ಕಚಗುಳಿ ಟ್ವೀಟ್ಸ್
ದೆಹಲಿ ರಾಜಕೀಯವನ್ನು ನೋಡುತ್ತ ರಾಮ್‌ಗೋಪಾಲ್ ಅವರಿಗೆ 'ಮೈ ಸಿಎಂ ಕೇಜ್ರಿವಾಲ್' ಅನ್ನೋ ಥರದ ಐಡಿಯಾಗಳು ಇನ್ನೂ ಬರದಿರುವುದು ಆಶ್ಚರ್ಯ.
-ಟ್ರಿಕಿ ಡೋನರ್
ರಾಹುಲ್ ಗಾಂಧಿ ಏನು ಮಾಡಿದ್ದಾರೋ ಅದು ನನಗೆ ಇಷ್ಟವಾಗಿಲ್ಲ ಎಂದು ರಾಹುಲ್ ಗಾಂಧಿಯವರೇ ಹೇಳಿಕೆ ಕೊಡುವ ದಿನಗಳು ದೂರವಿಲ್ಲ ಎಂದೆನಿಸುತ್ತದೆ.
-ಚೇತನ್ ಭಗತ್
ನೀವು ಮರಣಶಯ್ಯೆಯಲ್ಲಿರುವಾಗ ಎಲ್ಲರನ್ನೂ ಕರೆದು ಅವರನ್ನು ತಾನೆಷ್ಟು ಇಷ್ಟಪಡುತ್ತಿದ್ದೆ ಎಂದು ಹೇಳಬೇಕೆನಿಸುತ್ತದೆ. ಆದರೆ ಅದಾಗಲೇ ತಡವಾಗಿರುತ್ತದೆ. ಹೀಗಾಗಿ ಪ್ರೀತಿಯ ಅಭಿವ್ಯಕ್ತಿಗೆ ಹಿಂದೇಟು ಹಾಕಬೇಡಿ.
-ರಿಯಾ
ಹೊಸವರ್ಷವೆಂಬುದು ಹಾಗೆಯೇ ನಿಮ್ಮ ಬದುಕನ್ನು ಬದಲಾಯಿಸಿಬಿಡುವುದಿಲ್ಲ ಎಂದು ತಿಳಿದುಕೊಳ್ಳುವುದಕ್ಕೇ ಪ್ರೌಢಿಮೆ ಎನ್ನುತ್ತಾರೆ.
-ಮಸಾಲಾ ಟ್ವೀಕ್ಸ್