ಬಿಗ್‌ಬಾಸ್‌ Online Desk
ಸಿನಿಮಾ ಸುದ್ದಿ

ಬಿಗ್‌ಬಾಸ್‌ಗೆ ಹೋಗುವ ಸ್ಟಾರ್‌ ನಟ-ನಟಿಯರಿಗೆ ಶಾಕ್: 3 ವರ್ಷ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ನಿರ್ಮಾಪಕರ ಸಂಘ ನಿರ್ಧಾರ!

ಚಾಲ್ತಿಯಲ್ಲಿರುವ ಧಾರಾವಾಹಿಯ ಮುಖ್ಯ ನಟ-ನಟಿಯರು ನಿರ್ಮಾಪಕರಿಗೆ ತಿಳಿಸದೆ ದಿಢೀರನೆ ಬಿಗ್ ಬಾಸ್ ಶೋಗೆ ಹೋದರೆ, ಅವರನ್ನು 2 ರಿಂದ 3 ವರ್ಷಗಳ ಕಾಲ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಬಿಗ್‌ಬಾಸ್ ಕನ್ನಡ ಸೀಸನ್ 13 ಅದ್ದೂರಿಯಾಗಿ ಪ್ರಾರಂಭವಾಗಿದೆ. ಇನ್ನೂ, ಪ್ರತಿ ಭಾಷೆಯಲ್ಲೂ ಪ್ರತಿ ಸೀಸನ್ ಬಿಗ್‌ಬಾಸ್ ಆರಂಭವಾಗುವ ಮುನ್ನ ಎಲ್ಲರ ತಲೆಯಲ್ಲೂ ಬರೋ ಅತಿ ದೊಡ್ಡ ಪ್ರಶ್ನೆ ಅಂದರೆ, ಈ ಸೀಸನ್‌ನಲ್ಲಿ ಯಾವ ಧಾರಾವಾಹಿ ನಟ-ನಟಿಯರು ಸ್ಪರ್ಧಿಗಳಾಗಿ ಎಂಟ್ರಿ ಕೊಡುತ್ತಾರೆ ಎಂದು.! ಯಾಕಂದ್ರೆ, ಪ್ರತಿ ಸೀಸನ್‌ನಲ್ಲೂ ಬಿಗ್‌ಬಾಸ್‌ಗೆ ಕಿರುತರೆಯ ಸ್ಟಾರ್ ನಟ-ನಟಿಯರ ದಂಡೆ ಇರುತ್ತದೆ. ಅದೆಷ್ಟೋ ಸೀಸನ್‌ಗಳಲ್ಲಿ ಈ ಕಲಾವಿದರು ಕಪ್ ಗೆದ್ದು ತಮ್ಮ ಮನೆಗೆ ತಗೆದುಕೊಂಡು ಹೋಗಿದ್ದು ಉಂಟು. ಆದರೆ, ಹೀಗೆ, ಬಿಗ್‌ಬಾಸ್‌ಗೆ ಹೋಗೋ ಬರದಲ್ಲಿ ಸ್ಟಾರ್ ನಟ-ನಟಿಯರು ತಮ್ಮ ಕಿರುತರೆಯ ಧಾರಾವಾಹಿಗಳಿಗೆ ಹೇಳದೇ ಕೇಳದೆ ಗುಡ್ ಬೈ ಹೇಳುತ್ತಾರೆ. ಇದರ ಪರಿಣಾಮ, ಆ ಧಾರಾವಾಹಿಯ ನಿರ್ಮಾಪಕರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ, ಈಗ ಅದಕ್ಕೆ ಪೂರ್ಣವಿರಾಮ ಹಾಕಲು ಮುಂದಾಗಿರುವ, ದಕ್ಷಿಣ ಭಾರತ ಕಿರುತೆರೆ ನಿರ್ಮಾಪಕರ ಸಂಘ, ಬಿಗ್ ಬಾಸ್ ಶೋಗೆ ಹೋಗುವ ಮುಖ್ಯ (ಲೀಡ್) ನಟ-ನಟಿಯರನ್ನು 3 ವರ್ಷಗಳ ಕಾಲ ಧಾರಾವಾಹಿಗಳಿಂದ ಬ್ಯಾನ್ ಮಾಡಲು ಗಂಭೀರ ನಿರ್ಧಾರ ಕೈಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

3 ವರ್ಷ ಧಾರಾವಾಹಿಗಳಿಂದ ಬ್ಯಾನ್!

ಹೌದು, ಚಾಲ್ತಿಯಲ್ಲಿರುವ ಧಾರಾವಾಹಿಯ ಮುಖ್ಯ ನಟ-ನಟಿಯರು ನಿರ್ಮಾಪಕರಿಗೆ ತಿಳಿಸದೆ ದಿಢೀರನೆ ಬಿಗ್ ಬಾಸ್ ಶೋಗೆ ಹೋದರೆ, ಅವರನ್ನು 2 ರಿಂದ 3 ವರ್ಷಗಳ ಕಾಲ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ. ಅದರಂತೆ, ಇತ್ತೀಚೆಗೆ ನಡೆದ ದಕ್ಷಿಣ ಭಾರತದ ಕಿರುತೆರೆ ನಿರ್ಮಾಪಕರ ಸಂಘದ (TOPCOS) ಸಭೆಯಲ್ಲಿ ಈ ಕಠಿಣ ನಿಯಮವನ್ನು ಜಾರಿಗೆ ತರಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. 

ನಿರ್ಮಾಪಕರ ಈ ತೀರ್ಮಾನಕ್ಕೆ ಕಾರಣವೇನು?

ಮುಖ್ಯ ಪಾತ್ರಗಳಲ್ಲಿ ನಟಿಸುವ ನಟ-ನಟಿಯರು ದಿಢೀರನೆ ಸೀರಿಯಲ್ ಬಿಟ್ಟು ಬಿಗ್ ಬಾಸ್‌ಗೆ ಹೋದಾಗ, ಕಥೆಯನ್ನು ಬದಲಾಯಿಸಬೇಕಾಗುತ್ತದೆ ಅಥವಾ ಹೊಸ ನಟರನ್ನು ಹುಡುಕಬೇಕಾಗುತ್ತದೆ. ಇದರಿಂದ ಟಿಆರ್‌ಪಿ ಕುಸಿಯುವುದಲ್ಲದೆ, ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟವಾಗುತ್ತದೆ. ಅದರಂತೆ, ಯಾವುದೇ ಮುನ್ಸೂಚನೆ ನೀಡದೆ ಒಪ್ಪಂದಗಳನ್ನು ಉಲ್ಲಂಘಿಸುವ ಕಲಾವಿದರಿಗೆ ಬಿಸಿ ಮುಟ್ಟಿಸಲು ಮತ್ತು ಕಿರುತೆರೆಯಲ್ಲಿ ವೃತ್ತಿಪರ ಶಿಸ್ತು ಕಾಪಾಡಲು ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ನಿರ್ಮಾಪಕರ ಸಂಘ ತಿಳಿಸಿದೆ. ಏತನ್ಮಧ್ಯೆ, ಈಗಾಗಲೇ ತೆಲುಗು ಕಿರುತೆರೆ ಉದ್ಯಮದಲ್ಲಿ ಈ ನಿಯಮ ಜಾರಿಯಲ್ಲಿದೆ. ಅದೇ ಮಾದರಿಯನ್ನು ಈಗ ಕನ್ನಡ ಕಿರುತೆರೆಗೂ ಅನ್ವಯಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವ ಕಲಾವಿದರನ್ನು ಮುಂದಿನ 2 ರಿಂದ 3 ವರ್ಷಗಳ ಕಾಲ ಯಾವುದೇ ಹೊಸ ಸೀರಿಯಲ್‌ಗಳಿಗೆ ಆಯ್ಕೆ ಮಾಡಿಕೊಳ್ಳಬಾರದು ಎಂದು ನಿರ್ಮಾಪಕರು ನಿರ್ಧರಿಸಿದ್ದಾರೆ.

ಈ ನಿಯಮ ಯಾರಿಗೆ ಅನ್ವಯ?

ಪ್ರಸ್ತುತ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಾನೆಲ್ ಅಥವಾ ನಿರ್ಮಾಪಕರಿಂದ ಸೂಕ್ತ ಒಪ್ಪಿಗೆ ಇಲ್ಲದೆ ಶೋಗೆ ಹೋಗುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಆದರೆ, ಈಗಾಗಲೇ ಮುಕ್ತಾಯಗೊಂಡಿರುವ ಸೀರಿಯಲ್‌ಗಳ ಕಲಾವಿದರಿಗೆ ಅಥವಾ ಮುಂಚಿತವಾಗಿಯೇ ಶೂಟಿಂಗ್ ಮುಗಿಸಿಕೊಟ್ಟು ಒಪ್ಪಂದದ ಪ್ರಕಾರ ಹೊರನಡೆಯುವವರಿಗೆ ಯಾವುದೇ ತೊಂದರೆ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಜೈಲಿನಲ್ಲಿದ್ದರೂ ಹಳೆಯ ಚಾಳಿ ಬಿಡದ ಪ್ರಜ್ವಲ್ ರೇವಣ್ಣ: ಪೆನ್ ಡ್ರೈವ್ ನೋಡಿ ಪೊಲೀಸರು ಶಾಕ್!

ಭಯೋತ್ಪಾದಕರಿಗೆ ನೆರವು: ಮೋಸ್ಟ್ ವಾಂಟೆಡ್ ಹಫೀಜ್ ಸಯೀದ್ ವಿರುದ್ಧ 2ನೇ ಬಾರಿಗೆ 'ಜಾಮೀನು ರಹಿತ ವಾರೆಂಟ್' ಹೊರಡಿಸಿದ NIA ನ್ಯಾಯಾಲಯ!

ಪತ್ರಕರ್ತ ಜಿ. ಮಹಂತೇಶ್ ಗೆ ಜೀವ ಬೆದರಿಕೆ: FIR ದಾಖಲು!

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ: ಆಪ್ತ ಸಹಾಯಕನ ಮನೆ ಮೇಲೆ ED ದಾಳಿ; ಪಕ್ಷಕ್ಕೆ ಮುಜುಗರ ತಪ್ಪಿಸಲು ರಾಜಿನಾಮೆ- ಹರೀಶ್ ರಾವತ್