ಕಚಗುಳಿ ಟ್ವೀಟ್ಸ್
ಚೀನಾ ಮತ್ತು ಪಾಕಿಸ್ತಾನದವರೇ.... ನೀವೇನೂ ಭಾರತದ ಸಂಸತ್ತಿನ ಮೇಲೆ ದಾಳಿ ಮಾಡುವ ಬಗ್ಗೆ ಯೋಚಿಸಬೇಕಿಲ್ಲ. ಆ ಕೆಲಸವನ್ನು ಪೆಪ್ಪರ್ ಸ್ಪ್ರೇ ಅಸ್ತ್ರದೊಂದಿಗೆ ನಾವೇ ಮಾಡಿಕೊಳ್ಳುತ್ತೇವೆ.
-ಬಾಬು ಭಯ್ಯಾ
ಸಂಜಯ್ ದತ್ಗೆ ಮೇಲಿಂದ ಮೇಲೆ ಪೆರೋಲ್ ಸಿಗುತ್ತಿದೆ. ಬಹುಶಃ ಹೆಂಡತಿ ಜತೆಗಿರುವುದಕ್ಕಿಂತ ಹೆಚ್ಚಿನ ಶಿಕ್ಷೆ ಇನ್ಯಾವುದೂ ಇಲ್ಲ ಅಂತ ನ್ಯಾಯಾಲಯ ತೀರ್ಮಾನಿಸಿದಂತಿದೆ.
-ರಿಯಾ
ಸೆಕ್ಸ್ ಮತ್ತು ಚುನಾವಣೆಯಲ್ಲಿ ಅಗತ್ಯ ಅಂಶ ಯಾವುದು?
ಉಮೇದುವಾರ ದೃಢವಾಗಿ ನಿಲ್ಲುವುದು.
-ಗಾಸಿಪ್ ಗರ್ಲ್
ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಪ್ರಸ್ತಾಪವಾಗುತ್ತಲೇ ಸ್ಪೀಕರ್ ಮೀರಾ ಕುಮಾರ್ ಅವರ ಆದೇಶದ ಮೇರೆಗೆ ಟಿವಿಯಲ್ಲಿ ಅದರ ಪ್ರಸಾರ ಸ್ಥಗಿತಗೊಳಿಸಲಾಯಿತಂತೆ. ರಾಷ್ಟ್ರೀಯ ವಾಹಿನಿಯಲ್ಲಿ ಹಿಂಸಾದೃಶ್ಯಗಳನ್ನು ತೋರಿಸುವುದು ಸರಿಯಲ್ಲ ಅಂತ ಹೀಗೆ ಮಾಡಿರಬೇಕು.
-ರಮೇಶ ಶ್ರೀವತ್ಸ