ಅಂಕಣಗಳು

ಒಂದು ನಿಮಿಷದಲ್ಲಿ ನಿನ್ನ ಸರ್ಕಾರ ಕಿತ್ತೆಸೆಯುತ್ತೇನೆ ಎಂದ ಕಾಂಗ್ರೆಸ್ಸಿಗರ ತಾಕತ್ತು ಈಗ ಎಲ್ಲಿ ಅಡಗಿ ಕುಳಿತಿದೆ?

ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ? ಅಂಥದ್ದೊಂದು...

ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ?
ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡದೇ ಇರುತ್ತಿದ್ದರೇ? ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳದೆ, ಎಚ್ಚರಿಕೆ ಕೊಡದೆ, ಧಮಕಿ ಹಾಕದೆ ಸುಖಾಸುಮ್ಮನೆ ಕುಳಿತುಕೊಳ್ಳುತ್ತಿದ್ದರೇ? ಇಷ್ಟಕ್ಕೂ, ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಧಾನಿಯೇಕೆ ಬಾಯ್ಬಿಡುತ್ತಿಲ್ಲ? 2013 ಜನವರಿ 8ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಮ್ಮ ಒಬ್ಬ ಸೈನಿಕನ ಕುತ್ತಿಗೆ ಕಡಿದು ಬರೀ ದೇಹ ಕಳುಹಿಸಿದಾಗಲೂ, ಇನ್ನೊಬ್ಬ ಸೈನಿಕನನ್ನು ಮಾಂಸದ ಮುದ್ದೆಯಾಗಿಸಿ ರವಾನೆ ಮಾಡಿದಾಗಲೂ ಮಾತನಾಡದ ವ್ಯಕ್ತಿ ಹೇಗೆ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಎನಿಸಿಕೊಳ್ಳಲು ಸಾಧ್ಯ? ನೀವೇ ಹೇಳಿ, ಮನಮೋಹನ್‌ಸಿಂಗ್ ಅವರು ನಿಜಕ್ಕೂ ಪ್ರಧಾನಿಯಂತೆ ವರ್ತಿಸುತ್ತಿದ್ದಾರಾ? ನಮ್ಮ ಸೈನಿಕರ ಹತ್ಯೆ ಅವರ ಅಂತಃಕರಣವನ್ನು ಕಲಕಲೇ ಇಲ್ಲವೆ? ಕ್ಷಾತ್ರ ಗುಣವನ್ನು ಬಡಿದೆಬ್ಬಿಸಲೇ ಇಲ್ಲವಾ? ಇಂತಹ ಮನಃಸ್ಥಿತಿಯ ವ್ಯಕ್ತಿಗೆ ಇತಿಹಾಸದಲ್ಲಿ ಯಾವ ಸ್ಥಾನ ತಾನೇ ದೊರೆತೀತು?

  • ಒಬ್ಬ ಶ್ರೀಮಂತ ಪ್ರಧಾನಿಯಾಗಬಹುದೆಂದು ಜವಾಹರಲಾಲ್ ನೆಹರು ಸಾಬೀತು ಮಾಡಿದರು
  • ಒಬ್ಬ ಬಡವ ಕೂಡ ಪ್ರಧಾನಿಯಾಗಬಹುದೆಂದು ಲಾಲ್‌ಬಹುದ್ದೂರ್ ಶಾಸ್ತ್ರಿ ಸಾಬೀತುಪಡಿಸಿದರು
  • ಮಹಿಳೆ ಪ್ರಧಾನಿಯಾಗಬಹುದೆಂಬುದನ್ನು ಇಂದಿರಾ ಗಾಂಧಿ ತೋರಿಸಿದರು
  • ಹಿರಿಯಜ್ಜನೂ ಪ್ರಧಾನಿಯಾಗಬಹುದೆಂಬುದು ಮೊರಾರ್ಜಿ ದೇಸಾಯಿಯವರಿಂದ ತಿಳಿಯಿತು
  • ಯುವಕ ಪ್ರಧಾನಿಯಾಗಬಹುದೆಂಬುದು ರಾಜೀವ್ ಗಾಂಧಿಯವರಿಂದ ಸಾಬೀತಾಯಿತು
  • ದಕ್ಷಿಣ ಭಾರತದವರೂ ಪ್ರಧಾನಿಯಾಗಬಹುದು ಎಂಬುದನ್ನು ಪಿ.ವಿ. ನರಸಿಂಹರಾವ್ ತೋರಿಸಿದರು
  • ಯಾರು ಬೇಕಾದರೂ ಪ್ರಧಾನಿಯಾಗಬಹುದೆಂಬುದನ್ನು ದೇವೇಗೌಡರು ಸಾಬೀತು ಮಾಡಿದರು
  • 2ಜಿ ಹಗರಣ: 16 ತಿಂಗಳ ನಂತರ
  • ಕಾಮನ್ವೆಲ್ತ್ ಹಗರಣ: 1 ವರ್ಷ
  • ಲೋಕಪಾಲ್ ಮಸೂದೆ: 6 ತಿಂಗಳು
  • ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಎಫ್‌ಡಿಐ: 82 ದಿನ
  • ದಿಲ್ಲಿ ಗ್ಯಾಂಗ್‌ರೇಪ್: 8 ದಿನ
- ಪ್ರತಾಪ್ ಸಿಂಹ
mepratap@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್