ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚಳವಳಿಯ ಹೆಸರಲ್ಲಿ ಹಣಗಳಿಸುತ್ತಿರುವ ಬೆಳಗಾವಿಯ ಕನ್ನಡ ಸಂಘಟನೆಗಳು!

Mainashree
Updated On : 7 Sept 2013, 11:39 am

ಬೆಳಗಾವಿ ಎಂದಾಕ್ಷಣ ಮರಾಠಿಗರ ದಾಂಧಲೆ, ಗಡಿ ಸಮಸ್ಯೆಗಳೇ ಕಣ್ಣೆದುರಿಗೆ ಬರುತ್ತವೆ. ಬೆಳಗಾವಿ ಮಹಾರಾಷ್ಟ್ತ್ರಕ್ಕೆ ಹೋಗಬಹುದೇನೋ ಎಂಬ 'ಒಂದು ಕಾಲದ ಉದ್ವಿಗ್ನತೆ'ಈಗ ಉಳಿದಿಲ್ಲ. ಮರಾಠಿಗರೂ ಇಲ್ಲಿ ಸುಖದಿಂದ ಇದ್ದಾರೆ. ರಾಷ್ಟ್ರೀಂು ಪ್ರವಾಹದೊಂದಿಗೆ ಸೇರಿಕೊಂಡು ಹೋಗಿದ್ದಾರೆ. ಇಲ್ಲಿ ಅವರ ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು, ಸಹಕಾರಿ ಸಂಸ್ಥೆಗಳು ಭರದಿಂದ ಬೆಳೆಯುತ್ತಿವೆ.
ಗಡಿ ಸಮಸ್ಯೆಂು ಹಿನ್ನೆಲೆಯಲ್ಲಿ ಬೆಳಗಾವಿಯು ನಿರೀಕ್ಷಿತ ಪ್ರಗತಿಯನ್ನು ಕಾಣಲಿಲ್ಲ. ಬಂದ್, ದಾಂಧಲೆಗಳಿಂದಾಗಿ ವ್ಯಾಪಾರೋದ್ದಿಮೆಗಳೂ ಬೆಳೆಂುಲಿಲ್ಲ.  ಕಳೆದ ಸುಮಾರು ಹದಿನೈದು ವರ್ಷಗಳಲ್ಲಿ ಬೆಳಗಾವಿ ಭಾರೀ ಬದಲಾವಣೆ ಕಂಡಿದೆ. ಕನ್ನಡಿಗರ ಸತತ ಹೋರಾಟದ ಫಲವಾಗಿ ಮಹಾರಾಷ್ಟ್ತ್ರ ಏಕೀಕರಣ ಸಮಿತಿಂು 1999ರ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ನೆಲಕಚ್ಚಿತು. ಮಹಾನಗರಸಭೆ ಚುನಾವಣೆಯಲ್ಲಿ ಕನ್ನಡ-ಮರಾಠಿಗರು ಸೇರಿಕೊಂಡು ನಗರ ಸುಧಾರಣಾ ಸಮಿತಿ ರಚಿಸಿಕೊಂಡು ಗಡಿ ಸಮಸ್ಯೆಯ ಬದಲು ಬೆಳಗಾಮಿಂು ಅಭಿವೃದ್ಧಿಯತ್ತ ಗಮನ ಹರಿಸತೊಡಗಿದರು. ಬೆಳಗಾಮಿಂುಲ್ಲಿ ವಿಧಾನ ಮಂಡಳದ ಅಧಿವೇಶನ ಹಾಗೂ ಸುವರ್ಣ ವಿಧಾನಸೌಧದ ನಿರ್ಮಾಣ ಹೊಸ ಗಾಳಿಯನ್ನ ಬೀಸಿತು. ಮ.ಏ.ಸಮಿತಿ ಏನೇ ಡೊಂಬರಾಟ ಮಾಡಿದರೂ ಬೆಳಗಾಮಿಂುನ್ನು'ಮಹಾರಾಷ್ಟ್ತ್ರಕ್ಕೆ ಸೇರಿಸಿಕೊಳ್ಳುವುದು ಸಾಧ್ಯವಾಗುವದಿಲ್ಲ ಎಂಬ'ಅರಿವು ಸಾಮಾನ್ಯ ಮರಾಠಿಗನಿಗೂ ಆಗತೊಡಗಿತು. ಎಂ.ಇ.ಎಸ್.ನ ಬಂದ್, ಪ್ರತಿಭಟನೆಗಳಿಗೆ ಬೆಂಬಲ ಕಡಿಮೆಂಾಗತೊಡಗಿತು. ವ್ಯಾಪಾರೋದ್ಯಮಗಳು ಬೆಳೆಂುತೊಡಗಿದವು. ಬೆಳಗಾಮಿಂು ನೀರು, ಹವೆ, ಇಲ್ಲಿಯ ಪಲ್ಯೆಕಾಯಿ, ಸುಸಂಸ್ಕ್ಕತ ವಾತಾವರಣದಿಂದ ಆಕರ್ಷಿತರಾದ ಹೊರನಾಡಿನವರು ಇಲ್ಲಿಂು ಸ್ಥಾಯಿಕರಾಗತೊಡಗಿದರು.
1999ರ ಚುನಾವಣೆ ನಂತರ ಮ.ಏ.ಸಮಿತಿ ಸತತವಾಗಿ ಸೋಲುತ್ತಲೇ ಬಂತು. ಮಹಾನಗರಸಭೆಂುಲ್ಲಿ ನಗರಸೇವಕರು ಭಾಷಾಭೇದ ಮರೆತು ಹಣ, ಅಧಿಕಾರಕ್ಕಾಗಿ ಕಚ್ಚಾಡತೊಡಗಿದರು. ಮರಾಠಿ ಗುಂಪಿನ ಮುಖಂಡನೇ ತನ್ನ 'ಬೆಂಬಲಿಗರೊಂದಿಗೆ ಕನ್ನಡ ಗುಂಪಿಗೆ ವಲಸೆ ಬಂದು ಉಪಮಹಾಪೌರನಾದ! ಅವನೊಂದಿಗೆ ಬಂದ ನಗರ ಸೇವಕಿಂು ಮುಂದೆ ಕನ್ನಡಿಗರ ಅಭ್ಯರ್ಥಿಂಾಗಿ ಮಹಾಪೌರಳೂ ಆದಳು! 'ಸಂಕಟ ಬಂದಾಗ ವೆಂಕಟರಮಣ' ಎನ್ನುವಂತೆ ತಮಗೆ ತೊಂದರೆಯುಂಟಾದಾಗೆಲ್ಲ  ಮರಾಠಿಗರು 'ಝಾಲಾಚ್ ಪಾಹಿಜೆ' ಘೋಷಣೆ ಹಾಕತೊಡಗಿದರು. ಅಧಿಕಾರ ಹಿಡಿಯುವಾಗ ಭಾಷಾ ಸಮಸ್ಯೆಯನ್ನು' ಬಡಿದೆಬ್ಬಿಸುತ್ತಿದ್ದರು. ಆನಂತರ ಎಲ್ಲರೂ ಭಾಯಿ ಭಾಯಿ!
ಬೆಳಗಾಮಿಂುಲ್ಲಿ ಈಗ ಅನೇಕ ಸರ್ಕಾರಿ ಕಚೇರಿಗಳು 'ಬಂದಿವೆ. ವಿವಿಧ ಕಾಲೇಜುಗಳು ಬಂದಿವೆ. 1951ರ ಜನಗಣತಿಂುಲ್ಲಿ ಕೇವಲ ಶೇ.21ರಷ್ಟಿದ್ದ ಕನ್ನಡಿಗರ ಸಂಖ್ಯೆ ಈಗ ಶೇ.37ಕ್ಕೆ ಏರಿದೆ. ಮರಾಠಿಗರ ಸಂಖ್ಯೆಂೂ ಕನ್ನಡಿಗರಷ್ಟೇ ಇದೆ. ಹೀಗಾಗಿ ಂಾವುದೇ ಮಾನದಂಡದಿಂದಲೂ ಬೆಳಗಾವಿಯು ಮಹಾರಾಷ್ಟ್ತ್ರಕ್ಕೆ ಹೋಗುವದಿಲ್ಲವೆಂದು ಅರಿತ ಮರಾಠಿ ಮುಖಂಡರು ಇಲ್ಲಿ ಮರಾಠಿ ವಾತಾವರಣವನ್ನು' ಕಾಯ್ದುಕೊಳ್ಳುವ ತಂತ್ರಗಾರಿಕೆಂುಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿಯ ಆಡಳಿತ ಭಾಷೆ ಕನ್ನಡವಾಗಿದ್ದರೂ ವ್ಯವಹಾರದ ಭಾಷೆ ಮಾತ್ರ ಮರಾಠಿಯಾಗುತ್ತಿದೆ. ಇದಕ್ಕೆ ಮರಾಠಿಗರ ಭಾಷಾಭಿಮಾನದ ಜೊತೆಗೆ ಕನ್ನಡಿಗರ ನಿರಾಭಿಮಾನ ದೊಡ್ಡ ಕಾರಣವಾಗಿದೆ.
1960-70ರ ದಶಕಗಳಲ್ಲಿ ಬೆಳಗಾಮಿಂುಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇತ್ತು. ಆದರೆ ಕನ್ನಡಾಭಿಮಾನ ಹೆಚ್ಚಿಗೆ ಇತ್ತು. ಕನ್ನಡಕ್ಕೆ ಎಲ್ಲಿಂು ಅನ್ಯಾಂುವಾದರೂ ಸಿಡಿದೇಳುವ ಪ್ರವೃತ್ತಿಯಿತ್ತು. ಗಣೇಶ ಚವತಿಂು ಸಂದರ್ಭದಲ್ಲಿ ಪೆಂಡಾಲ್‌ಗಳಲ್ಲಿ ಕನ್ನಡ ಹಾಡುಗಳನು ಹಚ್ಚಬೇಕೆಂದು, ಕನ್ನಡದಲ್ಲಿಯೂ ಫಲಕ ಹಾಕಬೇಕೆಂದು ಆಗ್ರಹಿಸಿ ಕನ್ನಡ ಯುವಕರು ಸಂಘಟಕರೊಂದಿಗೆ ಜಗಳಾಡಿ ತಲೆ ಒಡೆಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಲಾದ 'ವೆಲ್ಕಮ್ ಟು ಮಹಾರಾಷ್ಟ್ತ್ರ' ಎಂಬ ಪ್ರವಾಸಿ ಭಿತ್ತಿ ಪ್ರದರ್ಶನದ ವಿರುದ್ಧ ಹೊರಾಡಿ ಬಂಧನಕ್ಕೊಳಗಾಗಿದ್ದಾರೆ. ಆ ಘಟನೆಗಳನ್ನೆಲ್ಲ ಹೇಳುತ್ತ ಹೋದರೆ ಪುಸ್ತಕವೇ ಆದೀತು! ಈಗ ಬೆಳಗಾಮಿಂುಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಭಾಷಾಭಿಮಾನ ತೀರ ಕಡಿಮೆಂಾಗಿದೆ. ಊರಲ್ಲೆಲ್ಲ ಮರಾಠಿ ವಾತಾವರಣ, ಚಟುವಟಿಕೆಗಳು ಸತತವಾಗಿ ಇರುವಂತೆ ನೋಡಿಕೊಳ್ಳಲು ಮಹಾರಾಷ್ಟ್ತ್ರ ಸರ್ಕಾರ ಕಳೆದ ವರ್ಷ ಜಿಲ್ಲೆಂು ವಿವಿಧ ಸಂಘಟನೆಗಳಿಗೆ ಸರ್ಕಾರವು ಮೂರು ಕೋಟಿ ರುಪಾಯಿ ಹಂಚಿದೆ. ಈ ಸಲ ಐದು ಕೋಟಿ ಹಂಚುತ್ತಿದೆ!
1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮ.ಏ.ಸಮಿತಿಂುನ್ನು ಸೋಲಿಸಿದ ನಂತರ ಕನ್ನಡ ಸಂಘಟನೆಗಳು ನಿಷ್ಕ್ರೀಂುವಾಗಿಬಿಟ್ಟಿವೆ. ಜಿಲ್ಲಾಧಿಕಾರಿಗೆ ಮನವಿ ಕೊಡುವುದು, ಫ್ಲೆಕ್ಸ್‌ಗಳೊಂದಿಗೆ ಮತ ಪ್ರದರ್ಶನ ನಡೆಸಿ ಫೋಟೋಗಳನ್ನು ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳುವದರಲ್ಲಿಯೇ ಈ ಸಂಘಟನೆಗಳು ನಿರತವಾಗಿವೆ. 'ಕನ್ನಡದ ಸೇವೆ', 'ಕನ್ನಡ ಹೋರಾಟಗಳು' ಡಿಕ್ಷನರಿ ಸೇರಿವೆ. ಈಗ 'ಕನ್ನಡೋದ್ಯಮ' ಪ್ರಾರಂಭವಾಗಿದೆ. ಕನ್ನಡ ಚಳವಳಿಂು ಹೆಸರಿನಲ್ಲಿ ಶ್ರೀಮಂತರಾಗುತ್ತಿದ್ದಾರೆ!
ಕಳೆದೆರಡು ವರ್ಷಗಳಿಂದ ಬೆಳಗಾಮಿಂುಲ್ಲಿ ಮರಾಠಿ ಚಟುವಟಿಕೆಗಳಿಗೆ ಒಮ್ಮಿಂದೊಮ್ಮೆಲೆ ಮಹಾಪೂರ ಬಂದಿರುವ ಬಗ್ಗೆ ಸರ್ಕಾರವು ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿ ಮೊದಲಿನಿಂದಲೂ ಮರಾಠಿಗರ ಓಲೈಕೆಯನ್ನೇ ಮಾಡುತ್ತ ಬಂದಿತ್ತು. ಅವರ ಸರ್ಕಾರ ಬಂದ ಮೇಲೆ  ಬುಡಾ ಮೊದಲಾದ ಸಂಸ್ಥೆಗಳಿಗೆ, ಪಕ್ಷದ ನಗರ ಅಧ್ಯಕ್ಷ ಸ್ಥಾನಕ್ಕೆ ಮರಾಠಿಗರನ್ನೇ ನೇಮಿಸಿದ್ದಲ್ಲದೇ ವಿಧಾನಸಭೆ ಚುನಾವಣೆಗೂ ಮರಾಠಿಗನನ್ನೇ ಕಣಕ್ಕಿಳಿಸಿತು. ಮಹಾನಗರಸಭೆಂು ಮೇಲಿನ ಮರಾಠಿ ಧ್ವಜವನ್ನು ನ್ಯಾಯಾಲಂುದ ಆದೇಶದ ಮೇರೆಗೆ ತೆಗೆದಾಗ ಪ್ರತಿಭಟಿಸಿದವರು ಬಿಜೆಪಿಂು ಕನ್ನಡ ಸಂಸದ ಸುರೇಶ ಅಂಗಡಿ! ರಾಜ್ಯೋತ್ಸವವನ್ನು ಆಚರಿಸಲು ಸರ್ಕಾರವು ಒಂದು ಪೈಸೆಯನ್ನೂ ಕೊಡುವದಿಲ್ಲ. ಆದರೆ ಮರಾಠಿಗರನ್ನು ಓಲೈಸಲು ಶಿವಜಯಂತಿ ಆಚರಣೆಗೆ 50 ಲಕ್ಷ  ನೀಡಿತು! ತಾನೂ ಹಿಂದೆ ಬೀಳಬಾರದೆಂದು ಈಗಿನ ಕಾಂಗ್ರೆಸ್ ಸರ್ಕಾರವು ಗಣೇಶ ಚವತಿ ಉತ್ಸವಕ್ಕೆ ಒಂದು ಕೋಟಿ ರುಪಾಯಿ ನೆರವನ್ನು ಘೋಷಿಸಿದೆ! ಮೇಲ್ನೋಟಕ್ಕೆ ಇದು ಗಣಪತಿ ಉತ್ಸವವೆಂದು ಕಾಣಿಸಿದರೂ ಈ ಮಂಡಳಿಗಳಲ್ಲಿ ಕನ್ನಡ, ಕರ್ನಾಟಕ ವಿರೋಧಿ ರೂಪಕಗಳು, ಅಲಂಕಾರಗಳು, ಘೋಷಣೆಗಳು ಇರುತ್ತವೆ. ಈ ಕನ್ನಡ ವಿರೋಧಿ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರದಿಂದ ಒಂದು ಕೋಟಿಂು ನೆರವು! ಮರಾಠಿಗರಿಗೆ ಮಹಾರಾಷ್ಟ್ತ್ರದಿಂದಲೂ ಹಣ ಹರಿದು ಬರುತ್ತಿದೆ. ಕರ್ನಾಟಕ ಸರ್ಕಾರವು ಅವರನ್ನು ಓಲೈಸಲು ಕೋಟಿಗಟ್ಟಲೆ ನೀಡುತ್ತಿದೆ.
 ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ತ್ರಿಭಾಷಾ ಸೂತ್ರದನ್ವಂು ಮೊದಲು ಇದ್ದ ಕನ್ನಡ ಮಾಂುವಾಗುತ್ತಿದೆ. ಈ ಬಗ್ಗೆ  ಕನ್ನಡ ಅಭಿವೃದ್ದಿ ಪ್ರಾಧಿಕಾರವೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಿನಿಮಾ ನಾಟಕಗಳಲ್ಲಿ ವಿದೂಷಕ, ಖಳನಾಯಕ ®Û}ÚÃVÚ×Ú«Úß­„ÈÚáÛsÚß}Ú¡ ಬಂದ  ಮುಖ್ಯಮಂತ್ರಿ ಚಂದ್ರು ಅವರು ಕನ್ನಡಾಭಿವೃದ್ಧಿ ಪ್ರಾಧಿಕಾರದಲ್ಲೂ ವಿದೂಷಕರಾಗಿಂು ಉಳಿದಿದ್ದಾರೆ. ಕೇವಲ ಪ್ರಶಸ್ತಿ ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗಾವಿಗೆ ಬಂದು ಇಲ್ಲಿಂು ಕನ್ನಡದ ಸ್ಥಿತಿಂು ಬಗ್ಗೆ ಎಂದೂ ಕನ್ನಡ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಅವರೊಬ್ಬ ಸಿನಿಮಾ ನಟ ಎನ್ನುವ ಕಾರಣಕ್ಕೆ ಅವರನ್ನು ನೋಡಲು ಜನ ಸೇರುತ್ತಾರೆ. ವಿದೂಷಕರಂತೆ ಮಾತನಾಡಿ ಅವರನ್ನು  ನಗಿಸಿ ಹೋಗಿಬಿಟ್ಟಿದ್ದಾರೆ.
ಕನ್ನಡಿಗರ ನಿರಭಿಮಾನ, ಕನ್ನಡ ಸಂಘಟನೆಗಳ ನಿಷ್ಕ್ರೀಂುತೆ, ಕರ್ನಾಟಕ ಸರ್ಕಾರದ ದುರ್ಲಕ್ಷ್ಯದಿಂದಾಗಿಂು ಬೆಳಗಾವಿ ಮಹಾನಗರಸಭೆಗೆ ಈಗ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಂುಲ್ಲಿ ಆರಿಸಿ ಬಂದಿದ್ದಾರೆ. ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಮ.ಏ.ಸಮಿತಿಂು ಸಂಭಾಜಿ ಪಾಟೀಲ ಶಾಸಕರಾಗಿ ಆರಿಸಿ ಬಂದಿದ್ದಾರೆ. ಇಷ್ಟರಲ್ಲಿಂು ಮಹಾಪೌರ ಚುನಾವಣೆ ನಡೆಂುಲಿದೆ. ಸರ್ಕಾರ, ಜಿಲ್ಲಾ ಸಚಿವರು ಆಸಕ್ತಿ ವಹಿಸದೇ ಇದ್ದರೆ ಮರಾಠಿಗರೇ ಇಲ್ಲಿಯೂ ಆರಿಸಿ ಬರಲಿದ್ದಾರೆ. ಇದರಿಂದಾಗಿ ಬೆಳಗಾಮಿಂುಲ್ಲಿ ಮರಾಠಿ ಚಟುವಟಿಕೆಗಳು ಇನ್ನಷ್ಟು ಹೆಚ್ಚಲಿವೆ.
ಕರ್ನಾಟಕ ಸರ್ಕಾರ,  ಕನ್ನಡಾಭಿವೃದ್ಧಿ ಪ್ರಾಧಿಕಾರಿಗಳು ಕೂಡಲೆ ಎಚ್ಚತ್ತುಕೊಳ್ಳಬೇಕಿದೆ. ಸುವರ್ಣ ವಿಧಾನಸೌಧಕ್ಕೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಕಚೇರಿಗಳನ್ನು ಅಧಿಕಾರಿಗಳನ್ನು  ಬೆಂಗಳೂರಿನಿಂದ ಸ್ಥಳಾಂತರಿಸಬೇಕು. ಈ ನಗರಕ್ಕೆ 'ಬೆಳಗಾವಿ' ಎಂದೂ, ಜಿಲ್ಲೆಂುಲ್ಲಿ ಮರಾಠೀಕರಣಗೊಂಡ ಊರುಗಳ ಹೆಸರುಗಳನ್ನು ಕನ್ನಡೀಕರಿಸಬೇಕು. ಕನ್ನಡ ಸಂಘಟನೆಗಳನ್ನು ಬಲಪಡಿಸಬೇಕು. ಆಂುಕಟ್ಟಿನ ಸ್ಥಾನಗಳಿಗೆ ಕನ್ನಡ ಅಧಿಕಾರಿಗಳನ್ನು ನೇಮಿಸಬೇಕು. ಈ ಹಿಂದೆ ಬೆಳಗಾಮಿಂು ಕನ್ನಡ ವಿಷಂುಗಳಿಗಾಗಿ  ಒಬ್ಬ ಮಂತ್ರಿಂುನ್ನು ನಿಂೋಜಿಸಲಾಗುತ್ತಿತ್ತು. ಈಗಲೂ ಅದೇ ರೀತಿಂಾಗಿ ಓರ್ವ ಹೊಣೆಗಾರ ಮಂತ್ರಿಂುನ್ನು ನೇಮಿಸಬೇಕು.
ಬೆಳಗಾಮಿಂುಲ್ಲಿ ಈ ಹಿಂದೆ ಕನ್ನಡಿಗರಿದ್ದರು. ಎಲ್ಲರೂ ಕನ್ನಡಕ್ಕಾಗಿ ಹೋರಾಡಿದರು. ಈಗ ಇಲ್ಲಿ ಬಿಜೆಪಿಂುವರಿದ್ದಾರೆ. ಕಾಂಗ್ರೆಸ್ಸಿಗರಿದ್ದಾರೆ. ಬ್ರಾಹ್ಮಣರಿದ್ದಾರೆ. ಲಿಂಗಾಂುತರಿದ್ದಾರೆ. ನೇಕಾರರಿದ್ದಾರೆ. ಮುಸಲ್ಮಾನರಿದ್ದಾರೆ. ಆದರೆ ಕನ್ನಡಿಗರು ಒಬ್ಬರೂ ಇಲ್ಲ!

  ರಾಘವೇಂದ್ರ ಜೋಶಿ
ಸಂಪಾದಕರು
ನಿರ್ಭೀತ ವಾರಪತ್ರಿಕೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement