ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೆ-ಸೆಟ್ ಎಂಬ ಕೆಟ್ಟ ಸುಲಿಗೆ

ಒಂದು ಕಾಲದಲ್ಲಿ ಪದವಿ ಮಟ್ಟದ ತರಗತಿಗಳಲ್ಲಿ ಬೋಧಿಸುವ ಉಪನ್ಯಾಸಕರುಗಳ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿಯಾಗಿತ್ತು. ..

Rashmi Kasaragodu
Updated On : 21 Jul 2013, 11:18 am

ಒಂದು ಕಾಲದಲ್ಲಿ ಪದವಿ ಮಟ್ಟದ ತರಗತಿಗಳಲ್ಲಿ ಬೋಧಿಸುವ ಉಪನ್ಯಾಸಕರುಗಳ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿಯಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಈ ಅರ್ಹತೆಯನ್ನು ಸ್ನಾತಕೋತ್ತರ ಪದವಿಯಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಆಗಿ ಬದಲಾಯಿಸಿದೆ. ಯುಜಿಸಿ ಅಥವಾ ಯುಜಿಸಿ-ಸಿಎಸ್ಐಆರ್ ನಡೆಸುವ ಈ ಅರ್ಹತಾ ಪರೀಕ್ಷೆಯ ಹೊರತಾಗಿ, ರಾಜ್ಯ ಮಟ್ಟದಲ್ಲಿ (NET)ಮಾದರಿಯಲ್ಲಿ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನು (SET) ನಡೆಸಲೂ ಸಹ ಯುಜಿಸಿ ಅವಕಾಶ ಮಾಡಿಕೊಟ್ಟಿದೆ.
ರಾಷ್ಟ್ರಮಟ್ಟದಲ್ಲಿ ಈ ಪರೀಕ್ಷೆಗಳು ವರ್ಷಕ್ಕೆರಡು ಬಾರಿ ಅತ್ಯಂತ ಸುವ್ಯವಸ್ಥಿತವಾಗಿ ಕ್ರಮ ತಪ್ಪದಂತೆ ನಡೆದುಕೊಂಡು ಬಂದಿವೆ. ವರ್ಷದಿಂದ ವರ್ಷಕ್ಕೆ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುತ್ತ, ಮೌಲ್ಯವರ್ಧಿಸಿಕೊಂಡು ಈ ಪರೀಕ್ಷೆಗಳು ಸಾಗುತ್ತಿವೆ. ಆದರೂ ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಉತ್ತೀರ್ಣತಾ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಅನುವು ಮಾಡಿಕೊಟ್ಟಿದೆ. ಈ ಬಾರಿಯ ಕರ್ನಾಟಕ ರಾಜ್ಯದ ಪರೀಕ್ಷೆಯ ಸುತ್ತೋಲೆಯು, ಮೈಸೂರು ವಿಶ್ವವಿದ್ಯಾಲಯದಿಂದ ಹೊರ ಬಿದ್ದಿದೆ.
ರಾಷ್ಟ್ರಮಟ್ಟದಲ್ಲೇ 400 ರು. (ಸಾಮಾನ್ಯ) 200 ರು. (ಹಿಂದುಳಿದ ವರ್ಗ 100 ರು. (ಪ.ಜಾತಿ ಮತ್ತು ಪ.ಪಂ.) ದಷ್ಟು ಶುಲ್ಕವಿರುವ ಈ ಪರೀಕ್ಷೆಗೆ, ರಾಜ್ಯ ಮಟ್ಟದಲ್ಲಿ ನಿಗದಿಪಡಿಸಿರುವ ಶುಲ್ಕ 1000 ರು. (ಸಾಮಾನ್ಯ) 800 ರು. (ಹಿಂದುಳಿದ ವರ್ಗ) ಮತ್ತು 500 ರು. (ಪ.ಜಾತಿ ಮತ್ತು ಪ.ಪಂ.)! ಇದು ಅಕ್ಷರಶಃ ಸುಲಿಗೆಯಲ್ಲದೇ ಮತ್ತೇನು?
ರಾಷ್ಟ್ರಮಟ್ಟದ ಪರೀಕ್ಷೆಯ ಎರಡೂವರೆ ಪಟ್ಟು ಅಧಿಕ ಶುಲ್ಕ ಪಡೆದು ನಡೆಸುತ್ತಿರುವ ಈ ಪರೀಕ್ಷೆ, ರಾಷ್ಟ್ರ ಮಟ್ಟದ ಪರೀಕ್ಷೆಯ ಸುವ್ಯವಸ್ಥತೆಗೆ ಸರಿಯಾಗಲಾರದು. ಈ ಹಿಂದೆ ಪರೀಕ್ಷೆ ನಡೆದ ರೀತಿಗಳೇ ಇದಕ್ಕೆ ಕೈಗನ್ನಡಿ.
ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳಗಳಲ್ಲಿ ಈ SET ವರ್ಷಕ್ಕೆರಡು ಬಾರಿ ವ್ಯವಸ್ಥಿತವಾಗಿಯೇನಡೆಯುತ್ತವೆ. ಅದೂ ಸಹ ಖಂಡಿತವಾಗಿಯೂ ಈ ಪರಿಯ ದುಬಾರಿ ಶುಲ್ಕದ ಸುಲಿಗೆ ಇಲ್ಲದೇ. ಆದರೆ ಕರ್ನಾಟಕದಲ್ಲಿ ವರ್ಷಕ್ಕೆರಡು ಬಾರಿ ನಡೆಯಬೇಕಾದ ಪರೀಕ್ಷೆ ಹೆಚ್ಚು ಕಡಿಮೆ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ. ಕೊನೆಯ ಬಾರಿ ಅಕ್ಟೋಬರ್ 2011ರಲ್ಲಿ ನಡೆದ ಪರೀಕ್ಷೆ, ಪುನಃ 2013 ಡಿಸೆಂಬರ್ನಲ್ಲಿ ನಡೆಯಲಿದೆ. ಡಿಸೆಂಬರ್ 2013ರಲ್ಲಿ ನಡೆದೇ ನಡೆಯುತ್ತದೆಂಬ ಖಾತ್ರಿ ಇಲ್ಲ. ಕಾರಣ 2011 ರಲ್ಲಿ ಜುಲೈ ತಿಂಗಳಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ, ತಯಾರಿಯ ಕೊರತೆಯಿಂದ ಎರಡು ಬಾರಿ ಮುಂದೂಡಲ್ಪಟ್ಟು ಅಕ್ಟೋಬರ್ ತಿಂಗಳಿನಲ್ಲಿ ನಡೆದಿತ್ತು. ಹಾಗಾಗಿ ಈ ವರ್ಷದ ಕೊನೆಯಲ್ಲಿ ಪರೀಕ್ಷೆ ನಿಗದಿಯಾಗಿದೆಯೇ ಹೊರತು ನಡೆಯುತ್ತದೆ ಎಂದು ಹೇಳುವ ಹಾಗಿಲ್ಲ.
 NET ಗೆ ಪರ್ಯಾಯವಾಗಿ ನಡೆಯಬೇಕಾದ SETಗೆ, ಎಲ್ಲ ರೀತಿಯಿಂದ ನೆಟ್ ಅನ್ನು ಮಾದರಿಯನ್ನಾಗಿಸಿಕೊಳ್ಳಬಹುದಾಗಿತ್ತು. ಆದರೆ ಕರ್ನಾಟಕದಲ್ಲಿ SETನ ಪೂರಾ ಸ್ವರೂಪ ಪರೀಕ್ಷಾರ್ಥಿಗಳಿಗೆ ತೊಂದರೆಯಾಗುವ ರೀತಿಯಲ್ಲೇ ಸಾಗುತ್ತಿದೆ. ಕೇವಲ ಒಂದು ಅರ್ಜಿಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ತುಂಬಿ, ಸುಲಭ ವ್ಯವಸ್ಥೆಯ ಮೂಲಕ ಅರ್ಜಿ ಹಾಕಿNET ಪರೀಕ್ಷೆಗೆ ಹಾಜರಾಗಬಹುದು. ಆದರೆ SET ಗೆ ಅರ್ಜಿ ಹಾಕುವುದೇ ಒಂದು ಪರೀಕ್ಷೆಯಾಗಿ ಬಿಡುತ್ತಿದೆ. ಆನ್ಲೈನ್ ದಾಖಲಾತಿಯ ಮೂಲಕ ಪ್ರಾರಂಭವಾಗುವ ಈ ಪರೀಕ್ಷೆ, ಚಲನ್ ಡೌನ್ಲೋಡ್, ಎಸ್ಬಿಎಮ್ನಲ್ಲಿನ ಉದ್ದದ ಸರತಿಯಲ್ಲಿ ಸಾಗಿ ಶುಲ್ಕ ತುಂಬುವುದು, ಚಲನ್ ಅನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡುವುದು, ಭಾವಚಿತ್ರ ಮತ್ತು ಸಂಪೂರ್ಣ ವಿವರಗಳನ್ನು ಅಪ್ಲೋಡ್ ಮಾಡುವುದರವರೆಗೆ ಸಾಗುತ್ತದೆ. ವಿಚಿತ್ರವೆಂದರೆ ಪ್ರತಿಯೊಂದು ವಿವರವನ್ನು ಆನ್ಲೈನ್ನಲ್ಲಿ ದಾಖಲಾತಿ ಮಾಡಿದ ನಂತರವೂ, ಪುನಃ ಇವೆಲ್ಲದರ ಪ್ರತಿಯನ್ನು ಉಳಿದೆಲ್ಲ ದಾಖಲಾತಿಗಳೊಂದಿಗೆ SETನೋಡಲ್ ಅಧಿಕಾರಿಗೆ ಪೋಸ್ಟ್ ಮಾಡಬೇಕಾದುದು. ಇದ್ಯಾವುದೂ ಇಲ್ಲದೇ ವ್ಯವಸ್ಥಿತವಾಗಿNETಗೆ ನಡೆಯುವಾಗ SET ಗೆ ಮಾತ್ರ ಯಾಕೆ ಈ ಕಿರಿಕಿರಿ?
ಇಷ್ಟೆಲ್ಲಾ ಆದರೂ SET ನ ಕಿರಿಕಿರಿ ಮುಗಿಯುವುದಿಲ್ಲ. ಸಮರ್ಥವಾಗಿ ಒಂದೇ ಅವಧಿಯಲ್ಲಿ ನಡೆಯುವ NET ಗೆ ಪರ್ಯಾಯವಾಗಿ, 2 ಅವಧಿಯಲ್ಲಿ ನಡೆಯುವ ದೀರ್ಘಾವಧಿಯ ಖಊಖಿ ಪ್ರಶ್ನೆ ಪತ್ರಿಕೆಗಳಲ್ಲಿ ಮುದ್ರಣ ದೋಷಗಳಿಗೆ ಬರವಿರುವುದಿಲ್ಲ. ಅದನ್ನು ಪ್ರಶ್ನಿಸಲು ಅವಕಾಶವೇ ಇರುವುದಿಲ್ಲ. ಪ್ರಶ್ನೆ ಪತ್ರಿಕೆಯೂ ಸಹ ಪರೀಕ್ಷಾ ಕೊಠಡಿಯಿಂದ ಹೊರಗೆ ಸಿಗುವುದಿಲ್ಲ. ಜೊತೆಗೆ ಯಾವ ಸರಿಯಾದ ಉತ್ತರಗಳಿಂದ ಮೌಲ್ಯ ಮಾಪನ ನಡೆದಿದೆ ಎಂಬುದು ಮತ್ತು ಪರೀಕ್ಷಾರ್ಥಿಗಳಿಗೆ ತಾನು ಬರೆದ ಉತ್ತರ ಪತ್ರಿಕೆಯ ನಕಲು ಇದ್ಯಾವುದು ಸಹ ಹಿಂದಿನ ಖಊಖಿ ನಲ್ಲಿ ದೊರೆತಿಲ್ಲ. ಇಷ್ಟೆಲ್ಲಾ ಆಗಿ ಪರೀಕ್ಷೆಯ ಫಲಿತಾಂಶ ಬರುವುದಕ್ಕೆ 6 ತಿಂಗಳಿನಿಂದ 1 ವರ್ಷವೇ ಬೇಕಾಗಬಹುದು.
  ಇಷ್ಟು ಅವ್ಯವಸ್ಥಿತವಾಗಿ ನಡೆಯುವ ಪರೀಕ್ಷೆಗೆ 1000 ರು.ಗಳಷ್ಟು ತೆರಬೇಕಾದ್ದು ಪರೀಕ್ಷಾರ್ಥಿಗಳಿಗೆ ಅನಿವಾರ್ಯ ಕರ್ಮವಾಗಿದೆ. ಇಷ್ಟೆಲ್ಲಾ ಇದ್ದರೂ ಉಪನ್ಯಾಸಕ ಅರ್ಹತೆಗಿಟ್ಟಿಸಲು ಪರೀಕ್ಷೆ ಬರೆಯುವವರ ಸಂಖ್ಯೆ ಲಕ್ಷೋಪಲಕ್ಷ. ಅಂದರೆ ಒಟ್ಟಾರೆ ಕೋಟಿ - ಕೋಟಿಗಳಲ್ಲಿ ನಡೆಯುವ ವಹಿವಾಟಿದು. ನಿಜವಾಗಿಯೂ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿಗೆ ವ್ಯಯಿಸಲ್ಪಡುವ ಮೊತ್ತಕ್ಕೆ ಹೋಲಿಸಿದರೆ, ಪಡೆಯುತ್ತಿರುವ ಶುಲ್ಕ ಸುಲಿಗೆಯಲ್ಲದೇ ಮತ್ತೇನೂ ಅಲ್ಲ.

- ಕೆ-ಸೆಟ್ ಪರೀಕ್ಷಾರ್ಥಿ

 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement