ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್ ಚಿತ್ರಕ್ಕೆ 'ದಾದಾ' ಶೀರ್ಷಿಕೆ
‘ದಿ ವಿಲನ್’ ಚಿತ್ರದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಇಂದು ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಹೊಸ ಚಿತ್ರಕ್ಕೆ 'ದಾದಾ ಆನ್ ಹಾಲಿಡೇಸ್' ಎಂದು ಹೆಸರಿಡಲಾಗಿದೆ.
‘ದಿ ವಿಲನ್’ ಚಿತ್ರದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಇಂದು ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಿಬಿಎಫ್‌ಸಿ (CBFC) ಪ್ರಮಾಣಪತ್ರದ ಸ್ಕ್ರೀನ್‌ಶಾಟ್ ಪ್ರಕಾರ, ಈ ಹೊಸ ಚಿತ್ರಕ್ಕೆ 'ದಾದಾ ಆನ್ ಹಾಲಿಡೇಸ್' ಎಂದು ಹೆಸರಿಡಲಾಗಿದೆ.
ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಪ್ರೇಮ್, ಪ್ರತಿಯೊಂದು ಚಲನಚಿತ್ರವೂ ಒಂದು ಹೊಸ ಪಯಣ. ನಿಮ್ಮ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದದೊಂದಿಗೆ, ಕಿಚ್ಚ ಸುದೀಪ್ ಅವರೊಂದಿಗೆ ಕೈಗೊಂಡಿರುವ ನನ್ನ ಮುಂದಿನ ಚಲನಚಿತ್ರ ಪಯಣವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡ ‘ಮಾರ್ಕ್’ ಸಿನಿಮಾದ ಬಳಿಕ ಸುದೀಪ್ ‘ಬಿಲ್ಲ ರಂಗ ಭಾಷಾ’ ಚಿತ್ರದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ದೇವರಾಯ’ ಹಾಗೂ ತಮಿಳು ನಿರ್ದೇಶಕ ಚೇರನ್ ಅವರ ಸಿನಿಮಾ ಸೇರಿದಂತೆ ಹಲವು ಯೋಜನೆಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.