ಧನ್ವೀರ್ ವಿರುದ್ಧ ಪ್ರತಿಭಟನೆ 
ರಾಜ್ಯ

ಸಿಎಂ ಶಿವಕುಮಾರ್, ಝೈದ್ ಖಾನ್‌ಗೆ ಅವಮಾನ: ಧನ್ವೀರ್ ವಿರುದ್ಧ NSUI ದೂರು; ಅಭಿಮಾನಿಗಳಿಂದ ಪ್ರತಿಭಟನೆ!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಗೌಡ ನಡುವಿನ ಕೋಲ್ಡ್ ವಾರ್ ಈಗ ಮತ್ತೊಂದು ಮಜಲನ್ನು ಪಡೆದುಕೊಂಡಿದೆ. ಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಪುತ್ರ ಝೇದ್ ಖಾನ್ ಬಗ್ಗೆ ನಟ ಧ್ವನ್ವೀರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಗೌಡ ನಡುವಿನ ಕೋಲ್ಡ್ ವಾರ್ ಈಗ ಮತ್ತೊಂದು ಮಜಲನ್ನು ಪಡೆದುಕೊಂಡಿದೆ. ಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಪುತ್ರ ಝೇದ್ ಖಾನ್ ಬಗ್ಗೆ ನಟ ಧ್ವನ್ವೀರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ NSUI ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಗೆ ದೂರು ನೀಡಿದೆ. ಮತ್ತೊಂದೆಡೆ ಜಮೀರ್ ಅಭಿಮಾನಿಗಳು, ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಬಗ್ಗೆ ಧನ್ವೀರ್ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಅಭಿಮಾನಿಗಳು ಚನ್ನಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಜಮೀರ್ ಅಭಿಮಾನಿ ಬಳಗದ ಅಧ್ಯಕ್ಷ ಮಹಮದ್ ತೌಸಿಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಟೌನ್ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಅಭಿಮಾನಿಗಳು, ಝೈದ್ ಖಾನ್ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video

ಕೋಲ್ಕತ್ತಾ: ಗೆಳತಿಗೆ ಕಿಸ್ ಮಾಡಿದ್ದಕ್ಕೆ ಬಾಲಕ, ಆತನ ತಂದೆಗೆ ಬೆತ್ತಲೆ ಮೆರವಣಿಗೆ: ಗನ್‌ಪಾಯಿಂಟ್‌ನಲ್ಲಿ ಅಮಾನವೀಯ ಕೃತ್ಯ!

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11 ಕೆವಿ ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು

ಬೆಂಗಳೂರಿನಲ್ಲಿ 5 ತಿಂಗಳು ಲಿವಿಂಗ್ ರಿಲೇಷನ್‌ಶಿಪ್‌, ಬಳಿಕ ಎಸ್ಕೇಪ್; ಬಾಯ್ ಫ್ರೆಂಡ್ ಮನೆ ಮುಂದೆ ಯುವತಿ ಧರಣಿ!