'ಪಹಲ್ಗಾಮ್ ಉಗ್ರ ದಾಳಿ', 'ಆಪರೇಷನ್ ಸಿಂಧೂರ' ಆಧರಿಸಿದ ಚಿತ್ರ ಘೋಷಣೆ; ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್, 9 ಭಾಷೆಗಳಲ್ಲಿ ತೆರೆಗೆ!
ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಸುತ್ತಮುತ್ತಲಿನ ಘಟನೆಗಳನ್ನು ತೆರೆ ಮೇಲೆ ತರಲಿದೆ.
ನವದೆಹಲಿ: ನಟ ಅರ್ಜುನ್ ಸರ್ಜಾ ಅವರು ಪಹಲ್ಗಾಮ್ ಉಗ್ರ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಪ್ರೆಸಿಡೆನ್ಶಿಯಲ್ ಮೂವೀಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಅನೂಪ್ ಮೋಹನ್ ನಿರ್ಮಿಸಲಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಶನಿವಾರ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚಿತ್ರತಂಡ ಈ ಸಮಾರಂಭದ ಸರಣಿ ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಸುತ್ತಮುತ್ತಲಿನ ಘಟನೆಗಳನ್ನು ತೆರೆ ಮೇಲೆ ತರಲಿದೆ.
ಪಹಲ್ಗಾಮ್ ಉಗ್ರ ದಾಳಿಯು ಏಪ್ರಿಲ್ 2025ರಲ್ಲಿ ನಡೆದು 26 ಜನರ ಸಾವಿಗೆ ಕಾರಣವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಉಗ್ರ ನೆಲೆಗಳ ಮೇಲೆ ದಾಳಿ ನಡೆಯಿತು.
ಈ ಚಿತ್ರಕಥೆಯನ್ನು ಮೇಜರ್ ವಿಜಯ್ ಭಾರ್ಗವ್ ಬರೆದಿದ್ದು, ಈ ಯೋಜನೆಗೆ ವಿಶಿಷ್ಟ ದೃಷ್ಟಿಕೋನವನ್ನು ತರಲಿದ್ದಾರೆ.
ತಮ್ಮ ಮಿಲಿಟರಿ ಹಿನ್ನೆಲೆ ಮತ್ತು ಸೇವೆ, ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆಯ ವಾಸ್ತವಗಳ ತಿಳಿವಳಿಕೆಯನ್ನು ಆಧರಿಸಿ, ಅವರು ದೃಢತೆ ಮತ್ತು ಭಾವನಾತ್ಮಕ ಆಳ ಎರಡನ್ನೂ ಈ ಕಥೆಗೆ ಸೇರಿಸಲಿದ್ದಾರೆ. ಈ ಚಿತ್ರವನ್ನು ಒಂಬತ್ತು ಭಾಷೆಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ.