ಧನುಷ್, ಸಾಯಿ ಪಲ್ಲವಿ ಮತ್ತು ಮಮ್ಮುಟ್ಟಿ ಅಭಿನಯದ 'OM' ಚಿತ್ರವು ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿಯೇ ಭಾರತದಲ್ಲಿ 50 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ. ಭಾನುವಾರ ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾದ ದೈನಂದಿನ ಗಳಿಕೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಸ್ಥಿರವಾದ ಪ್ರದರ್ಶನವನ್ನು ಕಾಯ್ದುಕೊಂಡಿದೆ. ಸಿನಿಮಾದ ಒಟ್ಟು ಜಾಗತಿಕ ಗಳಿಕೆ ಈಗ 85.30 ಕೋಟಿ ರೂ. ತಲುಪಿದೆ.
'Sacnilk' ವರದಿಯ ಪ್ರಕಾರ, 'OM' ಸಿನಿಮಾ ಮೂರನೇ ದಿನ ಭಾರತದಲ್ಲಿ 6,546 ಪ್ರದರ್ಶನಗಳ ಮೂಲಕ 15.90 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಶನಿವಾರದ 16.25 ಕೋಟಿ ರೂ. ಗಳಿಕೆಗೆ ಹೋಲಿಸಿದರೆ ಇದು ಶೇಕಡಾ 2.2 ರಷ್ಟು ಅಲ್ಪ ಇಳಿಕೆಯಾಗಿದೆ.
ಬಿಡುಗಡೆಯಾದ ಮೊದಲ ದಿನದಂದು ಈ ಸಿನಿಮಾ 18.10 ಕೋಟಿ ರೂ. ಗಳಿಸಿತ್ತು. ನಂತರ ಎರಡನೇ ದಿನ ಶೇಕಡಾ 10.2 ರಷ್ಟು ಕುಸಿತ ಕಂಡಿತ್ತು. ಭಾನುವಾರದ ಗಳಿಕೆಯೊಂದಿಗೆ, ಭಾರತದ ಒಟ್ಟು ನೆಟ್ ಕಲೆಕ್ಷನ್ 50.25 ಕೋಟಿ ರೂ.ಗೆ ತಲುಪಿದೆ ಮತ್ತು ದೇಶೀಯ ಒಟ್ಟು ಗಳಿಕೆ 58.30 ಕೋಟಿ ರೂ. ಆಗಿದೆ.
ಅಲ್ಲದೆ, ಭಾನುವಾರ ವಿದೇಶಿ ಮಾರುಕಟ್ಟೆಗಳಿಂದ 5 ಕೋಟಿ ರೂ. ಗಳಿಸಿದ್ದು, ಇದರೊಂದಿಗೆ ವಿದೇಶಿ ಮಾರುಕಟ್ಟೆಯ ಒಟ್ಟು ಗಳಿಕೆ 27 ಕೋಟಿ ರೂ.ಗೆ ಏರಿದೆ. ಪ್ರಸ್ತುತ ಚಿತ್ರದ ಜಾಗತಿಕ ಒಟ್ಟು ಗಳಿಕೆ 85.30 ಕೋಟಿ ರೂ. ಆಗಿದೆ.
ತಮಿಳು ಆವೃತ್ತಿ ಮುನ್ನಡೆ: ಸಿನಿಮಾದ ದೇಶೀಯ ಗಳಿಕೆಯಲ್ಲಿ ತಮಿಳು ಆವೃತ್ತಿಯೇ ಅತಿ ದೊಡ್ಡ ಪಾಲನ್ನು ಹೊಂದಿದೆ. ಭಾನುವಾರ ತಮಿಳು ಆವೃತ್ತಿಯು 11.55 ಕೋಟಿ ರೂ. ಗಳಿಸಿದರೆ, ತೆಲುಗು ಆವೃತ್ತಿಯು 3.80 ಕೋಟಿ ರೂ. ಕೊಡುಗೆ ನೀಡಿದೆ. ಹಿಂದಿ ಆವೃತ್ತಿಯಿಂದ 55 ಲಕ್ಷ ರೂ. ಬಂದಿದೆ. ಮೊದಲ ಮೂರು ದಿನಗಳಲ್ಲಿ, ತಮಿಳು ಆವೃತ್ತಿಯ ಪ್ರದರ್ಶನಗಳಿಂದ ಸಿನಿಮಾ 37.30 ಕೋಟಿ ರೂ. ಗಳಿಸಿದ್ದು, ಇದು ಭಾರತದ ಒಟ್ಟು ನೆಟ್ ಗಳಿಕೆಯ ಶೇಕಡಾ 74.2 ರಷ್ಟಾಗಿದೆ. ತೆಲುಗು ಆವೃತ್ತಿಯು 11.50 ಕೋಟಿ ರೂ. ಹಿಂದಿ ಆವೃತ್ತಿಯು 1.45 ಕೋಟಿ ರೂ. ಬಂದಿದೆ.
ಈ ಚಲನಚಿತ್ರವು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಭಾರತದಾದ್ಯಂತ 19,662 ಪ್ರದರ್ಶನಗಳನ್ನು ಕಂಡಿದೆ. ಭಾನುವಾರವೊಂದರಲ್ಲೇ ಸುಮಾರು 12,39,479 ಟಿಕೆಟ್‌ಗಳು ಮಾರಾಟವಾಗಿದ್ದು, ಇದರೊಂದಿಗೆ ಒಟ್ಟು ಮಾರಾಟವಾದ ಟಿಕೆಟ್‌ಗಳ ಸಂಖ್ಯೆ 38,87,530 ಕ್ಕೆ ತಲುಪಿದೆ. ಪ್ರೇಕ್ಷಕರ ಹಾಜರಾತಿಯ ವಿಷಯಕ್ಕೆ ಬಂದರೆ, ಭಾನುವಾರದಂದು ತಮಿಳು ಆವೃತ್ತಿಯ ಪ್ರದರ್ಶನಗಳು 52.1% ರಷ್ಟು ಹಾಜರಾತಿಯನ್ನು ದಾಖಲಿಸಿವೆ. ತೆಲುಗು ಪ್ರದರ್ಶನಗಳು 45.1% ರಷ್ಟು ಹಾಜರಾತಿಯನ್ನು ಹೊಂದಿದ್ದರೆ, ಹಿಂದಿ ಆವೃತ್ತಿಯು 20% ರಷ್ಟು ಹಾಜರಾತಿಯನ್ನು ದಾಖಲಿಸಿದೆ.
ದೇಶೀಯ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತಮಿಳುನಾಡು ಅತಿ ದೊಡ್ಡ ಕೊಡುಗೆ ನೀಡಿದ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಒಟ್ಟು 7.75 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದು ರಾಜ್ಯವಾರು ದಾಖಲಾದ ಒಟ್ಟು ಗಳಿಕೆಯ ಶೇಕಡಾ 42ರಷ್ಟಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಟ್ಟಾಗಿ 4.35 ಕೋಟಿ ರೂಪಾಯಿಗಳನ್ನು ನೀಡಿದರೆ, ಕೇರಳದಿಂದ 3.50 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ 1.85 ಕೋಟಿ ರೂಪಾಯಿ ಗಳಿಕೆಯಾಗಿದ್ದು, ಭಾರತದ ಉಳಿದ ಮಾರುಕಟ್ಟೆಗಳಿಂದ 1 ಕೋಟಿ ರೂಪಾಯಿ ಬಂದಿದೆ.
2026ರ ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಲನಚಿತ್ರಗಳಲ್ಲಿ 'OM' ಕೂಡ ಒಂದಾಗಿದೆ: 'ಬಾಲಿಮೂವಿರಿವ್ಯೂಸ್' (Bollymoviereviewz) ವರದಿಯ ಪ್ರಕಾರ, 2026ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾಗಳ ಪೈಕಿ, ಮೊದಲ ದಿನವೇ ಉತ್ತಮ ಗಳಿಕೆ ಕಂಡ ಚಿತ್ರಗಳ ಸಾಲಿನಲ್ಲಿ 'OM' ಸ್ಥಾನ ಪಡೆದಿದೆ. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ 30 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದೇ ಮೊತ್ತವನ್ನು ಗಳಿಸಿದ್ದ 'ವಿಶ್ವನಾಥ್ ಅಂಡ್ ಸನ್ಸ್' (Vishwanath & Sons) ಚಿತ್ರದೊಂದಿಗೆ 'OM' ಈಗ ಸಮನಾದ ಸ್ಥಾನದಲ್ಲಿದೆ.
'ಜೈಲರ್ 2' ಚಿತ್ರವು ಮೊದಲ ದಿನ 124 ಕೋಟಿ ರೂಪಾಯಿ ಗಳಿಕೆಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ 'ಜನ ನಾಯಕನ್' 81.05 ಕೋಟಿ ರೂ. ಮತ್ತು 'ಸೀನ್' 36.65 ಕೋಟಿ ರೂ 'ಕರುಪ್ಪು' ಮತ್ತು 'ಪರಾಶಕ್ತಿ' (Parasakthi) ಚಿತ್ರಗಳು ಕ್ರಮವಾಗಿ 28 ಕೋಟಿ ರೂಪಾಯಿ ಮತ್ತು 24 ಕೋಟಿ ರೂಪಾಯಿಗಳ ಆರಂಭಿಕ ದಿನದ ಗಳಿಕೆಯನ್ನು ದಾಖಲಿಸಿವೆ. ಸುಮಾರು 120 ಕೋಟಿ ರೂ ಬಜೆಟ್ ನ 'OM' ಚಿತ್ರವು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ತನ್ನ ವೆಚ್ಚದ ಗಮನಾರ್ಹ ಭಾಗವನ್ನು ಮರಳಿ ಗಳಿಸಿದೆ. ಪ್ರಸ್ತುತ ಈ ಚಿತ್ರದ ಜಾಗತಿಕ ಒಟ್ಟು ಗಳಿಕೆ 85.30 ಕೋಟಿ ರೂಪಾಯಿಗಳಷ್ಟಿದೆ.