ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಿಸ್ಟರ್ ಕೇಜ್ರೀವಾಲ್, ನಿಮ್ಮ ವಾದದಲ್ಲಿ ಬರೀ ಗ್ಯಾಸ್ ತುಂಬಿದೆ!

ಯುಪಿಎ ಸರ್ಕಾರ ಅನಿಲ ಬೆಲೆ...

Rashmi Kasaragodu
Updated On : 25 Feb 2014, 1:45 am

ಯುಪಿಎ ಸರ್ಕಾರ ಅನಿಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದನ್ನು ನೀವು ಬೆಂಬಲಿಸುತ್ತೀರಾ ಎಂದು ಕೇಜ್ರೀವಾಲ್ ಅವರು ನರೇಂದ್ರ ಮೋದಿಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ಕೇಳಿದ್ದಾರೆ. ಪ್ರಮುಖ ಶಕ್ತಿ ಸಂಪನ್ಮೂಲವೊಂದು ದೇಶದಲ್ಲಿ ಕಡಿಮೆ ಇದ್ದರೆ ಅದರ ಬೆಲೆ ಕಡಿಮೆಯಿರಬೇಕೋ, ಹೆಚ್ಚಿರಬೇಕೋ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಕೇಜ್ರೀವಾಲ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ 'ಫಸ್ಟ್ಪೋಸ್ಟ್' ಸಂಪಾದಕ ಆರ್. ಜಗನ್ನಾಥನ್. ಆ ಲೇಖನದ ಆಯ್ದ ಭಾಗ ಇಲ್ಲಿದೆ...
----
"ಮಿಸ್ಟರ್ ಕೇಜ್ರೀವಾಲ್,  ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಂದಾಗಿ ನೀವು ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದೀರಿ. ಅಂಥ ವಿವರಗಳನ್ನು ತಿಳಿಯಲು ನಿಮ್ಮಲ್ಲಿರುವ ಕುತೂಹಲ ಮತ್ತು ತವಕವನ್ನು ನಾನು ಮೆಚ್ಚುತ್ತೇನೆ. ಆದರೆ ಇಂಥ 'ಬಹಿರಂಗ' ಪತ್ರಗಳನ್ನು ಕಳುಹಿಸುವ ಮೂಲ ಉದ್ದೇಶ ಸ್ವಯಂ ಪ್ರಚಾರವೇ  ಆಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂಥದ್ದೆ. ಒಬ್ಬ ರಾಜಕಾರಣಿಯಾಗಿ ಸ್ವಯಂ ಪ್ರಚಾರ ಕೈಗೊಳ್ಳುವ ಹಕ್ಕು ನಿಮಗಿದೆ. ಈ ಕಾರಣಕ್ಕಾಗಿ ನಾನು ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ನೀವು ಮೋದಿಯವರಿಗೆ ಮೂರು ಪ್ರಶ್ನೆಗಳನ್ನು ಕೇಳಿರುವಿರಿ:
1) ಗ್ಯಾಸ್ ಬೆಲೆಯನ್ನು ಪ್ರತಿ ಮಿಲಿಯನ್ ಮೆಟ್ರಿಕ್ ಬಿಟಿಯುಗೆ 8 ಡಾಲರ್ ಹೆಚ್ಚಿಸುವ ಯುಪಿಎದ ನಿರ್ಧಾರವನ್ನು ಬೆಂಬಲಿಸುತ್ತೀರಾ?
2) ಮುಖೇಶ್ ಅಂಬಾನಿ ಮತ್ತು ನಿಮ್ಮ ನಡುವಿನ ಸಂಬಂಧವೇನು?
3) ನಿಮ್ಮ ಚುನಾವಣಾ ಪ್ರಚಾರಕ್ಕೆ ಖರ್ಚು ಎಷ್ಟಾಗುತ್ತಿದೆ?
2 ಮತ್ತು 3ನೇ ಪ್ರಶ್ನೆಗಳಿಗೆ ನನಗೆ ಉತ್ತರಿಸಲು ಸಾಧ್ಯವಿಲ್ಲ. ಒಂದು ವೇಳೆ ಮೋದಿ ಮತ್ತು ಮುಖೇಶ್ ನಡುವಿನ ಸಂಬಂಧದ ಬಗ್ಗೆ ಅನುಮಾನವಿದ್ದರೆ ಅಥವಾ ಮೋದಿಯವರ ಚುನಾವಣಾ ಪ್ರಚಾರಗಳಿಗೆ ಅಧಿಕ ಮೊತ್ತ ವ್ಯಯಿಸಲಾಗುತ್ತಿದೆ ಎಂಬ ಬಗ್ಗೆ ನಿಮ್ಮ ಬಳಿ ಮಾಹಿತಿಯಿದ್ದರೆ, ನೀವು ನೇರವಾಗಿ ಪೊಲೀಸ್ ಸ್ಟೇಷನ್ ಅಥವಾ ಚುನಾವಣಾ ಆಯೋಗದ ಬಳಿ ತೆರಳಿ ದೂರು ನೀಡಬಹುದು. ಗ್ಯಾಸ್ ಬೆಲೆ ಹೆಚ್ಚಳಕ್ಕೆ ರಹಸ್ಯವಾಗಿ ತಂತ್ರ ಹೂಡಿದ್ದಾರೆ ಎಂದು ನೀವು ಬಹುತೇಕ ಎಲ್ಲರ ಮೇಲೂ ಎಫ್ಐಆರ್ ದಾಖಲಿಸಿದ್ದೀರಾದ್ದರಿಂದ, ನಿಮ್ಮ ಈ ಪ್ರಶ್ನೆಗೆ ಉತ್ತರ ನ್ಯಾಯಾಲಯಗಳಿಂದ ದೊರೆಯಬೇಕು. ಬೆಲೆ ನಿಗದಿಯ ಬಗ್ಗೆ ಅದಾಗಲೇ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಬಹಿರಂಗ ಪತ್ರ ಬರೆದು 'ಪ್ರಚಾರ' ಗಿಟ್ಟಿಸಿಕೊಳ್ಳಲು ಮುಂದಾಗಿದ್ದೀರಿ. ಇರಲಿ.
ಒಂದು ವೇಳೆ ಗ್ಯಾಸ್ ಬೆಲೆ ನಿಗದಿಯ ಬಗ್ಗೆ ಗಂಭೀರ ಉತ್ತರ ನಿಮಗೆ ದೊರೆಯಬೇಕೆಂದರೆ, ಅದು ಮೋದಿಯವರಿಂದ ಸಿಗಲಾರದು. ಏಕೆಂದರೆ ಅವರು ಆ ವಿಷಯದಲ್ಲಿ ಪರಿಣತರಲ್ಲ. ನಿಮ್ಮ ಇತ್ತೀಚಿನ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿ ನನಗೆ ಒಂದು ವಿಷಯ ಅರ್ಥವಾಗಿದೆ, ಮೊದಲು ಗುಂಡು ಹಾರಿಸಿ ನಂತರ ಪ್ರಶ್ನೆ ಕೇಳುವ ಗುಣ ನಿಮ್ಮದು. ಕೆಲವೊಮ್ಮೆ ಪ್ರಶ್ನೆ ಕೇಳಿ, ಉತ್ತರಕ್ಕಾಗಿ ಕಾಯದೆಯೇ ಮತ್ತೊಂದು ಗುಂಡು ಹಾರಿಸುತ್ತೀರಿ. ಟಿ.ವಿ. ಆ್ಯಂಕರ್ಗಳು ಮಾಡುತ್ತಾರಲ್ಲ ಹಾಗೆ! ವಿತರಣಾ ಸಂಸ್ಥೆಯ ಬಗ್ಗೆ ಸಿಎಜಿಗೆ ಲೆಕ್ಕಪರಿಶೋಧನೆಗೆ ಆದೇಶಿಸಿ ಅದರ ವರದಿ ಬರುವುದಕ್ಕೆ ಕಾಯದೆಯೇ ದೆಹಲಿಯಲ್ಲಿ ಸಬ್ಸಿಡಿ ಘೋಷಣೆ ಮಾಡಿದಿರಿ. ದೆಹಲಿಯ ಬಹುತೇಕ ಮನೆಗಳಿಗೆ ಮೀಟರ್ ಇಲ್ಲ ಎನ್ನುವುದು ಗೊತ್ತಿದ್ದರೂ ಉಚಿತ ನೀರು ಕೊಟ್ಟಿರಿ. ಆದರೆ ಅದರಿಂದ ಕೆಲವೇ ಕೆಲವು ಮನೆಗಳಿಗೆ(ದುಡ್ಡಿದ್ದವರಿಗೆ) ಲಾಭವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಲಿಲ್ಲವೇ? ಅದೆಲ್ಲ ಹೋಗಲಿ ಬಿಡಿ, ನೀವು ನಿಮ್ಮ ಬೋಗಸ್ ಗ್ಯಾಸ್ ಸಿದ್ಧಾಂತವನ್ನು ಈಗ ಮಂಡಿಸಿದ್ದೀರಿ. ಈ ಲೇಖನದ ಮುಖ್ಯ ಉದ್ದೇಶ ಅರ್ಥಶಾಸ್ತ್ರದ ವ್ಯವಹಾರದ ಬಗ್ಗೆ ನಿಮಗೆ ಸ್ವಲ್ಪ ತಿಳಿವಳಿಕೆ ಕೊಡುವುದೇ ಆಗಿದೆ.
ಇಲ್ಲೊಂದು ವಿಷಯ. ಫಸ್ಟ್ಪೋಸ್ಟ್ ಮತ್ತು ಫಸ್ಟ್ಬಿಜ್ಗಳ ಮಾಲೀಕ ಸಂಸ್ಥೆ ನೆಟ್ವರ್ಕ್ 18. ಅದರ ಪ್ರಮೋಟರ್ಗಳಿಗೆ ತುಸು ಹಣ ಅಂಬಾನಿಯವರ ಕಂಪನಿಯಿಂದಲೂ ಬರುತ್ತದೆ. ಈ ಕಾರಣಕ್ಕಾಗಿ ಇದರಲ್ಲಿ ನನ್ನ ಹಿತಾಸಕ್ತಿಯಿದೆ ಎಂದು ನೀವು ಭಾವಿಸಬಹುದು. ಆದರೆ ನಾನು ಮುಂದಿಡುವ ವಾಸ್ತವಾಂಶವನ್ನಾದರೂ ನೀವು ಪರಿಗಣಿಸುತ್ತೀರಿ ಎಂದು ನಂಬಿದ್ದೇನೆ. ಏಪ್ರಿಲ್ 1ರಿಂದ ಗ್ಯಾಸ್ ಬೆಲೆಯನ್ನು ಹೆಚ್ಚಿಸಬೇಕೆಂಬ ಯುಪಿಎದ ನಿರ್ಧಾರವನ್ನು ಮೋದಿ ಬೆಂಬಲಿಸುತ್ತಾರೆಯೇ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಇದು ಸರಿ ಬೆಲೆಯೋ, ತಪ್ಪು ಬೆಲೆಯೋ ಎನ್ನುವುದು ಪ್ರಶ್ನೆಯಲ್ಲ, ಆದರೆ ಗ್ಯಾಸ್ಗೆ ಈ ರೀತಿಯಲ್ಲಿ ಬೆಲೆ ನಿಗದಿಪಡಿಸುವ ಮಾರ್ಗ ಸರಿಯೇ ಎನ್ನುವುದು ಪ್ರಶ್ನೆಯಾಗಬೇಕು.
ಭಾರತದಲ್ಲಿ ಹೈಡ್ರೋಕಾರ್ಬನ್ ಸಂಪನ್ಮೂಲಗಳ ವಿರಳವಾಗಿವೆ ಎನ್ನುವುದು ನಿಮಗೆ ಗೊತ್ತಿರಬಹುದು. ನಾವು ಸುಮಾರು 80 ಪ್ರತಿಶತದಷ್ಟು ಕಚ್ಚಾ ತೈಲವನ್ನು ಮತ್ತು 40-50 ಪ್ರತಿಶತದಷ್ಟು ಅನಿಲವನ್ನು ಆಮದು ಮಾಡಿಕೊಳ್ಳುತ್ತೇವೆ. ಪ್ರಮುಖ ಶಕ್ತಿ ಸಂಪನ್ಮೂಲವೊಂದು ದೇಶದಲ್ಲಿ ಕಡಿಮೆ ಇದ್ದರೆ ಅದರ ಬೆಲೆ ಕಡಿಮೆಯಿರಬೇಕೋ, ಹೆಚ್ಚಿರಬೇಕೋ? ನನ್ನ ಉತ್ತರವಂತೂ ಸ್ಪಷ್ಟ: ಗ್ಯಾಸ್ ಬೆಲೆಗಳನ್ನು ಮುಕ್ತವಾಗಿಸಿ, ಅವು ತಮ್ಮದೇ ಸ್ತರವನ್ನು ಕಂಡುಕೊಳ್ಳಲು ಬಿಟ್ಟು, ಏಕಕಾಲದಲ್ಲಿಯೇ ತಾಜಾ ಪರಿಶೋಧನೆಗೆ ಉತ್ತೇಜನ ನೀಡಿ, ಪೂರೈಕೆ ಹಾಗೂ ಪರಿಶೋಧನೆಯಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಡುವಂತೆ ಮಾಡಬೇಕು. ಹಾಗೆ ಮಾಡಿದಾಗ ಕಾಲಾಂತರದಲ್ಲಿ ಅನಿಲ ದರಗಳು ಸಮಂಜಸ ಮಟ್ಟವನ್ನು ತಲುಪುತ್ತವೆ. ಅಮೆರಿಕದ ನೈಸರ್ಗಿಕ ಅನಿಲ ಬೆಲೆ ಹೆನ್ರಿ ಹಬ್ನಲ್ಲಿ( ಲೂಸಿಯಾನಾದಲ್ಲಿನ ನೈಸರ್ಗಿಕ ಅನಿಲ ಪೈಪ್ಲೈನ್ ವ್ಯವಸ್ಥೆ) ಕಳೆದ ದಶಕದ ಮಧ್ಯಭಾಗದಲ್ಲಿ ಪ್ರತಿ ಎಮ್ಎಮ್ಬಿಟಿಯುಗೆ 10 ಡಾಲರ್ ಏರಿಕೆಯಾಗಿತ್ತು. ಆದರೆ ಅಲ್ಲಿ ಅನಿಲ ಉತ್ಪಾದನೆ ಹೆಚ್ಚಾಗುತ್ತಾ, ಈಗ ಆ ಬೆಲೆ 4 ಡಾಲರ್ಗೆ ಬಂದಿಳಿದಿದೆ. ಅಮೆರಿಕ ಕೆಲವೇ ಸಮಯದಲ್ಲಿ ಈ ಕ್ಷೇತ್ರದಲ್ಲಿ ನಿವ್ವಳ ರಫ್ತುದಾರನಾಗಿ ಬಲಿಷ್ಠವಾಗಲಿದೆ. ಏಕೆಂದರೆ ಅದು ಬೆಲೆ ನಿಗದಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ! ಅನಿಲ ಮತ್ತು ತೈಲ ಬೆಲೆಯನ್ನು ಏರಿಸದೆ, ಕಡಿಮೆ ಬೆಲೆಗೆ ಕಟ್ಟಿಹಾಕಿದ್ದರಿಂದಲೇ ನಾವು ತೈಲ ಮತ್ತು ಅನಿಲದ 'ಆಮದಿನ'ಮೇಲೆಯೇ ಇಂದು ಅವಲಂಬಿತವಾಗಿದ್ದೇವೆ. ಅನಿಲ ಬೆಲೆಯನ್ನು ಅಗ್ಗ ಮಾಡುವವರು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿ, ಸೌದಿಯ ಮೇಲೆ ಅವಲಂಬಿತರನ್ನಾಗಿ ಮಾಡುತ್ತಿದ್ದಾರೆ ಎಂದರ್ಥ. ಕೇಜ್ರೀವಾಲ್, ನೀವು ಕತಾರಿ ಮತ್ತು ಸೌದಿಯ ತೈಲ ಪ್ರಭುಗಳ ಮಿತ್ರರಂತೂ ಇರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ! ರಿಲಾಯನ್ಸ್ ಕಂಪನಿ, ಕೃಷ್ಣ-ಗೋದಾವರಿ ಕಡಲಾಚೆಯ ಜಾಗದಲ್ಲಿ ಉತ್ಪಾದಿಸುತ್ತಿರುವ ಅನಿಲದ ಬೆಲೆ ಪ್ರತಿ ಟಟಇಡ್ಡಿಗೆ 1-1.15 ಡಾಲರ್ಗಿಂತ ಹೆಚ್ಚಿರಲಾರದು, ಆದ್ದರಿಂದ ಗುತ್ತಿಗೆದಾರನಾದ ರಿಲಾಯನ್ಸ್ಗೆ ಸಿಗಬೇಕಾದ ಹಣ 10-20 ಪ್ರತಿಶತಕ್ಕಿಂತಲೂ ಹೆಚ್ಚಾಗಬಾರದು ಅನ್ನುತ್ತಿದ್ದೀರಿ. ಅಂದರೆ 2 ಡಾಲರ್ಗಿಂತ ಕಡಿಮೆ ಕೊಡಬೇಕು ಎನ್ನುವುದು ನಿಮ್ಮ ವಾದ. ಸರಕೊಂದಕ್ಕೆ ಬೆಲೆ ಹೇಗೆ ನಿಗದಿಮಾಡಬೇಕು ಎನ್ನುವ ವಿಷಯದಲ್ಲಿ ನಿಮಗೆ ತಿಳಿವಳಿಕೆಯೇ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅಂಥದ್ದರಲ್ಲಿ ಆಳವಾದ ಸಮುದ್ರದಿಂದ ಬಾವಿಗಳ ಮೂಲಕ ಹೊರತೆಗೆದ ಅನಿಲದಂಥ ಸಂಕೀರ್ಣ ಸರಕಿನ ಬಗ್ಗೆ ನಿಮಗೆ ಹೇಗೆ ತಿಳಿಯಬೇಕು?  
ಇನ್ನೊಂದು ವಿಷಯ ನೆನಪಿರಲಿ. ರಿಲಾಯನ್ಸ್ ಅನ್ನು ಕರೆದು, 'ಇಲ್ಲಿ ತೈಲವಿದೆ, ಪಂಪ್ ಮಾಡಿ ಮಾರಾಟ ಮಾಡಿ" ಎಂದು ಯಾರೂ ಅದಕ್ಕೆ ಜಾಗ ಕೊಟ್ಟಿಲ್ಲ. ಆ ಕಂಪನಿ ಅದಕ್ಕಾಗಿ ಶೋಧನೆ ನಡೆಸಬೇಕಾಯಿತು, ಹೂಡಿಕೆ ಮಾಡಬೇಕಾಯಿತು, ಹಣ ಕಳೆದುಕೊಳ್ಳಬೇಕಾಯಿತು, ಮೂಲ ಸೌಕರ್ಯಗಳನ್ನು ನಿರ್ಮಿಸಬೇಕಾಯಿತು. ಇಷ್ಟೆಲ್ಲ ಮಾಡಿದ ಮೇಲೆಯೇ ಅನಿಲವನ್ನು ಹೊರತೆಗೆಯಲು ಸಾಧ್ಯವಾಗಿದ್ದು. ಇದಕ್ಕಾಗಿ ಅದಕ್ಕೆ 9 ವರ್ಷಗಳು ಹಿಡಿದವು. ನಿರ್ವಹಣಾ ವೆಚ್ಚ, ಮಾರ್ಕೆಟಿಂಗ್ ಖರ್ಚುಗಳನ್ನೂ ಒಳಗೊಂಡಂತೆ ಸಂಪೂರ್ಣ ವೆಚ್ಚವನ್ನು ನಾವಿಲ್ಲಿ ನೋಡಬೇಕಾಗುತ್ತದೆ.  ರಿಲಾಯನ್ಸ್ನ ಉತ್ಪಾದನಾ ವೆಚ್ಚ ಪ್ರತಿ ಟಟಇಡ್ಡಿಗೆ 1-1.5 ಡಾಲರ್ಗೂ ಹೆಚ್ಚಿರಲಾರದು ಎಂಬ ನಿಮ್ಮ ವಾದ ಬರೀ ಕಲ್ಪನೆಯಷ್ಟೆ. ನನಗೆ ಸ್ಪಷ್ಟವಾಗಿ ಎಷ್ಟು ಬೆಲೆ ಎಂದು ಗೊತ್ತಿಲ್ಲವಾದರೂ ತೈಲ ಶೋಧನೆ, ಪೈಪ್ಲೈನ್ಗಳ ಜೋಡನೆ ಮತ್ತು ಪ್ಲಾಟ್ಫಾರ್ಮ್ಗಳ ಸ್ಥಾಪನೆಗೆ ತಗುಲಿದ ವೆಚ್ಚವನ್ನೆಲ್ಲ ಪರಿಗಣಿಸಿದರೆ, ಪ್ರತಿ ಟಟಇಡ್ಡಿಗೆ ಅದು 3-4 ಡಾಲರ್ಗಳಿಗಿಂತಲೂ ಕಡಿಮೆಯಿರಲಾರದು ಎನ್ನುವುದಂತೂ ಖರೆ. ಪೆಟ್ರೋಲಿಯಂ ಮತ್ತು ತೈಲ ಸಚಿವಾಲಯದಲ್ಲಿ ನಿಮಗ್ಯಾರಾದರೂ ಗೆಳೆಯರಿದ್ದರೆ 'ಮೇಲ್ವೆಚ್ಚಗಳು' ಎಷ್ಟಾಗಬಹುದು ಎಂದು ಕೇಳಿ ನೋಡಿ(ಎಲ್ಲರ ಮೇಲೂ ನೀವು ಎಫ್ಐಆರ್ ಜಡಿದಿದುವುದರಿಂದ ಆ ಸಚಿವಾಲಯದಲ್ಲಿ ನಿಮ್ಮ ಗೆಳೆಯರಿರುವುದು ಅನುಮಾನ!), ಆಗ ನಿಮಗೆ ನಿಜವಾದ ಪರಿಸ್ಥಿತಿಯ ಅರಿವಾಗುತ್ತದೆ.
ನಿಮಗೆ ಗೊತ್ತೆ? ಒಂದು ವೇಳೆ ತೈಲ ಕಂಪನಿಯೊಂದು ಸಮುದ್ರ ಪ್ರದೇಶದಲ್ಲಿ ಹಣ ಹೂಡಿ, ಶೋಧನೆ ನಡೆಸಿ ಕೊನೆಗೆ, ಘಟಕ ಸ್ಥಾಪಿಸಿ ಕೊನೆಗೆ ಅದಕ್ಕೆ ವಾಣಿಜ್ಯಿಕವಾಗಿ ಹೊರತೆಗೆಯಬಹುದಾದ ಪ್ರಮಾಣದಲ್ಲಿ ತೈಲಿ ಸಿಗದೇ ಹೋದರೆ, ಆ ತೈಲ ಕಂಪನಿಗೆ ಸರ್ಕಾರದಿಂದ ಏನೇನೂ ಸಿಗುವುದಿಲ್ಲ. ಪೋಲಾದ ಹಣವೆಲ್ಲ ಆ ಕಂಪನಿಯ ಕುತ್ತಿಗೆಗೇ ಗಂಟಾಗುತ್ತದೆ! ಅಲ್ಲದೆ, ರಿಲಾಯನ್ಸ್ನ ಬಳಿ ಈಗ ಬಲವಾದ ನೈಸರ್ಗಿಕ ಹರಿವಿರುವ ಕೆಡಿ-ಡಿ6ನಂಥ ಲಾಭಕರವಾದ ಘಟಕವಿದ್ದರೂ ಕೂಡ, ಹೂಡಿದ ಹಣವನ್ನು ಸರಿದೂಗಿಸಬಲ್ಲಂಥ ಬೃಹತ್ ಆದಾಯವನ್ನು ತರದೇ ಹೋದರೆ ಏನಾಗುತ್ತದೆ ಗೊತ್ತೆ? ಸರ್ಕಾರಕ್ಕೇ ಲುಕ್ಸಾನಾಗಲಿದೆ! ಒಪ್ಪಂದದ ಪ್ರಕಾರ ಕಂಪನಿಯೊಂದು ತನ್ನ ಹೂಡಿಕೆಯ ಮೊತ್ತದಷ್ಟು ಲಾಭ ಗಳಿಸುವವರೆಗೂ ಸರ್ಕಾರಕ್ಕೆ ಅದರಿಂದ ದುಡ್ಡು ಬರುವುದಿಲ್ಲ. ಒಮ್ಮೆ ಹೂಡಿಕೆಗಿಂತ 2.5 ಪಟ್ಟು ಲಾಭ ಬರಲು ಶುರುವಾಯಿತೆಂದರೆ, ಅದರಲ್ಲಿ 85 ಪ್ರತಿಶತದಷ್ಟು ಹಣ ಸರ್ಕಾರಕ್ಕೆ ಹೋಗುತ್ತದೆ.
ಸರಳವಾಗಿ ಹೇಳಬೇಕೆಂದರೆ, ಒಮ್ಮೆ ರಿಲಾಯನ್ಸ್ ಖರ್ಚು ಸರಿದೂಗಿತೆಂದರೆ, ಅದು ಗಳಿಸಿದ ಹಣದಲ್ಲಿ 85 ಪ್ರತಿಶತದಷ್ಟು ಹಣ ಸರ್ಕಾರಕ್ಕೆ ಹೋಗಲಿದೆ. ಹಾಗಾಗೇ ರಿಲಾಯನ್ಸ್ ಗ್ಯಾಸ್ಗೆ ಹೆಚ್ಚು ಬೆಲೆ ನಿಗದಿ ಮಾಡಿದರೆ, ಅದಕ್ಕೆ ಬೇಗನೇ ಲಾಭವಾಗುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಸರ್ಕಾರಕ್ಕೇ ಹೆಚ್ಚಿನ ಆದಾಯ ಬರುತ್ತದೆ.
ಗ್ಯಾಸ್ಬೆಲೆ ದ್ವಿಗುಣಗೊಳಿಸುವುದು ಕೇವಲ ರಿಲಾಯನ್ಸ್ಗೆ ಸಂಬಂಧಪಟ್ಟ ವಿಷಯವಲ್ಲ. ರಿಲಾಯನ್ಸ್ಗಿಂತಲೂ 5 ಪಟ್ಟು ಹೆಚ್ಚು ಅನಿಲ ಉತ್ಪಾದಿಸುವ ಒಎನ್ಜಿಸಿ ಇದರ ಅತಿದೊಡ್ಡ ಫಲಾನುಭವಿಯಾಗಲಿದೆ. ನಿಜ ಹೇಳಬೇಕೆಂದರೆ ಯುಪಿಎದ 10 ವರ್ಷದ ಆಡಳಿತದಲ್ಲಿ ಡೀಸಲ್, ಎಲ್ಪಿಜಿ ಮತ್ತು ಕೆರೋಸೀನ್ಗೆ ಕೊಟ್ಟ 8,00,000 ವರೆಗಿನ ಸಬ್ಸಿಡಿಯಿಂದಾಗಿ ಅತಿ ಹೆಚ್ಚು ಹಾನಿಯಾಗಿರುವುದು ಒಎನ್ಜಿಸಿ, ಆಯಿಲ್ ಇಂಡಿಯಾ ಮತ್ತು ಗೇಯ್ಲ್ ಕಂಪನಿಗಳಿಗೇ. ಸಬ್ಸಿಡಿ ಕೊಟ್ಟೂ ಕೊಟ್ಟೂ ಒಎನ್ಜಿಸಿಯನ್ನು ಆರ್ಥಿಕವಾಗಿ ಹಳ್ಳ ಹಿಡಿಸಿದ್ದರಿಂದಲೇ ಈಗ ಯುಪಿಎ ಗ್ಯಾಸ್ ಬೆಲೆ ಹೆಚ್ಚಿಸಿ, ಅದರ ಕೈಗೆ ತುಸು ದುಡ್ಡು ಕೊಡಲು ಈ ಮೂಲಕ ನಿರ್ಧರಿಸಿದೆ.  
ಇಂಧನದ ಮೇಲಿನ ಸಬ್ಸಿಡಿಯಿಂದಾಗಿಯೇ ಇಂದು ರುಪಾಯಿ ಮೌಲ್ಯ ಕುಸಿದಿರುವುದು. ಯುಪಿಎ ಸರ್ಕಾರದ ಆರ್ಥಿಕ ಅಧೋಗತಿಗೆ ಮುಖ್ಯ ಕಾರಣವೆಂದರೆ, ತೈಲ ಬೆಲೆ ನಿಗದಿಯಲ್ಲಿ ಅದು ತೆಗೆದುಕೊಂಡ ತಪ್ಪು ನಿರ್ಧಾರಗಳು. ಮೋದಿಯವರ ಸರ್ಕಾರವೇ ಬರಲಿ ಅಥವಾ ನಿಮ್ಮದೇ ಸರ್ಕಾರ ಬಂದು ಕೂಡಲಿ; ಸರಿಯಾದ ಬೆಲೆ ನಿಗದಿಯಲ್ಲಿ ಸೋತರೆ ನಿಸ್ಸಂಶಯವಾಗಿಯೂ ಭಾರತದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಸಾಧ್ಯವಿಲ್ಲ. ಮಾರುಕಟ್ಟೆಯ ಮಾತನ್ನು ಇಂಥ ವಿಷಯದಲ್ಲಿ ಕೇಳಬೇಕಾಗುತ್ತದೆ. ಒಂದು ಸಮಯದಲ್ಲಿ ನೀವು, "ರಿಲಾಯನ್ಸ್ನ ತೈಲ ಬಾವಿಗಳು ನಮಗೆ ಸೇರಿದ್ದು. ಒಂದು ವೇಳೆ ಅದು ದೇಶದಲ್ಲಿ 'ಕೃತಕ ಕೊರತೆ'ಯನ್ನು ನಿರ್ಮಿಸುವುದಕ್ಕಾಗಿ ಗ್ಯಾಸ್ ಉತ್ಪಾದನೆಯನ್ನು ಮಾಡುತ್ತಿಲ್ಲವೆಂದರೆ, ಅದರ ಎಲ್ಲಾ ಘಟಕಗಳನ್ನು ವಶಪಡಿಸಿಕೊಂಡು ಅವುಗಳ ನಿರ್ವಹಣೆಯನ್ನು ಒಎನ್ಜಿಸಿಯಂಥ ಕಂಪನಿಗಳಿಗೆ ಕೊಟ್ಟುಬಿಡಬೇಕು" ಎಂದು ಹೇಳಿದ್ದೀರಿ.
ಅಲ್ಲಾ ಸ್ವಾಮಿ! ನೀವು ಕಂಪನಿಗಳಿಗೆಲ್ಲ 'ಬರಿ ಹೂಡಿಕೆಯ ಮೊತ್ತದ ಮೇಲೆ ಬರುವ 10-15 ರಷ್ಟು ಹಣವನ್ನು ಪಡೆಯಬೇಕು" ಎಂದು ಹೇಳಿದರೆ, ಅವೇಕೆ ಭಾರತದಲ್ಲಿ ಹೂಡಿಕೆ ಮಾಡುತ್ತವೆ ಹೇಳಿ? ದುಡ್ಡು ಹಾಕಿ ಕೈ ಸುಟ್ಟುಕೊಳ್ಳುವ ದರ್ದೇನಿದೆ ಅವಕ್ಕೆ? ಹಾಗೆ ನೋಡಿದರೆ ಹೂಡಿಕೆದಾರರು ಅಷ್ಟು ಮೊತ್ತವನ್ನು ಸರ್ಕಾರಿ ಬಾಂಡ್ಗಳಲ್ಲಿ ಅಥವಾ ಕಾರ್ಪೊರೇಟ್ ವಲಯದಲ್ಲಿ ಹಾಕಿ 9 ಪ್ರತಿಶತಕ್ಕಿಂತಲೂ ಹೆಚ್ಚು ಹಣ ಪಡೆಯುತ್ತಿದ್ದಾರೆ.  ನೀವು ಹೇಳಿದ ಹಾದಿಯಲ್ಲಿ ಸಾಗಿದರೆ ಉದ್ಯಮಗಳೆಲ್ಲ ಬಾಗಿಲು ಮುಚ್ಚಿಕೊಂಡು ಹೋಗುತ್ತವೆ.
ರಿಲಾಯನ್ಸ್ ಒಂದು ದಶಕದಿಂದ ಹರಾಜಿನಲ್ಲಿ 40-45 ತೈಲ/ಅನಿಲ ಘಟಕಗಳನ್ನು ಪಡೆದಿತ್ತು. ಅವೆಲ್ಲವನ್ನೂ ಅದೀಗ ಮರಳಿಸಿ, ಬೆರಳೆಣಿಕೆಯಷ್ಟು ಘಟಕಗಳನ್ನಷ್ಟೇ ಹೊಂದಿದೆ. ಆ ಕಂಪನಿಯ ಇತ್ತೀಚಿನ ಹೊಸ ಹೂಡಿಕೆಗಳೆಲ್ಲ ಅಮೆರಿಕ ಮತ್ತು ವೆನಿಜುವೆಲಾದಲ್ಲೇ ಇವೆ, ಭಾರತದಲ್ಲಲ್ಲ. ಏಕೆಂದರೆ ಅಲ್ಲಿ ಹೂಡಿಕೆಗೆ ಸೂಕ್ತಾದ ವಾತಾವರಣವಿದೆ. ಒಂದು ವೇಳೆ ಕಂಪನಿಯೊಂದು ತಪ್ಪು ಮಾಡಿದೆ ಎಂದು ಯಾರಾದರು ಪುರಾವೆ ಒದಗಿಸಿದರೆ ಅದು ಶಿಕ್ಷೆ ಅನುಭವಿಸಿಯೇ ತೀರುತ್ತದೆ ಬಿಡಿ. ಆಗಲಾದರೂ ನಿಮ್ಮ ಈ 'ಪರಮ ಪವಿತ್ರನೆಂಬ ವರ್ತನೆಯಿಂದ' ನಮಗೆ ಮುಕ್ತಿ ಸಿಗುತ್ತದೇನೋ?
ಈ್ಠ್ಟಟಿಣ ್ಛಛಠ್ಝಡಿಛಟ್ಝಡಟ ಬಗ್ಗೆ ನಿಮಗಿರುವ ಕಳವಳವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅದು ಯಾರು ಯಾವ ರೀತಿಯಲ್ಲಿ ಲಾಭ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ 'ಸಮಾಜವಾದದ ಉತ್ಪನ್ನ' ಎನ್ನುವುದು ನಿಮಗೆ ಗೊತ್ತಿರಲಿ. ಗ್ಯಾಸ್ ಬೆಲೆ ಪ್ರತಿ ಟಟಇಡ್ಡಿಗೆ 4 ಡಾಲರ್ಗಳಷ್ಟೇ ಇರಬೇಕು ಎಂಬ ನಿಮ್ಮ ವಾದವೂ ಇದೇ ಧಾಟಿಯಲ್ಲೇ ಇದೆ! ಇತ್ತೀಚೆಗೆ ನೀವು, "ನಾನು ವ್ಯಾಪಾರ ವಿರೋಧಿಯಲ್ಲ, ಪ್ರಾಮಾಣಿಕ ರಾಜಕೀಯಕ್ಕಾಗಿ ಹೋರಾಡುತ್ತಿರುವವ" ಎಂದು ಹೇಳಿದ್ದೀರಿ. ಆದರೆ 'ಪ್ರಾಮಾಣಿಕ ರಾಜಕೀಯ'ವೆಂದರೆ 'ಪ್ರಾಮಾಣಿಕ ಆರ್ಥಿಕತೆ'ಯೂ ಅಲ್ಲವೇ? ಅಲ್ಲದೆ ಅದು 'ಬಹಿರಂಗ ಪತ್ರಗಳನ್ನು' ಬರೆಯುತ್ತಿರುವ ನಿಮ್ಮ ಪ್ರಚಾರ ಪ್ರಿಯತೆಯ 'ಪ್ರಾಮಾಣಿಕ ಆತ್ಮಾವಲೋಕನವೂ' ಆಗಬೇಕಲ್ಲವೇ? ನೀವೇ ನಿರ್ಧರಿಸಿ! "

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement