ಕಲ್ಪನಾ 'ಮಲಗಿದಲ್ಲಿ' ಭಾರತಿ ಹೋದಾಗ...
ಕಲ್ಪನಾ 'ಮಲಗಿದಲ್ಲಿ' ಭಾರತಿ ಹೋದಾಗ... ಇವತ್ತು ನಾನು ಸುನಿ ದಾರಿ ತಪ್ಪಿದ...
ಇವತ್ತು ನಾನು ಸುನಿ ದಾರಿ ತಪ್ಪಿದ ಮಕ್ಕಳಾಗಿ ಹೋಗಿದ್ವಿ. ಎದುರಲ್ಲಿ ನೋಡಿದರೆ ಇದ್ದಕ್ಕಿದ್ದ ಹಾಗೆ ಗುಬ್ಬಲಾಳ ಎಸ್ಟೇಟ್ ಕಾಣಿಸ್ತು. ಸುನಿನ ಕೇಳ್ದೆ ಎಲ್ಲೋ ಕೇಳ್ದ ಹಾಗಿದೆಯಲ್ಲ ಈ ಹೆಸ್ರೂ ಅಂತ. ಕಲ್ಪನ ಇಲ್ಲೇ ಅಲ್ವಾ ಇರೋದು ಅಂದ. ಇಬ್ರೂ ಹೊರಟ ಕೆಲ್ಸ ಮುಂದೂಡಿ ಒಳಗೆ ನುಗ್ಗಿದ್ವಿ. ಒಂದಿಷ್ಟು ತರಚಲು ಮುಳ್ಳು ಗಿಡ , ಒಂದು ಮುಳ್ಳು ಬೇಲಿ ಹಾರಿದ ಮೇಲೆ ಮಿನುಗು ತಾರೆಯ ಎದುರು ನಿಂತಿದ್ವಿ. 'ಮಿನುಗುತಾರೆ ಇಲ್ಲಿ ಮಲಗಿದ್ದಾರೆ' ಅನ್ನೋ ಕೆತ್ತನೆ ಇದ್ದ ಮಣ್ಣು, ಧೂಳು ಮುಸುಕಿದ್ದ ಸಮಾಧಿ ನೋಡಿ ಯಾಕೋ ಸಂಕಟ ಇಬ್ರಿಗೂ. ಪಕ್ದಲ್ಲಿ ದಾರಿ ತೋರ್ಸಿದ ಹುಡುಗ ಯಾರಿವ್ರು ಅಂತ ಕೇಳ್ದ. ಅವನಿಗೆ ಕಲ್ಪನ ಯಾರು ಅಂತಲೇ ಗೊತ್ತಿರಲಿಲ್ಲ. ಒಂದಿಷ್ಟು ನೀರಿದ್ರೆ ಕೊಡು ಸಮಾಧಿ ಮೇಲಿನ ಧೂಳನ್ನಾದ್ರೂ ತೊಳೀತೀವಿ ಅಂದ್ರೆ ಅದೂ ಇಲ್ಲ ಅಂದ. ಆ ಮಿನುಗು ತಾರೆಯ ಠೀವಿ .. ಆ ಸೌಂದರ್ಯ ... ಆ ಶಿಸ್ತು ಎಲ್ಲ ನೆನಪಾಯ್ತು. ಸುಮ್ಮನೆ ಒಂದಿಷ್ಟು ಹೊತ್ತು ನಿಂತಿದ್ದು ಬಂದ್ವಿ. ಗೇಟಿನ ಪಕ್ಕ ಒಂದ್ಕಡೆ ಒಂದಿಷ್ಟು ಗಂಧದ ಹಾರ ಇತ್ತು. ಏನದು ಮರಿ ಅಂದ್ರೆ 'ಯಾರ್ಯಾರೋ ಬಂದು ಹಾರ ಹಾಕಿ ಹೋಗ್ತಾರೆ. ಅದ್ನೆಲ್ಲ ಎತ್ತಿ ಇಟ್ಟಿದಾರೆ ಅಂದ. ಮಿನುಗುತಾರೆಯ ಸಮಾಧೀನ ಒಂಚೂರು ಸುಸ್ಥಿತಿಯಲ್ಲಿಡೋದಿಕ್ಕೆ ಏನಾದ್ರೂ ಮಾಡ್ಬೇಕು ಇಷ್ಟೊಂದು ಜನ ಕನ್ನಡಿಗರಿದ್ದೀವಿ ....ಅಲ್ವಾ?
ಫೇಸ್ಬುಕ್ ನಲ್ಲಿ ಕಂಡಂತೆ
ಭಾರತಿ ಬಿ.ವಿ
ಅವರ ಕಿರು ಪರಿಚಯ
-ರಶ್ಮಿ ಕಾಸರಗೋಡು