ಜ್ಯೋತಿ ಗಿರೀಶ್ ಮತ್ತು ಅಖ್ತರ್ ಅಕ್ಷರ
ಹಿರಿಯ ಬರಹಗಾರ ಜಾವೇದ್ ಅಖ್ತರ್ ಒಂದು ಮಾತು ಹೇಳುತ್ತಾರೆ. ನಾನು...
ಗೆದ್ದೇ ಗೆಲ್ಲುವೆ ಒಂದು ದಿನ
ಹಿರಿಯ ಬರಹಗಾರ ಜಾವೇದ್ ಅಖ್ತರ್ ಒಂದು ಮಾತು ಹೇಳುತ್ತಾರೆ. ನಾನು ಒಂದು ಸಿನಿಮಾ ಕಥೆ ಬರೆಯುತ್ತೇನೆ ಅಂದುಕೊಳ್ಳಿ. ಆಗ ಅದು ಲಕ್ಷಾಂತರ ಜನಕ್ಕೆ ಇಷ್ಟವಾಗುತ್ತದಾ ಅಂತ ಯೋಚಿಸಲ್ಲ. ಮೊದಲು ಆ ಕಥೆ ನನಗೆ ಇಷ್ಟವಾಯಿತಾ ಅಂತ ಕೇಳಿಕೊಳ್ಳುತ್ತೇನೆ. ಇಷ್ಟವಾದರೆ ಕಥೆಯನ್ನು ಒಬ್ಬರು ಇಷ್ಟಪಟ್ಟರು ಅಂತಾಯಿತು. ಒಂದು ನೂರಾಗುವುದು ದೊಡ್ಡ ವಿಷಯವಲ್ಲ. ಈ ಪರಮ ಸತ್ಯವನ್ನು ಅರ್ಥ ಮಾಡಿಕೊಂಡವರು ಗೆಲ್ಲುತ್ತಾರೆ.
ನಾ ಬರೆದಿಲ್ಲ. ಇಷ್ಟು ಚಂದ ನಂಗೆ ಬರೆಯಕ್ಕೇ ಬರಲ್ಲ...ನಾ ಓದಿದ್ದು ಅಷ್ಟೇ...
ಜ್ಯೋತಿ ಗಿರೀಶ್ ಅವರ ಫೇಸ್ಬುಕ್ ವಾಲ್ನಲ್ಲಿ ಕಂಡ ಸಾಲುಗಳು ಇವು.
-------
ಖ್ಯಾತ ಕವಿ, ಸಾಹಿತಿ ಜಾವೇದ್ ಅಖ್ತರ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾ ಜ್ಯೋತಿಯವರು ತಾನು ಓದಿದ ಸಾಲುಗಳನ್ನು ಇಲ್ಲಿ ಹೇಳಿದ್ದಾರೆ.
ಜಾವೇದ್ ಅಖ್ತರ್ ಅವರ ಈ ಮಾತುಗಳು ಸ್ಪೂರ್ತಿದಾಯಕವೂ, ಸಮಯೋಜಿತವೂ ಆಗಿದೆ. ಬರಹಗಳು ಯಾವುದೇ ಆಗಿರಲಿ ಅದನ್ನು ಬರೆದ ನಂತರ ಬರಹಗಾರನಿಗೆ ಅದು ಇಷ್ಟವಾಗಬೇಕು. ಆತ ಬರೆದು ಮುಗಿಸಿ ಲೇಖನಿ ಕೆಳಗಿಡುವಾಗ ತನ್ನ ಬರವಣಿಗೆಯ ಬಗ್ಗೆ ಆತನಿಗೆ ತೃಪ್ತಿ ಸಿಗಬೇಕು. ಹೀಗಿದ್ದರೆ ಮಾತ್ರ ಆತ ಬರವಣಿಗೆಯಲ್ಲಿ ಸಂತೋಷವನ್ನು ಕಾಣಬಲ್ಲ.
ಒಬ್ಬ ಬರಹಗಾರನಾದವನು ತನ್ನ ಬರಹಗಳಲ್ಲಿ ಸದಾ ಸ್ವಾತಂತ್ರ್ಯವನ್ನು ಬಯಸುತ್ತಿರುತ್ತಾನೆ. ತನಗೆ ಹೇಳಲಾಗದೇ ಇರುವುದನ್ನು ಆತ ಬರಹದ ಮೂಲಕ ಹೇಳಬಲ್ಲ. ಹಾಗೆ ಹೇಳುವ ಮೂಲಕ ಆತ ತನ್ನ ಮನಸ್ಸಿನ ಸಂತೋಷವನ್ನೂ, ವೇದನೆಯನ್ನೂ ಹೊರಹಾಕುತ್ತಾನೆ. "ಹೇಳದೇ ಇರುವ ಕಥೆಯೊಂದನ್ನು ಮನಸ್ಸಲ್ಲಿ ಬಚ್ಚಿಟ್ಟಿದ್ದರೆ ಅದಕ್ಕಿಂತ ದೊಡ್ಡ ಬೇಗುದಿ ಬೇರೆ ಇಲ್ಲ "ಎಂದು ಹೇಳುತ್ತಾರೆ ಮಾಯಾ ಏಂಜೆಲೋ. ಬರಹಗಾರನಾದವನಿಗೆ ತನ್ನೆಲ್ಲಾ ಮನಸ್ಸಿನ ಮಾತುಗಳನ್ನು ಹೇಳಲು ಇರುವ ಏಕೈಕ ಮಾರ್ಗವೂ ಕೂಡಾ ಬರವಣಿಗೆಯೇ ಆಗಿರುತ್ತದೆ. ಹೀಗಿರುವಾಗ ಅವನಿಗೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಮುಖ್ಯವಾಗಿರುತ್ತದೆ.
ಉದಾಹರಣೆಗೆ ನೆಲ್ಸನ್ ಮಂಡೇಲಾ, ಗಾಂಧೀಜಿ ಸೆರೆಮನೆಯಲ್ಲಿದ್ದಾಗಲೂ ಬರೆದರು. ಇಲ್ಲಿ ಸೆರೆಮನೆಯ ಬಂಧನ ಅವರ ಬರವಣಿಗೆಗೆ ಧಕ್ಕೆ ತಂದಿರಲಿಲ್ಲ. ಅವರ ಮನಸ್ಸಿನ ಭಾವನೆಗಳನ್ನು ಅವರು ಮುಕ್ತವಾಗಿಯೇ ಬರೆದರು. ಆ ಮೂಲಕ ಅವರು ಇನ್ನೊಬ್ಬರಿಗೆ ಸ್ಫೂರ್ತಿಯಾದರು.
ಹಾಗೆಯೇ ಬರಹಗಾರನೊಬ್ಬ ತನ್ನ ಬರವಣಿಗೆಯ ಮೂಲಕ ಸ್ವಾತಂತ್ರ್ಯವನ್ನೂ, ತೃಪ್ತಿಯನ್ನೂ ಅನುಭವಿಸಬೇಕು. ಹೀಗಿದ್ದರೆ ಮಾತ್ರ ಆತ ಬರವಣಿಗೆಯನ್ನು ಆಸ್ವಾದಿಸಬಲ್ಲ. ಇದು ಆತನ ಗೆಲುವಿನ ರಹಸ್ಯವೂ ಆಗಿರುತ್ತದೆ.
ಈ ವಾರ ಫೇಸ್ಬುಕ್ನಲ್ಲಿ ಕಂಡಂತೆ ಅಂಕಣಕ್ಕಾಗಿ ಆಯ್ಕೆ ಮಾಡಿದ ಸ್ಟೇಟಸ್ ಜ್ಯೋತಿ ಗಿರೀಶ್ ಅವರದ್ದು
ಅವರ ಕಿರುಪರಿಚಯ
ಜ್ಯೋತಿ ಗಿರೀಶ್
ಬೆಂಗಳೂರು.
-ರಶ್ಮಿ ಕಾಸರಗೋಡು