ ಬಗ್ಗೆ ಹಾಗೂ ನಮ್ಮ ಚಿತ್ರದ ಬಗ್ಗೆ ಇದ್ದ ವಿಷಯ ಅಷ್ಟೇ. ಅದು ಪೂರ್ತಿ ವಿಡಿಯೋ ಅಲ್ಲ. ಅಣ್ಣಾವ್ರ ಬಗ್ಗೆ ಇರುವ ಒಂದು ಪುಟ್ಟ ಅಭಿಮಾನದ ಮಾತು ಬಿಟ್ಟರೆ ಬೇರೆ ಯಾವ ಅರ್ಥವೂ ಇಲ್ಲ. ಆದರೂ ಈ ವಿಡಿಯೋವಿನ ತುಣುಕು ತಪ್ಪಾಗಿ ಕಂಡಿದ್ದರೆ ಕ್ಷಮೆ ಇರಲಿ ಎಂದು ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Made by China; ಪಾಕಿಸ್ತಾನದ ಅಣೆಕಟ್ಟು ಕಾಮಗಾರಿ ವೇಳೆ ಮತ್ತೆ ಭೂಕುಸಿತ, ಚೀನಾ ಕಂಪನಿಗಳ ಯೋಜನೆಗೆ ಭಾರೀ ಹಿನ್ನಡೆ-Video

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'NO' ಎಂದಿದ್ದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ...!

'ಸವಾಲನ್ನು ಸ್ವೀಕರಿಸುವ ಧೈರ್ಯ ನಿಮಗಿದೆಯೇ? ಸಂಸದ ತೇಜಸ್ವಿ ಸೂರ್ಯಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

ಅಸ್ಸಾಂನಿಂದ ಕರೆತಂದ ನಾಲ್ಕೇ ದಿನಕ್ಕೆ ಮತ್ತೆ ಹೆಣ್ಣು ಹುಲಿ ಪರಾರಿ; ಕೇಜ್ ಕೆಳಗೆ ಸುರಂಗ ತೋಡಿ ಗ್ರೇಟ್ ಎಸ್ಕೇಪ್!

ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು, ರೋಬೋಟ್ ನಿಯೋಜನೆ-Video