ಭಾರತದಲ್ಲಿ ಸುಮಾರು 81 ಪ್ರತಿಶತ ಹಿಂದುಗಳಿದ್ದಾರೆ. ಈ ಸತ್ಯವನ್ನು ಎಷ್ಟು ಪ್ರಯತ್ನಪಟ್ಟರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅತ್ಯಂತ ಭಿನ್ನ ನಂಬಿಕೆಯ ಜನರನ್ನು ಹೊಂದಿದ್ದರೂ ಅವರನ್ನೆಲ್ಲ ಒಗ್ಗೂಡಿಸುವಲ್ಲಿ ಮೊದಲಿನಿಂದಲೂ ಭಾರತ ಯಶಸ್ವಿಯಾಗಿದೆ ಎನ್ನುವುದು ವಿಶೇಷ. ಸುಮಾರು 1000 ಜಾತಿಗಳು, ಕನಿಷ್ಠ 7 ಧರ್ಮಗಳು ಭಾರತದಲ್ಲಿವೆ. ಆಹಾರ, ಭಾಷೆ, ಆಚರಣೆಯ ವಿಷಯದಲ್ಲಿ ಆಶ್ಚರ್ಯ ಮೂಡಿಸುವಷ್ಟು ಭಿನ್ನತೆ ನಮ್ಮಲ್ಲಿದೆ. ಪ್ರತಿ ನೂರು ಕಿಲೋಮೀಟರ್ಗೆ ಹೊಸ ಭಾರತ ಅಥವಾ ಇಂಡಿಯಾ ಎದುರಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ಶತಮಾನಗಳಿಂದ ಕೆಲವು ಕೆಟ್ಟ ಶಕ್ತಿಗಳಿಂದಾಗಿ ದಂಗೆ, ಹಿಂಸಾಚಾರಗಳು ಇಲ್ಲಿ ಘಟಿಸಿದರೂ ಕಳೆದ 65 ವರ್ಷಗಳಲ್ಲಿ ಎಲ್ಲಾ ಸಮುದಾಯಗಳು ಇಲ್ಲಿ ಭದ್ರವಾಗಿ ಬೆಳೆದಿವೆ.
ಇಂತಹ ದೇಶದಲ್ಲಿ ಅಷ್ಟೇ ಭಿನ್ನವಾದ ಸೆಲೆಬ್ರಿಟಿಗಳೂ ಇದ್ದಾರೆ- ಪ್ರತಿ ಭಾಷೆಯಲ್ಲೂ, ಪ್ರತಿ ಜಾತಿಯಲ್ಲೂ. ಆದರೆ ಒಂದು ಮಾತನ್ನು ಎಲ್ಲರೂ ಒಪ್ಪಲೇ ಬೇಕು. ಸೆಲೆಬ್ರಿಟಿಗಳ ಆರಾಧಕರು ಎಂದಿಗೂ ಅವರ ಧರ್ಮವನ್ನು ಅಥವಾ ಹಿನ್ನೆಲೆಯನ್ನು ನೋಡಿದವರಲ್ಲ. ಆದರೂ ಆಗಾಗ ಕೆಲವು ಸೆಲೆಬ್ರಿಟಿಗಳು ಹಠಾತ್ತಾಗಿ ಧರ್ಮದ ಹೆಸರಿನಲ್ಲಿ ಬಾಲಿಷತನದ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಲೇಖನದಲ್ಲಿ ನಾನು ಮುಖ್ಯವಾಗಿ ಅಂತಹ ಕಮ್ಯುನಲ್ ಕಾರ್ಡ್ನಿಂದ ಆಟವಾಡುವ ಮುಸ್ಲಿಂ ಹೆಸರಿನ ಅಥವಾ ಮುಸ್ಲಿಂ ತಂದೆ ತಾಯಿಯನ್ನು ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ಮಾತನಾಡುತ್ತೇನೆ. ಅದರಲ್ಲೂ ಪ್ರಮುಖವಾಗಿ ಸಂಜಯ್ ದತ್, ಇಮ್ರಾನ್ ಹಶ್ಮಿ, ಶಾರೂಖ್ ಖಾನ್, ಮೊಹಮ್ಮದ್ ಅಜರುದ್ದೀನ್ ಮತ್ತು ಶಬಾನಾ ಆಜ್ಮಿಯ ಬಗ್ಗೆ.
ಸಂಜಯ್ ದತ್: 2009ರಲ್ಲಿ ದತ್ ಹೇಳಿದ್ದು ಹೀಗೆ- 'ನಾನು ಜೈಲಿನಲ್ಲಿ ಸುಮಾರು 3.5 ವರ್ಷ ಕಳೆದೆ, ನನಗಲ್ಲಿ ಚಿತ್ರಹಿಂಸೆ ನೀಲಾಯಿತು. ನನ್ನ ತಾಯಿ ಮುಸ್ಲಿಂ ಮತ್ತು ನಾನು ಮುಸಲ್ಮಾನರ ಮಗ ಎಂಬ ಕಾರಣಕ್ಕೆ ಹೀಗೆ ಮಾಡಿದರು'
ಸಂಜಯ್ ದತ್ ಅವರೇ ನಿಮಗೆ ಮೂರು ಮದುವೆಯಾಗಿವೆ, ನಿಮ್ಮ ಮೊದಲಿಬ್ಬರು ಹೆಂಡತಿಯರು ಹಿಂದುಗಳು (ರಿಚಾ ಶರ್ಮ ಮತ್ತು ರೆಹಾ ಪಿಳ್ಳೈ). 1990ರ ಸೂಕ್ಷ್ಮ ಸಮಯದಲ್ಲಿ ಕಾನೂನು ಬಾಹಿರವಾಗಿ ಎ.ಕೆ.56 ಗನ್ ಹೊಂದಿದ್ದರೂ ನಿಮ್ಮ ಅಭಿಮಾನಿಗಳು ಮುಂದಿನ ವರ್ಷಗಳಲ್ಲಿ ನಿಮ್ಮನ್ನು 'ಮುನ್ನಾ ಭಾಯ್' ಎಂದೇ ಹಿಗ್ಗಿನಿಂದ ಅಪ್ಪಿಕೊಂಡರು. ಅದರಲ್ಲೂ ನಿಮ್ಮ ನಿಷ್ಠಾವಂತ ಅಭಿಮಾನಿಗಳು (ಬಹುತೇಕರು ಹಿಂದೂಗಳೇ) ಭಗವಾನ್ ಗಣೇಶನ ಪಕ್ಕದಲ್ಲಿ ನಿಮ್ಮ ಚಿತ್ರವನ್ನಿಟ್ಟು, ನಿಮಗಾಗಿ ಪ್ರಾರ್ಥನೆ ಮಾಡಿದರು. ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ನೊಂದಿಗೆ ಕುಳಿತು ಭೋಜನ ಸವಿದಿದ್ದೇನೆ ಎಂದು ಸುಪ್ರೀಂ ಕೋರ್ಟ್ನ ಎದುರು ನೀವೇ ಒಪ್ಪಿಕೊಂಡಿದ್ದೀರಿ. ಆದರೂ ಜನರು ನಿಮ್ಮ ಚಿತ್ರಗಳನ್ನು ನೋಡುತ್ತಾರೆ. ಹಾಗಿದ್ದರೆ ಧರ್ಮದ ಹೆಸರನ್ನೆತ್ತಿ ನಿಮ್ಮ ಅಭಿಮಾನಿ ಬಳಗಕ್ಕೆ ಅವಮಾನ ಮಾಡುವಂಥ ಕೆಲಸ ಏಕೆ ಮಾಡಿದಿರಿ? ಕೋರ್ಟಿಗೆ ಹೋಗಿ ಹೋರಾಡುವ ಬದಲು ಜನತೆಯ ಮುಂದೆ ಬಲಿಪಶುವಿನಂತೆ ವರ್ತಿಸಿದ್ದೇಕೆ?
ಇಮ್ರಾನ್ ಹಶ್ಮಿ: 2009ರಲ್ಲಿ ಹಶ್ಮಿ, 'ಫ್ಲ್ಯಾಟ್ ಖರೀದಿಸುವ ಒಪ್ಪಂದ ಅಂತಿಮ ಹಂತದಲ್ಲಿತ್ತು, ಆದರೆ ಮುಸ್ಲಿಂ ಎಂಬ ಕಾರಣಕ್ಕೆ 'ಃ್ಟ ಕಛಿಞಜ್ಛಡ್ಝ್ಟಿಟಿ' ಸರ್ಟಿಫಿಕೆಟ್ ಕೊಡಲು ನಿರಾಕರಿಸಲಾಯಿತು' ಎಂದು ಹೇಳಿ ಸಿಂಪತಿ ಗಿಟ್ಟಿಸಿಕೊಂಡದ್ದಾಯಿತು.
ಹೌದು. ಜನ ತಮ್ಮ ಸಮುದಾಯದವರಿಗೇ ಹೆಚ್ಚು ಮಣೆ ಹಾಕುವ ಉದಾಹರಣೆಗಳು ಇಲ್ಲಿ ಸಾಕಷ್ಟು ಸಿಗುತ್ತವೆ. ಸಾಧ್ಯವಾದರೆ ಒಂದು ಬಾರಿ ಕೇರಳದ ಮಲಪ್ಪುರಂ ಜಿಲ್ಲೆಗೆ ಭೇಟಿ ಕೊಟ್ಟು ನೋಡಿ. ಅಲ್ಲಿ ಮುಸ್ಲಿಂ ಭೂ ಒಡೆಯರಿಂದ ಹಿಂದೂಗಳಿಗಾಗುತ್ತಿರುವ ಅನ್ಯಾಯದ ಬಗ್ಗೆ ಗೊತ್ತಾಗುತ್ತದೆ. ಇದೇ ಮುಂಬೈನಲ್ಲಿ ಲಕ್ಷಾಂತರ ಅಪಾರ್ಟ್ಮೆಂಟ್ಗಳಿವೆ, ಅದರ ಮಾಲೀಕರಿಗೆ ನಿನ್ನ ಧರ್ಮ ಮುಖ್ಯವಲ್ಲ, ನೀನೆಷ್ಟು ಕಾಸು ಬಿಚ್ಚುತ್ತೀಯಾ ಎನ್ನುವುದು ಮುಖ್ಯ. ಇನ್ನು ಪರದೆಯ ಮೇಲೆ ಅಗಣಿತ ಹುಡುಗಿಯರಿಗೆ ನೀನು ಚುಂಬಿಸುವಾಗ, ನಿನ್ನ ಧರ್ಮ ಯಾವುದು, ಎಷ್ಟು ಹಿಂದು ಹುಡುಗಿಯರನ್ನು ಚುಂಬಿಸಿದ್ದೀಯ ಎಂಬುದರ ಬಗ್ಗೆ ಯಾರೂ ಯೋಚಿಸಲಿಲ್ಲ. ಬಹುಶಃ ಸರ್ಕಾರವೇ ಅನುಮೋದನೆ ನೀಡಿರುವ 'Exclusive to christians' ಎಂಬ ಮೊಹಾಲಿಯಲ್ಲಿರುವ ಬಿಲ್ಡಿಂಗುಗಳ ಜಾಹಿರಾತನ್ನು ನೀನು ನೋಡಿರಲಿಕ್ಕಿಲ್ಲ! ನೀನು ಮತ್ತು ನಿನ್ನ ಅಂಕಲ್ 'ಮಹೇಶ್ ಭಟ್' ಧರ್ಮದ ಹೆಸರಿನಲ್ಲಿ ಕಣ್ಣೀರು ಸುರಿಸುವುದನ್ನು ಮೊದಲು ಬಿಡಿ. ಅನ್ಯಾಯವಾಗಿದ್ದೇ ಆದರೆ, ಕೋರ್ಟಿನಲ್ಲಿ ಹೋರಾಟ ನಡೆಸುವಷ್ಟು ಹಣ, ಹೆಸರು ನಿಮ್ಮ ಬಳಿ ಇದೆಯಲ್ಲಾ?
ಶಾರುಖ್ ಖಾನ್: 'ಬಹುಶಃ ನನ್ನ ಮುಂದಿನ ತಲೆಮಾರಿಗೆ 'ಭಾರತೀಯ' ಹೆಸರು ಕೊಡುವುದರಿಂದ ಅವರಿಗೆ ಅನಧಿಕೃತ ಉಚ್ಚಾಟನೆಯ ಆದೇಶ ಬರಲಾರದೇನೋ' ಎಂದು ಇದೇ ವರ್ಷ ಸಂದರ್ಶನವೊಂದರಲ್ಲಿ ಶಾರುಖ್ ಹೇಳಿದ್ದರು. ಶಾರುಖ್ ನಿಮ್ಮ ಅಜ್ಜ ಅಫ್ಘಾನಿಸ್ಥಾನದಿಂದ ಬಂದಿರುವುದರ ಬಗ್ಗೆ, ನಿಮ್ಮ ಅಪ್ಪ ಪಾಕಿಸ್ತಾನದಲ್ಲಿ ಹುಟ್ಟಿರುವುದರ ಬಗ್ಗೆ, ನಿಮ್ಮ ಹೆಂಡತಿ ಹಿಂದು ಎಂಬ ಬಗ್ಗೆ, ಹೆಸರಲ್ಲೇ ಧರ್ಮ ಸೂಚಿಸುವ (ಜೆಎನ್ಯು) ವಿಶ್ವವಿದ್ಯಾಲಯದಲ್ಲಿ ಓದಿದ್ದರ ಬಗ್ಗೆ ನಿಮ್ಮ ಅಭಿಮಾನಿಗಳೆಂದಾದರೂ ಗೊಣಗಿದ್ದಾರಾ?
ವಾಂಖಡೆ ಕ್ರೀಡಾಂಗಣದಲ್ಲಿ ನೀವು ಕುಡಿದು ಸೆಕ್ಯುರಿಟಿಯವನೊಬ್ಬನ ಮೇಲೆ ತೊಳೇರಿಸಿಕೊಂಡು ಗೂಂಡಾಗಿರಿ ಪ್ರದರ್ಶಿಸಿದಿರಲ್ಲ? ಆ ಬಡಪಾಯಿಯ ಧರ್ಮ ಯಾವುದೆಂದು ನಿಮ್ಮನ್ನು ಯಾರಾದರೂ ಕೇಳಿದರಾ?
ಅಮೆರಿಕದಲ್ಲಿ ನೀವು ಇಮಿಗ್ರೇಷನ್ ತೊಂದರೆ ಅನುಭವಿಸಿದಾಗ ಭಾರತೀಯರೆಲ್ಲರೂ ನಿಮ್ಮ ಬೆಂಬಲಕ್ಕೆ ನಿಂತರು. ಸಾಮಾನ್ಯವಾಗಿ ಇಂತಹ ವಿಷಯದಲ್ಲಿ ತಲೆಹಾಕದ ಭಾರತ ಸರ್ಕಾರ ಕೂಡ ನಿಮ್ಮ ಹಿಂದೆ ನಿಂತಿತು. ಅಬ್ದುಲ್ ಕಲಾಂ ಅವರು ಎರಡು ಬಾರಿ ಇಂಥದ್ದೆ ಸಮಸ್ಯೆ ಎದುರಿಸಿದ್ದರು ಆದರೆ ಅವರೆಂದಾದರೂ ನಿಮ್ಮಂತೆ ದೇಶಕ್ಕೆ ಚುಚ್ಚುವ ಮಾತನಾಡಿದರಾ?
ಮೊಹಮ್ಮದ್ ಅಜರುದ್ದೀನ್: ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಸಿಕ್ಕಿಬಿದ್ದ ನಂತರ ಅಜರ್ ಹೇಳಿದ್ದು, 'ನಾನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೇನೆನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ' ಎಂದು!
ಅಜರ್ ಭಾಯ್, 81 ಪ್ರತಿಶತ ಹಿಂದುಗಳಿರುವ ದೇಶದ ಕ್ರಿಕೆಟ್ ತಂಡಕ್ಕೆ ನಿಮ್ಮನ್ನು ಕ್ಯಾಪ್ಟನ್ ಮಾಡಿದ್ದು ಮರೆತುಹೋಯಿತೇ? ಕ್ರಿಕೆಟ್ನಿಂದ ನಿಮ್ಮನ್ನು ಬ್ಯಾನ್ ಮಾಡಿದಾಗ ನಿಮ್ಮೊಂದಿಗೆ ಹಿಂದು ಆಟಗಾರರೂ ಸಿಕ್ಕಿಬಿದ್ದದ್ದು ನೆನಪಿಲ್ಲವೇ? ಆಡಳಿತ ಕಾಂಗ್ರೆಸ್ ಪಕ್ಷ ನಿಮ್ಮನ್ನು ಸಂಸತ್ತಿಗೆ ಸೇರಿಸಿಕೊಂಡಿತು. ಇದಕ್ಕಿಂತ ಹೆಚ್ಚಿನ ಗೌರವ ನಿಮಗೇನು ಬೇಕು? ವೃತ್ತಿ ಜೀವನದಲ್ಲಿದ್ದಾಗ ನೀವೆಂದೂ ದೇಶದಿಂದ ಹೊರಹೋಗುವಾಗ/ಬರುವಾಗ ಎಲ್ಲಾ ಆಟಗಾರರಂತೆ ಹಣೆಗೆ ತಿಲಕ ಹಚ್ಚಿಸಿಕೊಳ್ಳಲಿಲ್ಲ. ಇಂಗ್ಲಿಷ್ ಅಥವಾ ವೆಸ್ಟ್ ಇಂಡೀಸ್ ಆಟಗಾರರು ಎಂದಿಗೂ ಈ ವಿಷಯದಲ್ಲಿ ಮುಜುಗರ ಪಟ್ಟುಕೊಂಡಿಲ್ಲ. ಆದರೂ ನಾವು ನಿಮ್ಮ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಸುಮ್ಮನಾಗಲಿಲ್ಲವೇ?
ಶಬಾನಾ ಆಜ್ಮಿ: 'ಒಂದು ವೇಳೆ ಜಾವೇದ್ ಅಖ್ತರ್(ಪತಿ) ಮತ್ತು ನಾನು ಮುಸ್ಲಿಮರೆಂಬ ಕಾರಣಕ್ಕೆ ಮುಂಬೈನಲ್ಲಿ ನಮಗೆ ಫ್ಲ್ಯಾಟ್ ಸಿಗದಿದ್ದರೆ. ನಾವು ಯಾವ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ...?' ಎಂದು 2008ರಲ್ಲಿ ಶಬಾನಾ ಹೇಳಿದ್ದರು.
ಶಬಾನಾ ಅವರೇ, ಭಾರತೀಯರೂ ಕಮ್ಯುನಿಸಮ್ನ ಬಗ್ಗೆ ಕ್ಯಾರೆ ಮಾಡುವುದಿಲ್ಲ. ಅಂಥದ್ದರಲ್ಲಿ ನಿಮ್ಮ ಅಮ್ಮ ಮತ್ತು ಅಪ್ಪ ಕಮ್ಯುನಿಸ್ಟರಾಗಿದ್ದರ ಬಗ್ಗೆ ಎಂದಾದರೂ ನಿಮ್ಮ ಅಭಿಮಾನಿಗಳು ಮಾತನಾಡಿದ್ದಾರಾ? ಜನ ನಿಮ್ಮನ್ನು ಇಷ್ಟ ಪಡುವುದು ನಿಮ್ಮ ಅಭಿನಯ, ಸೌಂದರ್ಯ ನೋಡಿಯೇ ಹೊರತು ನಿಮ್ಮ ಧರ್ಮವನ್ನು ನೋಡಿಯಲ್ಲ. ಭಾರತೀಯರು ಇಂದಿಗೂ ಸಲಿಂಗ ಕಾಮವೆಂದಾಕ್ಷಣ ಮೂಗು ಮುರಿಯುತ್ತಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ನೀವು ಆ ಪಾತ್ರವನ್ನು ನಿರ್ವಹಿಸಿದಾಗ, ಯಾರಾದರೂ ರೊಚ್ಚಿಗೆದ್ದರಾ? ಇನ್ನು ನಿಮ್ಮ ಫೇಮಸ್ ಪತಿ ಅಖ್ತರ್ ಸಾಹೇಬರು, ಸುಬ್ರಮಣ್ಯಂ ಸ್ವಾಮಿಯವರು ಮದ್ರಾಸ್ ಹೈಕೋರ್ಟ್ನಲ್ಲಿ 'ಮೇಲ್ವಿಶರಮ್ ಪಂಚಾಯತ್' ಬಗ್ಗೆ ಹೂಡಿದ್ದ ಪಿಟೀಷನ್ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರಾ? ಈ ಬಗ್ಗೆ ನೀವೇನು ಹೇಳುತ್ತೀರಿ?! ಈಗಲಾದರೂ ಎಚ್ಚೆತ್ತುಕೊಳ್ಳಿ. ಪಬ್ಲಿಸಿಟಿ ಪಡೆಯಲು ಕೀಳು ಮಟ್ಟಕ್ಕೆ ಇಳಿಯುವುದನ್ನು ಬಿಡಿ. ನಿಮಗೆ ಫ್ಲ್ಯಾಟ್ ದೊರೆಯದಿದ್ದರೆ, ಜಾಮೀನು ದೊರೆಯದಿದ್ದರೆ, ಸಿನೆಮಾ ಬಿಡುಗಡೆ ಮಾಡಲು ಆಗದಿದ್ದರೆ ನ್ಯಾಯಾಲಯಕ್ಕೆ ಹೋಗಿ ಹೋರಾಡಿ. ಭಾರತದ ಏಳ್ಗೆಯನ್ನು ಸಹಿಸದ ಪಾಕಿಸ್ತಾನಿಗಳಿಗೆ ಮತ್ತು ಭಯೋತ್ಪಾದಕರಿಗೆ ನಮ್ಮ ದೇಶದ ಮೇಲೆ ಕೆಸರೆರಚಲು ಏಕೆ ಅವಕಾಶ ಮಾಡಿಕೊಡುತ್ತಿದ್ದೀರಿ? ಧರ್ಮದ ಹೆಸರಿನಲ್ಲಿ ಜನರ ಭಾವನೆಗಳೊಂದಿಗೆ ನೀವುಗಳು ಹೀಗೇ ಆಟವಾಡುತ್ತಿದ್ದರೆ, ಮುಂದಿನ ಬಾರಿ ಅದೇ ಕಾರ್ಡನ್ನು ದೃಷ್ಟಿಯಲ್ಲಿಟ್ಟುಕೊಂಡೇ ಜನ ನಿಮ್ಮನ್ನು ನೋಡುತ್ತಾರೆ!
- ಕಿರಣ್ ಕುಮಾರ್
www.ibtl.in