ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅರ್ಥ ಕಳೆದುಕೊಂಡಿರುವ ಆರ್ಥಿಕ ಸಿದ್ಧಾಂತಕ್ಕೆ ಸಿಗುವುದೇ ಹೊಸ ರೂಪ?

Mainashree
Updated On : 10 Apr 2013, 11:18 am

2014ರ ಚುನಾವಣೆಯ ಗೆಲುವು ಅಥವಾ ಸೋಲು ಹಕ್ಕು ಗ/ಡ ಸಬಲೀಕರಣ? ಎಂಬ ಸಿದ್ಧಾಂತದ ಮೇಲೆ ನಿರ್ಧರಿತವಾಗಲಿದೆಯೇ? ತಮ್ಮ ದೃಷ್ಟಿಯಲ್ಲಿರುವ ಸಮರಸದ ಭಾರತದ ರೂಪಕವಾಗಿ ರಾಹುಲ್ ಅರ್ಹತೆ/ಹಕ್ಕು ಎಂಬ ಪದವನ್ನು ಇತ್ತೀಚೆಗೆ ಬಳಸಿದರೆ?
ಸೋಮವಾರ ಎಫ್‌ಐಸಿಸಿಐ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣ ಮತ್ತು ಕೇವಲ ಲಿಂಗಸಮಾನತೆಗಷ್ಟೇ ಸೀಮಿತವಾಗದ- ಅಧಿಕಾರ, ಜಲ, ಮೂಲಭೂತ ಸೌಕರ್ಯಗಳು, ವಸತಿ, ಆರೋಗ್ಯ ಮತ್ತು ಶಿಕ್ಷಣವನ್ನು ಒಳಗೊಂಡ ಉತ್ತಮ ಆಡಳಿತದ ಮಾದರಿಯ ಬಗ್ಗೆ ಮಾತನಾಡಿದರು.
ಹಾಗಿದ್ದರೆ 2014ರ ಚುನಾವಣೆ 'ಕುಟುಂಬ ರಾಜಕಾರಣ' ಮತ್ತು 'ಅಭಿವೃದ್ಧಿಗೆ' ಅಖಾಡವಾಗಲಿದೆಯೇ? ಬಹುತೇಕರು ಈ ಕದನವನ್ನು ಎಡಪಂಥೀಯ ಉದಾರೀಕರಣ ಮತ್ತು ಬಲಪಂಥೀಯ ಮಾರುಕಟ್ಟೆ ಅರ್ಥಶಾಸ್ತ್ರದ ನಡುವಿನ ಪೈಪೋಟಿ ಎಂಬಂತೆ ನೋಡತೊಡಗಿದ್ದಾರೆ. ನಿಸ್ಸಂಶಯವಾಗಿಯೂ ಇದು ತಪ್ಪು ಗ್ರಹಿಕೆ. ಇದೇಕೆ ತಪ್ಪು ಗ್ರಹಿಕೆ ಎನ್ನುವುದನ್ನು ನೋಡೋಣ...
-----
'ಗೌರವಾನ್ವಿತ ಯುವಕನೊಬ್ಬ ಎಂದಿಗೂ ಬಂಡವಾಳಶಾಹಿಯಾಗಲಾರ' ಎಂದು ನನ್ನ ಗುರುಗಳು ಇಂಗ್ಲೆಂಡಿನ ಕಾಲೇಜಿನಲ್ಲಿ ಹೇಳಿದ ಮಾತು ನನಗಿನ್ನೂ ನೆನಪಿದೆ. ನಾವೆಲ್ಲರೂ ಆಗ ಜಂಬದ ಎಡಪಂಥೀಯರಾಗಿದ್ದೆವು. ಇನ್ನು ನಮ್ಮ ನಡುವೆಯೇ ಇದ್ದ ತೀವ್ರಗಾಮಿ ಸ್ವಭಾವದ 18 ವರ್ಷದ ಯುವಕರಲ್ಲಿ ಬಹುತೇಕರು ಮಾರ್ಕ್ಸಿಸ್ಟ್‌ಗಳಾಗಿದ್ದರು.
