ಅಮೃತ ವರ್ಷಿಣಿಗೆ ಸಜ್ಜಾದ ತಂಡ 
ಸಿನಿಮಾ ಸುದ್ದಿ

3 ದಶಕಗಳ ಬಳಿಕ ಒಂದಾದ ರಮೇಶ್‌- ಸುಹಾಸಿನಿ: ಸೀಕ್ವೆಲ್ ನಲ್ಲಿ ಜಾದೂ ಮಾಡಲು ಸಜ್ಜಾಗಿದೆ 'ಅಮೃತ ವರ್ಷಿಣಿ'!

ಆಕರ್ಷಕ ಕಥಾಹಂದರ, ಭಾವನಾತ್ಮಕ ಆಳ ಮತ್ತು ದೇವಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಮಧುರ ಗೀತೆಗಳಿಂದಾಗಿ, ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.

ಕೆಲವು ಚಲನಚಿತ್ರಗಳು ಪ್ರೇಕ್ಷಕರ ಹೃದಯದಿಂದ ಎಂದಿಗೂ ಮಾಸುವುದಿಲ್ಲ. ದಿನೇಶ್ ಬಾಬು ನಿರ್ದೇಶನದಲ್ಲಿ, ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅಭಿನಯಿಸಿದ 1997ರ ಕನ್ನಡದ ಶ್ರೇಷ್ಠ ಚಲನಚಿತ್ರ 'ಅಮೃತವರ್ಷಿಣಿ', ಅಂತಹ ಒಂದು ಕಾಲಾತೀತ ಮೇರುಕೃತಿಯಾಗಿದೆ.

ಆಕರ್ಷಕ ಕಥಾಹಂದರ, ಭಾವನಾತ್ಮಕ ಆಳ ಮತ್ತು ದೇವಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಮಧುರ ಗೀತೆಗಳಿಂದಾಗಿ, ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.

ಈ ಮೂಲ ಚಿತ್ರದ ಕಥೆಯು ಮೂರು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ: ಹೇಮಂತ್, ಆತನ ಪತ್ನಿ ವೀಣಾ ಮತ್ತು ಅವರ ಬಾಲ್ಯದ ಸ್ನೇಹಿತ ಅಭಿಷೇಕ್ ಭಾರದ್ವಾಜ್. ಅಭಿಷೇಕ್‌ನ ಓನ್ ವೇ ಪ್ರೀತಿ ವ್ಯಾಮೋಹದಿಂದಾಗಿ ಕಥೆಯಲ್ಲಿ ದುರಂತ ತಿರುವು ಪಡೆಯುತ್ತದೆ. ಈ ಸಿನಿಮಾ ಪ್ರೇಕ್ಷಕರಿಗೆ ಮರೆಯಲಾಗದಂತಹ ಚಲನಚಿತ್ರ ಅನುಭವವನ್ನು ನೀಡಿತ್ತು.

ಚಿತ್ರದಲ್ಲಿದ್ದ ಮಾನಸಿಕ ಸಂಘರ್ಷ, ನಾಟಕೀಯ ತಿರುವುಗಳು ಲಕ್ಷಾಂತರ ಪ್ರೇಕ್ಷಕರನ್ನು ಸೆರೆಹಿಡಿದವು. ಇದು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿದ್ದಲ್ಲದೆ, 'ರೊಮ್ಯಾಂಟಿಕ್ ಥ್ರಿಲ್ಲರ್' ಪ್ರಕಾರದ ಚಲನಚಿತ್ರಗಳಿಗೆ ಒಂದು ಉನ್ನತ ಮಾನದಂಡವನ್ನೂ ಸ್ಥಾಪಿಸಿತು.

ಸುಮಾರು ಮೂರು ದಶಕಗಳ ನಂತರ, 'ಅಮೃತವರ್ಷಿಣಿ 2' ಘೋಷಣೆಯೊಂದಿಗೆ ಆ ಹಳೆಯ ಮ್ಯಾಜಿಕ್ ಮತ್ತೆ ಮರುಕಳಿಸಲು ಸಜ್ಜಾಗಿದೆ. ಈ ಯೋಜನೆಯನ್ನು ಆರ್. ನವೀನ್ ಮತ್ತು ಬಿ.ಎಸ್. ಸುಧೀಂದ್ರ ಅವರು ನಿರ್ಮಿಸುತ್ತಿದ್ದಾರೆ. 29 ವರ್ಷಗಳ ನಂತರ ಈ ಶ್ರೇಷ್ಠ ಚಿತ್ರವನ್ನು ಮತ್ತೆ ತೆರೆಗೆ ತರುತ್ತಿರುವ ಬಗ್ಗೆ ಮಾತನಾಡಿದ ಸುಧೀಂದ್ರ, "ನಾವು 'ಅಮೃತವರ್ಷಿಣಿ 2'ಗಾಗಿ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅವರನ್ನು ಮತ್ತೆ ಕರೆತರುತ್ತಿದ್ದೇವೆ.

ನಿರ್ದೇಶಕರು ಈ ಕಥೆಯನ್ನು ಮೂಲ ಚಿತ್ರದ ಅಂತಿಮ ದೃಶ್ಯ ಎಲ್ಲಿ ಕೊನೆಗೊಂಡಿತೋ, ಅಲ್ಲಿಂದಲೇ ಮುಂದುವರಿಸಲು ಯೋಜಿಸಿದ್ದಾರೆ. ಮತ್ತೊಮ್ಮೆ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಹೊತ್ತಿದ್ದಾರೆ. ಸುಮಾರು ಮೂರು ದಶಕಗಳು ಕಳೆದರೂ, ಈ ಪಾತ್ರಗಳ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ.

ಮೂಲ ಚಿತ್ರದ ಕೊನೆಯ ದೃಶ್ಯದಿಂದಲೇ ಕಥೆಯನ್ನು ಮುಂದುವರಿಸುವುದು ಒಂದು ವಿಶಿಷ್ಟ ಸೃಜನಶೀಲ ಪ್ರಯಾಣವಾಗಿದ್ದು, ಇದನ್ನು ತೆರೆಯ ಮೇಲೆ ತರಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ಮೂಲ ಚಿತ್ರದ ಪ್ರಮುಖ ಪಾತ್ರಧಾರಿಗಳ ಜೊತೆಗೆ, ಈ ಚಿತ್ರದಲ್ಲಿ ಹೊಸ ಕಲಾವಿದರ ತಂಡವೂ ಇರಲಿದೆ. ಇದರಲ್ಲಿ ಹೊಸ ನಟರೊಬ್ಬರು ಪ್ರವೇಶಿಸಲಿದ್ದಾರೆ. ಚಿತ್ರದ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿ ಇರಿಸಲಾಗಿದ್ದರೂ, ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನಕ್ಕಾಗಿ ಅತ್ಯುತ್ತಮ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ನಮ್ಮ ಮೆಟ್ರೊ ಪಿಂಕ್ ಲೈನ್ ಪ್ರಧಾನಿ ಮೋದಿ ಉದ್ಘಾಟನೆ; ನ.14ರಿಂದ ಕಾರ್ಯಾಚರಣೆ

4th ODI: ಒಂದೇ ಓವರ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಡಕೌಟ್, Matt Henry ಮಾರಕ ಬೌಲಿಂಗ್, ವಿಶ್ವದಾಖಲೆ!

ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ 74 ಭಯೋತ್ಪಾದಕರ ಹತ್ಯೆ: ಪಾಕಿಸ್ತಾನ ಸೇನೆ

4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

ಝಾಕಿರ್ ನಾಯಕ್​ಗೆ ಮೋದಿ ಸರ್ಕಾರ ಶಾಕ್: 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ!