ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಲತಾಯಿ ಎಂದೊಡನೆ ಕೆಟ್ಟವಳೆನ್ನಲಾದೀತೆ?

Srinivasa Murthy VN
Updated On : 20 Apr 2014, 12:05 pm

ನಾನು ಇತ್ತೀಚೆಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದೆ. ಪ್ರತಿದಿನ ಕನ್ನಡಪ್ರಭವನ್ನು ತಪ್ಪದೇ ಓದುತ್ತಿದ್ದ ನಾನು ಅಲ್ಲಿಯೂ ಕನ್ನಡಪ್ರಭ ಪತ್ರಿಕೆಯನ್ನು ಖರೀದಿಸಿದೆ. ಕನ್ನಡಪ್ರಭದ ಬೆಂಗಳೂರು ಆವೃತ್ತಿಯ ಪತ್ರಿಕೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. ನಮ್ಮಲ್ಲಿನ ಕನ್ನಡಪ್ರಭ 12 ಪುಟಗಳಾದರೆ ಅಲ್ಲಿ 16 ಪುಟಗಳು ಮತ್ತು ಒಳಗಿನ ಹಲವು ಪುಟಗಳು ವರ್ಣಮಯವಾಗಿರುವುದಲ್ಲದೇ ಪತ್ರಿಕೆಯ ಗುಣಮಟ್ಟವೂ ಚೆನ್ನಾಗಿತ್ತು. ಮತ್ತೂ ಅಲ್ಲಿ ಬೆಲೆಯೇನೂ ಹೆಚ್ಚಿಲ್ಲ ನಮ್ಮಲ್ಲಿಯಂತೆಯೇ ಇದೆ. ಬೆಂಗಳೂರಿಗರಿಗೆ ಮಾತ್ರ ಈ ವಿಶೇಷತೆ ಏಕೆ? ಕನ್ನಡಪ್ರಭವು ರಾಜ್ಯದ ಎಲ್ಲಾ ಭಾಗದವರನ್ನು ಒಂದೇ ರೀತಿಯಲ್ಲಿ ಕಾಣಬೇಕಲ್ಲವೇ?
-ಆರ್.ಸಿ. ಪರಶುರಾಮ್, ಶಿಕಾರಿಪುರ
ಮೊ. 990 220 3492


ಮುಖಪುಟದಲ್ಲಿ 'ಛೀ' ಎಂ. ಸಿದ್ರಾಮಯ್ಯ ಎಂಬ ಅರ್ಥಗರ್ಭಿತವಾದ ಶಿರೋನಾಮೆ ಕೊಟ್ಟಿದ್ದೀರಿ. ಅಭಿನಂದನೆಗಳು. ಸಿ.ಎಂ. ಎಂಬ ಮುಲಾಜಿಲ್ಲದೇ ಚುನಾವಣಾ ಆಯೋಗ ಅವರಿಗೆ ವಾಗ್ದಂಡನೆ ವಿಧಿಸಿದೆ. ನಮ್ಮ ಮುಖ್ಯಮಂತ್ರಿಗಳಿಗೆ 'ಮೋದಿ' ಎಂಬ ದೃಶ್ಯ ಕನಸಿನಲ್ಲೂ ಬಂದು ಬೆವರಿಳಿಸುತ್ತಾರೆಂದು ಕಾಣುತ್ತದೆ. ಅದಕ್ಕೇ ಅವರು ಹೋದ ಕಡೆಯೆಲ್ಲಾ ಮೋದಿಯವರ ಬಗ್ಗೆ ನಾಲಿಗೆ ಸಡಿಲ ಮಾಡಿ ಮೋದಿಯವರನ್ನು ತೆಗಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರ ನಾಯಕಿಗೆ "ಮೌತ್‌ಕಾ ಸೌಧಾಗರ್‌' ಪದ ಪ್ರಯೋಗ ಹೇಗೆ ತಿರುಗು ಬಾಣವಾಯಿತು ಎಂದು ನೆನಪಿಸಿಕೊಳ್ಳುವುದು ಒಳಿತು.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ.

ಮಲತಾಯಿ ಅನ್ನುವಾಕೆ, ತೀರಾ ಕೆಟ್ಟವಳು ಯಾಕೆ? ಅಂತ ಪ್ರಣತಿ, ತನ್ನ ಓದುಗರ ಮುಂದೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ಏನು ಹೇಳೋಣ? ಪ್ರಣತಿ, ಬರೆದಂತೆ ಮಲತಾಯಿ ಕೆಟ್ಟವಳು ಎಂಬ ಭಾವನೆ ಶಾರದೆಗೆ ಅಥವಾ ಅಪರೂಪವಾಗಿ ಗೋಳು ಹೊಯ್ದುಕೊಳ್ಳುವ ಮಲತಾಯಿ ಇರಬಹುದು. ಆದರೆ ಹೆತ್ತ ತಾಯಿ ಇಲ್ಲ ಎಂಬ ಕೊರಗನ್ನು ನಿವಾರಿಸಿ, ತಾಯಿಯಂತೆ ಪ್ರೀತಿ, ವಾತ್ಸಲ್ಯಗಳಿಂದ ಮೊದಲನೇ ಹೆಂಡತಿಯ ಮಕ್ಕಳನ್ನು ನೋಡಿಕೊಂಡ ಉದಾಹರಣೆ ಬೇಕಾದಷ್ಟಿದೆ. ಕೇವಲ ಸಿನಿಮಾ, ಕಾದಂಬರಿಗಳಲ್ಲಿ ಕೆಟ್ಟ ಮಲತಾಯಿ ಇರುತ್ತಾರೆ. ನಿಜ ಜೀವನದಲ್ಲಿ ಅಪರೂಪಕ್ಕಾದರೂ ಬೆರಳೆಣಿಕೆಯಷ್ಟು ಮಲತಾಯಿಯರು ತಾಯಿಗಿಂತ ಚೆನ್ನಾಗಿ  ನೋಡಿಕೊಂಡ (ತಾಯಿ ತೀರಾ ಚಿಕ್ಕವಯಸ್ಸಿನಲ್ಲಿ ತೀರಿಕೊಂಡಾಗ) ದ್ದೂ ಇದೆ. ಬಹುಶಃ ಪ್ರಣತಿಗೆ ಮಲತಾಯಿ ಅಂದರೆ ಕೆಟ್ಟವಳು ಎಂಬ ಅಭಿಪ್ರಾಯ ಏಕೆ ಬಂತೋ?
ಬಿ.ಎಸ್. ರಮೇಶ, ಬನಶಂಕರಿ 3ನೇ ಹಂತ,
ಬೆಂಗಳೂರು.


16 ಮಾರ್ಚ್ ವಿಶ್ವೇಶ್ವರಭಟ್ ಅವರ "ಮೈಸೂರಿಗೆ ಹೊರಟ ಪ್ರತಾಪ..." ನಲ್ಲಿರುವ ಪ್ರತಿಯೊಂದೂ ನುಡಿಯೂ ನನಗನಿಸಿದ್ದೇ. "ವಿಜಯ ಕರ್ನಾಟಕ"ದ ದಿನಗಳಿಂದಲೂ ಪ್ರತಾಪ ಅವರ ಪ್ರತಿಯೊಂದು ಲೇಖನಗಳನ್ನು ಓದಿದವಳು/ಮನನ ಮಾಡಿದವಳು ನಾನು. ನೀವಿಬ್ಬರೂ ಆ ಪತ್ರಿಕೆ ಬಿಟ್ಟಾಗ, ನೀವಿಬ್ಬರೂ ಇರುವ ಪತ್ರಿಕೆಯೇ ನಾನು ಓದುವುದು ಅಂತ, "ಕನ್ನಡಪ್ರಭ"ಕ್ಕೆ ಶಿಫ್ಟ್ ಆದವಳು. ಪ್ರತಾಪ್ ಅವರ ಲೇಖನದ ಮೊನಚು, ಧೈರ್ಯ, ಅವರ ಸ್ಟೈಲೇ ಬೇರೆ. ಯಾರದೂ ಭಿಡೆ ಇಲ್ಲದ ನಿರ್ಭೀತ, ದಿಟ್ಟ ಬರವಣಿಗೆ ಭಯೋತ್ಪಾದಕ ಹಿಟ್ ಲಿಸ್ಟ್‌ನಲ್ಲಿದ್ದರೂ ಬರವಣಿಗೆಯ ಮೊನಚು ಕಡಿಮೆಯಾಗಲಿಲ್ಲ. ಭಟ್ರೇ ನೀವೊಬ್ಬರೇ ಏನು we all miss him
-ಶ್ರೀಮತಿ ಕವಿತಾ ಬಾಡಗಂಡಿ, ಗೋಕಾಕ

ಸರಳ, ಪರಿಶುದ್ಧ, ಪ್ರಾಮಾಣಿಕ ವ್ಯಕ್ತಿಗಳ ನಡೆ- ನುಡಿ-ಕಾರ್ಯಗಳನ್ನು, ಅವರ ಏಳಿಗೆಯನ್ನು ಸಹಿಸದೇ ಪ್ರತ್ಯಕ್ಷ-ಪರೋಕ್ಷವಾಗಿ ಕಿರುಕುಳ ಕೊಡುತ್ತಿದ್ದವರೂ ಕೊನೆಗೆ ಸನ್ಮಾನಿಸುತ್ತಾರೆಂದರೆ ಸತ್ಯದ ಮಹತ್ವ-ಸರಳ ವ್ಯಕ್ತಿಯ ತಾಳ್ಮೆ ಎಷ್ಟಿದೆ ಎಂದು ತಿಳಿಯಬೇಕಾಗುತ್ತದೆ. ಅದಕ್ಕೇ "ಸತ್ಯಮೇವ ಜಯತೇ" ಎಂದು ಹೇಳುವುದು. 29.3.14 ಶನಿವಾರದ ಪತ್ರಿಕೆಯ "ಹಿರಿಯರ ಹಾದಿ " ಕಾಲಂನಲ್ಲಿ "ಹೀಗೊಬ್ಬ ಲಂಚ ವಿರೋಧಿ ಅಧಿಕಾರಿ" ತಲೆಬರಹದಡಿಯಲ್ಲಿ "ಜನಮೇಜಿರಾವ್‌" ಅವರ ಸರಳ-ಪರಿಶುದ್ಧ-ಪ್ರಾಮಾಣಿಕ ಬದುಕಿನ ಬಗ್ಗೆ ಚಿಕ್ಕದಾಗಿ -ಚೊಕ್ಕದಾಗಿ ಮನ ಮುಟ್ಟುವಂತೆ ಬರೆದಿದ್ದೀರಿ, ತಮಗೂ ಮತ್ತು 'ಜನಮೇಜಿರಾವ್‌' ರವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
-ಚಿಕ್ಕಣ್ಣ, ಕೊರಟಗೆರೆ. ತುಮಕೂರು ಜಿಲ್ಲೆ.
ಮೊ. 9880 692850


30 ಮಾರ್ಚ್ 2014ನೇ ದಿನಾಂಕ ಭಾನುವಾರದ ನಿಮ್ಮ ಪತ್ರಿಕೆಯಲ್ಲಿ ರಮಾನಂದ ಶರ್ಮ ಬರೆದಿರುವ 'ಬಿದ್ದವನನ್ನು ಎತ್ತಿದ್ದು ಯಾವ ಪಕ್ಷ' ಎಂಬ ಲಘು ಬರಹ ತುಂಬಾ ಅರ್ಥಗರ್ಭಿತ ಹಾಗೂ ಸಮಯೋಚಿತವಾಗಿದೆ. ಎಲ್ಲಾ ನಾಗರಿಕರನ್ನು ಚಿಂತನೆಗೆ ಹಚ್ಚುವ ಲೇಖನವಾಗಿದೆ.
-ಎನ್. ಶಂಕರನಾರಾಯಣ, ಜೆ.ಪಿ. ನಗರ, ಬೆಂಗಳೂರು.

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement