ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾಹಿತಿಗಳ ಸವಿ ರಸ!

Mainashree
Updated On : 10 Nov 2013, 11:42 am

ವಾರೆವ್ಹಾ ಕನ್ನಡಪ್ರಭ! ಮುಖಪುಟದಲ್ಲಿ ಕೊಟ್ಟ ರಾಜಕಾರಣಿಗಳ ವಿಶೇಷ ಪಟಾಕಿ ಬಗ್ಗೆ ಓದಿ ಅತೀವ ಸಂತೋಷವಾಯ್ತು. ಕ.ಪ್ರ.ದಲ್ಲಿ ಮಾತ್ರ ಇಂತಹ ವಿಶೇಷಗಳು ಸಾಧ್ಯ. ಇದು ದೀಪಾವಳಿಯ ಸಂಭ್ರಮದಲ್ಲಿ ಪಟಾಕಿ ಹೊಡೆಯದೆಯೂ ಒದಗಿದ ಸಂಭ್ರಮ.
-ಕುತ್ಪಾಡಿ ಜಯಪ್ರಕಾಶ್ ಹೆಗ್ಡೆ, ತೀರ್ಥಹಳ್ಳಿ

ಅರ್ಧ ಟೀ ಅಥವಾ ಕಾಫಿಗೆ 6ರಿಂದ 8 ರೂ. ತೆಗೆದುಕೊಳ್ಳುವ ಇಂತಹ ಬೆಲೆಯೇರಿಕೆಯ ದಿನಗಳಲ್ಲಿ ಕೇವಲ 3.50 ರೂ.ಗೆ ಕನ್ನಡಪ್ರಭ ಪತ್ರಿಕೆಯ ಜೊತೆ 'ಬೈಟುಕಾಫಿ' ಕೊಡುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದೆ. ಆದ್ರೆ ಸಮಸ್ಯೆ ಏನಪ್ಪಾ ಅಂದ್ರೆ ಅಂಗಡಿಗಳಲ್ಲಿ ಪತ್ರಿಕೆಗಳನ್ನು ಕೊಳ್ಳಲು ಹೋದಾಗ ಇದರ ಬೆಲೆ 3.50 ಇರೋದ್ರಿಂದ, ಅಂಗಡಿಯವರು 50 ಪೈಸೆ ಚಿಲ್ಲರೆ ಕೊಡೋದೇ ಇಲ್ಲ.
ಅದರ ಬದಲಿಗೆ ಒಂದು ಚಾಕೋಲೇಟ್ ಕೊಡ್ತಾರೆ. "ಚಾಕೋಲೇಟ್ ಬೇಡ, ಚಿಲ್ಲರೆ ಕೊಡಿ" ಅಂತ ಕೇಳಿದ್ರೆ, ಚಿಲ್ಲರೆ ಇದ್ರೂ ಚಾಕೋಲೇಟ್ ಖರ್ಚು ಆಗ್ಲಿ (?) ಅಂತ "ಚಿಲ್ಲರೆ ಇಲ್ಲ" ಅನ್ತಾರೆ. ಆದ್ದರಿಂದ ತಾವು ದಯ ಮಾಡಿ ಕನ್ನಡಪ್ರಭದ ಬೆಲೆಯನ್ನು ಇನ್ನೂ 50 ಪೈಸೆ ಹೆಚ್ಚಿಸಿ ಸರಿಯಾಗಿ 4 ರೂ. ಮಾಡಿ, ಪತ್ರಿಕೆಯ ಎಲ್ಲಾ ಒಳಪುಟಗಳನ್ನು ವರ್ಣಮಯ ಮಾಡ್ರಿ ಅಂತ ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸಿಕೊಳ್ತೇನೆ.
-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

ಕನ್ನಡಿಗರ ಮೆಚ್ಚಿನ ದಿನಪತ್ರಿಕೆ ಕನ್ನಡಪ್ರಭದಲ್ಲಿ ಪ್ರತೀ ದಿನ ಪ್ರಕಟವಾಗುವ 'ಕಸ-ರಸ' ತುಂಬಾ ಉಪಯುಕ್ತ, ಮಾಹಿತಿಪೂರ್ಣ ಅಂಕಣ. ಈ ಅಂಕಣದಿಂದ ಅನುಪಯುಕ್ತ ಕಸದಿಂದ ಉಪಯೋಗ ಪಡೆದುಕೊಳ್ಳುವ ಸಲಹೆಗಳನ್ನು ನೀಡುತ್ತಿರುವ ಸಂಪಾದಕ ಮಂಡಲಿಗೆ ಧನ್ಯವಾದಗಳು. 'ಕಸ-ರಸ' ಅಂಕಣದ ಬರಹಗಾರರು ಯಾರೆಂಬ ಮಾಹಿತಿ ಇದ್ದರೆ ಚೆನ್ನಾಗಿರುತ್ತದೆ.
ಈ ಅಂಕಣಕ್ಕೆ ಓದುಗರು ಬರೆಯುತ್ತಾರೋ ಅಥವಾ ಪತ್ರಿಕಾ ಬಳಗದವರು ಬರೆಯುತ್ತಾರೋ ಗೊತ್ತಾದರೆ, ಓದುಗರಿಂದಲೂ ಇಂತಹ ಮಾಹಿತಿ ಪೂರ್ಣ ಲೇಖನಗಳು ಬರಬಹುದು ಮತ್ತು ಈ ಮೂಲಕ ಓದುಗರಲ್ಲಿ ಅಡಗಿರುವ ಲೇಖಕರನ್ನು ಬೆಳಕಿಗೆ ತರಬಹುದು ಎಂಬುದು ನನ್ನ ಅಭಿಪ್ರಾಯ. ಒಟ್ಟಾರೆ 'ಕಸ-ರಸ' ಅಂಕಣ ಸಂಗ್ರಹ ಯೋಗ್ಯವಾದ ಅಂಕಣ. ಹೊಸತನದಿಂದ ಕೂಡಿರುವ ಕನ್ನಡಪ್ರಭ ಓದುಗರಿಗೆ ಜ್ಞಾನದಾಹ ನೀಗಿಸುವ ಕಾರಂಜಿ ಇದ್ದಂತೆ.
-ಗಂಗಾಚಾರಿ, ಜಿ 722, 4ನೇ ತಿರುವು, ಎಚ್.ಎ.ಎಲ್. ಮಧ್ಯ ಬಡಾವಣೆ,  ಮಾರತ್‌ಹಳ್ಳಿ ಅಂಚೆ, ಬೆಂಗಳೂರು

ಅ.23ರ ಅನುಭವ ಮಂಟಪದಲ್ಲಿನ ವೀಣಾ ಅವರ 'ನಮ್ಮಿಂದಲೇ -ನಿಂದನೆ' ಈ ವಿಚಾರಕ್ಕೆ ನನ್ನದೂ ಸಹಮತವಿದೆ.! ಒಮ್ಮೆ, ಒಲೆ ಉರಿ ಹಾಕಲೆಂದು ಇಟ್ಟಿರುವ ಕಾಗದದ ರಾಶಿಯಲ್ಲಿ ಪೂಜ್ಯ ರಾಘವೇಶ್ವರ ಸ್ವಾಮೀಜಿಯವರ ಚಿತ್ರ ಇರುವ ಆಹ್ವಾನಪತ್ರಿಕೆಯೊಂದು ಸಿಕ್ಕಿತು. ಅದನ್ನು ಉರಿಸಲು ಮನಸ್ಸಾಗದೇ ಹಾಗೇ ಎತ್ತಿಟ್ಟೆ. ಮತ್ತೊಮ್ಮೆ ತಾಯಿಯೊಬ್ಬಳು ತನ್ನ ಮಗುವಿನ ಕಕ್ಕ ತೊಳೆಯಲೆಂದು ದಪ್ಪ ರಟ್ಟಿನಂತಿರುವ ಮದುವೆ ಆಹ್ವಾನ ಪತ್ರಿಕೆಯನ್ನು ಉಪಯೋಗಿಸುತ್ತಿದ್ದರು. ಅದರ ಮೇಲೆ ಗಣಪತಿಯ ಚಿತ್ರವಿತ್ತು. ಆಗಲೂ ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಮೇಲಿನ ಎರಡೂ ಸಂದರ್ಭಗಳಲ್ಲಿ ನನಗಾದ ನೋವನ್ನು ಬೇರೆಯವರೊಡನೆ ಹೇಳಿಕೊಂಡರೆ ನನ್ನನ್ನೇ ಹಾಸ್ಯ ಮಾಡುತ್ತಾರೆಯೇ ವಿನಹ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲವೆಂದು ಇದುವರೆಗೂ ಯಾರೊಡನೆಯೂ ಹೇಳಿರಲಿಲ್ಲ.
-ಕಲಾವತಿ ಹುಳೇಗಾರು, ಬೆಂಗಳೂರು

ಎಷ್ಟೇ ಜನನಿಬಿಡ ಪ್ರದೇಶವಿರಲಿ, ನೂಕು ನುಗ್ಗಲಿರಲಿ, ಒಮ್ಮೆ ಮಂತ್ರಿವರ್ಯರ ಅಥವಾ ಅತಿ ಮುಖ್ಯ ವ್ಯಕ್ತಿಗಳ ಪ್ರವೇಶವಾಯಿತೆಂದರೆ, ತನ್ನಿಂದ ತಾನೇ ಅವರಿಗಾಗಿ ಸ್ಥಳಾವಕಾಶ ಸಿಗುತ್ತದೆ. ಯಾಕೆ ಈ ಪೀಠಿಕೆ ಅಂದರೆ, ಈಗಷ್ಟೇ ಪ್ರಾರಂಭವಾದ ವಿಶ್ವೇಶ್ವರಭಟ್ಟರ ಅಂಕಣ 'ಪ್ರದಕ್ಷಿಣ ಆಫ್ರಿಕಾ', ಬೈಟು ಕಾಫಿಯ ಪ್ರಮುಖ ಸ್ಥಳವನ್ನು ಆಕ್ರಮಿಸುತ್ತಿದೆ. ಬೆಳ್ಳಿ-ತಟ್ಟೆಯಂಥ ಮಾಹಿತಿಪೂರ್ಣ ಲೇಖನವು ಕೆಳಗಿಳಿಯುವಂತಾಗಿದೆ. ಈ ರೀತಿಯ ಜಾಗ ಬದಲಿಸುವ ಅವಶ್ಯಕತೆ ಇತ್ತೇ? ಅಂದ ಹಾಗೆ, ಎಸ್.ವಿ. ಪದ್ಮನಾಭ ಅವರ ಪಂಚ್‌ಮುಖಿಯೂ ತನ್ನ ನಿರ್ದಿಷ್ಟ ಸ್ಥಾನವನ್ನು ಉಳಿಸಿಕೊಂಡಿಲ್ಲ.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ, ಮೊ. 9632 821920

ಛೀ.... ಗಬ್ಬಿನಲ್ಲೇ ದೀಪಿಕಾ ವಾಸ್ತವ್ಯ ಶನಿವಾರ 2ನೇ ತಾರೀಖಿನ ಕ್ರೀಡಾವರದಿ ಕರುಳು ಕಿವುಚುವಂತಿತ್ತು. ವಿಶ್ವದ ನಂ.2 ಆಟಗಾರ್ತಿ ದೀಪಿಕಾ ಕಥೆ ಸ್ಲಂಡಾಗ್ ಮಿಲೆನಿಯರ್ ನೆನಪಿಸುವಂತಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದರೂ ಸೊಳ್ಳೆ ಹಂದಿಗಳು ವಾಸ ಮಾಡುವ ಸ್ಥಳಗಳಲ್ಲಿ ವಾಸಿಸುತ್ತಿರುವುದು ದುರದೃಷ್ಟಕರ ಸಂಗತಿ. ನಮ್ಮ ಕ್ರೀಡಾಧಿಕಾರಿಗಳಿಗೇನು ಬೇಕು. ಅವರು ಐಷಾರಾಮಿಯಾಗಿ ಬದುಕುತ್ತಿರುವಾಗ ಇವರುಗಳ ಕಣ್ಣಿಗೆ ಕಾಣುವುದಿಲ್ಲವೇ? ನಮ್ಮ ಭಾರತೀಯ ಕ್ರೀಡಾಮಂಡಳಿ ಇತ್ತ ಕಡೆ ಗಮನ ಹರಿಸಲಿ. ಅಥ್ಲೇಟ್ಸ್ ಆಟಗಾರ್ತಿ ದೀಪಿಕಾ ಬಾಳು ದೀಪದಂತೆ ಪ್ರಜ್ವಲಿಸಲಿ.
-ಕೆ.ಟಿ. ಮಂಜುನಾಥ, ಶಿವಮೊಗ್ಗ

ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement