ಕಚಗುಳಿ ಟ್ವೀಟ್ಸ್
ಕಾಂಗ್ರೆಸ್ ಬಡವರಿಂದ ಬಲಗೊಂಡಿರುವ ಪಕ್ಷ ಎಂದು ಹೇಳಿಕೊಳ್ಳುತ್ತದೆ. ತಾವು ಯಾವತ್ತೂ ಬಲವಾಗಿರಬೇಕೆಂದೇ ಅವರು ಬಡವರನ್ನು ಬಲಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ ಅಲ್ಲವೇ?
- ಶಿವರಾಜ್‌ಸಿಂಗ್ ಚೌಹಾಣ್
ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಅನ್ನೋದು ಅಧಿಕೃತವಾಯ್ತು. ಇನ್ನು ಆಡ್ವಾಣಿಯವರು ಚುನಾವಣೆಗೆ ಸಿದ್ಧರಾಗಬಹುದು.... 2019ರ ಲೋಕಸಭೆ ಚುನಾವಣೆಗೆ!
- ರಮೇಶ್ ಶ್ರೀವತ್ಸ
ನೀವು ಸುಲಭವಾಗಿ ಹಣ ಮಾಡುವುದಕ್ಕೆ ಮೂರು ಮಾರ್ಗಗಳಿವೆ. 1) ನಿಮ್ಮಲ್ಲಿರುವ ರುಪಾಯಿಯನ್ನು ಡಾಲರ್‌ಗೆ ಪರಿವರ್ತಿಸಿ 2) ಕಾಂಗ್ರೆಸ್‌ಗೆ ಮತ ಹಾಕಿ, ಇನ್ನೈದು ವರ್ಷ ಕಾಯಿರಿ 3) ಡಾಲರ್ ಹಣವನ್ನು ರುಪಾಯಿಗೆ ಪರಿವರ್ತಿಸಿಕೊಳ್ಳಿ. ಡಬಲ್ ಆಗಿರುತ್ತದೆ!
- ಅವಿನಾಶ್ ಭಟ್