ಇಂಗ್ಲೆಂಡಿನಲ್ಲಿ ಕಲಿತದ್ದನ್ನು ನಾವು ಭಾರತದಲ್ಲಿ ಅನುಷ್ಠಾನಕ್ಕೆ ತಂದೆವು. ನನ್ನ ತಂದೆಯ ಕೆಮಿಕಲ್ ಫ್ಯಾಕ್ಟರಿಯ ನೊಗವನ್ನು ಹೊತ್ತುಕೊಳ್ಳಲು ಇಷ್ಟಪಡದ ನಾನು, 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ 550 ರುಪಾಯಿ ಸಂಬಳಕ್ಕೆ ಸೇರಿಕೊಂಡೆ. ಕೆಲವೇ ಸಮಯದ ನಂತರ 'ಇಂಡಿಯಾ ಟುಡೆ' ಒಳಹೊಕ್ಕು ನಂತರ 25ನೆಯ ವರ್ಷಕ್ಕಾಗಲೇ ನನ್ನದೇ ಮಾಧ್ಯಮ ಸಂಸ್ಥೆಯೊಂದನ್ನು ಸ್ಥಾಪಿಸಿದೆ.
ಅದು 1980ರ ಸಮಯವಾಗಿತ್ತು. ಅದಾಗಲೇ ನಮ್ಮ ಸಮಾಜವಾದದ ಹಳೆಯ ಯೋಚನೆಗಳೆಲ್ಲ ಬದಲಾಗತೊಡಗಿದ್ದವು. ಇಂದಿರಾ ಗಾಂಧಿಯವರ ಎಡಪಂಥೀಯ ಆರ್ಥಿಕ ನೀತಿಗಳೂ ಕೂಡ ಹಾದಿ ಬದಲಿಸತೊಡಗಿದ್ದವು. ಮುಂದೆ ರಾಜೀವ್ ಗಾಂಧಿಯವರು ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟು ಮುಕ್ತ ಮಾರುಕಟ್ಟೆಗೆ ಬಾಗಿಲು ತೆರೆದರು.
ಇನ್ನು 1991ರಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕ ಉದಾರೀಕರಣವನ್ನು ನೆಚ್ಚಿಕೊಂಡು ಭಾರತದ ಆರ್ಥಿಕ ನೀತಿಯನ್ನು ಬಲಪಂಥೀಯ ಮಾರುಕಟ್ಟೆ ಸಿದ್ಧಾಂತದತ್ತ ವಾಲಿಸಿದರು. ಮುಂದೆ ದೇವೇಗೌಡ, ಐ.ಕೆ.ಗುಜರಾಲ್ ಮತ್ತು ಅಟಲ್‌ಬಿಹಾರಿ ವಾಜಪೇಯಿ ಅವರ ಸಮಯದಲ್ಲೂ, ಅಂದರೆ 2004ರ ವರೆಗೆ ಈ ಸಂಪ್ರದಾಯ ಮುಂದುವರಿಯಿತು.
ಅಂದರೆ ಸುಮಾರು 13 ವರ್ಷಗಳವರೆಗೆ ಭಾರತದ ಜಿಡಿಪಿ ಏರುತ್ತಲೇ ಸಾಗಿತ್ತು. ಬಡತನ ಇಳಿದಿತ್ತು. ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿತ್ತು. ಇನ್ನು ಹಣದುಬ್ಬರ 4 ಪ್ರತಿಶತಕ್ಕಿಂತಲೂ ಕಡಿಮೆಯಿತ್ತು.
  ಮುಂದೆ ಅಧಿಕಾರಕ್ಕೆ ಬಂದ ಯುಪಿಎ-1 ಸರ್ಕಾರ ಮೆಲ್ಲಗೆ ಆರ್ಥಿಕ ನೀತಿಗಳನ್ನು ಬದಲಾಯಿಸುವ ಕಾಯಕಕ್ಕೆ ಇಳಿಯಿತು. ಆಡಳಿತಕ್ಕೆ ಹೊಸ ಸಾಂಕೇತಿಕ ಶಬ್ದವಾಗಿ 'ಜನಾಧಿಕಾರ' ಎಂಬ ಪದ ಸೇರಿಕೊಂಡಿತು. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತವರ ರಾಷ್ಟ್ರೀಯ ಸಲಹಾ ಸಮಿತಿ ನಮ್ಮ ಆರ್ಥಿಕ ನೀತಿಯನ್ನು Empowerment ನಿಂದ Entilementಗೆ ವಾಲಿಸತೊಡಗಿದರು.
 ಈ ನಡೆ ದೇಶಕ್ಕೇ ಮಾರಕವಾಯಿತು ಎಂಬುದರಲ್ಲಿ ಸಂಶಯವಿಲ್ಲ. 9 ವರ್ಷಗಳ ನಂತರ ಫಲಿತಾಂಶ ನಿಚ್ಚಳವಾಗಿ ಎದುರಾಗಿದೆ. ದೇಶೀಯ ಉತ್ಪನ್ನದ ಪ್ರಮಾಣ ಗಣನೀಯವಾಗಿ ಇಳಿದಿದೆ. ಆಹಾರದ ಹಣದುಬ್ಬರ 10 ಪ್ರತಿಶತಕ್ಕೂ ಮೇಲಿದೆ(2004ಕ್ಕೆ ಹೋಲಿಸಿದರೆ ಈ ಪ್ರಮಾಣ ದುಪ್ಪಟ್ಟಾಗಿದೆ), ಹಣಕಾಸಿನ ಕೊರತೆಯಂತೂ ಕಣ್ಣುಕುಕ್ಕಿಸುವಂತಿದೆ, ಬಾಹ್ಯ ಸಾಲ 376 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ!
----
1980 ಮತ್ತು 1990ರ ವರೆಗೆ ನಾನು ಕಾಂಗ್ರೆಸ್‌ನ ಆರ್ಥಿಕ ನೀತಿಯನ್ನು ಬೆಂಬಲಿಸುತ್ತಲೇ ಬಂದಿದ್ದೆ. ಪತ್ರಿಕೆಗಳಲ್ಲಿ ಹಲವಾರು ಬಾರಿ ಅದನ್ನು ಹೊಗಳಿ ಬರೆದಿದ್ದೇನೆ. ಇದರೊಟ್ಟಿಗೆ ಬಾಬ್ರಿ ಮಸೀದಿ ಧ್ವಂಸದ ನಂತರ ಬಿಜೆಪಿ ಹಿಡಿದ ರಾಜಕೀಯ ಮಾರ್ಗವನ್ನೂ ಟೀಕಿಸಿದ್ದೇನೆ.
ಆದರೆ 2004ರ ನಂತರ ಬದಲಾದದ್ದಾದರೂ ಏನು? ಪ್ರಧಾನಿಯಾಗಿಯಂತೂ ಮನಮೋಹನ್ ಸಿಂಗ್ ನಿಜಕ್ಕೂ ನಿರಾಸೆ ಮೂಡಿಸಿದರು. ಎಡಪಂಥೀಯರ common minimum programme(cpm)ಎನ್ನುವ ವಿಕಾಸಕ್ಕೆ ಬಾಧಕವಾದ ಮಾರ್ಗವನ್ನು ಅವರು ಒಪ್ಪಿಕೊಂಡರಾದರೂ, ತಮ್ಮ ಉದಾರವಾದಿ ಪ್ರಭಾವಲಯವನ್ನು ಮಾತ್ರ ಕೊಂಚ ಉಳಿಸಿಕೊಂಡಿದ್ದರು. ಆಗಿನ್ನೂ ಆ ಸರ್ಕಾರದ ಭ್ರಷ್ಟಾಚಾರಗಳು ಹೊರಬಿದ್ದಿರಲಿಲ್ಲ. ಯುಪಿಎ-2 ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪ್ರಧಾನ ಮಂತ್ರಿಗಳು Coalation dharma ಕ್ಕೆ ಅಂಟಿಕೊಂಡುಬಿಟ್ಟರು. ಇದರರ್ಥವಿಷ್ಟೆ, 'ದೇಶವನ್ನು ಒತ್ತೆಯಿಟ್ಟಾದರೂ ಸರಿ, ಅಧಿಕಾರದಲ್ಲಿರಲು ಪ್ರಯತ್ನಿಸುವುದು!'
ಇದನ್ನು ನಾವು ರಾಜಕೀಯ ಮತ್ತು ಅರ್ಥಶಾಸ್ತ್ರವೆಂದು ಕರೆಯಬೇಕೆ? ಖಂಡಿತವಾಗಿಯೂ ಇಲ್ಲ. ಇದನ್ನು ಭ್ರಷ್ಟ ರಾಜಕಾರಣ ಮತ್ತು ಪೈಶಾಚಿಕ ಆರ್ಥಿಕ ನೀತಿ ಎಂದಷ್ಟೇ ಅನ್ನಬಹುದು. ಈ ಪ್ರಧಾನಮಂತ್ರಿಗಳು ನಿಜಕ್ಕೂ ಅಸಮರ್ಥರು. ಅಧಿಕಾರದಾಸೆಯನ್ನೇ ಮೂಲಸಿದ್ಧಾಂತವಾಗಿಸಿಕೊಂಡಿರುವ ಕಾಂಗ್ರೆಸ್‌ನ ಕಪಿಮುಷ್ಠಿಗೆ ಅವರೇ ಖುದ್ದಾಗಿ ಸಿಲುಕಿಕೊಂಡಿದ್ದಾರೆ. ನಿಜಕ್ಕೂ ಈಗ ಜಾರಿಯಲ್ಲಿರುವುದು ಅವಮಾನಕರ ನೀತಿಯಷ್ಟೆ. ಇದರಿಂದಾಗಿ ಅಧೀನರಾಗಿರುವವರ ಸಂಖ್ಯೆ ಹೆಚ್ಚುತ್ತದೆ. ದೇಶದ ಸಾಮರ್ಥ್ಯವನ್ನು ಅಥವಾ ಭೌತಿಕ ಆಸ್ತಿಯನ್ನು ಹೆಚ್ಚುಮಾಡುವುದು ಇದರಿಂದ ಸಾಧ್ಯವಿಲ್ಲ. ಈ ನೀತಿಗಳು ಯುಪಿಎ ಸರ್ಕಾರವನ್ನು ಅಧಿಕಾರದಲ್ಲಿರಿಸಲು ಸಹಾಯ ಮಾಡಿದವಷ್ಟೆ.
ಹಾಗಿದ್ದರೆ ಪರ್ಯಾಯ ಮಾರ್ಗ ಯಾವುದಿದೆ? ಎಡಪಂಥೀಯ ಸಿದ್ಥಾಂತವಂತೂ ಅಪನಂಬಿಕೆಗೆ ಒಳಗಾಗಿದೆ.  ಟಿಎಮ್‌ಸಿ, ಡಿಎಮ್‌ಕೆ, ಎಐಎಡಿಎಮ್‌ಕೆ, ಎಸ್‌ಪಿ, ಬಿಎಸ್‌ಪಿ, ಎಮ್‌ಐಎಮ್ ಮತ್ತು ಶಿವಸೇನೆಗಳಂತಹ ಪ್ರಾದೇಶಿಕ ಪಕ್ಷಗಳು ಒಂದು ಜಾತಿ, ಕೋಮು ಅಥವಾ ಪ್ರಾಂತೀಯ ವಾದಕ್ಕಷ್ಟೇ ಸೀಮಿತವಾಗಿವೆ. ವ್ಯಂಗ್ಯವೆಂದರೆ, ಇಂದು ಯುಪಿಎ ಸರ್ಕಾರದೊಂದಿಗಿರುವ ಬಹುತೇಕ ಪಕ್ಷಗಳು ಜಾತಿ, ಕೋಮುವಾದಕ್ಕೆ ಅಂಟಿಕೊಂಡಂಥವು. ಆದರೂ 'ಕೋಮುವಾದಿ ಶಕ್ತಿಗಳನ್ನು' ಅಧಿಕಾರದಿಂದ ಹೊರಗಿಡಲು ತಾವು ಪಣತೊಟ್ಟಿದ್ದೇವೆ ಎಂದು ಅವು ಹೇಳಿಕೊಳ್ಳುತ್ತವೆ!
ಇನ್ನು ಬಿಜೆಪಿಯ ವಿಷಯ? ಯುಪಿಎದ ಗೊಂದಲಮಯ ನೀತಿಗಳಿಗೆ ಸಡ್ಡುಹೊಡೆಯುವಂತಹ ಪರ್ಯಾಯ ಸರ್ಕಾರದ ಅಗತ್ಯವಂತೂ ಇದೆ. ಆದರೆ ಬಿಜೆಪಿ ಇಂದಿಗೂ ಹಳೆಯ ಆರ್ಥಿಕ ನೀತಿಗಳನ್ನೇ ನೆಚ್ಚಿಕೊಂಡು ಕುಳಿತಿದೆ. ಬಿಜೆಪಿ ಪರಿಷ್ಕೃತ ಸಿದ್ಧಾಂತವನ್ನು ಹೊಂದಿರುವ, ಉತ್ತಮ ಆಡಳಿತ ಮತ್ತು ತ್ವರಿತ ಆರ್ಥಿಕ ಅಭಿವೃದ್ಧಿಯನ್ನು ನೀಡುವ ಪಕ್ಷವಾಗಿ ಹೊರಹೊಮ್ಮಲಿದೆಯೇ? ಈ ಮಾರ್ಗವನ್ನು ಅನುಸರಿಸಿದರೆ ಅದು ಮುಂದಿನ ಚುನಾವಣೆಯ ಗೆಲುವಿನ ಬಾಗಿಲನ್ನು ತೆರೆಯುವ ಕೀಲಿ ಕೈ ಅಂತೂ ಆಗಲಿದೆ.

- ಮಿನ್ಹಾಜ್ ಮರ್ಚೆಂಟ್
ಖ್ಯಾತ ಪತ್ರಕರ್ತ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement