ಈರುಳ್ಳಿ ಬೆಲೆ ಏರಿಕೆ ಬಗ್ಗೆ ನಮ್ಮನ್ನೇನು ಕೇಳ್ತೀರಿ?
ಈರುಳ್ಳಿ ಬೆಲೆ ಏರಿಕೆ ಬಗ್ಗೆ ನಮ್ಮನ್ನೇನು ಕೇಳ್ತೀರಿ? ಸರ್ಕಾರ ಈರುಳ್ಳಿ ಮಾರಲ್ಲ ಅಂದ್ರಂತೆ ಕಪಿಲ್ ಸಿಬಲ್. ನಿಜ, ಈ ಸರ್ಕಾರ ಮಾರ್ತಿರೋದು ಕಲ್ಲಿದ್ದಲು ಗಣಿ, ಸ್ಪೆಕ್ಟ್ರಮ್ ಮತ್ತು ಥೋರಿಯಮ್‌ಗಳನ್ನು. ಅದೂ ಶೂನ್ಯ ನಷ್ಟದಲ್ಲಿ!
- ಜನಲೋಕ್ಪಾಲ್
ಜೀರೊ ಲಾಸ್ ಸಿದ್ಧಾಂತವನ್ನು ಪ್ರತಿಪಾದಿಸಿದ್ದ ಕಪಿಲ್ ಸಿಬಲ್ ಅವರು ಈಗ 'ಜೀರೊ ಜವಾಬ್ದಾರಿ' ಸಿದ್ಧಾಂತವನ್ನೂ ಸಾರುತ್ತಿದ್ದಾರೆ.
- ಫೇಕಿಂಗ್ ನ್ಯೂಸ್
ಭಾರತದ ಕೆಲ ಅಳತೆಗೋಲುಗಳು ಹೀಗಿವೆ. ಇಲ್ಲಿ ಶಬ್ದವನ್ನು 'ಅರ್ನಬ್ಸ್'ಗಳಲ್ಲಿ, ನಗುವನ್ನು 'ಸಿದ್ಧೂಸ್'ಗಳಲ್ಲಿ, ಮೌನವನ್ನು 'ಮನಮೋಹನ್ಸ್'ನಲ್ಲಿ, ತಿಕ್ಕಲುತನವನ್ನು 'ದಿಗ್ವಿಜಯ್ಸ್'ಗಳಲ್ಲಿ ಅಳೆಯಲಾಗುತ್ತದೆ.
- ಸೌರವ್