ಅಂಕಣಗಳು

ಮನಮೋಹನ್ ಸಿಂಗ್‌ರ ಕಥೆಯಾಯಿತು, ಸೋನಿಯಾ ಸರದಿ ಯಾವಾಗ?

ಈಗ ಬಂದಿರುವ ಎರಡು ಹೊಸ ಪುಸ್ತಕಗಳು ಮನಮೋಹನ್ ಸಿಂಗ್ ಅವರಿಗೆ 'ನಂಬಿಕೆದ್ರೋಹ' ಎಸಗಿವೆ ಎಂದು ಹೇಳಿಬಿಡುವುದು ಸುಲಭ. ಸಂಜಯ್ ಬಾರು ಪ್ರಧಾನಮಂತ್ರಿಗಳಿಗೆ ಆಪ್ತರಾಗಿದ್ದವರು, ಇನ್ನೊಂದೆಡೆ ದೇಶವನ್ನು ಕಲ್ಲಿದ್ದಲು ಹಗರಣ ಥರಗುಟ್ಟಿಸಿದಾಗ ಕಲ್ಲಿದ್ದಲು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದವರು ಪಿ.ಸಿ. ಪಾರೇಖ್. ಆದರೆ ಅವರ ಪುಸ್ತಕಗಳು ರಾಜಕೀಯದಾಟದ ಸುಳ್ಳು ಕಥೆಗಳಲ್ಲ. ಬದಲಾಗಿ, ಸರ್ಕಾರದಲ್ಲಿ ನಡೆದ ಕೆಲಸಗಳಿಗೆ ಸಾಕ್ಷಿಯಾದ ವೃತ್ತಿಪರರು ಸಂಗ್ರಹಿಸಿದ ದಾಖಲೆಗಳು. ಒಳಗಿನವರ ಇಂಥ ಪುಸ್ತಕಗಳು(ಮಾಜಿ ಲೆಕ್ಕಪರಿಶೋಧಕ ವಿನೋದ್ ರಾಯ್ ಅವರ ಪುಸ್ತಕ ಬರಲಿ ಎಂದು ಎಲ್ಲರೂ ಕಾದಿದ್ದಾರೆ) ವಿದ್ಯಾವಂತ ಸಮಾಜದಿಂದ ಕೊಂಡಾಡುವ ಇತಿಹಾಸದ ಸರಕುಗಳಾಗುತ್ತವೆ.  
ಬಾರು ಅವರ ಪುಸ್ತಕ, ಹೇಗೆ ಸೋನಿಯಾ ಗಾಂಧಿಯವರು ಪ್ರಧಾನಿಗಳ ಅಧಿಕಾರದ ಮೇಲೆ ದುರಾಕ್ರಮಣ ಮಾಡಿದರು ಎನ್ನುವುದರ ಬಗ್ಗೆ ಹೇಳುತ್ತದೆ. ಪಾರೇಖ್ ಅವರು, ಹೇಗೆ ಕೆಲವೊಮ್ಮೆ ನಿಷ್ಕ್ರಿಯವಾಗಿರುವುದೂ ಶಿಕ್ಷಾರ್ಹವಾಗುತ್ತದೆ ಎನ್ನುವುದರ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಒಟ್ಟಾರೆಯಾಗಿ ನೋಡಿದರೆ, ಮನಮೋಹನ್ ಸಿಂಗ್ ಅವರು ಯಾವಾಗಲೂ ಸೋನಿಯಾಗಾಂಧಿಯವರ ಕೈಗೊಂಬೆಯಾಗಿರಲಿಲ್ಲ ಎನ್ನುವುದು ಗೊತ್ತಾಗುತ್ತದೆ. ತಮ್ಮ ಹೃದಯಕ್ಕೆ ಹತ್ತಿರವಾದ ವಿಷಯಗಳ ಸರದಿ ಬಂದಾಗ, ಮನಮೋಹನ್ ಕೂಡ ತಮ್ಮ ಆಟವಾಡಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ, ಎಲ್ಲಾ ಪಕ್ಷಗಳ ನಾಯಕರ ವಿರೋಧದ ನಡುವೆಯೂ, ಕಾಂಗ್ರೆಸ್ಸಿಗರನ್ನೇ ಎದುರುಹಾಕಿಕೊಂಡೂ ಅವರು ಅಮೆರಿಕ-ಭಾರತ ಪರಮಾಣು ಒಪ್ಪಂದಕ್ಕೆ ಮುಂದಾದದ್ದು. ಅದೇ ರೀತಿಯಲ್ಲೇ ಅವರು ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರಬಂಡವಾಳ ಹೂಡಿಕೆ(ಎಫ್‌ಡಿಐ) ತರಲು ಮುಂದಾದರು(ಈಗಲೂ ಅನೇಕ ರಾಜ್ಯಗಳು ವಿರೋಧಿಸುತ್ತಿವೆ). ಇವನ್ನೆಲ್ಲ ಸಾಧ್ಯವಾಗಿಸಲು ತಮ್ಮ ಅಧಿಕಾರದ ಎಲ್ಲಾ ಮಜಲುಗಳನ್ನು ಬಳಸಿಕೊಂಡು, ತಂತ್ರ-ಕುತಂತ್ರಗಳನ್ನು ಮನಮೋಹನ್ ಸಿಂಗ್ ಹೆಣೆದದ್ದು ಸುಳ್ಳಲ್ಲ. ಇನ್ನು ಸಾರ್ವಜನಿಕ ಅಭಿಪ್ರಾಯಕ್ಕೆ, ಸರ್ಕಾರಿ ನೀತಿಗಳಿಗೆ, ತಜ್ಞರ ಸಲಹೆಗಳಿಗೆ ವಿರುದ್ಧವಾಗಿ ಕುಲಾಂತರಿ ತಳಿಗಳ ಫೀಲ್ಡ್ ಟ್ರೈಯಲ್‌ಗೆ ಅನುಮತಿ ದೊರೆತಿರುವುದರ ಹಿಂದೆಯೂ ಮನ್‌ಮೋಹನ್ ಸಿಂಗ್ ಅವರ ಪ್ರಬಲ ಇಚ್ಛಾಶಕ್ತಿ ಕೆಲಸ ಮಾಡಿದೆ. ಇವೆಲ್ಲವೂ ಅಚಾನಕ್ಕಾಗಿ ನಡೆದ ಘಟನೆಗಳು ಎಂದು ಹೇಳುವುದಕ್ಕಾಗದು. ಏಕೆಂದರೆ ಈ ವಿಷಯಗಳೆಲ್ಲವೂ ಅಮೆರಿಕದ ವಿದೇಶಾಂಗ ನೀತಿಯ ಕೇಂದ್ರ ಬಿಂದುಗಳಾಗಿವೆ.
ಪರುಮಾಣು ಕೇಂದ್ರಗಳ, ಘಟಕಗಳ ಸ್ಥಾಪನೆಯ ವೇಳೆ ಏನಾದರೂ ಹೆಚ್ಚುಕಡಿಮೆಯಾದರೆ, ಅದಕ್ಕೆ ತನ್ನ ದೇಶದ ಪೂರೈಕೆದಾರರನ್ನು ಉತ್ತರದಾಯಿಯನ್ನಾಗಿ ಮಾಡಬಾರದು ಎಂದು ಅಮೆರಿಕ ಆಶಿಸುತ್ತದೆ (ಭೋಪಾಲ್ ಅನಿಲ ದುರಂತಕ್ಕೆ ಜವಾಬ್ದಾರಿ ಹೊರಲು ಯೂನಿಯನ್ ಕಾರ್ಬೈಡ್ ನಿರಾಕರಿಸಿತಲ್ಲ ಹಾಗೆ). ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ಬಂದರೆ ವಿದೇಶಿ ಕಂಪನಿಗಳ ಮೋನೊಪೋಲಿ(ಏಕಸ್ವಾಮ್ಯ) ಬೆಳೆದು, ನಮ್ಮ ದೇಶದ ಬೇರು ಮಟ್ಟದ ಆರ್ಥಿಕ ಸ್ವರೂಪವೇ ಹಾಳಾಗಿಹೋಗುತ್ತದೆ ಎಂದು ಅನೇಕರು ಹೆದರುತ್ತಿದ್ದಾರೆ. ಇನ್ನು ಕುಲಾಂತರಿ ತಳಿಗಳ ಉತ್ಪಾದನೆಯಲ್ಲಿ ಅದಾಗಲೇ ಮಾನ್ಸೆಂಟೋದಂಥ ಕಂಪನಿಗಳು ಏಕಸ್ವಾಮ್ಯ ಸಾಧಿಸಿಬಿಟ್ಟಿವೆ. ಭಾರತದ ಕೃಷಿ ಸಂಶೋಧನಾ ಸಂಸ್ಥೆಗಳು ಉತ್ಪಾದಿಸುವ ಬೀಜಗಳನ್ನೇ ಇಂದು ಕಡೆಗಣಿಸಲಾಗುತ್ತಿದೆ. ಇನ್ನು 2008ರಲ್ಲಿ ಮಾಲಿಕ್ಯುಲರ್ ವಿಜ್ಞಾನಿ ಪುಷ್ಪ ಭಾರ್ಗವ್ , "ಒಂದು ವೇಳೆ ಭಾರತದ ಕೃಷಿಯನ್ನು ವಿದೇಶಿ ಕಂಪನಿಗಳ ಹಿಡಿತಕ್ಕೆ ಕೊಟ್ಟುಬಿಟ್ಟರೆ, ಭಾರತ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಂಡುಬಿಡುತ್ತದೆ" ಎಂದು ಎಚ್ಚರಿಸಿದ್ದರೂ ಕೂಡ, ಮನಮೋಹನ್ ಸಿಂಗ್ ಭಾರ್ಗವ್ ಅವರ ಮಾತಿಗೆ ಮಣೆ ಹಾಕದೇ, ತಮ್ಮ ಇಚ್ಛೆಯನ್ನೇ ಕೊನೆಯ ನಿರ್ಣಯವನ್ನಾಗಿಸಿದರು.
ಇಷ್ಟೆಲ್ಲ ಗಟ್ಟಿತನ ತೋರಿಸಿದ ಮನಮೋಹನ್ ಸಿಂಗ್ ಅದೇಕೆ ಭ್ರಷ್ಟಾಚಾರವನ್ನು ತಡೆಯಲು ಪ್ರಯತ್ನಿಸಲಿಲ್ಲ? ಸ್ವತಂತ್ರ ಭಾರತದ ಇತಿಹಾಸದ ಅತಿದೊಡ್ಡ ಹಗರಣಗಳೆಲ್ಲ ಅವರ ಅಧಿಕಾರಾವಧಿಯಲ್ಲೇ ಘಟಿಸಿಹೋದವು. ಆದರೆ ಇದರ ಬಗ್ಗೆ ಅವರು ತಲೆಕೆಡಿಸಿಕೊಳ್ಳಲೇ ಇಲ್ಲ. ದೇಶದ ಆರ್ಥಿಕತೆ ಕುಸಿದಾಗ, ಅವರಲ್ಲಿನ ಆರ್ಥಿಕ ತಜ್ಞನಿಗೆ ಎಚ್ಚರವಾಗಲೇ ಇಲ್ಲ. ಅಥವಾ ತಮ್ಮ ಪಕ್ಷದ 'ದೊಡ್ಡ'ವರೆಲ್ಲ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕೆ, ನಿರ್ಲಕ್ಷಿಸುವ ಮನಸ್ಸು ಮಾಡಿದರೆ ಮನಮೋಹನ್? ತಮ್ಮ ಸ್ಥಾನವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಬೇಕೆಂದು ಅವರು ಎಲ್ಲವನ್ನೂ ಸಹಿಸಿಕೊಂಡರೇ? ಒಟ್ಟಾರೆ, ಈ ಪ್ರಶ್ನೆಗಳೆಲ್ಲ ಪ್ರಧಾನಿಗಳ ವರ್ಚಸ್ಸನ್ನು ಹಾಳುಗೆಡವಿದ್ದಂತೂ ನಿಜ.
ಬಾರು ಮತ್ತು ಪಾರೇಖ್ ಹೊಸತೇನನ್ನೂ ಹೇಳಿಲ್ಲ. ಅವರು ಹೇಳಿರುವುದೆಲ್ಲ ಮೊದಲಿನಿಂದಲೂ ಜನರಿಗೆ ಗೊತ್ತಿರುವಂಥದ್ದೆ. ಅದಕ್ಕೆ ಪುರಾವೆ ಒದಗಿಸಿದ್ದಾರಷ್ಟೇ ಅವರುಗಳು. "ಮನಮೋಹನ್ ಸಿಂಗ್ ಕಲ್ಲಿದ್ದಲು ಘಟಕಗಳ ಹರಾಜು ಪ್ರಕ್ರಿಯೆಯ ಪರವಾಗಿದ್ದರು, ಆದರೆ ಶಿಬು ಸೋರೇನ್ ಮತ್ತು ದಾಸರಿ ನಾರಾಯಣ್ ರಾವ್ ಸಿಂಗ್‌ರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೂ ಸುಮ್ಮನಿದ್ದರು" ಎಂದು ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ ಪಾರೇಖ್. õ ಅದರಂತೆಯೇ, ಹೇಗೆ ಪುಲೋಕ್ ಚಾಟರ್ಜಿ ಮತ್ತು ಎಮ್. ಕೆ. ನಾರಾಯಣ್‌ರಂಥ ಸೋನಿಯಾ ಗಾಂಧಿಯವರ ಆಪ್ತರು, ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕಾರೋಬಾರು ನಡೆಸತೊಡಗಿದರು ಎನ್ನುವುದನ್ನು ವಿವರಿಸಿದ್ದಾರೆ ಬಾರು.  
ಆದರೆ ಭಾರತಕ್ಕೆ ನಿಜಕ್ಕೂ ಬೇಕಿರುವುದು, ಸೋನಿಯಾ ಗಾಂಧಿ ಹೇಗೆ ಅಧಿಕಾರವನ್ನು ನಿರ್ವಹಿಸುತ್ತಾರೆ, ಹೇಗೆ ಅವರು ಭಾರತವನ್ನು ತಮ್ಮ ಖಾಸಗಿ ಸ್ವತ್ತಾಗಿ ಬದಲಾಯಿಸಿದ್ದಾರೆ, ಹೇಗೆ ದೊಡ್ಡ ದೊಡ್ಡ ನಾಯಕರು ಸೋನಿಯಾರ ಗುಲಾಮರಾದರು ಎನ್ನುವುದನ್ನು ವಿವರಿಸುವ ಪುಸ್ತಕ. ಅಂಥ ಪುಸ್ತಕವನ್ನು ಯಾರು ಬರೆಯಬಲ್ಲರು?ಇನ್ನು ಹೊರಗಿನವರನ್ನು ಕರೆದುಕೊಂಡು ಬಂದು ತಮ್ಮ 'ಅಧಿಕೃತ' ಆತ್ಮಕತೆಯನ್ನು ಸೋನಿಯಾ ಬರೆಸುತ್ತಾರೆ ಎಂದು ಭಾವಿಸುವುದಕ್ಕೆ ಸಾಧ್ಯವಿಲ್ಲ ಬಿಡಿ. ಆದರೆ ಇಂದಲ್ಲದಿದ್ದರೂ ಮುಂದೆ ಎಂದಾದರೊಂದು ದಿನ ಅಂಥ ಪುಸ್ತಕ ಬಂದೇ ಬರುತ್ತದೆ ಎನ್ನುವ ನಂಬಿಕೆ ಇರಲಿ. ಭಾರತಕ್ಕೆ 'ಚಾಲ್ತಿಯಲ್ಲಿರುವ' ಗುಣವಿದೆ!

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