ಅಂಕಣಗಳು

ಲಘುಧಾಟಿಯ ಬರಹ ಬೇಡವೆಂದರೆ ಹೇಗೆ?

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಿನಿಂದ, ನೀವು "ಸಿದ್ದುಗೆ ಸಲಹೆ" ಶೀರ್ಷಿಕೆಯಡಿಯಲ್ಲಿ ರಾಜ್ಯದ ನಾಗರಿಕರಿಂದ ಬಂದ ಸಲಹೆಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಪ್ರಕಟಿಸುತ್ತಾ ಬಂದಿದ್ದೀರಿ. ಬಹುಶಃ ಈ ಸಲಹೆಗಳನ್ನು ಮಾನ್ಯ ಸಿದ್ದರಾಮಯ್ಯನವರು ಸಂಗ್ರಹಿಸಿಟ್ಟುಕೊಂಡು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಬಹುದು ಮತ್ತು ಬಹುಶಃ ಬಹಳ ಕ್ಲಿಷ್ಟಕರವಾದ ಸಮಸ್ಯೆಗಳಿಗೂ ನಾಗರಿಕರು ನೀಡುವ ಸಲಹೆ ಉಪಯೋಗವಾಗಬಹುದು ಎಂದು ತಿಳಿಯುತ್ತದೆ. ಈ ಸಂಬಂಧ ಕನ್ನಡಪ್ರಭ ದಿನಪತ್ರಿಕೆ ಈ ಅಂಕಣವನ್ನು ಸರ್ಕಾರದ ಉಪಯೋಗಕ್ಕಾಗಿ ತೆರೆದು, ಶ್ರೀ ಸಾಮಾನ್ಯನಿಂದ ಸಲಹೆಯನ್ನು ಪಡೆದುಕೊಂಡು ಸುಗಮವಾದ ಸರ್ಕಾರ ನಡೆಸಲು ಮುಖ್ಯಮಂತ್ರಿಗಳಿಗೆ ತಮ್ಮ ಪತ್ರಿಕೆಯ ಮೂಲಕ ನೀಡಿರುವ ಟಿಪ್ಸ್‌ಗೆ ಪತ್ರಿಕೆಗೊಂದು ಸೆಲ್ಯೂಟ್.
-ಬ್ಯಾಂಕ್ ಶಿವಕುಮಾರ್, ಮೈಸೂರು, 9886301184

ದಿನಾಂಕ 2 ಜೂನ್ 2013ರ ಕ.ಪ್ರ.ದ ಸಾಪ್ತಾಹಿಕ ಪ್ರಭದಐದನೇ ಪುಟದಲ್ಲಿ ಪ್ರಕಟವಾಗಿದ್ದ ಕೋಲ್ಯನ ನಗೆಹನಿಯಲ್ಲಿ "ಕೋಲ್ಯ ವೆಸ್ಟ್ ಇಂಡೀಸ್‌ಗೆ ಹೋಗಿದ್ದ" ..." ಆ ಪೋಲಿ ನಗೆಹನಿಯು ತುಂಬಾ ಚೆನ್ನಾಗಿತ್ತೆಂದು ನನ್ನ ಗರ್ಲ್‌ಫ್ರೆಂಡ್‌ಗೆ ಕಳುಹಿಸಿದಾಗ ಅವಳಿಂದ ಬೈಸಿಕೊಂಡಿದ್ದೂ ಅಲ್ಲದೇ ನಂಗೇ ಗುಡ್ ಬೈ ಹೇಳಿ ಹೋದಳು. ಆ ಒಂದು ನಗೆಹನಿಯಿಂದ ನಾನು ಗರ್ಲ್ ಫ್ರೆಂಡ್‌ನ್ನು ಕಳ್ಕೊಂಡೆ.
-ರಮೇಶ್ ಭಟ್ ಆವರ್ಸೆ, ಮೈಸೂರು, ಮೊ. 9164 276058

ಜೂನ್ 3ರ ಬೈಟು ಕಾಫಿಯಲ್ಲಿ ಖ್ಯಾತ ಚತುರ್ಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ಕುರಿತು "ಬಾಲು ಪ್ರತಿಭೆಯ ಹೊನಲು" ಶೀರ್ಷಿಕೆಯಡಿ ಅವರ ಸ್ಥೂಲ ಪರಿಚಯ ಎಸ್‌ಪಿಯವರು 68ನೇ ವರ್ಷಕ್ಕೆ ಕಾಲಿಡುತ್ತಿರುವ ಈ ದೈತ್ಯ ಪ್ರತಿಭೆಯ ಜನುಮ ದಿನದ ಕೊಡುಗೆಯಾಗಿ "ಉಸಿರುವಾಸಿ" ಎಂದೇ ಟೈಟಲ್ ಕೊಟ್ಟು ಬರೆದ ಲೇಖನ ತುಂಬಾ ಮೆಚ್ಚುಗೆಯಾಯಿತು. ಹಿನ್ನೆಲೆ ಗಾಯನ, ಸಂಗೀತ ನಿರ್ದೇಶನ, ಸಿನಿಮಾ ನಿರ್ಮಾಣ, ನಟನೆ, ಕಿರುತೆರೆ ಕಾರ್ಯಕ್ರಮ ನಿರ್ವಹಣೆ ಇವೆಲ್ಲವನ್ನೂ ಒಬ್ಬರೇ ಮಾಡಿದ್ದು ಅವರು ಹಾಡಿರುವ ಹಾಡುಗಳ ಸಂಖ್ಯೆ, ಪಡೆದಿರುವಪ್ರಶಸ್ತಿಗಳ ವಿವರ ಎಲ್ಲವನ್ನೂ ವಾಚಕರಿಗೆ ಉಣಬಡಿಸಿದ ಸವಿರುಚಿಯಂತಿದೆ.
-ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, ಮೊ. 94491-30531

ದಿನಾಂಕ 2.6.2013ರ ಗೋಡೆ ಬರಹದಲ್ಲಿ 'ಮಾಗಡಿ ಶ್ರೀನಿವಾಸ ಬಾಳೆಕಟ್ಟೆಯವರು ಪ್ರಣತಿಯವರ ಲೇಖನ ಓದುತ್ತಾ ಆಕ್ಷೇಪಣೆಯ ಸರಮಾಲೆಯನ್ನು ಹೆಣೆದಿದ್ದಾರೆ. ಹಾಗೆಯೇ ಅನುಮಾನದ ಹುತ್ತ ಬೆಳೆಸಿಕೊಂಡಿದ್ದಾರೆ. ವೈಯಕ್ತಿಕ ಆದರ್ಶ, ಭಾವನೆಗಳು ಸಮಾಜಮುಖಿ, ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದರೆ ಮಾತ್ರ ಪ್ರಬುದ್ಧ, ಪ್ರಮೋದ, ಪ್ರಮಾದ ಲೇಖನವೆಂದು ಇದರ ಅನಿವಾರ್ಯತೆಯ ಮೂಲವನ್ನು ಕೆಣಕಿದ್ದಾರೆ. 1980ರಲ್ಲಿ ಲಂಕೇಶ್ ಪತ್ರಿಕೆ ಪ್ರಾರಂಭವಾದಾಗ ಅಲ್ಲಿಯೂ ಇಂತಹದ್ದೇ ಕಾಲಂ ನೀಲು ಹೆಸರಿನಲ್ಲಿ ಸಂಪಾದಕರೆ, ವೈಯಕ್ತಿಕವಾಗಿ ಬರೆಯುತ್ತಿದ್ದರು. 'ನಿಮ್ಮಿ' ಕಾಲಂನಲ್ಲಿ ಕೂಡಾ ಖಾಸಗಿ ವಿಷಯಗಳೇ ಇರುತ್ತಿದ್ದವು. ಒಂದು ಲೇಖನವನ್ನು ಯಾವ ದೃಷ್ಟಿಕೋನದಿಂದ ನೋಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. 'ಪ್ರಣತಿ'ಯವರ ಪ್ರೀತಿ ಪ್ರೇಮ ಪ್ರಣಯದ ಬರಹಗಳು ಲಘು ಓದಿಗೆ ಇರುವಂಥವು ಹಾಗೂ ವೈಯಕ್ತಿಕವಾದವೇ. ಪ್ರತಿಯೊಬ್ಬ ಜೀವಿಗೂ ತಾನು ಕೊಂಡದ್ದು, ಸಾಧಿಸಿದ್ದು, ಅಂದುಕೊಂಡಿದ್ದನ್ನು ಹೇಳುವ ಬರೆಯುವ ಸ್ವಾತಂತ್ರ್ಯವಿದೆ. ಸಾಮಾನ್ಯ ವ್ಯಕ್ತಿ ತಾನೂ ಈ ಲೇಖನದ ಪಾತ್ರಧಾರಿ ಎಂದು ತಿಳಿದು ಓದಬೇಕು.
-ರಾಜೇಂದ್ರ ಹೆಗಡೆ, ಹಾವೇರಿ, ಮೊ. 93425 82490

ಜೂನ್ 3ರಂದು ಕನ್ನಡಪ್ರಭದ ಮಲ್ಲಿಕಾರ್ಜುನ ತಿಪ್ಪಾರ ಅವರು ಬರೆದ 'ಹ್ಯಾಪಿ ಬರ್ತ್‌ಡೇ ಜಾರ್ಜ್‌' ಲೇಖನ ಓದಿ ಖುಷಿಯಾಯಿತು. ಜಾರ್ಜ್ ಕುರಿತು ಬರೆಯಬಹುದೆಂದು ನಾನಂತೂ ನಿರೀಕ್ಷಿಸಿರಲಿಲ್ಲ. ಇವತ್ತು ನಾವೆಲ್ಲ ರಾಜಕಾರಣಿಗಳ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಿದ್ದರೆ, 'ರಾಜಕಾರಣಿಗಳೆಂದರೆ ಇಷ್ಟೇನೇ ಬಿಡು' ಎಂಬ ಬೇಸರದ ಮಾತಾಡುತ್ತಿದ್ದರೆ, ಅದಕ್ಕೆ ಅಪವಾದವೆಂಬಂತೆ ಜಾರ್ಜ್ ನಮ್ಮ ಕಣ್ಣ ಮುಂದೆ ನಿಲ್ಲುವ ವ್ಯಕ್ತಿ. ಜಾರ್ಜ್ ಬಾಳಿದ ರೀತಿಯನ್ನು ನೋಡಿದರೆ ಅವರು ಕೇಂದ್ರ ಮಂತ್ರಿಯೆಂಬ ಸಣ್ಣ ಸುಳಿವೂ ಸಿಕ್ಕುವುದಿಲ್ಲ. ಇಂಥ ವ್ಯಕ್ತಿ ಎಂದೆಂಥ ಖಾತೆ ನಿರ್ವಹಿಸಿದರು ಎಂಬುದನ್ನು ಸುಲಭಕ್ಕೆ ನಂಬಲಿಕ್ಕಾಗುವುದಿಲ್ಲ. ಎಷ್ಟೋ ಜನ ಅಯೋಗ್ಯರು, ಮೂರ್ಖರು, ಕೇಂದ್ರ ಮಂತ್ರಿಗಳಾಗಿದ್ದಾರೆ. ಆದರೆ ಸದಾ ನೆನಪಿನಲ್ಲುಳಿಯುವವವರು, ಜಾರ್ಜ್‌ರಂತಹ ಕೆಲವೇ ಕೆಲವು ಬಡ ಜೀವಿಗಳು ಮಾತ್ರ!
-ಜಗದೀಶ. ಸಿ., ಹಾಸನ,ಮೊ. 8971 622084

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