ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದ್ರೋಹಿಗಳನ್ನು ಕ್ಷಮಿಸುತ್ತಿದ್ದರೆ ದೇಶದ ಉದ್ಧಾರ ಹೇಗೆ ಸಾಧ್ಯ?

Mainashree
Updated On : 17 Jul 2014, 9:36 am

ಮೂವರು ಹೆಂಡತಿಯರಿದ್ದೂ, ಮಗಳ ಮೇಲೆ ಅತ್ಯಾಚಾರ ಮಾಡಿದ ರಾಕ್ಷಸನಿಗೆ ಕಡಿವಾಣ ಹಾಕುವವರು ಯಾರು? ಹತ್ತು ಹೆಂಡತಿಯರಿದ್ದೂ ಹನ್ನೊಂದನೆಯವಳನ್ನು ಕಟ್ಟಿಕೊಳ್ಳಲು ಸಂಚು ನಡೆಸಿದವನನ್ನು ಶಿಕ್ಷಿಸದವರಿಗೆ ಯಾರು ಕಡಿವಾಣ ಹಾಕಬೇಕು? ಸಾವಿರಾರು ಅಮಾಯಕರ ಸಾವಿಗೆ ಕಾರಣರಾದ ಅವರ ಹೆಂಡತಿ ಮಕ್ಕಳು ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ 35 ಕೊಲೆ ಪಾತಕರಿಗೆ ನೀಡಿದ ಮರಣ ದಂಡನೆಯನ್ನು ರದ್ದು ಮಾಡಿದ ಪ್ರತಿಭಾ ಪಾಟೀಲರು ದೆಹಲಿಯಲ್ಲೇ ಇದ್ದರು. ಜೊತೆಯಲ್ಲಿ ರಿಮೋಟ್ ಕಂಟ್ರೋಲ್‌ನಿಂದ ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದ ಪ್ರಖ್ಯಾತಿ ಪಡೆದ ಸೋನಿಯಾ ಗಾಂಧಿಯವರೂ ದೆಹಲಿಯಲ್ಲಿದ್ದರು. ಮಹಿಳೆಯರ ಧ್ವನಿಯಾಗಬೇಕಿದ್ದ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಲ್ಲಿದ್ದರು. ಈ ಮೂವರು ಮಹಾ ಮಾತೆಯರಿದ್ದೂ ದೆಹಲಿಯಲ್ಲಿ ನಡೆದ ಅನಾಚಾರ, ಮಹಿಳೆಯರ ಹತ್ಯೆಗೆ ಲೆಕ್ಕವಿಲ್ಲ.
ಇತ್ತೀಚೆಗೆ ಪ್ರಕಟವಾದ ಸ್ಮಿತಾ ಶಂಕರ್ ಅವರ ಲೇಖನ ಸಮರ್ಥನೀಯ. ನಮ್ಮ ದೇಶದ ವಿಚಿತ್ರ ಕಾನೂನು ಒಂದು ಕೋಮಿಗೆ ಒಂದು ರೀತಿಯಾದರೆ, ಇನ್ನೊಂದು ಕೋಮಿಗೆ ಇನ್ನೊಂದು ರೀತಿ. ಕೆಲವರು ಹಣದಿಂದ ಕೆಲವರು ಪ್ರಭಾವದಿಂದ ಇನ್ನು ಕೆಲವರು ತಮಗೆ ನೀಡಿದ ವಿಶೇಷ ರಿಯಾಯ್ತಿಯಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನು ಕೆಲವು ವಿಕಾರ ಮನಸ್ಸಿನ ಹೇಳಿಕೆಗಳನ್ನು ಕೇಳಿ. 1.ಮಹಿಳೆಯರು ಕರಾಟೆ ಕಲಿಯಬೇಕು. 2. ಅತ್ಯಾಚಾರ ಮಾಡಲು ಬಂದವರನ್ನು ಅಣ್ಣಾ ಚೆನ್ನಾಗಿದ್ದೀರಾ ಅಂತ ಮಾತನಾಡಿಸಬೇಕು. 3. ಪ್ರತಿಯೊಬ್ಬರ ಮನೆಯಲ್ಲಿ ಹೆಂಗಸರಿಗೆ ರಕ್ಷಣೆ ಒದಗಿಸಲು ಹೇಗೆ ಸಾಧ್ಯ? 4. ಕೆಲವು ಗಂಡಸರು ತಪ್ಪು ಮಾಡುತ್ತಾರೆ. ಏನ್ ಮಾಡ್ಲಿಕ್ಕೆ ಆಗ್ತದೆ? ಇಂತಹ ತಲೆ ಕೆಟ್ಟ ಹೇಳಿಕೆ ಕೊಡುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ಇನ್ನು ಅನೇಕ ಸಿನೆಮಾಗಳಲ್ಲಿ, ಟಿವಿಗಳಲ್ಲಿ ಅನೇಕ ನಟಿಯರ ಅರೆಬರೆ ಬಟ್ಟೆಗಳ ಪ್ರದರ್ಶನ, ಅನೈತಿಕ ಸಂಬಂಧಗಳ ವೈಭವೀಕರಣಗಳಿಗೆ ತಡೆ ಹಾಕಬೇಕು. ಕೆಲವು ಧಾರಾವಾಹಿಗಳಂತೂ ಗಂಡ ಇನ್ನೊಬ್ಬಳೊಂದಿಗೆ ಸಂಬಂಧ ಬೆಳೆಸುವುದು, ಹೆಂಡತಿ ಪರಪುರುಷನೊಂದಿಗೆ ಇರುವುದನ್ನೇ ತಿರುಳಾಗಿಸಿಕೊಂಡಿವೆ. ಇಂತಹ ವಾಹಿನಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಟ್ಟುಗೋಲು ಹಾಕಬೇಕು. ಕಠಿಣ ಕಾನೂನು ಜಾರಿಯಾಗಬೇಕು.
ಇಂದು ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಅಂಕಗಳಿಸುವ ಮಷೀನ್‌ಗಳೆಂಬಂತೆ ಮಕ್ಕಳನ್ನು ನೋಡುತ್ತವೆ. ಇದಕ್ಕಾಗಿ ಎಲ್ಲಾ ಕಸರತ್ತನ್ನೂ ಮಕ್ಕಳಿಂದ ಮಾಡಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ, ನೈತಿಕ ಬೆಳವಣಿಗೆಗೆ ಅವಕಾಶವೆಲ್ಲಿದೆ? ಇನ್ನು ಮಕ್ಕಳಲ್ಲಿ ದೈವ ಚಿಂತನೆ ಬೆಳೆಸಲು, ನೈತಿಕಕತೆಗಳ ಮೂಲಕ ಹೆಣ್ಣನ್ನು ಸಹೋದರಿಯಂತೆ ಕಾಣುವ ಉತ್ತಮ ಸಂಸ್ಕಾರಕ್ಕೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಸಂಪೂರ್ಣ ಪ್ರಯತ್ನಿಸಬೇಕು. ಹಾಗೆ ಮನೆ ಮನೆಗಳಲ್ಲಿ ಭಜನೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಹರಿಕಥೆ, ಗಮಕ ಮುಂತಾದವುಗಳಿಂದ ಸಚ್ಚಾರಿತ್ರ್ಯ ವಾತಾವರಣ ಬೆಳೆಸಲು ಪ್ರಯತ್ನಿಸಿದರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಹುದಲ್ಲವೇ?
= ರಾಮಸುಬ್ರಾಯಶೇಟ್, ಚಿಕ್ಕಮಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement