

ಬೆಂಗಳೂರು: ಈ ಹಿಂದೆ ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ಟಾಕ್ಸಿಕ್ ಚಿತ್ರದ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ಹೌದು.. ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಲು ಸಜ್ಜಾಗಿದ್ದು, ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇದೀಗ IMAX ಮಾದರಿಯಲ್ಲೂ ಬಿಡುಗಡೆಯಾಗಲಿದೆ. ಇದರೊಂದಿಗೆ ಎರಡು IMAX ಸಿನಿಮಾಗಳನ್ನು ಹೊಂದಿರುವ ಏಕೈಕ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಲಿದ್ದಾರೆ.
ಯಶ್ ಅಭಿನಯದ ‘KGF: Chapter 1’ ಈಗಾಗಲೇ IMAX ಮಾದರಿಯಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾವಾಗಿತ್ತು. ಇದೀಗ ಅವರದೇ ‘ಟಾಕ್ಸಿಕ್’ ಕೂಡ IMAXನಲ್ಲಿ ತೆರೆಗೆ ಬರುತ್ತಿರುವುದರಿಂದ, ಈ ಪ್ರೀಮಿಯಂ ಫಾರ್ಮ್ಯಾಟ್‌ನಲ್ಲಿ ಬಿಡುಗಡೆಯಾದ ಎರಡು ಸಿನಿಮಾಗಳನ್ನು ಹೊಂದಿರುವ ಏಕೈಕ ಕನ್ನಡ ನಟ ಎಂಬ ವಿಶೇಷ ದಾಖಲೆ ಯಶ್ ಅವರ ಪಾಲಾಗಿದೆ.
ಸೈಕಲಾಜಿಕಲ್ ಆ್ಯಕ್ಷನ್ ಥ್ರಿಲ್ಲರ್
ದೊಡ್ಡ ಮಟ್ಟದ ಆಕ್ಷನ್, ಅದ್ದೂರಿ ದೃಶ್ಯಗಳು ಹಾಗೂ ತಾಂತ್ರಿಕ ವೈಭವದಿಂದ ಗಮನ ಸೆಳೆಯುತ್ತಿರುವ ‘ಟಾಕ್ಸಿಕ್’ಗೆ IMAX ಬಿಡುಗಡೆ ಮತ್ತಷ್ಟು ವಿಶೇಷತೆ ನೀಡಿದೆ. ದೊಡ್ಡ ಪರದೆಯಲ್ಲಿ ಸಿನಿಮಾದ ದೃಶ್ಯ ವೈಭವವನ್ನು ಪ್ರೇಕ್ಷಕರು ಮತ್ತಷ್ಟು ಅದ್ಭುತವಾಗಿ ಅನುಭವಿಸುವ ನಿರೀಕ್ಷೆಯಿದೆ.
ಈ ಮೂಲಕ ಯಶ್ ಕೇವಲ ಪ್ಯಾನ್ ಇಂಡಿಯಾ ಮಟ್ಟದಲ್ಲಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ತಾಂತ್ರಿಕ ಹಾಗೂ ಜಾಗತಿಕ ವ್ಯಾಪ್ತಿಯಲ್ಲೂ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರುವ ನಟ ಎಂಬ ಹೆಗ್ಗಳಿಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
‘KGF’ ಬಳಿಕ ‘ಟಾಕ್ಸಿಕ್’ ಕೂಡ IMAXನಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶ್ ಅವರ ದಾಖಲೆ ಮತ್ತಷ್ಟು ಗಟ್ಟಿಯಾಗಿದೆ.