ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಭಾವಿ ಪತಿ ಬಿಗ್‌ಬಾಸ್ ಗೆಲ್ಲಲೆಂದು 3,550 ತಿರುಪತಿ ಮೆಟ್ಟಿಲುಗಳನ್ನು ಮೊಣಕಾಲಲ್ಲೇ ಹತ್ತಿದ ಖ್ಯಾತ ನಟಿ!

ಕಿರುತೆರೆ c ಅವರು ತಮ್ಮ ಭಾವಿ ಪತಿ ಶಿವಕುಮಾರ್ ಬಿಗ್ ಬಾಸ್ ಸೀಸನ್ 10 ಟ್ರೋಫಿ ಗೆಲ್ಲಲಿ ಎಂದು ಹರಕೆ ಹೊತ್ತು, ಮೊಣಕಾಲಿನ ಮೇಲೆ ತಿರುಪತಿ ಬೆಟ್ಟದ ಮೆಟ್ಟಿಲುಗಳನ್ನು ಏರಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಭಾವಿ ಪತಿ ಶಿವಕುಮಾರ್ ಬಿಗ್‌ಬಾಸ್ ಗೆಲುವಿಗಾಗಿ ಮೊಣಕಾಲಿನಲ್ಲಿ ತಿರುಪತಿ ಬೆಟ್ಟ ಏರಿದ ಪ್ರಿಯಾಂಕಾ ಜೈನ್ — Online Desk
Hruthin H P
Updated On : 27 Nov 2026, 6:00 pm

ತಿರುಮಲ (ಆಂಧ್ರಪ್ರದೇಶ): ಪ್ರೀತಿ ಮತ್ತು ಭಕ್ತಿಗೆ ಸಾಕ್ಷಿಯಾದ ಅಪರೂಪದ ಕ್ಷಣವಿದು! ತಮ್ಮ ಭಾವಿ ಪತಿ ಶಿವಕುಮಾರ್ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಲೆಂದು ಕಿರುತೆರೆ ನಟಿ ಪ್ರಿಯಾಂಕಾ ಜೈನ್ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಹರಕೆ ಹೊತ್ತಿದ್ದಾರೆ. ಬರಿಗಾಲಿನಲ್ಲಿ ಅಲ್ಲ, ಬದಲಾಗಿ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಬರೋಬ್ಬರಿ 3,550 ಮೆಟ್ಟಿಲುಗಳನ್ನು ಮೊಣಕಾಲಿನಲ್ಲೇ ಹತ್ತುವ ಮೂಲಕ ತಮ್ಮ ಪ್ರೀತಿಯ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಭಾವನಾತ್ಮಕ ವಿಡಿಯೋ ವೈರಲ್

ಪ್ರಿಯಾಂಕಾ ಜೈನ್ ಅವರು ಮೊಣಕಾಲಿನ ಮೇಲೆ ಮೆಟ್ಟಿಲುಗಳನ್ನು ಹತ್ತುತ್ತಾ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿವಕುಮಾರ್ ಅವರನ್ನು ಗೆಲ್ಲಿಸುವಂತೆ ಅಭಿಮಾನಿಗಳಲ್ಲಿ ವೋಟ್ ಮಾಡಲು ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಈ ಹಿಂದೆ ಪ್ರಿಯಾಂಕಾ ಜೈನ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ, ಅವರ ಗೆಲುವಿಗಾಗಿ ಶಿವಕುಮಾರ್ ಕೂಡ ಇದೇ ರೀತಿ ಮೊಣಕಾಲಿನಲ್ಲಿ ತಿರುಪತಿ ಮೆಟ್ಟಿಲುಗಳನ್ನು ಹತ್ತಿ ಪ್ರಾರ್ಥಿಸಿದ್ದರು. ಈಗ ಪ್ರಿಯಾಂಕಾ ಅವರು ತಮ್ಮ ಭಾವಿ ಪತಿಗಾಗಿ ಅದೇ ರೀತಿಯ ಹರಕೆ ತೀರಿಸಿದ್ದಾರೆ.

Advertisement

Advertisement

ಬಿಗ್ ಬಾಸ್ ಮನೆಯಲ್ಲೇ ನಿಶ್ಚಿತಾರ್ಥ

ಪ್ರಿಯಾಂಕಾ ಜೈನ್ ಮತ್ತು ಶಿವಕುಮಾರ್ ಇಬ್ಬರೂ ಜನಪ್ರಿಯ ತೆಲುಗು ಧಾರಾವಾಹಿ ಮೌನರಾಗಂ ಮೂಲಕ ಮನೆಮಾತಾದವರು. ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಅದರಲ್ಲೂ ಬಿಗ್ ಬಾಸ್ ತೆಲುಗು ಸೀಸನ್ 10ರ ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಮನೆಯೊಳಗೆ ಅತಿಥಿಯಾಗಿ ಬಂದಿದ್ದ ಪ್ರಿಯಾಂಕಾ ಜೈನ್, ಸಹ ಸ್ಪರ್ಧಿಗಳ ಸಮ್ಮುಖದಲ್ಲೇ ಶಿವಕುಮಾರ್ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆ ಮೂಲಕ ತೆಲುಗು ಬಿಗ್ ಬಾಸ್ ಇತಿಹಾಸದಲ್ಲೇ ರಿಯಾಲಿಟಿ ಶೋ ಮನೆಯೊಳಗೆ ನಿಶ್ಚಿತಾರ್ಥ ಮಾಡಿಕೊಂಡ ಮೊದಲ ಜೋಡಿ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.

Also Read

ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶ: ಮಿಂಚಿನ ವೇಗದಲ್ಲಿ ಟಾಸ್ಕ್‌ ಗೆದ್ದು ತೋರಿಸಿದ ಧನುಷ್; ಜೋಕರ್‌ ಕಾರ್ಡ್‌ ಗೆದ್ದು ಆಟದ ದಿಕ್ಕನ್ನೇ ಬದಲಿಸಿದ ಟಾಸ್ಕ್‌ ಮಾಸ್ಟರ್‌..!

ಯಾರು ಈ ಪ್ರಿಯಾಂಕಾ ಜೈನ್?

ಮುಂಬೈ ಮೂಲದವರಾದ ಪ್ರಿಯಾಂಕಾ ಜೈನ್ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದ ಮೂಲಕವೇ ಆರಂಭಿಸಿದರು. 2015ರಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಸೂಪರ್ ಹಿಟ್ ಕನ್ನಡ ಸಿನಿಮಾ ರಂಗಿತರಂಗದಲ್ಲಿ ಸಣ್ಣ ಪಾತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ನಂತರ 2016ರಲ್ಲಿ ಗೋಲಿಸೋಡ ಮತ್ತು ಚಿರವಾದ ನೆನಪು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ತದನಂತರ 2018ರಲ್ಲಿ ತೆಲಗು ಭಾಷಯಲ್ಲಿ ಪ್ರಸಾರವಾದ ಮೌನರಾಗಂ ಧಾರಾವಾಹಿಯಲ್ಲಿ ಮಾತು ಬಾರದ ಅಮ್ಮುಲು ಪಾತ್ರದಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದರು. ಇದೇ ಧಾರಾವಾಹಿಯ ನಾಯಕ ನಟ ಶಿವಕುಮಾರ್ ಅವರೊಂದಿಗೆ ಪ್ರಿಯಾಂಕಾ ಪ್ರೀತಿಯಲ್ಲಿ ಬಿದ್ದರು. ಇನ್ನು ಮೌನರಾಗಂ ಜೊತೆಗೆ ತೆಲುಗಿನ ಸೂಪರ್ ಹಿಟ್ ಧಾರಾವಾಹಿ ಜಾನಕಿ ಕಲಗನಲೇದು ಹಾಗೂ ತಮಿಳಿನ ಕಾಟ್ರಿನ್ ಮೊಳಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement