ಬುದ್ಧಿಜೀವಿ ಎಂಬ ಸುದ್ದಿಜೀವಿಯನ್ನು ಉಪೇಕ್ಷಿಸಬಾರದೇಕೆ?
"ಶ್ರದ್ಧೆ, ಮೌಢ್ಯ ಹಾಗೂ ಬೂಟಾಟಿಕೆ" ಕ.ಪ್ರ.ದ ದಿನಾಂಕ 25.12.2013ರಲ್ಲಿ ಪಿ.ಜೆ. ರಾಘವೇಂದ್ರರವರು ಬರೆದ ಪತ್ರವನ್ನು ಓದಿದೆ. ರಾಘವೇಂದ್ರರವರು ...
"ಶ್ರದ್ಧೆ, ಮೌಢ್ಯ ಹಾಗೂ ಬೂಟಾಟಿಕೆ" ಕ.ಪ್ರ.ದ ದಿನಾಂಕ 25.12.2013ರಲ್ಲಿ ಪಿ.ಜೆ. ರಾಘವೇಂದ್ರರವರು ಬರೆದ ಪತ್ರವನ್ನು ಓದಿದೆ. ರಾಘವೇಂದ್ರರವರು ನಮ್ಮ ಮಧ್ಯೆ ಇರುವ ಗೋಸುಂಬೆ ಜಾತಿಯ ಪ್ರಗತಿಪರರ, ಪ್ರಜ್ಞಾವಂತರು ಮತ್ತು ಬುದ್ಧಿಜೀವಿಗಳ ಬಗ್ಗೆ ಯಾಕೆ ಪ್ರತಿಕ್ರಿಯಿಸಬೇಕು? ಅವರು ಹೇಳಿದಂತೆ ಭಗವಾನ್ರವರು ಒಡೆಯರ್ರವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಂದಿರಲಿಲ್ಲ, ಅಲ್ಲಿ ಮಾಧ್ಯಮದವರಿದ್ದಾರೆಂದು ಬಂದಿದ್ದು. ತಮ್ಮ ಬಾಯಿ ಚಪಲ ತೀರಿಸಿಕೊಂಡಿದ್ದಾರೆ. ಇದು ಮಾಮೂಲು. ಅದಕ್ಕಾಗಿ ನಮ್ಮಂಥ ಶ್ರೀಸಾಮಾನ್ಯರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ದಿ. 23.12.2013ರ ಕ.ಪ್ರ. ಪುಟ 7ರಲ್ಲಿ ವಿನಾಯಕ ಭಟ್ಟ ಮೂರುರು ಇವರ "ಬಂಡಾಯವಲ್ಲ, ಬಯಲಾದದ್ದು ಬರಗೂರರ ಬಂಡವಾಳ" ಶೀರ್ಷಿಕೆ ಅಡಿಯಲ್ಲಿ ಬರಗೂರು ರಾಮಚಂದ್ರಪ್ಪನವರ ಸಣ್ಣತನ ಬಯಲು ಮಾಡಿದ್ದಲ್ಲದೇ, ನಮ್ಮ ಪ್ರಗತಿಪರ ಚಿಂತಕರು ಸಮಾಜದಲ್ಲಿ ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ಬೆತ್ತಲುಗೊಳಿಸಿದ್ದಾರೆ. ಇವರೆಲ್ಲ ಸಮಾಜವನ್ನು ಟೀಕಿಸುವ ನೈತಿಕತೆಯೇ ಇಲ್ಲವಾದವರು. ಇವರ ಬಗ್ಗೆ ಮಾತಾಡದೇ ಇರುವುದು ಮತ್ತು ಇವರ ಹೇಳಿಕೆಗಳನ್ನು ತಿರಸ್ಕರಿಸುವುದು ಒಳ್ಳೆಯದು.
