ಅಂಕಣಗಳು

ಬಜೆಟ್ ಕೇವಲ ಭರವಸೆಯ ನಕ್ಷತ್ರವೇ?

ಶೆಟ್ಟರ್ ಅವರ ಬಜೆಟ್‌ನ ಬೇಳೆಕಾಳು ಹೊರಬಿತ್ತು. ವಿಪಕ್ಷಗಳ ಟೀಕೆ, ಭಾಜಪದ ಮೆಚ್ಚುಗೆ, ಸದನದಲ್ಲಾಗಲಿರುವ ಚರ್ಚೆ, ಬಜೆಟ್‌ನ ಅಂಗೀಕಾರ, ಇದು ಚುನಾವಣೆಯ ಬಜೆಟ್ ಎನ್ನುವುದು- ಈ ಎಲ್ಲವೂ ನಿರೀಕ್ಷಿತವೇ. ಇದು ಭಾರಿ ಗಾತ್ರದ್ದು- ರೂ 1,17,405 ಕೋಟಿಯದು. ಕೃಷಿ ಬಜೆಟ್ ಸಹ ಭಾರಿಯದೇ- ರೂ. 22310 ಕೋಟಿಯದು. ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ನಿರೀಕ್ಷಿಸಿರುವ ಒಟ್ಟು ಆದಾಯ ರೂ. 1,19,983 ಕೋಟಿ, ಇದರಲ್ಲಿ ರೂ. 21767 ಕೋಟಿ ಸಾಲಮೂಲದ ಆದಾಯ(?)ವೂ ಸೇರಿದೆ. ರಾಜ್ಯದ ಪ್ರತಿ ಪ್ರಜೆಯೂ ಹೊರಬೇಕಾಗಿರುವ ಒಟ್ಟು ಸಾಲದ ಹೊರೆ ಕೇವಲ 22,000/-.
ಜನೋಪಯೋಗಿ ಕಾರ್ಯಗಳಿಗೆಂದು ಶೆಟ್ಟರ್ ವಿತರಿಸಿರುವ ಹಣದ ವಿವರಗಳು ಲಭ್ಯವಿದೆ. ಮಠ ಮಂದಿರಗಳಿಗೆ ಮತ್ತು ಅನಾಮಧೇಯ ಸಂಸ್ಥೆಗಳಿಗೆ (ಅವು ಯಾವುವೆಂಬುದರ ವಿವರವಿಲ್ಲ) ಕೊಡುಗೆಯ ಮೊತ್ತ 300/-ಕೋಟಿ ಮೀರುತ್ತದೆ. ಈ ಕೊಡುಗೆಗೆ ಅವು ಕೈಚಾಚಿದ್ದವೇ? ಹಾಗಾದರೆ ಯಾಕೆ? ತಡೆಯಿರಿ ಚುನಾವಣೆ ಬರಲಿದೆ. ಭಾಜಪ ಅಧಿಕಾರಕ್ಕೆ ಬಂದಂದಿನಿಂದ ಪ್ರತಿವರ್ಷದ ಬಜೆಟ್‌ನಲ್ಲಿ ಉದ್ಯೋಗದ ಮಾತಿದೆ. ಈ ಬಜೆಟ್ ಕೂಡ ಹಿಂದೆ ಬಿದ್ದಿಲ್ಲ. 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ! ಹಾಗೆಯೇ ಮನೆಗಳ ನಿರ್ಮಾಣ. ಈ ಬಜೆಟ್‌ನಲ್ಲಿ 2,28,000 ಮನೆಗಳು ಮೂಡಲಿವೆ! ಅಂದರೆ, ಈ ಹೊತ್ತಿಗಾಗಲೇ ನಿರುದ್ಯೋಗ ಸಮಸ್ಯೆ ಶೇ.5ಕ್ಕಿಂತ ಕಡಿಮೆ ಇರಬೇಕಿತ್ತು. ಹಾಗೆಯೇ ಪ್ರತಿಯೊಬ್ಬರ ತಲೆಯ ಮೇಲೂ ಸೂರು ಕಂಡು ಕುಟುಂಬಗಳು ನಲಿಯುತ್ತಿರಬೇಕಿತ್ತು. ವಾಸ್ತವ ಚಿತ್ರಣ ಏನು?
ಆಡಳಿತಾತ್ಮಕ ವೆಚ್ಚ ತಗ್ಗಿಸುವ ಮಾತಿಲ್ಲ. ಭ್ರಷ್ಟಾಚಾರವನ್ನು ಹತ್ತಿಕ್ಕುವ ಸೊಲ್ಲಿಲ್ಲ. ಇವು ಆಗಿಹೋಗುವ ಬಾಬ್ತುಗಳಲ್ಲವೆಂಬ ವಾಸ್ತವತೆಯ ಅರಿವಿದ್ದೀತು! ಬೆಂಗಳೂರು ನಗರಕ್ಕೆ ಮೂಲಸೌಕರ್ಯ ಒದಗಿಸಲು 6000/- ಕೋಟಿ! ನಿರ್ಲಕ್ಷ್ಯಕ್ಕೆ ಈಡಾಗಿರುವ ಗ್ರಾಮೀಣ ಪ್ರದೇಶಗಳು ಅದೆಷ್ಟೋ. ಬಡತನದ ರೇಖೆಯ ಕೆಳಗಿರುವ 80 ಲಕ್ಷ ಕುಟುಂಬಗಳಿಗೆ ತಲಾ 20 ಕೆ.ಜಿ.ಯಂತೆ, ಕೆಜಿಗೆ ರೂ. 2/- ರಂತೆ ಅಕ್ಕಿ. (80 ಲಕ್ಷ ಕುಟುಂಬಗಳು ಇನ್ನೂ ಬಿ.ಪಿ.ಎಲ್. ಎನ್ನುವುದೇ ಆಡಳಿತದ ವೈಫಲ್ಯಕ್ಕೆ ಸಾಕ್ಷಿ!) ಬಜೆಟ್ ಎನ್ನುವುದು ಆಮಿಷವೊಡ್ಡುವ ಕೆಂಪು ಮೂಲಂಗಿ. ಹಣ ಹರಿಯುತ್ತಲೇ ಇದೆ, ಲಾಗಾಯ್ತಿನಿಂದ; ಈಗಲೂ ಮುಂದೆಯೂ ಹರಿಯುತ್ತದೆ. ಅದರ ಗಮ್ಯ ಸ್ಥಾನ ಎಲ್ಲಿದೆ? ಗೊತ್ತಿಲ್ಲ.

- ಸಾಮಗ ದತ್ತಾತ್ರಿ
ಬೆಂಗಳೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್