ಅಂಕಣಗಳು

ಈ ಅಂಕಣಕ್ಕೂ ಕೊಂಚ ಸೆನ್ಸಾರ್ ಬೇಕು!

ಗೋಡೆ ಬರಹದಲ್ಲಿ ಹಾವೇರಿಯ ರಾಜೇಂದ್ರ ಹೆಗಡೆಯವರು ನನ್ನ ಹಿಂದಿನ ಗೋಡೆ ಬರಹದಲ್ಲಿ ಪ್ರಕಟವಾದ ಚಿಕ್ಕಲ್ಲೂರು ಜಾತ್ರೆಯ ಹೆಂಡ ಹಾಗೂ ಭಂಗಿಯ ಆಕ್ಷೇಪಕ್ಕೆ ಉತ್ತರಿಸುತ್ತಾ- ಆ ಲೇಖನದಿಂದ ಜನ ಹಾಳಾಗೋದಿಲ್ಲ. ಜನರೇನೂ ಇದರಿಂದ ಪ್ರಭಾವಿತರಾಗುವುದಿಲ್ಲ ಎಂದಿದ್ದಾರೆ. ನನ್ನ ಆಶಯ ಅದಲ್ಲ. ದುರ್ಬಲ ಮನಸ್ಸಿನ ವ್ಯಕ್ತಿಗಳು, ಚಟಗಳ ದಾಸರಿಗೆ ಇಂತಹ ಜಾತ್ರೆ ದೇವರ ಹೆಸರಿನಲ್ಲಿ ಹೆಂಡ, ಖಂಡ, ಭಂಗಿ ಸೇವಿಸಲು ಒಂದು ಪ್ರೇರಣೆ ಸಿಗುತ್ತದೆ. ಆದ್ದರಿಂದ ಇಂತಹ ಲೇಖನ 'ಕನ್ನಡಪ್ರಭ'ದಲ್ಲಿ ಬೇಡ ಎಂಬುದಾಗಿದೆ. ಜಾತ್ರೆಯನ್ನು ತಡೆಯಲೂ ಸಾಧ್ಯವಿಲ್ಲ. ಜನರಿಗೆ ಅಲ್ಲಿಗೆ ಹೋಗಬೇಡಿ ಎನ್ನಲೂ ಸಾಧ್ಯವಿಲ್ಲ. ಇಂತಹ ಲೇಖನ 'ಕನ್ನಡಪ್ರಭ'ದಲ್ಲಿ ಮಾತ್ರ ಬೇಡ ಎಂದು ನನ್ನ ಆಶಯ.
-ಜಿ. ಗೋಪಾಲಕೃಷ್ಣ, 14/37 ಮುಖ್ಯರಸ್ತೆ, ಕಂಪ್ಲಿ-ಬಳ್ಳಾರಿ ಜಿಲ್ಲೆ.

ವಿಶ್ವೇಶ್ವರಭಟ್‌ರ ಲೇಖನಗಳು ಒಂದು ರೀತಿ ಚುರುಮುರಿ ಇದ್ದ ಹಾಗೆ. ಖಾರವಿದ್ದರೂ ಸ್ವಾದವಿರುವ ಮೆಣಸಿನಕಾಯಿಯ ಹಾಗೆ. ಅದರಲ್ಲೂ 24.02.13ರ 'ಮಿಡತೆಯ ಕೂಗಿಗೆ ಓಗೊಡುತ್ತಾ!' ಲೇಖನವಂತೂ ಅದ್ಭುತ ಕಲ್ಪನೆಯ ಜೊತೆಗೆ ಹೊಸ ಅನುಭವ ನೀಡಿತು. ಎಲ್ಲೋ ಇದ್ದ ಲೇಖನಗಳನ್ನು ಹೆಕ್ಕಿ ತೆಗೆದು ನಮ್ಮ ಜೊತೆ ಹಂಚಿ ಉಣ್ಣುವ ರೀತಿ ತುಂಬಾ ಇಷ್ಟ. ಹಾಗೆಯೇ ಪ್ರತಾಪ್‌ಸಿಂಹರವರ ದೇಶಭಕ್ತಿ, ಕ್ರಾಂತಿಕಾರಿ ಲೇಖನಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ 24.2.13ರ ಗೋಡೆ ಬರಹದ 'ಪ್ರಣತಿ... ನೀ ಯಾಕೆ ನನ್ನ ಕೈ ಹಿಡಿಬಾರ್ದು?' ಅಂಕಣ ಸರಿ ಎನಿಸಲಿಲ್ಲ. ಕಾರಣ ಅದೆಷ್ಟೋ ಮನಸ್ಸುಗಳು ಅದೆಷ್ಟೋ ಜೀವಗಳನ್ನು ಇಷ್ಟಪಡುತ್ತದೆ. ಆದರೆ ಹೀಗೆ ಸಿನಿಮಾ ಶೈಲಿಯ ಪ್ರಪೋಸ್ ನಮ್ಮ ಸಂಸ್ಕೃತಿಗೆ ತಕ್ಕುದಾದುದಲ್ಲ. ದಯಮಾಡಿ ಸ್ವಲ್ಪ ಸೆನ್ಸಾರ್ ಕಾಪಾಡಿಕೊಂಡರೆ ಉತ್ತಮ. ಪ್ರೀತಿಸುವುದು ತಪ್ಪಲ್ಲ. ಪ್ರೀತಿಸುವ ರೀತಿ ಉತ್ತಮವಾಗಿರಬೇಕಷ್ಟೇ. ಅವರು (ಹರೀಶ್ ಆಚಾರ್ಯ) ಹೇಳುವಂತೆ: "ನಿನ್ನಂಥ ಅರ್ಧ ಕೂದಲು ಮುಚ್ಚಿದ..." ಅಂದರೆ ಅಂಥವರೆಲ್ಲಾ ಇಷ್ಟ ಎಂದು ಅರ್ಥವೇ?
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ಮತ್ತಿಕೆರೆ ಅಂಚೆ, ರಾಮನಗರ ಜಿಲ್ಲೆ.

ಇತ್ತೀಚಿನ ದಿನಗಳಲ್ಲಿ ಕ.ಪ್ರ.ದಲ್ಲಿ ಪ್ರಕಟವಾಗುವ ವಿಷಯಕ್ಕೆ ತಕ್ಕಂತೆ 'ಶಿರೋನಾಮೆ' ನೀಡುತ್ತಿರುವುದು ಶ್ಲಾಘನೀಯ ವಿಚಾರ. ಉದಾಹರಣೆಗೆ ದಿ. 27.2.13ರಂದು ಮೂಗಿಗೆ ತುಪ್ಪ-ನಾಲಗೆಗೆ ಖಾರ (ಬಜೆಟ್ ಕುರಿತಂತೆ), ಪ್ರಯಾಣಿಕ ಪಾರು; ಸಾಗಣೆ ಏರು, ಮೈಸೂರ್‌ಗೆ ಭರ್ಜರಿ ಪಾಕ ಇತ್ಯಾದಿ. ಆದರೆ ಕೆಲವೊಂದು ಸ್ಥಳೀಯ ವಿಚಾರಗಳು ಮಾತ್ರ ಇತರೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಪ್ರಕಟವಾಗುತ್ತಿರುವುದು ವಿಷಾದನೀಯ. ಈ ವಿಷಯದಲ್ಲಿ ಜಿಲ್ಲಾವಾರು ಪ್ರತಿಗಳಲ್ಲಿ ಆದ್ಯತೆ ನೀಡುವುದರಿಂದ ಪತ್ರಿಕೆ ಪ್ರಸಾರಾಂಗದಲ್ಲೂ ಇನ್ನೂ ಹೆಚ್ಚು ಮಾಡಬಹುದೆಂದು ನನ್ನ ಅನಿಸಿಕೆ. ಎ.ಆರ್. ಮಣಿಕಾಂತ್ ಹಾಗೂ ವಿಶ್ವೇಶ್ವರಭಟ್ ಮತ್ತು ಪ್ರತಾಪ್ ಸಿಂಹರವರ ಲೇಖನಗಳಿಗಾಗಿ ಪ್ರತಿವಾರ ಕಾಯುತ್ತಿರುತ್ತೇನೆ.
-ಭಾಗ್ಯ ನಂಜುಂಡಸ್ವಾಮಿ,
ಎನ್.ಆರ್. ಪುರ, ಅಂಚೆ. ತಾ., ಚಿಕ್ಕಮಗಳೂರು ಜಿಲ್ಲೆ.

ಪ್ರಣತಿಯವರಿಗೆ ವಂದನೆಗಳು. ಕನ್ನಡಪ್ರಭದ ಪ್ರೀತಿ, ಪ್ರೇಮ, ಪ್ರಣಯದ ಖಾಯಂ ಓದುಗ. ಉತ್ತಮ ಬರವಣಿಗೆ ಪ್ರಣತಿ ನಿಮ್ಮದು. ಹೀಗೇ ಮುಂದುವರೆಸಿ. ನಿಮ್ಮ ಲೇಖನದ ವಿಶೇಷತೆಯೆಂದರೆ ಸರಳ ಬರವಣಿಗೆ. ಇದೇ ಕಾರಣಕ್ಕೆ ನನ್ನ 12 ವರ್ಷದ ಮಗಳು ಅರುಷಿ ಜೈನ್ ಸಹ ಇಷ್ಟಪಟ್ಟು ಓದುತ್ತಾಳೆ. ಪ್ರಣತಿಯವರಲ್ಲಿ ನನ್ನ ಒಂದು ಕೋರಿಕೆ- ನಿಮ್ಮ ಅಂಕಣದಲ್ಲಿ ಪ್ರಕಟವಾಗುವ ನಿಮ್ಮ ಭಾವಚಿತ್ರವನ್ನು ತಲೆಗೂದಲು ಮುಖದ ಅರ್ಧಭಾಗ ಮುಚ್ಚಿಕೊಂಡಿರುತ್ತದೆ. ಇನ್ನು ಮೇಲೆ ಸಂಪೂರ್ಣ ಮುಖ ಕಾಣುವ ಭಾವಚಿತ್ರ ಪ್ರಕಟಿಸಿದರೆ ಒಳ್ಳೆಯದು ಅನಿಸುತ್ತದೆ. ಸರಿನೋ? ತಪ್ಪೋ? ಇದೇ ತಿಂಗಳು 24ರಂದು ನನ್ನ ಬರ್ತ್‌ಡೇ. ಪ್ರತಿಸಾರಿ ನನ್ನ ಮಗಳು ಅದಿತಿ ಮತ್ತು ಅರುಷಿ  first wish ಮಾಡೋದು. ಈ ಸಾರಿ ಪ್ರಣತಿ ಸಹ ನನಗೆ ವಿಷ್ ಮಾಡಿದರೆ ನನಗೆ ಬಹಳ ಖುಷಿಯಾಗುತ್ತದೆ.
-ಜೆ. ಅಶೋಕ್‌ಕುಮಾರ್ ಜೈನ್, ಭದ್ರಾವತಿ, ಸೆಲ್ ನಂ. 9449149992.

ಬೈಟುಕಾಫಿಯ 'ಸಮೀರ ಸಾಧಕ' (ಕ.ಪ್ರ. 25/2) ಲೇಖನದಲ್ಲಿ ವಿದ್ಯೆಯ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಸಾಧಿಸಲು 'ವಿದ್ಯೆ'ಯೊಂದೇ ಮುಖ್ಯವಲ್ಲ. ನಿರ್ದಿಷ್ಟ ಗುರಿ, ಶ್ರಮ, ಜೇಬು ತುಂಬಾ ಕನಸು ಅವಶ್ಯ ಎಂದು ಇಲ್ಲಿ. ಇಲ್ಲಿ 'ವಿದ್ಯೆ' ಅಥವಾ ಶಿಕ್ಷಣ ಅಂದರೆ ಕೇವಲ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದು, ಉತ್ತಮ ಗುಣ (Marks) ಗಳನ್ನು ಪಡೆದು ಸುಂದರ ಅಕ್ಷರಗಳಲ್ಲಿ ಬರೆದ ಸರ್ಟಿಫಿಕೇಟ್ ಹೊಂದಿ ಪದವಿ ಪಡೆಯುವುದೆಂದರ್ಥವಲ್ಲ. ಯಾವುದು ಯಾವನಿಗೆ ಜ್ಞಾನ ಹಾಗೂ ಆತ್ಮಬಲ ಒದಗಿಸಿಕೊಡುವುದೋ ಅದೇ ನಿಜವಾದ ವಿದ್ಯೆ ಹಾಗೂ ಶಿಕ್ಷಣ. (Education could be anything which imports Knowledge and Confidence) ಹೀಗಿರುವಾಗ ಪುತ್ತೂರಿನ ಪೋರ ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ ಅಂತ ಹೇಳಿ ಅವನ ಸಾಧನೆಗೆ ಅದೇನೋ ಕಪ್ಪುಚುಕ್ಕೆ ಅಂಟಿಕೊಂಡಂತೆ ಎಂಬ ಧ್ವನಿ ಹೊರಡಿಸಿದಂತಿತ್ತು. ಹುಟ್ಟಿದ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಹುದುಗಿದ ಶಕ್ತಿ (Potential Strenth)ಇರುತ್ತದೆ. ಆ ದೃಷ್ಟಿಯಲ್ಲಿ ಸಮೀರ ಪಡೆದಿರುವ ವಿದ್ಯೆ ಯಾವ ಸ್ನಾತಕೋತ್ತರ ಪದವಿಗೂ ಅಥವಾ ಡಾಕ್ಟರೇಟ್‌ಗೂ ಕಡಿಮೆಯಿಲ್ಲ.

-ಶಂಕರನಾರಾಯಣಭಟ್, ಮಾಡಗೇರಿ.
ಹೊನ್ನಾವರ, ಮೊ. 9632 821920.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!