-ಬ್ಯಾಂಕ್ ಶಿವಕುಮಾರ್, 687, ಇ ಬ್ಲಾಕ್, 11ನೇ ಮುಖ್ಯರಸ್ತೆ, 3ನೇ ತಿರುವು, ಜೆ.ಪಿ. ನಗರ, ಮೈಸೂರು.-8, ಮೊ. 9886 301184
ತಾ. 18.12.13ರ ಬೈಟೂಕಾಫಿಯಲ್ಲಿ ಹರಿಹರರ 'ವೇಶ್ಯೆಯರ ಗುಣ' ಹೀಗೆ ಶೀರ್ಷಿಕೆಯಡಿ 'ವೇಶ್ಯೆಯರು ಲಕ್ಷ್ಮಿಯಂತೆ' ಎಂಬರ್ಥದ ಪದ್ಯ-ವ್ಯಾಖ್ಯಾನ ಪ್ರಕಟವಾಗಿದೆ. ಅಲ್ಲಾ ಸ್ವಾಮೀ ಹಣದ ಪ್ರತಿರೂಪಿಣಿ ಲಕ್ಷ್ಮೀ ಎಂದು ವ್ಯವಹಾರದ ಸ್ಥಳಗಳಲ್ಲಿ ಲಕ್ಷ್ಮೀ ಫೋಟೋ ಇಟ್ಟು ಪೂಜಿಸುವಾಗ ನೀವು ವೇಶ್ಯೆಯರಿಗೆ ಲಕ್ಷ್ಮೀಯನ್ನು ಹೋಲಿಸಿರುವುದು - ಲಕ್ಷ್ಮೀಯನ್ನು ವೇಶ್ಯೆಯರಿಗೆ ಹೋಲಿಸುವುದು ಎಷ್ಟು ಸರಿ. ಒಂದು ವೇಳೆ ನೀವು (ಹಳೆಯ ಕವಿಗಳು) ಲಕ್ಷ್ಮೀಯನ್ನು ಚಂಚಲೆ ಎಂದರೂ ಪರ್ವಾಗಿಲ್ಲ. ಯಾವುದು ಸರಿ ಎಂದು ಒಂದೂ ತಿಳಿಯುತ್ತಿಲ್ಲ.
-ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ.
ಉತ್ತರ ಕೊಡುವುದು ಜಾಣತನದ ಸೂಚಕವಾದರೆ ಪ್ರಶ್ನೆ ಕೇಳುವುದು ಕ್ರಿಯಾಶೀಲತೆಯ ಸಂಕೇತ. "ಕೇಳ್ರಪ್ಪೋ ಕೇಳಿ?" ಅಂಕಣದಲ್ಲಿ "ಶಾದಿ ಭಾಗ್ಯದಂತೆ ಪ್ರಸ್ಥ ಭಾಗ್ಯ, ಸೀಮಂತ ಭಾಗ್ಯ, ನಾಮಕರಣ ಭಾಗ್ಯಕ್ಕೂ ಹಣ ಕೊಡಬೇಕು ಅಂತ ವಾಟಾಳ್ ಧರಣಿ ಕುಳಿತರೆ? ಎನ್ನುವ "ಫ್ಯಾಷನ್ ಡಿಸೈನರ್ ಮಧು" ಅವರ ಪ್ರಶ್ನೆ ಓದಿ ನಮ್ಮ ಮನೆಯವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆವು. ಕಾಂಗ್ರೆಸ್ ಸರ್ಕಾರದ ಓಟಿನ ರಾಜಕಾರಣವನ್ನು ಮಧು ಅವರು ಚೆನ್ನಾಗಿ ವ್ಯಂಗ್ಯ ಮಾಡಿ ಪ್ರಶ್ನೆ ಕೇಳಿದ್ದಾರೆ ಮತ್ತು ಭಟ್ಟರೂ ಅಷ್ಟೇ ಚೆನ್ನಾಗಿ ಉತ್ತರ ನೀಡಿದ್ದಾರೆ. ಕೇಳ್ರಪ್ಪೋ ಕೇಳಿ? ಅಂಕಣಕ್ಕೆ "ಫ್ಯಾಷನ್ ಡಿಸೈನರ್ ಮಧು" ಅವರು ಕೇಳುವ ಪ್ರಶ್ನೆಗಳು ಶೋಭೆ ನೀಡುತ್ತಿವೆ ಎಂದರೆ ತಪ್ಪಾಗಲಾರದು.
-ಶ್ರೀಮತಿ ಸುಮ ನಾಗೇಂದ್ರ, ಯಲಹಂಕ ಉಪನಗರ, ಬೆಂಗಳೂರು.
"ಏನೇನ್ ಮಾಡ್ತೀವಿ" ಸರಣಿಯ ಇನ್ನೊಂದು ನೂತನ ಪ್ರಯೋಗ "ಉಪನ್ಯಾಸಕರ ಸರದಿ" ಸ್ವಾಗತಾರ್ಹವಾಗಿದೆ. ಆದರೆ ಈ ಅವಕಾಶವನ್ನು ಕೇವಲ ಉಪನ್ಯಾಸಕರಿಗೆ ಸೀಮಿತಗೊಳಿಸದೆ ಶಿಕ್ಷಕ ಬಂಧುಗಳಿಗೂ ಒದಗಿಸಿಕೊಡುವುದು ಸೂಕ್ತವೆನಿಸುತ್ತದೆ. ಇದರಿಂದ ಶಿಕ್ಷಕರಲ್ಲೂ ಇರಬೇಕಾದ ಅಗತ್ಯ ಬರವಣಿಗೆಯ ಹವ್ಯಾಸಕ್ಕೂ ಸೂಕ್ತ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಅಲ್ಲದೆ, ಅವರಿಗೂ ಅವಕಾಶ ದೊರಕಿಸಿ ಕೊಟ್ಟಂತಾಗುತ್ತದೆಯಲ್ಲವೇ? ಏನ್ ಅಂತೀರಾ?
"ನೋಡ್ತಾ ಇರಿ, ಏನೇನ್ ಮಾಡ್ತೀವಿ"ಯ ಅಚ್ಚರಿಗಳಿಗೆ ಕಾಯುವುದೇ ಒಂದು ಸುಖ.
-ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ, ಕುಂದಾಪುರ. (ಉಡುಪಿ ಜಿಲ್ಲೆ), ಮೊ. 87 470 17303
ದಿ. 18.12.13ರ ಪತ್ರಿಕೆಯಲ್ಲಿ ಪ್ರಕಟಿಸಿದ -"ಸಲಿಂಗ-ಕಾಮ-ಪ್ರೇಮ ಯಾಕಾಗಬಾರದು?" ಬಗ್ಗೆ ಪ್ರತಿಕ್ರಿಯೆ. ಮಲ್ಲಿಕಾರ್ಜುನ ತಿಪ್ಪಾರ್ರವರ ಅಭಿಪ್ರಾಯಗಳು ಗಮನಾರ್ಹ. ಎಲ್ಲವನ್ನೂ ಕಾಮವೆಂದೇ ಭಾವಿಸುವ ಬದಲು -ಪ್ರೀತಿ-ಎಂಬಂತೆಯೂ ನೋಡಬಹುದು.- ಒಳ್ಳೆಯದು. ಅದೇ -ಬರಬರುತ್ತಾ -ಕಾಮಕ್ಕೆ ತಿರುಗಬಹುದೇನೋ ಎಂಬ ಅಂಜಿಕೆ, ಅಥವಾ -ಇತರರು ಅದನ್ನು ನೋಡುವ ದೃಷ್ಟಿಕೋನ. ಜಗತ್ತು -ಸಮಾಜ ಏನೆಂದುಕೊಂಡರೆ ನನ (ಮ) ಗೇನು? ಎಂದು ಧೈರ್ಯದಿಂದಿರಬಹುದು. ಆದರೆ ಕಾನೂನಿನ ಭಯ ಹುಟ್ಟಿಸಲಾಗುತ್ತದೆ. ಮುಂದಿನದು ಗೊತ್ತೇ ಇದೆ. ಸಲಿಂಗಕಾಮ ಕೂಡ ನೈಸರ್ಗಿಕವೇ ಎಂದು ವಿಚಾರ ಮಾಡಲಾಗುತ್ತದೆ. ಏನೇ ಆಗಲಿ, ಕೆಲ ದಾರ್ಶನಿಕರು, "ಮಹಾನ್"achievers ಈ ಬಂಧನದಿಂದ ಹೊರಬಂದು ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಿ ಹೋಗಿದ್ದಾರೆ. ನೋಡೋಣ! ಎಲ್ಲವೂ ಕಾನೂನಿನ ಪರಿಧಿಯಲ್ಲಿಯೇ ಇರುತ್ತದೋ- ಅಥವಾ ಅದಕ್ಕೂ ಸಾಮಾಜಿಕ ದೊರೆಯುತ್ತದೆಯೋ?
-ಎ.ಎಸ್. ಹಾಲಭಾವಿ, ಬೆಂಗಳೂರು, ಮೊ. 9481 670433
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.