ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿರೋಧಿಗಳ ಕಟ್ಟುಕತೆಗೆ, ದಿಟ್ಟ ಉತ್ತರ 'ಮೋದಿನಾಮಾ'

Srinivasa Murthy VN
Updated On : 24 Aug 2013, 12:05 pm

ಮುಖ್ಯವಾಹಿನಿ ಮಾಧ್ಯಮಗಳಲ್ಲಿಂದು ಮೋದಿ ವಿರೋಧಿ ಪಾಳಯದ್ದೇ ಆರ್ಭಟ. ಗುಜರಾತ್ ಸರ್ಕಾರ ಅಲ್ಪಸಂಖ್ಯಾತರ, ಅದರಲ್ಲೂ ಮುಖ್ಯವಾಗಿ ಮುಸಲ್ಮಾನರ ವಿರುದ್ಧ ದೌರ್ಜನ್ಯವೆಸಗುತ್ತಿದೆ, ಅದರ ಆಡಳಿತ/ಅಭಿವೃದ್ಧಿಯ ಕತೆಗಳಲ್ಲಿ ಹುರುಳಿಲ್ಲ ಎಂದು ವಾದಿಸುವವರ ದಂಡು ಬಹಳ ದೊಡ್ಡದಿದೆ. ಬುದ್ಧಿ ಜೀವಿಗಳು, ಪತ್ರಕರ್ತರು ಮತ್ತು ಎನ್‌ಜಿಒಗಳು ವ್ಯವಸ್ಥಿತವಾಗಿ ಗುಜರಾತ್‌ನ ಸುತ್ತ ಸುಳ್ಳಿನ ಗೋಡೆಯನ್ನು ಕಟ್ಟುತ್ತಾ ಹೊರಟಿದ್ದಾರೆ. ಇಂಥ ಗೋಡೆಯನ್ನು ಕೆಡವುವ ಸಂಶೋಧನಾ ಪುಸ್ತಕವೊಂದು ಈಗ ಪ್ರಕಟವಾಗಿದೆ.
 ದೆಹಲಿ ಮೂಲದ ಖ್ಯಾತ ಲೇಖಕಿ ಮಧು ಪುರ್ಣಿಮಾ ಕಿಶ್ವರ್, ಗುಜರಾತ್ ಕುರಿತ ಮಾಧ್ಯಮ ವರದಿಗಳಲ್ಲಿನ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಖುದ್ದು ಆ ರಾಜ್ಯಕ್ಕೆ ಭೇಟಿ ಕೊಟ್ಟು ಸಂಶೋಧನೆ ನಡೆಸಿದ್ದರು. 'ಮುಖ್ಯವಾಹಿನಿ ವಿಮರ್ಷಕರು(ಮಾಧ್ಯಮಗಳು, ಬುದ್ಧಿಜೀವಿಗಳು ಮತ್ತು ಎನ್‌ಜಿಒಗಳು) ಮುಖ್ಯಮಂತ್ರಿ ಮೋದಿಯವರಿಗೆ ರಾಕ್ಷಸೀ ರೂಪ ಕೊಡಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಮೇಲೆ ನಾನು ಸಂಶೋಧನೆಗೆ ಇಳಿದದ್ದು' ಎನ್ನುವ ಕಿಶ್ವರ್, 'ಗುಜರಾತಿ ಮುಸಲ್ಮಾನರು ಮೋದಿಯವರ ಪ್ರಬಲ ಬೆಂಬಲಿಗರು, ಆದರೆ ಮುಸಲ್ಮಾನನೊಬ್ಬ ಮೋದಿ ಪರವಾಗಿ ಮಾತನಾಡಿದರೆ ಆತ ಅದೇ ಕೋಮಿನ ಸ್ವಹಿತಾಸಕ್ತ ಜನರಿಂದ ನಿಂದನೆಗೊಳಗಾಗುತ್ತಾನೆ. ಆದರೆ ಅವರಿಗೆಲ್ಲ ಆ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದ್ದು, ಅಭಿವೃದ್ಧಿ ಹೊಂದುತ್ತಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ನೇಮಿತ ಸಾಚಾರ್ ಸಮಿತಿಯೇ ಒಪ್ಪಿಕೊಂಡಿದೆ.
