ಸಪ್ತ ಲೋಕಗಳಲ್ಲೂ ಸುಪ್ತವಾಗಿ ಅಡಗಿರುವ ಸು(ಷು)ಪ್ತಿ
ಘಳಿಗೆಯೊಳಗೆ ಹತ್ತುವ ನಿದ್ರೆಗೆ ಗುಳಿಗೆ ಬೇಕಿಲ್ಲ.
ನಿದ್ರೆ ಸಾವನ್ನು ದೂರ ಮಾಡುತ್ತದೆ. ವಾಹನ ಚಾಲನೆಯಲ್ಲಿ ನಿದ್ರೆ ಬಂದರೆ ಎಲ್ಲರನ್ನೂ ದೂರ ಮಾಡುತ್ತದೆ
ಅಜ್ಜಿ ಕತೆಗೂ ಮೊಮ್ಮಗನ ನಿದ್ರೆಗೂ ಅಜ್ಜಿಕಾಲದಿಂದಲೂ ಸಂಬಂಧ
ಧಮಾರ್ಥ ಕಾಮ ಮೋಕ್ಷಗಳಲ್ಲಿ ಸೇರದ ಪಂಚಮ ಪುರುಷಾರ್ಥ
ಹೆಂಡತಿ ಪಕ್ಕದಲ್ಲಿದ್ದರೆ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. ನಿದ್ರೆಗೂ ಹೆಂಡತಿ ಭಯ
ಸಂಸಾರವೆಂಬ ಡ್ರಾಮಾಕ್ಕೊಂದು ವಿರಾಮ ಈ ಡ್ರೀಮು ರೂಮು
ಎಚ್ಚರದ ಅಚ್ಚರಿಗಳೆಂಬ ಪಿಚ್ಚರಿನ ಮಧ್ಯೆ ಬರುವ ಇಂಟರ್ವೆಲ್ಲು
ಬಸ್‌ನಲ್ಲಿ ಪಕ್ಕದಲ್ಲಿರುವವರ ಭುಜ ಒದ್ದೆ ಮಾಡುವ ಸಂಗತಿ
ಇದು ಎಷ್ಟಿದ್ದರೂ ಸಾಲದು, ಸಾಲ ಕೊಂಡರಂತೂ ಹತ್ತಿರವೂ ಸುಳಿಯದು
ವಿದ್ಯಾರ್ಥೀ ಚೇತ್ ತ್ಯಜೇತ್ ನಿದ್ರಾಮ್....
ಆಳಾಗಿ ದುಡಿಯುವವರು ಯಾರೋ, ಅರಸರಾಗಿ ನಿದ್ದೆ ಹೊಡೆಯುವವರು ಇನ್ಯಾರೋ.
ದೇವೇಗೌಡರ ನೆರಳು
ಅಧಿಕಾರದ ಕುರ್ಚಿಯಲ್ಲಿ ಕುಳಿತೊಡನೆಯೇ ಆವರಿಸುವ ಆವರಣ
ಮನದ ಕಸವನ್ನೆಲ ಕ್ಲೀನ್‌ಸ್ವೀಪ್ ಮಾಡುವ ಸ್ಲೀಪ್
ವಿಶ್ವನಾಥ ಸುಂಕಸಾಳ