ರಾಷ್ಟ್ರಪತಿಗೆ ದರ್ಶನ್ ಫ್ಯಾನ್ಸ್ ಮನವಿ! Online Desk
ಸಿನಿಮಾ ಸುದ್ದಿ

ತಾಯಿಯ ಸ್ಥಾನದಲ್ಲಿ ನಿಂತು D ಬಾಸ್‌ಗೆ ನ್ಯಾಯ ಒದಗಿಸಿ; ರಾಷ್ಟ್ರಪತಿಗೆ ದರ್ಶನ್ ಫ್ಯಾನ್ಸ್ ಮನವಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಜಾಮೀನು ಸಿಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ನೇರವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗೆ ಕನ್ನಡದಲ್ಲೇ ಭಾವನಾತ್ಮಕ ಪತ್ರ ಬರೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಅತ್ತ ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್‌ವುಡ್ ನಟ ದರ್ಶನ್, ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಅವರಿಗೆ ಜಾಮೀನು ಸಿಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ನೇರವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನ್ನಡದಲ್ಲೇ ಭಾವನಾತ್ಮಕ ಪತ್ರ ಬರೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ತಾಯಿಯ ಸ್ಥಾನದಲ್ಲಿ...

ಡಿ ಬಾಸ್ ಅಭಿಮಾನಿಗಳು, ಕರ್ನಾಟಕ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪತ್ರದಲ್ಲಿ, ದರ್ಶನ್ ಅವರ ಪ್ರಕರಣವನ್ನು ಮಾನವೀಯ ಹಾಗೂ ತಾಯಿಯ ದೃಷ್ಟಿಯಿಂದ ಪರಿಗಣಿಸಿ ಅವರಿಗೆ ನ್ಯಾಯ ಸಿಗುವಂತೆ ಸಹಾಯ ಮಾಡಬೇಕು ಎಂದು ಕಳಕಳಿಯಿಂದ ವಿನಂತಿಸಲಾಗಿದೆ. ಅದರಂತೆ, "ನಾವು ನಿಮ್ಮನ್ನು ತಾಯಿಯ ಸ್ಥಾನದಲ್ಲಿ ಕಾಣುತ್ತೇವೆ. ನೀವು ಬಡವರ, ಆದಿವಾಸಿಗಳ ಮತ್ತು ನೊಂದವರ ಪರವಾಗಿ ನಿಲ್ಲುವ ಕರುಣಾಮಯಿ ತಾಯಿ. ನಮ್ಮ ನೆಚ್ಚಿನ ನಟ ಡಿ ಬಾಸ್ ದರ್ಶನ್ ಅವರು ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದು, ಅವರ ಪರಿಸ್ಥಿತಿಯನ್ನು ಒಬ್ಬ ತಾಯಿಯಾಗಿ ಮಾನವೀಯತೆಯ ಆಧಾರದ ಮೇಲೆ ನೋಡಿ" ಎಂದು ಪತ್ರದಲ್ಲಿ ಕೋರಲಾಗಿದೆ.

ಮುಂದುವರೆದು, ತಮಗೆ ಭಾರತೀಯ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಲಯಗಳ ಮೇಲೆ ಶೇಕಡಾ 100 ರಷ್ಟು ನಂಬಿಕೆ ಮತ್ತು ಗೌರವ ಇದೆ ಎಂದು ಅಭಿಮಾನಿಗಳು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ, ದರ್ಶನ್ ಅವರ ಕುಟುಂಬ, ಆರೋಗ್ಯ ಮತ್ತು ಕೋಟ್ಯಂತರ ಅಭಿಮಾನಿಗಳ ಆತಂಕವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ನ್ಯಾಯ ಸಿಗುವಂತೆ ನಿಮ್ಮ ಹಂತದಲ್ಲಿ ಸಾಧ್ಯವಿರುವ ಸಹಾಯವನ್ನು ಮಾಡಬೇಕು ಎಂದು ವಿನಂತಿಸಿದ್ದಾರೆ.

ಕಾನೂನು ತಜ್ಞರ ಅಭಿಪ್ರಾಯವೇನು?

ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಅಭಿಮಾನಿಗಳ ಈ ಪ್ರಯತ್ನ ಕೇವಲ ಭಾವನಾತ್ಮಕತೆಯಿಂದ ಕೂಡಿದ್ದಾಗಿದೆಯೇ ಹೊರತು, ಕಾನೂನಾತ್ಮಕವಾಗಿ ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದರಂತೆ, ಪ್ರಕರಣವು ಸದ್ಯ ನ್ಯಾಯಾಲಯದ ಅಧೀನದಲ್ಲಿದೆ. ತನಿಖೆ ಮುಗಿದು ಚಾರ್ಜ್‌ಶೀಟ್ ಸಲ್ಲಿಕೆಯಾಗಿ, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ರಾಷ್ಟ್ರಪತಿಗಳು ಅಥವಾ ಯಾವುದೇ ರಾಜಕೀಯ ಶಕ್ತಿಗಳು ಮಧ್ಯಪ್ರವೇಶಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ.

ಅದರಲ್ಲೂ, ಇತ್ತೀಚೆಗಷ್ಟೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಶ್ ಮಾಫಿ ಸಾಕ್ಷಿ ಆಗಲು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಕಾನೂನು ಹೋರಾಟದಲ್ಲಿ ಸತತ ಹಿನ್ನಡೆ ಉಂಟಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಈ ಪತ್ರ ಚಳುವಳಿಯ ದಾರಿ ಹಿಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾ

'ಪಾಪಿ ಮಗ': 'ಅವಳೊಬ್ಬಳೇ ಅಲ್ಲ.. ಸಾಕಷ್ಟು ಮಂದಿ ಇದ್ದಾರೆ, ಮುಲಾಜಿಲ್ಲದೇ ಅವನನ್ನ ಗಲ್ಲಿಗೇರಿಸಿ': ಆರೋಪಿ ಮಗನ ವಿರುದ್ಧವೇ ತಾಯಿ ಆರೋಪ!

ನಟ ದರ್ಶನ್ ವಿರುದ್ಧವೇ ತಿರುಗಿಬಿದ್ದ ಪ್ರದೋಷ್ ಇನ್ಮುಂದೆ ಆರೋಪಿಯಲ್ಲ; ಚಾರ್ಜ್​ಶೀಟ್​​ನಿಂದ ಹೆಸರು ಡಿಲೀಟ್!