ಪ್ರಥಮಾ ಪ್ರಸಾದ್ 
ಸಿನಿಮಾ ಸುದ್ದಿ

'ಕೆಲವರು ವೋಟ್ ಮಾಡಿಲ್ಲ, ಹೇಟ್ ಮಾಡಿದ್ದೀರಿ ಆಗಲಿ ಅದು ನಿಮ್ಮಿಷ್ಟ': ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಪ್ರಥಮಾ ಪ್ರಸಾದ್ ಮಾತು!

ಅತಿ ಕಡಿಮೆ ಮತಗಳನ್ನು ಪಡೆದ ನಂತರ, ಪ್ರಥಮಾ ಪ್ರಸಾದ್ ಅವರನ್ನು ಎಲಿಮಿನೇಟ್ ಮಾಡಲಾಯಿತು. ಪ್ರಥಮಾ ಅವರಿಗೆ ₹3 ಲಕ್ಷ ನಗದು ಬಹುಮಾನ ನೀಡಲಾಯಿತು.

ಬೆಂಗಳೂರು: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ನಟಿ ಪ್ರಥಮಾ ಪ್ರಸಾದ್ ಅವರು 'ಬಿಗ್ ಬಾಸ್' ಮನೆಗೆ ಪ್ರವೇಶಿಸುವ ಮುನ್ನವೇ, ಮೊದಲ ವಾರದಲ್ಲೇ ರಿಯಾಲಿಟಿ ಶೋನಿಂದ ಹೊರಬಿದ್ದಿದ್ದಾರೆ. ಈ ಮೂಲಕ ಮನೆಗೆ ಕಾಲಿಡದೆಯೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಪ್ರಥಮಾ, ತಮಗೆ ವೋಟ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಹೌದು, ಬಿಗ್ ಬಾಸ್ ಮನೆಯಿಂದ ಮೊದಲನೇ ವಾರವೇ ಎಲಿಮಿನೇಟ್ ಆಗಿ ಹೊರಬಂದಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಇದನ್ನ ಸೋಲು ಎಂದು ಭಾವಿಸುವುದಿಲ್ಲ. ಏಕೆಂದರೆ ಈ ಒಂದು ವಾರದಲ್ಲಿ ನಾನು ನನ್ನ ಬೆಸ್ಟ್ ಫರ್ಮಾಮೆನ್ಸ್ ಅನ್ನು ನೀಡಿದ್ದೀನಿ ಎಂದಿದ್ದಾರೆ.

ಮುಂದುವರಿದು, ನಿಮ್ಮೆಲ್ಲರ ಪ್ರೀತಿ- ಸಪೋರ್ಟ್ ಇನ್ನೂ ಹೆಚ್ಚಾಗಿದೆ ಎಂದು ಭಾವಿಸಿದ್ದೇನೆ. ನೀವು ವೋಟ್ ಮಾಡಿದ್ದೀರಿ, ನನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೀರಿ. ಅದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಕೆಲವರು ವೋಟ್ ಮಾಡಿಲ್ಲ ಆದರೆ ಹೇಟ್ ಮಾಡಿದ್ದೀರಿ. ಅದು ನಿಮ್ಮಿಷ್ಟ. ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ, ತುಂಬಾ ಕೆಟ್ಟದಾದ ಪದಗಳನ್ನು ಬಳಸಿ ನೋವಾಗುವ ತರಹ ವಿಡಿಯೋಗಳನ್ನು ಮಾಡಿದ್ದೀರಿ. ಆಗಲಿ, ಅದು ನಿಮ್ಮಿಷ್ಟ ಅದರಿಂದಲೇ ನಿಮ್ಮ ಮನೆ ನಡೆಯುತ್ತೆ ಎಂದರೆ ಸಂತೋಷ. ಇನ್ನೂ ಮುಂದೆಯೂ ನಾನು ನಿಮ್ಮನ್ನ ಮನರಂಜಿಸುತ್ತೇನೆ ಎಂದು ಹೇಳಿದ್ದಾರೆ.

ಕಿರಣ್ ಶಾಸ್ತ್ರಿ, ವೈಷ್ಣವಿ, ಅವಿನಾಶ್ ಮತ್ತು ಧನುಷ್ ಅವರೊಂದಿಗೆ ಮೊದಲ ವಾರದ ಎಲಿಮಿನೇಷನ್‌ಗೆ ನಾಮನಿರ್ದೇಶನಗೊಂಡಿದ್ದ ಸ್ಪರ್ಧಿಗಳಲ್ಲಿ ಪ್ರಥಮಾ ಕೂಡ ಒಬ್ಬರಾಗಿದ್ದರು. ಅತಿ ಕಡಿಮೆ ಮತಗಳನ್ನು ಪಡೆದ ನಂತರ, ಅವರನ್ನು ಎಲಿಮಿನೇಟ್ ಮಾಡಲಾಯಿತು. ಪ್ರಥಮಾ ಅವರಿಗೆ ₹3 ಲಕ್ಷ ನಗದು ಬಹುಮಾನ ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂದಿನ ದಿನಗಳಲ್ಲಿ ರಾಜ್ಯ ತೀವ್ರ ಬರಗಾಲ, ನೀರು ಮತ್ತು ವಿದ್ಯುತ್‌ ಕೊರತೆ ಎದುರಿಸಲಿದೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಸಸ್ಪೆಂಡ್ ಮಾಡೋಕ್ಕಾಗಲ್ಲ: ಪ್ರಿಯಾಂಕ್ ಖರ್ಗೆ

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!

‘ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು’: Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

‘ನಾಯಿಯನ್ನು ಲಿಫ್ಟ್‌ಗೆ ಕರೆತರಬೇಡಿ’ ಎಂದಿದ್ದಕ್ಕೆ ಜಗಳ; ಶಿಕ್ಷಕಿಗೆ ಮಹಿಳೆಯಿಂದ ಹಲ್ಲೆ, Video Viral