ಕಚಗುಳಿ ಟ್ವೀಟ್ಸ್
ಪ್ರವಾಹ ಸಂತ್ರಸ್ತ ಸ್ಥಳದಲ್ಲಿ ಮರು ನಿರ್ಮಾಣಕ್ಕೆ ತಿಂಗಳುಗಟ್ಟಲೆ ಅವಧಿ ಹಿಡಿಯುತ್ತದೆ. ಅಧಿಕಾರಸ್ಥರು ಈಗ ಸುಲಭಕ್ಕೆ ಮಾಡಬಹುದಾದ ಕೆಲಸ ಎಂದರೆ ಪ್ರವಾಹ ಪರಿಸ್ಥಿತಿ ಬಗ್ಗೆ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡುವುದು.
-ಫೇಕಿಂಗ್ ನ್ಯೂಸ್
ಸೋನಿಯಾ ಗಾಂಧಿ ಸಂಸದರಿಗೆ ಹೀಗೆ ಹೇಳಿದ್ದರೆ ಚೆಂದಿತ್ತು: ಉತ್ತರಾಖಾಂಡದ ಪ್ರವಾಹ ಸಂತ್ರಸ್ತ ನಿಧಿಗೆ ನಿಮ್ಮ ತಿಂಗಳ ಸಂಬಳ ಮಾತ್ರ ಸಾಕಾಗದು. ಸ್ವಿಸ್ಬ್ಯಾಂಕ್ನಲ್ಲಿ ಇಟ್ಟಿರುವ ಹಣವನ್ನೂ ಸ್ವಲ್ಪ ತೆಗೆಯಿರಿ.
-ದ ಅನ್ರಿಯಲ್ ಟೈಮ್
ರುಪಾಯಿ ಮೌಲ್ಯ ಕುಸಿತಕ್ಕೆ ಆರೆಸ್ಸೆಸ್ಸೆ ಕಾರಣ ಅಂತ ದಿಗ್ವಿಜಯ್ ಸಿಂಗ್ ಇನ್ನೂ ಹೇಳಿಕೆ ಕೊಟ್ಟಿಲ್ಲ ಏಕೆ? 'ರುಪೀಸ್ ಹಿಂದೆ ಆರೆಸ್ಸೆಸ್' ಅಂತ ಒಳ್ಳೆ ಹೆಡ್ಲೈನ್ ಕೊಡಬಹುದಿತ್ತು.
-ರಮೇಶ್ ಶ್ರೀವತ್ಸ