ರಾಕಿಂಗ್ ಸ್ಟಾರ್ ಯಶ್ Online Desk
ಸಿನಿಮಾ ಸುದ್ದಿ

KGF 3 ಬಿಗ್ ಅಪ್ಡೇಟ್: ರಾಕಿಭಾಯ್ ಎಂಟ್ರಿಗೆ ಡೇಟ್ ಫಿಕ್ಸ್? ಕಡೆಗೂ ಮೌನ ಮುರಿದ ಪ್ರಶಾಂತ್ ನೀಲ್!

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಹವಾ ವಿಶ್ವದಾದ್ಯಂತ ಜೋರಾಗಿರುವಾಗಲೇ, ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದ್ದು, ಕೆಜಿಎಫ್ 3 ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

KGF 3: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ವಿಶ್ವದಾದ್ಯಂತ ಬೆಳ್ಳಿತೆರೆಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇದರ ನಡುವೆಯೇ, ನಟ ಯಶ್ ಅವರಿಗೆ ಜಾಗತೀಕ ಮಟ್ಟದಲ್ಲಿ ಹೊಸ ಫೇಮ್ ಸಿಗಲು ಕಾರಣವಾಗಿದ್ದು ಕೆಜಿಎಫ್ ಸರಣಿಯ ಚಿತ್ರಗಳು. ಅದರಂತೆ, ಈ ಸರಣಿಯ ಮುಂದಿನ ಭಾಗ ಕೆಜಿಎಫ್ 3 ಯಾವಾಗ ಬರಲಿದೆ ಎಂಬ ನಿರೀಕ್ಷೆ ಇಡೀ ಭಾರತೀಯ ಚಿತ್ರರಂಗದಲ್ಲಿದೆ. ಕೆಜಿಎಫ್ 2 ಮುಕ್ತಾಯದ ಹಂತದಲ್ಲೇ ಮೂರನೇ ಭಾಗದ ಬಗ್ಗೆ ಸುಳಿವು ಸಿಕ್ಕಿದ್ದರೂ, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಅವರ ಸಾಲು ಸಾಲು ಇತರೆ ಬೇರೆ ಪ್ರಾಜೆಕ್ಟ್‌ಗಳಿಂದಾಗಿ ಇದು ಸಾಧ್ಯವೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಇದೀಗ ಸ್ವತಃ ಪ್ರಶಾಂತ್ ನೀಲ್ ಅವರೇ ಕೆಜಿಎಫ್ 3 ಕುರಿತು ಮಹತ್ವದ ಸ್ಪಷ್ಟನೆ ನೀಡಿ ಸಿನಿಪ್ರಿಯರಲ್ಲಿ ರೋಮಾಂಚನ ಮೂಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪ್ರಶಾಂತ್ ನೀಲ್ ಕೊಟ್ಟ ಬಿಗ್ ಅಪ್ಡೇಟ್ ಏನು?

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ಈಗಾಗಲೇ ಕೆಜಿಎಫ್ 3 ಚಿತ್ರದ ಫೈನಲ್ ಸ್ಕ್ರಿಪ್ಟ್ ಲಾಕ್ ಆಗಿದೆ ಎಂದು ಖಚಿತಪಡಿಸಿದ್ದು, ಕಥೆ ಕೈಯಲ್ಲಿದ್ದ ಕಾರಣಕ್ಕಾಗಿಯೇ ಕೆಜಿಎಫ್ 2 ಅಂತ್ಯದಲ್ಲಿ ಮುಂದಿನ ಭಾಗದ ಅಧಿಕೃತ ಸುಳಿವು ನೀಡಲಾಗಿತ್ತು. ಆದರೆ ಚಿತ್ರೀಕರಣ ಆರಂಭಿಸಲು ಕೆಲವು ತಾಂತ್ರಿಕ ಹೊಂದಾಣಿಕೆಗಳು ಹಾಗೂ ನಾಯಕ ಯಶ್ ಅವರ ಕಾಲ್‌ಶೀಟ್ ಲಭ್ಯತೆ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸ್ವಲ್ಪ ಲೇಟ್ ಆದರೂ ಕೆಜಿಎಫ್ 3 ಬೆಳ್ಳಿಪರೆದೆಯ ಮೇಲೆ ಅಪ್ಪಳಿಸೋದು ಪಕ್ಕಾ!

ಹಾಗಾದ್ರೆ, ಸಿನಿಮಾ ತಡವಾಗಲು ಅಸಲಿ ಕಾರಣವೇನು?

ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಪ್ರಸ್ತುತ ಟಾಕ್ಸಿಕ್ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ರಾಮಾಯಣದ ಎರಡು ಸರಣಿಯ ಚಲನಚಿತ್ರಗಳಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಜೂನಿಯರ್ ಎನ್‌ಟಿಆರ್ ಅವರ ಬಿಗ್ ಆಕ್ಷನ್ ಸಿನಿಮಾ 'ಡ್ರ್ಯಾಗನ್' ಶೂಟಿಂಗ್‌ಗಾಗಿ ವಿದೇಶಗಳಲ್ಲಿ ಲೊಕೇಶನ್ ಹಂಟ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಭಾಸ್ ನಟನೆಯ 'ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ' ಚಿತ್ರವನ್ನು ಪೂರ್ಣಗೊಳಿಸಬೇಕಿದೆ. ಹಾಗಾಗಿ, ಇಬ್ಬರ ಈ ದೊಡ್ಡ ಪ್ರಾಜೆಕ್ಟ್‌ಗಳು ಮುಗಿದ ಬಳಿಕವೇ ಕೆಜಿಎಫ್ 3 ಸೆಟ್ಟೇರೋದು ಎನ್ನಲಾಗಿದೆ.

ಹಾಗಾದ್ರೆ, ಯಾವಾಗ ಬರಬಹುದು ರಾಕಿಭಾಯಿ ಕೆಜಿಎಫ್ 3?

ಗಾಂಧಿನಗರದ ಟ್ರೇಡ್ ಅನಾಲಿಸ್ಟ್‌ಗಳ ಪ್ರಕಾರ, ಯಶ್ ಮತ್ತು ಪ್ರಶಾಂತ್ ನೀಲ್ ಇಬ್ಬರು ತಮ್ಮ ಪ್ರಾಜೆಕ್ಟ್‌ಗಳನ್ನು ಅದುಕೊಂಡ ಸಮಯಕ್ಕೆ ತಕ್ಕಂತೆ ಮುಗಿಸಿದರೆ, ಕೆಜಿಎಫ್ 3 2027ರ ಕೊನೆಯಲ್ಲಿ ಚಿತ್ರೀಕರಣವನ್ನು ಶುರು ಮಾಡುವ ಸಾಧ್ಯತೆ ಇದೆ. ಇದರ ಅನ್ವಯ ಸಿನಿಮಾ ತೆರೆಗೆ ಬರಲು 2028ರ ಕೊನೆಯ ತನಕ ಕಾಯಬೇಕಾಗಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಸಿಎಂ ಜೋಸೆಫ್ ವಿಜಯ್ ಆರೋಪಕ್ಕೆ DMK ಆಕ್ರೋಶ, ಶಾಸಕರು ಸದನದಿಂದ ಹೊರಕ್ಕೆ..!

ಯಶವಂತಪುರ APMCಗೆ ಸಿಎಂ ದಿಢೀರ್ ಭೇಟಿ: ರೈತರ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, Video

'ಹನುಮಾನ್ ಚಾಲೀಸಾ ಹೇಳಬೇಕು'; ನವರಾತ್ರಿ ಗರ್ಬಾಗೆ ಮುಸ್ಲಿಮರಿಗೆ ನಿರ್ಬಂಧ? VHP ಕರೆ ಬೆಂಬಲಿಸಿದ ಮಹಾರಾಷ್ಟ್ರ ಸಚಿವ, ಹೇಳಿದ್ದೇನು?

ಬಳ್ಳಾರಿ ಚಲೋ ಸಮಾರೋಪಕ್ಕೆ ಬಿಗ್ ಶಾಕ್: ಬಿಜೆಪಿ ಸಮಾವೇಶಕ್ಕೆ ಶಾಲಾ ಮೈದಾನ ನೀಡಲು ಸರ್ಕಾರದ ನಕಾರ! ‘ಜಾಗ ಹೇಗೆ ಕೊಡಲ್ಲ ನೋಡ್ತೀವಿ’ ಎಂದು ವಿಜಯೇಂದ್ರ ಸವಾಲು

LPG ಗ್ರಾಹಕರಿಗೆ ಕೇಂದ್ರದ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್!