ಜೈಲರ್ 2 Online Desk
ಸಿನಿಮಾ ಸುದ್ದಿ

ಚೆನ್ನೈನಲ್ಲಿ 50 ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ, ಕರ್ನಾಟಕದಲ್ಲಿ ಹಗಲು ದರೋಡೆ!

ಚಿತ್ರಮಂದಿರದ ಬಾಗಿಲಿಗೆ ಹೋಗಿ ಕಣ್ಮುಚ್ಚಿ ಪರ್ಸ್ ತೆರೆಯುವ ಮುನ್ನ ಕನ್ನಡಿಗರು ಈ ಲೆಕ್ಕಾಚಾರವನ್ನು ನೋಡಲೇಬೇಕು. ಪಕ್ಕದ ತಮಿಳುನಾಡಿನಲ್ಲಿ ಕೇವಲ 150 ರೂಪಾಯಿಗೆ ಸಿಗುವ ಅದೇ ತಮಿಳು ಸಿನಿಮಾದ ಟಿಕೆಟ್, ನಮ್ಮ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬರೋಬ್ಬರಿ 1800 ರೂಪಾಯಿಗೂ ಅಧಿಕ ದರಕ್ಕೆ ಮಾರಾಟವಾಗುತ್ತಿದೆ.

ಬಹಳ ದಿನಗಳಿಂದ ಕಾಯುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಟಿಕೆಟ್ ದರಗಳ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಒಂದೇ ಸಿನಿಮಾವನ್ನು ನೋಡಲು ನೆರೆಯ ಎರಡು ರಾಜ್ಯಗಳ ಪ್ರೇಕ್ಷಕರು ನೀಡುತ್ತಿರುವ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೇವಲ ₹50 ರಿಂದ ₹200 ರೊಳಗೆ ಸಿನಿಮಾ ವೀಕ್ಷಿಸಬಹುದಾಗಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಸಿನಿಮಾ ಟಿಕೆಟ್ ದರ ಭರ್ಜರಿ ₹1800 ವರೆಗೆ ತಲುಪಿದೆ. ಕರ್ನಾಟಕದಲ್ಲಿ ವೀಕೆಂಡ್ ಹಾಗೂ ಸ್ಟಾರ್ ನಟರ ಸಿನಿಮಾಗಳ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು ನಡೆಸುವ ಈ ದರ ಹೆಚ್ಚಳವನ್ನು ಪ್ರೇಕ್ಷಕರು "ಹಗಲು ದರೋಡೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಖಂಡಿಸುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಒಂದೇ ಸಿನಿಮಾ, ಎರಡು ರಾಜ್ಯ, ಅಜಗಜಾಂತರ ಬೆಲೆ

  • ಚೆನ್ನೈ (ತಮಿಳುನಾಡು): ಚೆನ್ನೈನಲ್ಲಿ ಜೈಲರ್ 2 ಟಿಕೆಟ್ ದರಗಳು ಕೇವಲ ₹50 ರಿಂದ ₹400 ರಷ್ಟಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಗರಿಷ್ಠ ದರ ₹250 ರ ಆಸುಪಾಸಿನಲ್ಲಿದೆ.

  • ಬೆಂಗಳೂರು (ಕರ್ನಾಟಕ): ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಯ ಆರಂಭಿಕ ಪ್ರದರ್ಶನಗಳ ಟಿಕೆಟ್ ದರಗಳು ₹670 ರಿಂದ ಆರಂಭವಾಗಿ ₹1,600 ಹಾಗೂ ಪ್ರೀಮಿಯಂ ಮತ್ತು ರಿಕ್ಲೈನರ್ ಸೀಟುಗಳಿಗೆ ಬರೋಬ್ಬರಿ ₹1,800 ರಿಂದ ₹2,000 ವರೆಗೆ ತಲುಪಿದೆ. ಅಂದರೆ, ಸರಾಸರಿ ಟಿಕೆಟ್ ದರವೇ ₹800 ರಿಂದ ₹1,000 ಇದೆ.

ಈ ದರ ತಾರತಮ್ಯಕ್ಕೆ ಮುಖ್ಯ ಕಾರಣಗಳೇನು?

  • ತಮಿಳುನಾಡಿನ ದರ ನಿಯಂತ್ರಣ ಕಾನೂನು: ತಮಿಳುನಾಡು ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರದ ಮೇಲೆ ಗರಿಷ್ಠ ಮಿತಿಯನ್ನು ಹೇರಿದೆ. ಅಲ್ಲಿನ ಮಲ್ಟಿಪ್ಲೆಕ್ಸ್‌ಗಳಾಗಲಿ ಅಥವಾ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಾಗಲಿ ಸರ್ಕಾರದ ಅನುಮತಿಯಿಲ್ಲದೆ ಕಾನೂನುಬದ್ಧವಾಗಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಿಸುವಂತಿಲ್ಲ.

  • ಕರ್ನಾಟಕದಲ್ಲಿ ಮುಕ್ತ ಮಾರುಕಟ್ಟೆ ದರ: ಕರ್ನಾಟಕದಲ್ಲಿ ದೊಡ್ಡ ಬಜೆಟ್ ಅಥವಾ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗುವಾಗ ಬೇಡಿಕೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ಇದನ್ನು ಬಳಸಿಕೊಂಡು ಮಲ್ಟಿಪ್ಲೆಕ್ಸ್ ಮಾಲೀಕರು ಮತ್ತು ವಿತರಕರು ಆರಂಭದ ದಿನಗಳಲ್ಲಿ ಟಿಕೆಟ್ ದರವನ್ನು ಗಗನಕ್ಕೇರಿಸುತ್ತಾರೆ.

  • ಹೈ-ಹೈಪ್ ಮತ್ತು ಫ್ಯಾನ್ ಬೇಸ್: ಬೆಂಗಳೂರಿನಲ್ಲಿ ತಮಿಳು ಚಿತ್ರಗಳಿಗೆ ಮತ್ತು ರಜನಿಕಾಂತ್ ಅವರಿಗೆ ಇರುವ ಭಾರಿ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ಇಷ್ಟು ದೊಡ್ಡ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!