ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಗೆ ವಿಜಯ್ 
ಸಿನಿಮಾ ಸುದ್ದಿ

'ರಣಬಾಲಿ' ಬಿಡುಗಡೆಗೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಭೇಟಿ ಮಾಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ!

ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರವು ಅಕ್ಟೋಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ರಣಬಾಲಿ' (Ranabaali) ಚಿತ್ರದ ಬಿಡುಗಡೆಗೂ ಮುನ್ನ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾದರು ಮತ್ತು ಆ ಭೇಟಿಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ತಮ್ಮ ಪೋಸ್ಟ್‌ನಲ್ಲಿ, 'ಬಹಳ ದೀರ್ಘಕಾಲದ ನಂತರ ನಾನು ವಿಜಯ್ ಸರ್ ಅವರನ್ನು ಭೇಟಿಯಾದೆ. ನೆನಪಿರುವ ಕಾಲದಿಂದಲೂ ಅವರ ದೊಡ್ಡ ಅಭಿಮಾನಿಯಾಗಿರುವುದರಲ್ಲೇ ಆರಂಭವಾಗಿ, ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿ, ಇಂದು ಅವರು ಮುಖ್ಯಮಂತ್ರಿಯಾಗಿರುವ ರೀತಿಯನ್ನು ಕಂಡು ಗೌರವಿಸುವವರೆಗೆ - ಅವರ ಈ ಪಯಣ ನಿಜಕ್ಕೂ ಅದ್ಭುತವಾಗಿದೆ!' ಎಂದಿದ್ದಾರೆ.

ಮತ್ತೊಂದೆಡೆ, ವಿಜಯ್ ದೇವರಕೊಂಡ, 'ಅತ್ಯಂತ ಆತ್ಮೀಯರಾದ ' ದಳಪತಿ' ವಿಜಯ್ ಸರ್ ಅವರೊಂದಿಗೆ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ. ಸುದೀರ್ಘ ದಿನದ ಕೆಲಸದ ನಂತರವೂ, ಅವರು ನಮ್ಮನ್ನು ಅಪಾರ ಪ್ರೀತಿಯಿಂದ ಬರಮಾಡಿಕೊಂಡರು ಹಾಗೂ ಜೀವನ, ಕೆಲಸ ಮತ್ತು ಪ್ರಪಂಚದ ಕುರಿತು ತಮ್ಮ ವೈಯಕ್ತಿಕ ಒಳನೋಟಗಳನ್ನು ಹಂಚಿಕೊಂಡರು. ಕೇವಲ ಒಂದೇ ಭೇಟಿಯಲ್ಲಿ ಅವರು ನನಗೆ ಅತ್ಯಂತ ಪ್ರಿಯರಾಗಿಬಿಟ್ಟಿದ್ದಾರೆ. ಮುಂದಿನ ಭೇಟಿಯವರೆಗೂ, ನನ್ನ ಪ್ರೀತಿ ಮತ್ತು ಗೌರವಗಳು' ಎಂದು ಬರೆದಿದ್ದಾರೆ.

'ರಣಬಾಲಿ' ಚಿತ್ರವು ಅಕ್ಟೋಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಇತ್ತೀಚೆಗೆ ಈ ಪಿರಿಯಡ್ ಆಕ್ಷನ್ ಡ್ರಾಮಾ ಚಿತ್ರದ ಟ್ರೈಲರ್ ಅನಾವರಣಗೊಳಿಸಿದ್ದು, ಇದರ ಮೂಲಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದಂತಾಗಿದೆ.

ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರವು 1876-78ರ ಮದ್ರಾಸ್ ಕ್ಷಾಮದ ಹಿನ್ನೆಲೆಯಲ್ಲಿ ಸಾಗುತ್ತದೆ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ತಮ್ಮ ಹಳ್ಳಿಯನ್ನು ರಕ್ಷಿಸಿಕೊಳ್ಳಲು ಒಬ್ಬ ವ್ಯಕ್ತಿ ನಡೆಸುವ ಹೋರಾಟವನ್ನು ಇದು ಚಿತ್ರಿಸುತ್ತದೆ.

3 ನಿಮಿಷ 47 ಸೆಕೆಂಡುಗಳ ಈ ಟ್ರೈಲರ್, ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸುವುದಲ್ಲದೆ, ಕಥೆಯು ನಡೆಯುವ ಗ್ರಾಮೀಣ ರಾಯಲಸೀಮೆ ಪ್ರದೇಶದ ಹಿನ್ನೆಲೆಯನ್ನು ಹಾಗೂ ಕಥಾಹಂದರಕ್ಕೆ ಚಾಲನೆ ನೀಡುವ ಸಂಘರ್ಷದ ಝಲಕ್‌ಗಳನ್ನು ಅನಾವರಣಗೊಳಿಸುತ್ತದೆ.

ವಿಜಯ್ ದೇವರಕೊಂಡ ಅವರು 'ಸಿಂಗನಮಲ' ಎಂಬ ಕಾಲ್ಪನಿಕ ಹಳ್ಳಿಯ ಕುದುರೆ ಸವಾರ ಹಾಗೂ ಹೋರಾಟಗಾರನಾದ 'ಸಿಂಗನಮಲ ಬೊಬ್ಬಿಲಿ ರಣಬಾಲಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರು ನಾಯಕನ ಪತ್ನಿ 'ಜಯಮ್ಮ'ನಾಗಿ ನಟಿಸಿದ್ದರೆ, ಅರ್ನಾಲ್ಡ್ ವೋಸ್ಲೂ ಬ್ರಿಟಿಷ್ ಕಮಿಷನರ್ 'ಸರ್ ಥಿಯೋಡರ್ ಹೆಕ್ಟರ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು