ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

Hmmm...ಪಾಂಚ್ ಹರ್‌ಭಜನ್ ಸಿಂಗ್

Mainashree
Updated On : 13 Apr 2013, 10:55 am

ಮಂಕಿ ಅಂತ ಬೈದು 'ಸೈ' ಅನಿಸಿಕೊಂಡಿದ್ರಿ. ಆದ್ರೆ ಮಂಕಿ ಅನ್ನಿಸಿಕೊಂಡವರೇ ಮುನಿಸು ಮರೆತ್ರೂ ಶ್ರೀಶಾಂತ್
    ಕೆನ್ನೆಯಿಂದ ಕಣ್ಣೀರ ಧಾರೆ ಮಾತ್ರ ಇನ್ನೂ ನಿಂತಿಲ್ಲವಲ್ಲ?
ಏನ್ ಮಾಡೋಕಾಗುತ್ತೆ, ಶ್ರೀಶಾಂತ್ ಪ್ರಕಾರ, ಮನಸ್ಸಿಗಾಗೋ ಗಾಯ ಮರೀಬಹುದು ಆದ್ರೆ ಕೆನ್ನೆ ಮೇಲಾಗಿರೋ ಗಾಯ ಮರೆಯೋದು ಕಷ್ಟ.

-   ನೀವು ಹೊಡೆದಿದಿದ್ದು ಕೆನ್ನೆಗೆ. ಆದ್ರೂ ಶ್ರೀಶಾಂತ್ ನಿಮ್ಮನ್ನ 'ಬೆನ್ನಿಗೆ' ಚೂರಿ ಹಾಕೋ ಮನುಷ್ಯ ಅಂತ ಅಂದಿದ್ದು ಯಾಕೆ?
ಕೊಹ್ಲಿ, ಗಂಭೀರ್ ಜಗಳದ ಎಪಿಸೋಡ್ ನೋಡಿ ಶ್ರೀಶಾಂತ್‌ಗೆ ತಮ್ಮ ಫ್ಲ್ಯಾಷ್ 'ಬ್ಯಾಕ್‌' ನೆನಪಾಗಿದ್ದಕ್ಕೆ ಹಾಗಂದಿರಬೇಕು.
- ಶ್ರೀಶಾಂತ್ ಒಬ್ಬ ಕ್ರಿಕೆಟರ್ ಆಗಿ, ಒಂದ್ ಇಂಜ್ಯುರಿಯಿಂದ ರಿಕವರ್ ಆಗೋಕೆ ಇಷ್ಟೊಂದ್ ಟೈಮ್ ತಗೊಂಡ್ರೆ ಹೆಂಗೆ ಅಲ್ವಾ?
ಅದೇ ಅಂತೀನಿ. ನಾನ್ ಕೆನ್ನೆಗ್ ಹೊಡ್ದು 5 ವರ್ಷ ಆಯ್ತು, ಇನ್ನೂ ಅದನ್ನ ನೆನಪಿಟ್ಟುಕೊಂಡಿದಾನಲ್ಲ, ಅದೇನ್ ಹೆಂಡ್ತಿ ಬರ್ತ್‌ಡೇನಾ, ಇಲ್ಲ ಮ್ಯಾರೇಜ್ ಆ್ಯನಿವರ್ಸರಿನಾ?

-    ನೀವೇನೋ, ಹೊಡೆಯೋದ್ ಹೊಡೆದು 'ನೆನ್ನೆ ನೆನ್ನೆಗೇ' ಅಂತ ಕೆನ್ನೆಗೆ ಹೊಡೆದಿದ್ದನ್ನು ಮರೆತುಬಿಟ್ರಿ. ಪಾಪ  ಹೊಡೆಸ್ಕೊಂಡೋರ ಕಷ್ಟ ನಿಮಗೇನ್ ಗೊತ್ತು?
ಇರಬಹುದು. ಆದ್ರೆ, ಮೋಸ್ಟ್‌ಲೀ ಶ್ರೀಶಾಂತ್ ಗಾಂಧಿವಾದಿ ಅನ್ಸತ್ತೆ. ಒಂದ್ ಕೆನ್ನೆಗ್ ಹೊಡೆದ್ರೆ ಇನ್ನೊಂದ್ ಕೆನ್ನೆ ತೋರಿಸಿ ಅಂತ ಗಾಂಧಿ ಹೇಳಿದ್ರು. ಇವನು ಅದೇ ಕೆನ್ನೆ ವಿಷಯನ ಮತ್ತೆ ಮತ್ತೆ ತೋರಿಸ್ತಿದಾನೆ.

-    ಈ ಸಿನಿಮಾಗಳಲ್ಲಿ ತಲೆಗೆ ಏಟು ಬಿದ್ದಾಗ ಹೀರೋಗೆ ಜ್ಞಾಪಕಶಕ್ತಿ ಹೋಗುತ್ತೆ. ಅದೇ ಜಾಗಕ್ಕೆ ಇನ್ನೊಂದ್ಸಲ ಏಟು ಬಿದ್ದಾಗ ಸರಿಹೋಗುತ್ತೆ. ನೀವು ಆ ಥರ ಆ್ಯಕ್ಷನ್ ರೀಪ್ಲೇ ಪ್ಲ್ಯಾನ್ ಏನಾದ್ರೂ ಹಾಕ್ಕೊಂಡಿದೀರಾ?
ಈಗ್ಲೇ, ಕೆನ್ನೆಗೆ ಹೊಡೆದಿದ್ದಕ್ಕೆ, ತಲೆಗೇನಾದ್ರೂ ಏಟು ಬಿತ್ತಾ ಅಂತ ಕನ್‌ಫ್ಯೂಸ್ ಆಗಿದೀನಿ. ಸುಮ್ನಿರಪ್ಪಾ ಸಾಕು.  
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಪ್ರಾಣ ತೆಗೆಯುವ ಪಾತ್ರಗಳಲ್ಲಿ ನಟಿಸುತ್ತಿದ್ದರೂ ಇವರನ್ನು ಕಂಡರೆ ಅಭಿಮಾನಿಗಳು ಪ್ರಾಣ ಬಿಡುತ್ತಾರೆ.
ಬಾಲಿವುಡ್ ಖಳನಟ ಪ್ರಾಣ್ ಬಗ್ಗೆ ಎಲ್ಲರಿಗೂ ಗೊತ್ತು. ಅವರ ಅಭಿನಯದಷ್ಟೇ ಅವರ ಸಂಭಾಷಣೆಗಳೂ ಫೇಮಸ್. ಅಂಥ ಕೆಲವು ಸಂಭಾಷಣೆಗಳು ಸೇರಿದಂತೆ ದಾದಾಸಾಹೇಬ್ ಪ್ರಶಸ್ತಿ ವಿಜೇತ ಪ್ರಾಣ್ ಅವರ  ಬಗೆಗಿನ ಕೆಲವು ಎಂಟರ್‌ಟೈನಿಂಗ್ ಮಾಹಿತಿಗಳು ಇಲ್ಲಿವೆ.
 bit.ly/iqXmUD n imdb.to/XJkWgy n
bit.ly/114b4Lw n
bit.ly/JpjuSZ n
bit.ly/10SJT5T

ಹರಿ-ಕಥೆ
ಒಬ್ಬ ಮಹಿಳೆ ಕಾರ್ ರೇಡಿಯೋ ಮಾರುವ ಅಂಗಡಿಗೆ ಹೋದಳು. ಅಲ್ಲಿ ಒಂದು ಹಳೆಯ ಕಾಲದ ಮಾಡೆಲ್ ರೇಡಿಯೋಗೆ ಹತ್ತು ಸಾವಿರ ರುಪಾಯಿ ಬೆಲೆಯಿತ್ತು. ಹೆಂಗಸು ಅಂಗಡಿಯವನನ್ನು ಕೇಳಿದಳು 'ಈ ಕಾಲದಲ್ಲಿ ರೇಡಿಯೋಗೆ ಯಾರಾದ್ರೂ ಹತ್ತು ಸಾವಿರ ರುಪಾಯಿ ಕೊಡ್ತಾರಾ, ಇಷ್ಟೊಂದು ರೇಟ್ ಯಾಕೆ ಇದಕ್ಕೆ?'. ಅಂಗಡಿಯವ 'ಇಲ್ಲಾ ಮೇಡಂ, ಈ ರೇಡಿಯೋ ವಿಶೇಷ ಅಂದ್ರೆ ಕಾರಲ್ಲಿ ಕುಳಿತು ಡ್ರೈವ್ ಮಾಡುತ್ತಾ ನೀವು ಯಾರ ವಾಯ್ಸ್ ಕೇಳಬೇಕು ಅಂದ್ಕೊಂಡಿರ್ತೀರೋ ಅವರ ಹೆಸರು ಹೇಳಿದರೆ ಸಾಕು, ಈ ಆಟೋಮ್ಯಾಟೆಡ್ ರೇಡಿಯೋದಲ್ಲಿ ತಾನಾಗೇ ಅದೇ ವಾಯ್ಸ್ ಕೇಳುತ್ತೆ' ಎಂದ. ಸರಿ ಹೆಂಗಸು ಅದನ್ನು ಕೊಂಡುಕೊಂಡು ಹೊರಟು, ಕಾರ್ ಡ್ರೈವ್ ಮಾಡುತ್ತಾ ಸ್ಟಿಯರಿಂಗ್ ಹಿಡಿದುಕೊಂಡೇ 'ಡಾ. ರಾಜ್‌ಕುಮಾರ್‌' ಅಂದ್ಳು. 'ಬಾನಿಗೊಂದು ಎಲ್ಲೆ ಎಲ್ಲಿದೆ' ಅಂತ ಹಾಡು ಶುರುವಾಯ್ತು. ಅದಾದ ಮೇಲೆ 'ಎಸ್.ಪಿ.ಬಿ' ಅಂದ್ಳು. 'ಮಾಮರವೆಲ್ಲೋ ಕೋಗಿಲೆ ಎಲ್ಲೋ' ಹಾಡು ಬಂತು. 'ಲತಾ ಮಂಗೇಶ್ಕರ್‌' ಅಂದ್ಳು. 'ಏ ಮೇರೆ ವತನ್ ಕೆ  ಲೋಗೋ' ಹಾಡು ಬಂತು. ಮುಂದೆ, ಇನ್ನೇನು 'ಹಿಮೇಶ್ ರೇಷಮಿಯಾ' ಅನ್‌ಬೇಕು, ಅಷ್ಟರಲ್ಲಿ ಮುಂದಿನ ತಿರುವಲ್ಲಿ ಬೈಕ್‌ನಲ್ಲಿ ಹೈ ಸ್ಪೀಡ್‌ನಲ್ಲಿ ಬರ್ತಾ ಇದ್ದೋನೊಬ್ಬ, ಇವಳ ಕಾರಿಗೆ ಗುದ್ದುವಷ್ಟು ಹತ್ರ ಬಂದು ಸ್ವಲ್ಪದರಲ್ಲೇ ಆಕ್ಸಿಡೆಂಟ್ ಮಿಸ್ ಆಯ್ತು. ಈ ಹೆಂಗಸು ಅವನ ಕಡೆ ನೋಡಿ 'ಸ್ಟುಪಿಡ್‌' ಅಂದ್ಳು. ರೇಡಿಯೋದಲ್ಲಿ 'ಲೇಡೀಸ್ ಆ್ಯಂಡ್ ಜಂಟಲ್‌ಮೆನ್‌' ಅಂತ ರಾಹುಲ್ ಗಾಂಧಿ ಭಾಷಣ ಶುರುವಾಯ್ತು.

ಸ್ಕ್ಯಾಂಡಲ್‌ವುಡ್
ಬಚ್ಚನ್ ಚಿತ್ರದ ಮೊದಲ ಪ್ರದರ್ಶನದಲ್ಲಿ ಕೇಳಿ ಬಂದ ಅಭಿಮಾನಿಗಳ ತೊದಲು ನುಡಿಗಳು
 ಇದೇನ್ ಸುದೀಪ್ ಸಿನಿಮಾನಾ, ಉಪೇಂದ್ರನ್ ಸಿನಿಮಾನಾ?
 ಬಚ್ಚನ್ ಅಂತ ಹೆಸರಿಟ್ಟವ್ರೆ, ಒಂದ್ ಹೀರೋ ಇಂಟ್ರಡಕ್ಷನ್ ಸಾಂಗ್ ಇಲ್ಲ.
 ರವಿಶಂಕರ್ ಹೆದರುಪುಕ್ಲನ ಥರಾ ಆಡಿದ್ರೆ ನೋಡೋಕಾಗಲ್ಲಪ್ಪ.
 ಈ ಅರುಣ್‌ಸಾಗರ್ ಯಾಕೆ ಯಾವಾಗ್ಲೂ ಹಿಂಗೆ?
 ಕೊನೇಗ್ ಬರ್ತಾನಲ್ಲ ಅವಂದು ವಿಲನ್ ರೋಲಲ್ಲಿ ಗೆಸ್ಟ್ ಅಪಿಯರೆನ್ಸು ಅಲ್ವಾ?
 ಅಯ್ಯೋ ಅವ್ನೊಬ್ನೇ ಅಲ್ಲ, ಸುದೀಪ್ ಬಿಟ್ರೆ ಇಲ್ಲಿ ಇರೋರೆಲ್ಲ ಬೇರೆ ಭಾಷೆಯವರೇ, ಹಂಗಾಗಿ ಎಲ್ಲರದ್ದೂ 'ಗೆಸ್ಟ್‌' ಅಪಿಯರೆನ್ಸೇ!

ಡಬ್ಕುಡಬಲ್ ತುದಾಂಡಲ್...
ಕ್ರಿಸ್ ಗೇಲ್ 'ಸ್ಟೇಯ್ನ್‌'ಗೆ ಸಿಕ್ಸ್ ಹೊಡೆದಾಗ
stain,  ಢೂಂಢ್‌ತೆ ರೆಹಜಾವೋಗೆ

ರ್ಯಾಶ್ ಡ್ರೈವ್ ಮಾಡುವ ಆ್ಯಂಬುಲೆನ್ಸ್ ಡ್ರೈವರ್‌ನ ಏನಂತ ಬಯ್ಯಬಹುದು?
ಏನಪ್ಪಾ, ಹಿಂಗ್ ಗಾಡಿ ಓಡಿಸ್ತಿದೀಯಾ, ಯಾರೂ ಗಿರಾಕಿ ಸಿಗ್ಲಿ ಅಂತನಾ?

ಚಿಕ್ಕವಯಸ್ಸಲ್ಲಿ ಮದುವೆ ಆಗೋದರ ಲಾಭ ಏನು?
ಡೈವೋರ್ಸ್ ಮಾಡಿ ಇನ್ನೊಂದೆರಡು ಮದುವೆ ಆಗೋಕೆ ಟೈಮ್ ಇರುತ್ತೆ.

ಶಾರ್ಟ್ ಟರ್ಮ್ ಮೊಮೆರಿ ಲಾಸ್ ಅಂದ್ರೆ ಏನು?
ರಾತ್ರಿ ಗುಂಡು ಹಾಕಿ, ಕೈ ಕೊಟ್ಟ ಹುಡುಗೀನ ಬೆಳಗ್ಗೆವರೆಗೂ ಮರೆಯೋದು.

ಕ್ರಿಕೆಟ್‌ನಿಂದ ರಿಟೈರ್ ಆಗಿ ಪೊಲೀಸ್ ಆಫೀಸರ್ ಆದಾಗ ಹರಭಜನ್ ಸಿಂಗ್ ಶ್ರೀಶಾಂತ್‌ರನ್ನ ಯಾವಾಗ್ಲೂ ಜೊತೆಗೇ ಕರ್‌ಕೊಂಡ್ ಹೋಗ್ತಾರಂತೆ.
ಯಾರ್ ಮೇಲಾದ್ರೂ ಕೈ ಎತ್ತೋಕೆ ಸ್ಫೂರ್ತಿ ಸಿಗ್ಲಿ ಅಂತ.

   ಹರಿ
harikannadaprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement