ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತೆವಲಾಗಿಬಿಟ್ಟಿರುವ ಆರೆಸ್ಸೆಸ್ ದೂಷಣೆ

Srinivasa Murthy VN
Updated On : 12 Feb 2014, 12:18 pm

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಲಘುವಾಗಿ ಮಾತನಾಡುವುದು, ಅಪಪ್ರಚಾರ ಮಾಡುವುದು ಇಂದು ನೆನ್ನೆಯದ್ದಲ್ಲ. ಸಂಘವು ಅಸಂಖ್ಯ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದರೂ ಇವರಿಗೆ ಅದ್ಯಾವುದೂ ಕಣ್ಣಿಗೆ ಬೀಳುವುದಿಲ್ಲ ಹಾಗೂ ಊಹಾಪೋಹದ ಆರೋಪ ನಿಲ್ಲುವುದಿಲ್ಲ. ಒಂದೊಮ್ಮೆ ಕಮ್ಯುನಿಸ್ಟ್ ವಿಚಾರಧಾರೆಯವರಷ್ಟೇ ಇಂಥ ದೂಷಕರ ಪಟ್ಟಿಯಲ್ಲಿ ಇದ್ದರಾದರೂ ಈಗಿನ ಚುನಾವಣಾ ಭರಾಟೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು, ಆ ಪಕ್ಷದ ವರಿಷ್ಟರ ಕೃಪಾಕಟಾಕ್ಷಕ್ಕೆ ಪಾತ್ರರಾದ ಗಣ್ಯರು ಸಾಹಿತಿಗಳು, ಚಿಂತಕರು, ಇತಿಹಾಸ ತಜ್ಞರು ಎಲ್ಲರೂ ಸೇರಿಕೊಂಡಿದ್ದಾರೆ. ಸಂಬಂಧವಿಲ್ಲದ ಚರ್ಚೆಯಲ್ಲಿ ವೃಥಾ ಆರ್.ಎಸ್.ಎಸ್ ಹೆಸರು ತೆಗೆದು ಅದಕ್ಕೆ ಮಸಿ ಬಳಿಯುವ ಕುತಂತ್ರವನ್ನು ಇವರೆಲ್ಲರೂ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.
ಸಂಘದ ಬಗ್ಗೆ ಯಾರೇ ಬೇಜವಾಬ್ದಾರಿ ಹೇಳಿಕೆ ನೀಡಿದರೂ ಅವರ ಮನೆಯ ಮುಂದೆ ಪ್ರತಿಭಟನೆ, ಪ್ರತಿಕೃತಿದಹನ ಮಾಡುವ ಸಂಪ್ರದಾಯವಿಲ್ಲ. ಸಂಘಕ್ಕೆ ದಂಗೆಎಬ್ಬಿಸಿ ಸಮಾಜದಸ್ವಾಸ್ಥ್ಯಕೆಡಿಸುವ ಯೋಜನೆ-ಯೋಚನೆಗಳಂತೂ ಇಲ್ಲವೇಇಲ್ಲ. ಸರಸಂಘಚಾಲಕರಾದ ಮೋಹನ್‌ಜೀ ಭಾಗವತ್ ಹೇಳುವಂತೆ ಸಂಘ 'ಸರ್ವೇಷಾಂ ಅವಿರೋಧೇನ' ಎಂಬ ಉಕ್ತಿಯ ರೀತ್ಯಾ ಕೆಲಸ ಮಾಡುತ್ತಿದೆ. ಮುಂದೆಯೂ ಮಾಡುತ್ತದೆ. ಸಂಘದ ಕೆಲಸ ಯಾವುದೋ ಪಕ್ಷದ ಹಿತಕ್ಕಾಗಿಯೋ, ವ್ಯಕ್ತಿಯ ಹಿತಕ್ಕಾಗಿಯೋ, ಸಂಘದ ಸ್ವಹಿತಕ್ಕಾಗಿಯೋ ಅಲ್ಲದೇ ಎಂದೆಂದೂ ದೇಶದ ಹಿತಕ್ಕಾಗಿ ಎಂದು ಗರ್ವದಿಂದ ಹೇಳುತ್ತಾರೆ.
ಇತ್ತೀಚೆಗಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಘಟಿಸಿದ ಬಾಂಬ್ ಸ್ಫೋಟದ ತಕ್ಷಣವೇ ಕಾಂಗ್ರೆಸ್‌ನ ಎಚ್. ವಿಶ್ವನಾಥ್ ಹೇಳಿದ್ದನ್ನು ನೆನಪಿಸಿಕೊಳ್ಳಿ. 'ಆರ್.ಎಸ್.ಎಸ್‌ನವರೇ ಈ ಕೃತ್ಯ ಎಸಗಿರಬಹುದೆಂದು ಅನುಮಾನಿಸಿದರು. ಸಹಜವಾಗಿ ಇಲ್ಲಿ ಅನುಮಾನ ಪದದ ಬದಲಾಗಿ ಆರೋಪ ಎಂಬ ಪದವನ್ನೇ ಬಳಸಬಹುದಿತ್ತು. ಆದರೆ ಜಾಣರಾದ ವಿಶ್ವನಾಥ್ ಮುಂದೆಂದೂ ತೊಡರುಗಳಾಗಬಾರದೆಂದು, ತಮ್ಮ ಹೇಳಿಕೆಯಲ್ಲಿ ಇದು ಆರೋಪವಲ್ಲ ಅನುಮಾನವಷ್ಟೇ ಎಂದು ಪರಿ ಪರಿಯಾಗಿ ಹೇಳಿಕೊಂಡರು. ಒಬ್ಬರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಸುಖಾಸುಮ್ಮನೆ ಹೇಳಿಕೆ ನೀಡುವುದೂ ಆರೋಪ ಮಾಡಿದಂತೆ. ಹಾಗೆಂದು ಪೊಲೀಸರೇನೂ ಆರೆಸ್ಸೆಸ್ ಅನ್ನು ತನಿಖೆಗೆ ಒಳಪಡಿಸಲಿಲ್ಲ. ಏಕೆಂದರೆ ಇದೊಂದು ಕೆಸರೆರಚುವ ವಿಕ್ಷಿಪ್ತ ಹೇಳಿಕೆಯಷ್ಟೇ ಎಂಬುದು ಯಾರಿಗಾದರೂ ಅರ್ಥವಾಗುತ್ತಿತ್ತು. ದಿನಕ್ಕೊಂದು ಪತ್ರಿಕಾಗೋಷ್ಠಿ ಮಾಡುವ ಇಂಥ ನಾಯಕರಿಗೆ, ಕೊನೆಗೊಮ್ಮೆ ಪ್ರಕರಣದ ತನಿಖೆ ಬೇರೆ ಸಂಘಟನೆಗಳೆಡೆ ಬೊಟ್ಟು ಮಾಡಿದಾಗ, ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಅನುಮಾನ ತಪ್ಪು ಎಂದು ಹೇಳಿಕೆ ಕೊಡುವ ನೇರವಂತಿಕೆ ಏಕಿರುವುದಿಲ್ಲ?
ಕಳೆದ ವರ್ಷ, 'ನಮ್ಮ ದೇಶಕ್ಕೆ ಆರ್‌ಎಸ್‌ಎಸ್‌ನಂತಹ ಹಿಂದು ಸಂಘಟನೆಗಳಿಂದಲೇ ಭೀತಿ ಇದೆ' ಎಂದು ಈ ದೇಶದ ಗೃಹ ಮಂತ್ರಿಗಳಾದ ಶಿಂದೆ ಸಾಹೇಬರು ತಲೆಬುಡವಿಲ್ಲದ ಹೇಳಿಕೆಯೊಂದನ್ನು ಮಾಡಿ ಒಗಾಯಿಸಿದರು. ಅವರ ಮಾತನ್ನು ಆ ಪಾಳಯದ ಇತರೆ ಘಟಾನುಘಟಿ ರಾಜಕಾರಣಿಗಳೆಲ್ಲಾ ಸಮರ್ಥಿಸಿಕೊಂಡರು. ಕಡೆಗೆ ಉಪಚಾರ ಮಾಡುವವರಂತೆ ಹೇಳಿಕೆ ತಿರುಚಲಾಗಿದೆ, ತಾನು ಹಾಗೆ ಮಾತನಾಡಿಲ್ಲ ಎಂದೆಲ್ಲಾ ಸಮಜಾಯಿಷಿ ಬಂತು.
ಕೆಲದಿನಗಳ ಹಿಂದೆ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಬಗ್ಗೆ ವಾಗ್ಝರಿ ಹರಿಸಿದರು. ಮಹಾತ್ಮಾ ಗಾಂಧಿಯನ್ನು ಕೊಂದದ್ದು ಆರ್.ಎಸ್.ಎಸ್ ಎಂದೂ, ಸರ್ದಾರ್ ಪಟೇಲ್ ಅವರು ಸಂಘವನ್ನು ವಿಷಭರಿತವೆಂದು ಅಭಿಪ್ರಾಯಪಟ್ಟಿದ್ದರೆಂದರು. ಮಹಾತ್ಮಾರಾಗಲಿ, ಪಟೇಲರಾಗಲಿ ಸಂಘವನ್ನು ಒಪ್ಪಿಯೇ ಇರಲಿಲ್ಲವೆಂದು ರಾಹುಲ್ ತಮ್ಮ ಭಾವನೆ ವ್ಯಕ್ತಪಡಿಸಿದರು.
1934 ರಲ್ಲಿ ವಾರ್ಧಾದಲ್ಲಿ ಗಾಂಧೀಜಿ ಆಶ್ರಮದ ಬಳಿಯಲ್ಲಿಯೇ ಸಂಘದ ಕ್ಯಾಂಪ್ ಒಂದು ನಡೆಯುತ್ತಿತ್ತು. ಆ ಕ್ಯಾಂಪ್ ಅನ್ನು ಗಮನಿಸಿದ ಗಾಂಧೀಜಿ ಅಲ್ಲಿದ್ದವರನ್ನು ಭೇಟಿಯಾಗಬೇಕೆಂದು ಇಷ್ಟಪಟ್ಟು ಸ್ವಯಂಸೇವಕರನ್ನು ಸಂದರ್ಶಿಸಿ, ಅವರ ಜಾತಿಯನ್ನು ಕೇಳಿದಾಗ ಎಲ್ಲರೂ ತಾವು ಹಿಂದೂ ಎಂದು ಹೇಳಿಕೊಂಡಿದ್ದು, ಅವರಲ್ಲಿ ಮೇಲ್ಜಾತಿ, ಕೀಳ್ಜಾತಿ, ಅಸ್ಪೃಶ್ಯತಾ ಮನೋಭಾವವಿಲ್ಲದಿರುವುದನ್ನು ಕಂಡು, ಸಂಘದ ಸಂಸ್ಥಾಪಕರಾದ ಕೇಶವ ಹೆಡ್ಗೇವಾರರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ ಹಾಗು ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ಧ್ಯೇಯವನ್ನು ಕುರಿತು, ಛ ಢಿಜಟಟ ್ಟ್ಠ್ಜಛಟ್ಝಿಣಜಜ ಛಟಿಜ ಛ ಜ್ಝಡ್ಛ್ಝಠಟ್ಝಟಿಜಜ ಛ್ಟಿಜಣ ಎಂದು ಶ್ಲಾಘಿಸಿರುವುದನ್ನು ಚೆನ್ನೈನ 'ಹಿಂದೂ' ಪತ್ರಿಕೆ ವರದಿ ಮಾಡಿದೆ (17-ಖಜಠಡಿ-1947). ವರದಿ ಪ್ರಕಟವಾದದ್ದು ಈ ಸಂದರ್ಭದಲ್ಲಿ. 'ಸ್ವಾತಂತ್ರ್ಯಾ ನಂತರ ಗಾಂಧೀಜಿ ಉಳಿದುಕೊಂಡಿದ್ದು ದೆಹಲಿಯ ಭಂಗಿ ಕಾಲೋನಿಯಲ್ಲಿ. ಮುಸ್ಲಿಮರಿಂದ ಅವರಿಗೆ ಜೀವ ಭಯವಿದೆ ಎಂದು ಕೆಲ ಮೂಲಗಳಿಂದ ತಿಳಿದ ಮೇಲೆ, ಆಚಾರ್ಯ ಕೃಪಲಾನಿಯವರು (ಅಂದಿನ ಕಾಂಗ್ರೆಸ್ ಅಧ್ಯಕ್ಷರು) ಸಂಘಕ್ಕೆ ತಮ್ಮ ಸ್ವಯಂಸೇವಕರನ್ನು ಗಾಂಧಿಜೀಯ ರಕ್ಷಣೆಗೆ ಕೇಳಿಕೊಂಡಿದ್ದರು. ಸ್ವಯಂಸೇವಕರು ಗಾಂಧೀಜಿಯವರ ಜೊತೆಗೇ ಇರುತ್ತಿದ್ದರು. ಭಂಗಿ ಕಾಲೋನಿಯಲ್ಲಿ ನಡೆದ ಒಂದು ಸಂಘದ  ಕಾರ್ಯಕ್ರಮದಲ್ಲಿ ಗಾಂಧೀಜಿ ಪಾಲ್ಗೊಂಡು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು.
ಮಹಾತ್ಮ ಗಾಂಧಿಯವರನ್ನು ಕೊಂದಿದ್ದು ನಾತುರಾಂ ಗೋಡ್ಸೆ. ನಾತುರಾಮ್ ಗೋಡ್ಸೆ 1930ರಲ್ಲೇ ಆರ್‌ಎಸ್‌ಎಸ್ ಅನ್ನು ಬಿಟ್ಟಿದ್ದ. ಅಲ್ಲದೇ ಹಲವಾರು ನ್ಯಾಯಾಲಯ ವಿಚಾರಣೆಗಳ ನಂತರ ತಿಳಿದು ಬಂದಿರುವುದೂ ಆರ್‌ಎಸ್‌ಎಸ್‌ಗೂ ಗೋಡ್ಸೆಗೂ ಯಾವ ಸಂಬಂಧವೂ ಇಲ್ಲವೆಂದು. ಮಾಹಾತ್ಮರ ಹತ್ಯೆಯಲ್ಲಿ ಸಂಘ ಶಾಮೀಲು ಆಗಿಲ್ಲವೆಂದು. ಗಾಂಧೀಜಿಯ ಹತ್ಯೆಯ ನಂತರ ಪಂಡಿತ್ ನೆಹರೂರವರು ಅಂದಿನ ಸಂಘದ ಸರಸಂಘಚಾಲಕರಾದ ಪರಮಪೂಜನೀಯ ಗುರೂಜೀ ಗೋಳ್ವಾಲ್ಕರ್ ಅವರನ್ನು ಬಂಧಿಸಿದರು. ಇನ್ನೆಂದೂ ಭಗವಾ ಧ್ವಜ ಹಾರಾಡಲು ನನ್ನ ದೇಶದಲ್ಲಿ ಒಂದಿಂಚು ಜಾಗವನ್ನೂ ಕೊಡುವುದಿಲ್ಲ ಎಂದ ನೆಹರೂ ತಪ್ಪು ಮಾಡಿದ್ದು ಗಾಂಧಿ ಹತ್ಯೆಯನ್ನು ಇಡಿಯ ಸಂಘದ ಕೃತ್ಯ ಎಂದು ಹೆಸರಿಸುವಲ್ಲಿ. ಇಂತಹ ಬಾಲಿಶ ಅಪವಾದದಿಂದ ಸಂಘಕ್ಕೆ ನಿರ್ಬಂಧ ಹೇರಲಾಗಿತ್ತಾದರೂ, ನ್ಯಾಯಾಲಯದ ತೀರ್ಪಿನ ನಂತರ ಸಂಘಕ್ಕೆ ಮರು ಜೀವನ ದೊರೆಯಿತು. ಸರ್ದಾರ್ ವಲ್ಲಭಬಾಯಿ ಪಟೇಲರು ಗುರೂಜೀ ಗೋಳ್ವಾಲ್ಕರ್‌ರಿಗೆ ಬರೆದ ಪತ್ರವನ್ನಷ್ಟೇ ಸಾರಿ ಸಾರಿ ತೋರಿಸುವ ಇಂದಿನ ಮಾಧ್ಯಮ, ಪೂರ್ವಗ್ರಹಪೀಡಿತರು, ತದನಂತರದ ಪಟೇಲರ ಸಂಘದ ಬಗೆಗಿನ ವಿಶ್ವಾಸದ ನುಡಿಯನ್ನಾಗಲಿ, ಸಂಘದ ಸೇವಾ ಸಹಾಯದ ಬಗ್ಗೆ ಇದ್ದ ಗೌರವದ ಬಗ್ಗೆಯಾಗಲಿ ಚಕಾರವೆತ್ತುವುದಿಲ್ಲ.
ಇನ್ನು ಅಸೀಮಾನಂದರ ವಿಚಾರ. ಹಿಂದೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತಿದ್ದ ತೆಹಲ್ಕಾ ಪತ್ರಿಕೆ ಈಗಿನ ದಿನಗಳಲ್ಲಿ ಅದರ ಪ್ರಧಾನ ಸಂಪಾದಕರಾಗಿದ್ದ ತರುಣ್ ತೇಜಪಾಲ್‌ರಿಂದಾಗಿ ಹೆಸರು ಕೆಡಿಸಿಕೊಂಡಿದೆ. ಆದ್ದರಿಂದಲೇ ಸಂಘದ ಹೆಸರನ್ನು ಹಾಳು ಮಾಡಲು ಹೆಚ್ಚು ಜನ ಕೇಳಿರದ ಕಾರವಾನ್ ಪತ್ರಿಕೆ ಅಸೀಮಾನಂದರ ಸಂದರ್ಶನ ಮಾಡಿದೆವೆಂದು ವರದಿ ಮಾಡಿ ಸಂಚಲನ ಮೂಡಿಸಿದೆ. ಅಜ್ಮೇರ್ ಸ್ಫೋಟದ ಆರೋಪಿ ಭಾವೇಶ್ ಪಟೇಲ್‌ರು ಶಿಂಧೆ, ದಿಗ್ವಿಜಯ್ ಸಿಂಗ್ ಇಬ್ಬರೂ ನಾನು ಆರ್‌ಎಸ್‌ಎಸ್ ಅನ್ನು ಸ್ಫೋಟದ ವಿಷಯವಾಗಿ ಹೆಸರಿಸಬೇಕೆಂದು ಹೇಳಿದ್ದರು ಎಂದಿರುವ ಬಗ್ಗೆ ಇವರ ಬಳಿ ಉತ್ತರವಿಲ್ಲ. ಆದರೆ ಇದೇ ಗೃಹ ಮಂತ್ರಿಗಳು ಸಂಘದ ಬಗ್ಗೆ ವದಂತಿ ಹಬ್ಬಿದಾಗ ಮಾತ್ರ 'ಆರ್‌ಎಸ್‌ಎಸ್ ಬಗ್ಗೆ ಪರಿಶೀಲನೆ ನಡೆಸಲೇಬೇಕು' ಎಂದು ಅಭಿಪ್ರಾಯ ಪಡುತ್ತಾರೆ. ಅಸಲಿಗೆ ಆ ಸಂದರ್ಶನ ನಿಜವಾಗಿಯೂ ನಡೆದಿತ್ತಾ ಎಂದು ಜನರು ಕೇಳುವ ಮೊದಲೇ ಅಸೀಮಾನಂದ ತಾನು ಸಂಘದ ಹೆಸರನ್ನು ಹೇಳಿಯೇ ಇಲ್ಲ ಎಂದು ಪತ್ರ ಬರೆದಿದ್ದಾರೆ. ಆದರೆ ಪುಟ್ಟ ವಿಷಯವೊಂದಿತ್ತಲ್ಲ ಜನರ ತಲೆ ಕೆಡಿಸಲು. ಮಾಧ್ಯಮದ ಕೆಲವರ್ಗ ಅದನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಬಿಟ್ಟರು. ಕೆಲ ಮಾಧ್ಯಮದ ಚರ್ಚೆಗಳು ಈ ವಿಷಯವಾಗಿ ನಡೆದುಕೊಂಡ ರೀತಿ ಅಸಹ್ಯಕರ. ಚರ್ಚೆಯ ವಿಷಯವನ್ನೇ ಮರೆಸಿ ತಮ್ಮ ಅಜೆಂಡಾವನ್ನು ರೂಪಿಸುವ ಈ ಮಾಧ್ಯಮದ ಚರ್ಚೆಗಳು ಇನ್ನಷ್ಟು ಪ್ರಬುದ್ಧವಾಗಬೇಕೆಂದು ಆ ದಿನ ಅನಿಸಿದ್ದಂತೂ ನಿಜ.

-ಪ್ರವೀಣ ಪಟವರ್ಧನ್
praveen.patavardhan@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement