ಕಚಗುಳಿ ಟ್ವೀಟ್ಸ್
ನರೇಂದ್ರ ಮೋದಿ ನೈಜ ಹಿಂದುವಿನ ಹೃದಯ ಹೊಂದಿಲ್ಲ ಎಂದರಂತೆ ಕಪಿಲ್ ಸಿಬಲ್. ರಾಜಕಾರಣಿ, ಕವಿ, ಲಾಯರ್ ಆಗಿದ್ದ ಸಿಬಲ್ ಈಗ ಹೃದಯ ಪರಿಣತರೂ ಆದರಾ?
- ಫೇಕಿಂಗ್ ನ್ಯೂಸ್
ಅಮೆರಿಕ: ನಾವು ನಿಮ್ಮ ಜನರ ಮೇಲೆ ಗೂಢಚಾರಿಕೆ ಮಾಡುತ್ತಿದ್ದೇವೆ. ಭಾರತ: ಮಾಡ್ಕೊಳ್ಳಿ ಪರವಾಗಿಲ್ಲ. ನಮ್ಮ 'ರಾಯಲ್' ಕುಟುಂಬದ ಕುರಿತು ಯಾರಾದರೂ ಜೋಕ್ ಮಾಡುತ್ತಿರುವುದು ಕಂಡುಬಂದರೆ ಮಾತ್ರ ನಮಗೆ ತಿಳಿಸಿ.
- ಗಪ್ಪಿಸ್ತಾನ್ ರೇಡಿಯೊ
ವೈಟ್ಹೌಸ್ ಸ್ವಾಗತಕಾರಿಣಿ ಒಬಾಮಾಗೆ ಹೇಳುತ್ತಾಳೆ: ಸರ್, ಯಾರೋ ಫೋನ್ ಮಾಡಿದ್ದಾರೆ. ಆದರೆ ಮಾತೇ ಆಡ್ತಿಲ್ಲ.
ಒಬಾಮಾ: ಓಹ್, ಅವರಿಗೆ ನನ್ನ ನಮಸ್ತೆ ತಿಳಿಸು. ಫೋನ್ ಮಾಡಿರೋದು ಭಾರತದ ಪ್ರಧಾನಿ ಮನಮೋಹನ್ ಸಿಂಗ್.
-ರಾಜೀವ್ ಜುನೇಜ