ಗುಜರಾತ್ ಅಭಿವೃದ್ಧಿಯ ಬಗ್ಗೆ ಅಥವಾ ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಈ ಊಸರವಳ್ಳಿ ವಿರೋಧಿಗಳು ಮುಂದಿಡುತ್ತಿರುವ ವಾದವೆಲ್ಲ ಸುಳ್ಳು ಎನ್ನುವುದು ಸಂಶೋಧನೆಯ ವೇಳೆ ನನಗೆ ಅರಿವಾಯಿತು. ಮೋದಿ ಸರ್ಕಾರದಡಿಯಲ್ಲಿ ಗುಜರಾತ್‌ನ ಮುಸಲ್ಮಾನರು ಹಿಂದೆಂದಿಗಿಂತಲೂ ಸಂತೋಷವಾಗಿದ್ದಾರೆ. 2002ರ ಗಲಭೆಯ ವೇಳೆಯಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜುಹುಪುರ ಎಂಬ ಮುಸಲ್ಮಾನ ಕಾಲೋನಿ ಇಂದು ಬದಲಾವಣೆಯ ಕೇಂದ್ರಬಿಂದುವಾಗಿದೆ.  ಒಂದೊಮ್ಮೆ ಶ್ರಮಿಕ ವರ್ಗದಿಂದ ತುಂಬಿದ್ದ ಆ ಪ್ರದೇಶವೀಗ ಮಧ್ಯಮ ವರ್ಗದ ಕಾಲೋನಿಯಾಗಿ ಬದಲಾಗಿದೆ. ಮೋದಿ ವಿರುದ್ಧದ ಮಿಥ್ಯಾರೋಪಗಳ ಆಂದೋಲನವನ್ನು ರೂಪಿಸಿದ್ದು ಮಾಧ್ಯಮಗಳು, ಎನ್‌ಜಿಒಗಳು ಮತ್ತು ರಾಜಕೀಯ ವಿರೋಧಿಗಳು(ಮುಖ್ಯವಾಗಿ ಕಾಂಗ್ರೆಸ್). ಈ ಮೋದಿ ವಿರೋಧಿ ಉದ್ಯಮಕ್ಕೆ ತೈಲ ರಾಷ್ಟ್ರಗಳು ಮತ್ತು ಪಶ್ಚಿಮದ ಏಜೆನ್ಸಿಗಳು ದಂಡಿಯಾಗಿ ಹಣ ಹರಿದು ಬರುತ್ತಿದೆ' ಎನ್ನುತ್ತಾರೆ.
---
ಕಿಶ್ವರ್ ಅವರ ನಿರಂತರ ಸಂಶೋಧನೆಯ ಫಲವೇ 'ಮೋದಿನಾಮಾ' ಎಂಬ ಪುಸ್ತಕ. ಗುಜರಾತ್‌ನ ಕುರಿತ ಬರವಣಿಗೆ ಹಾಗೂ ವೀಡಿಯೋಗಳ ಸಂಗ್ರಹವಿದು. ಈ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ (ಸಿಇಎಸ್‌ಎಸ್)ದ ಆಶ್ರಯದಲ್ಲಿ, ಜಿಜ್ಞಾಸಾ ಸಂಸ್ಥೆಯು 'ಮೋದಿ, ಮುಸ್ಲಿಂ ಮತ್ತು ಮಾಧ್ಯಮ' ಎನ್ನುವ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 25 ರಂದು- 'ರಾಷ್ಟೋತ್ಥಾನ ಯೋಗಿಕ್ ಸೈನ್ಸಸ್ ಆಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್, ಅಜಿತಾ ಸ್ಮೃತಿ, ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್, 36ನೇ ಅಡ್ಡ ರಸ್ತೆ, 10ನೇ ಮುಖ್ಯರಸ್ತೆ, ಜಯನಗರ 4ನೇ ಬ್ಲಾಕ್ ಬೆಂಗಳೂರಿನಲ್ಲಿ' ಆಯೋಜಿಸಿದೆ. ಅಂದು ಲೇಖಕಿ, ಗುಜರಾತ್‌ನ ಕುರಿತು ಹಬ್ಬಿರುವ ಇಂಥ ಅನೇಕ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: jijnasa_cess@googlegroups.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement