ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಲೈಂಗಿಕ ಅರಿವಿಗೆ ಪಾಲಕರನ್ನೊಳಗೊಂಡ ಆಪ್ತ ಸಮಾಲೋಚನೆ ಸೂಕ್ತವೇ ಹೊರತು ಪಠ್ಯದ ಶಿಕ್ಷಣವಲ್ಲ

Mainashree
Updated On : 23 Jul 2014, 10:54 am

ಲೈಂಗಿಕ ಶಿಕ್ಷಣದ ಅವಶ್ಯವನ್ನು ಪ್ರತಿಪಾದಿಸುತ್ತಿರುವವರು ನೀಡುವ ಕಾರಣಗಳನ್ನು ಒಗ್ಗೂಡಿಸಿ ಹೇಳುವುದಾದರೆ, ಒಂದು, ಹೆಚ್ಚುತ್ತಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು. ಎರಡು, ಹೆಚ್ಚಾಗುತ್ತಿರುವ ಆಐಉಖ ಮೊದಲಾದ ಲೈಂಗಿಕ ಸಾಂಕ್ರಾಮಿಕ ರೋಗ ಪ್ರಕರಣಗಳು. ಮೂರನೆಯದು, ಲೈಂಗಿಕ ಆಚರಣೆಗೆ ಬಳಸುವ ಕಾಂಡೋಮ್, contraceptiveಗಳ ಬಳಕೆಯ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆ.
ಈ ಮೇಲಿನ ಕಾರಣಗಳಿಗಾಗಿ ನಾವು ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣ ಜಾರಿಗೆ ತರಬೇಕು ಎನ್ನುವುದಾದರೆ, ಅತ್ಯಾಚಾರವೆಂಬ ಪಿಡುಗು ಇಂತಹ ಶಿಕ್ಷಣದಿಂದ ದೂರವಾಗುವುದೇ ಎಂಬುದನ್ನು ವಿಚಾರಮಾಡುವುದು ಒಳಿತು. ಇನ್ನು ಎರಡನೆಯ ಕಾರಣ ಏಡ್ಸ್ ಮೊದಲಾದ ರೋಗಗಳ ಕುರಿತಾದದ್ದು. ಇದರ ನಿವಾರಣೆಗೆ contraceptive ಗಳ ಬಳಕೆಯ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಆದರೆ ಓದಿನಲ್ಲಿ ತೊಡಗಿಸಿಕೊಂಡವರಿಗೆ  condom ಹಾಗೂ  contraceptive ಬಳಕೆಯ ಬಗ್ಗೆ ಪಾಠ ಹೇಳುವುದು ಎಷ್ಟು ಸಮಂಜಸ? ಇವುಗಳ ಬಗ್ಗೆ ಕೂಲಂಕಷ ಆಲೋಚನೆ ಅತ್ಯಗತ್ಯ.
ಅತ್ಯಾಚಾರದ ಪಿಡುಗು ನಿವಾರಿಸಲು ಬೇಕಾಗಿರುವುದು ಕಾನೂನಾತ್ಮಕ ಇಚ್ಛಾಶಕ್ತಿ. ಅಂದರೆ ಹೊಸ ಕಾನೂನು ರೂಪಿಸುವುದೆಂದಾಗಲೀ, ಇರುವ ಕಾನೂನಿಗೆ ತಿದ್ದುಪಡಿ ತರುವುದಾಗಲೀ ಅಲ್ಲ. ಬದಲಾಗಿ ಇರುವ ಕಾನೂನನ್ನು ತೀಕ್ಷ್ಣವಾಗಿ ಕಾರ್ಯಗತಗೊಳಿಸುವುದು. ಪೊಲೀಸ್ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಸ್ಥಾನಗಳನ್ನು ಭರ್ತಿ ಮಾಡುವ ಕೆಲಸವಾಗಬೇಕು. ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಾಗರೀಕರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು (ಕಡೇ ಪಕ್ಷ ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ವಂತ ನಿವೇಶನ ಅಥವಾ ಮನೆಯುಳ್ಳವರ ವಿವರವನ್ನಾದರೂ ಸಂಗ್ರಹಿಸಿಟ್ಟುಕೊಳ್ಳುವುದು ಅತ್ಯವಶ್ಯಕ). ಅಂತೆಯೇ ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತಿರುವ ವ್ಯವಹಾರಗಳ ಬಗ್ಗೆ ಒಂದು ನಿಗಾ ಇಡುವುದು ಅತ್ಯಂತ ಸೂಕ್ತ. ಗಸ್ತು ತಿರುಗುವ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ವಿದ್ಯುತ್ ದೀಪದ ಕೊರತೆಯಿದೆಯೋ ಅದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಯಪಡಿಸುವುದು ಇವೇ ಮೊದಲಾದ ಕಾರ್ಯಗಳು ಕೇವಲ ಇಚ್ಛಾಶಕ್ತಿಯಿಂದಲೇ ಆಗುವಂಥದ್ದು. ಇನ್ನು callcenteಅಥವಾ ಇಕಿಕ ಗಳಲ್ಲಿ ಕೆಲಸಕ್ಕೆ ಹೋಗಿಬರುವ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೊಲೀಸರು ಸಂಬಂಧಪಟ್ಟ ಕಂಪನಿಗಳಿಂದ ಹಾಗೂ cab company ಗಳಿಂದ ಗಾಡಿಗಳ ವಿವರ ಮತ್ತು ಡ್ರೈವರ್‌ಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯವಶ್ಯಕ. ತಂತ್ರಜ್ಞಾನ ಮುಂದುವರೆದಿರುವ ಈ ಕಾಲದಲ್ಲಿ, ಕ್ಯಾಬ್‌ಗಳಲ್ಲಿ ಎಕಿಖಖ ಖಘಖಖಊಿಂ ಆಳವಡಿಸುವುದು ಅವಶ್ಯ. ಈ ರೀತಿಯಲ್ಲಿ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ಬದಲು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತೆ ಲೈಂಗಿಕತೆ ಬಗ್ಗೆ, ಗರ್ಭನಿರೋಧಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅಗತ್ಯ ಇದೆಯೇ?
ಪ್ರೌಢಾವಸ್ಥೆಗೆ ತಲುಪಲಿರುವ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸುವ ಮಧ್ಯಮ ವರ್ಗದ ಪೋಷಕರು ಇಂದಿಗೂ ಅವರ ಮನೆಗಳಲ್ಲಿ ತಮ್ಮ ಮಗಳಿಗೆ ಕಾಲೋಚಿತ ಹಿತನುಡಿಗಳನ್ನು ಹೇಳುತ್ತಾ ಬಂದಿದ್ದಾರೆ. ಇಂತಹ ವಿಚಾರಗಳನ್ನು ತಿಳಿಸಲೋಸುಗ ಶಾಲೆಯಲ್ಲಿ ಒಂದು ಶಿಕ್ಷಣದ ವ್ಯವಸ್ಥೆ ಜಾರಿ ತರುವ ಬದಲು, ಶಿಕ್ಷಕರು ಪೋಷಕರ ಸಹಯೋಗದೊಂದಿಗೆ ಕಾಲೋಚಿತ ಅಥವಾ ವಯೋವಾನಕ್ಕೆ ತಕ್ಕ ವಿಷಯಗಳ ಕುರಿತ ಸಂಗತಿಗಳನ್ನು ತಮ್ಮ ಮಕ್ಕಳಲ್ಲಿ ಚರ್ಚಿಸಿ ತಿಳಿಸುವಂತೆ ತಾಕೀತು ಮಾಡುವುದು ಅತ್ಯಂತ ಅರ್ಥಪೂರ್ಣ. ಇದು ಸಾಧ್ಯವಿಲ್ಲವೆಂದಲ್ಲ. ಹೇಗೆಂದರೆ, ಮಕ್ಕಳ ಮನೆಪಾಠ, ಪರೀಕ್ಷೆಯ ಪ್ರಗತಿ, ಶಾಲಾ ಕಾರ್ಯಕ್ರಮಗಳು ಇತ್ಯಾದಿಗಳ ಕುರಿತು ಪ್ರತಿನಿತ್ಯ ಸ್ಕೂಲ್‌ಡೈರಿ ಮೂಲಕವಾಗಿಯೋ ಅಥವಾ ಮುಂದುವರೆದ ಶಾಲೆಗಳಲ್ಲಿ ಮಿಂಚಂಚೆ ಇಲ್ಲವೇ ಮೊಬೈಲ್‌ಫೋನ್ ಸಂದೇಶದ ಮೂಲಕವೋ ಪೋಷಕರಿಗೆ ಸುದ್ದಿ ಮುಟ್ಟಿಸುವಲ್ಲಿ ಶಿಕ್ಷಣ ಸಂಸ್ಥೆಗಳು ತೊಡಗಿಸಿಕೊಂಡಿವೆಯಷ್ಟೆ. ಇದೇ ಮಾದರಿಯಲ್ಲಿ ಲೈಂಗಿಕ ವಿಚಾರಗಳಂತಹ ಗಂಭೀರ ವಿಷಯಗಳನ್ನು ಪೋಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಪ್ರೌಢಾವಸ್ಥೆಗೆ ಬಂದ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಜ್ಞರೋ ಅಥವಾ ಮನಃಶಾಸ್ತ್ರ ತಜ್ಞರನ್ನೋ ಒಳಗೊಂಡ ಒಂದು ಕಾರ್ಯಾಗಾರ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಧ್ಯವಿದೆಯಲ್ಲವೇ? ಅದಕ್ಕಾಗಿ ಪಠ್ಯದಲ್ಲೇ ಲೈಂಗಿಕ ಶಿಕ್ಷಣವನ್ನು ಅಳವಡಿಸುವುದು ಎಷ್ಟು ಸರಿ? ಸೂಜೀಲಿ ಹೋಗುವುದಕ್ಕೆ ಕೊಡಲಿ ಬೇಕೇ?
ಪೋಷಕರ ಗಮನಕ್ಕೆ ತರಬೇಕಾದ ಮತ್ತೊಂದು ಗಂಭೀರ ವಿಚಾರವೆಂದರೆ, ಶಾಲೆಗಳು ಮಕ್ಕಳ ಉಡುಪು ಮತ್ತು ಮೊಬೈಲ್ ನಿಷೇಧ, ಆಹಾರ ಬಗೆಗಿನ ಕೆಲವು ನಿಯಮಗಳನ್ನು ಅಥವಾ ಕಟ್ಟುಪಾಡುಗಳನ್ನು ಜಾರಿ ತರುವುದರಿಂದ ಮಕ್ಕಳ ಸ್ವಾತಂತ್ರ್ಯ ಹರಣವಾಗುತ್ತದೆಂದು ಯಾರೋ ಬುದ್ಧಿಜೀವಿಗಳು ಬೊಬ್ಬಿರಿಯುವುದನ್ನು ದಯವಿಟ್ಟು ಪೋಷಕರು ಉಪೇಕ್ಷಿಸಿ, ತಮ್ಮ ಮಕ್ಕಳ ಒಳಿತಿಗಾಗಿಯೇ ಇಂತಹ ಕ್ರಮಗಳೆಂಬುದನ್ನು ಮನಗಾಣಬೇಕು. ಮಕ್ಕಳನ್ನು ಸುಖವಾಗಿಡಬೇಕು ಎಂಬ ಹಂಬಲದಲ್ಲಿ, ಭೌತಿಕ ಸುಖಗಳನ್ನೆಲ್ಲಾ ಒದಗಿಸಿಕೊಡುವುದು ಅಪಾಯವೇ ಸರಿ. ನೈಟ್‌ಕ್ಲಬ್‌ಗಳಿಗೆ ಅನುಮತಿ ಬೇಕು ಎಂದು ಪ್ರದರ್ಶನ ನಡೆಸುವ ಬುದ್ಧಿಜೀವಿಗಳಿಂದ ಮಕ್ಕಳ ಬೆಳವಣಿಗೆ ಹಾಗೂ ಅವರಿಗೆ ಕೊಡಬೇಕಾದ ಶಿಕ್ಷಣದ ರೂಪುರೇಷೆ ಬಗ್ಗೆ ಅಭಿಪ್ರಾಯ ಕೇಳುವುದು ಮೂರ್ಖತನ.
'ಮಕ್ಕಳ ನಡುವೆ ಅಂತರವಿರಲಿ' ಎಂಬ ಧ್ಯೇಯದಿಂದ ಆರಂಭವಾದ ಕಾಂಡೋಮ್‌ಗಳ ಜಾಹಿರಾತು ಇಂದು ಅನೈತಿಕ ಸಂಬಂಧಗಳಿಗೆ ಉತ್ತೇಜನಕಾರಿಯಾಗಿರುವುದು ಎಂಥಹ ವಿಪರ್ಯಾಸ. ಅಂದರೆ, ಸ್ವೇಚ್ಛಾಚಾರಕ್ಕೆ, ಕ್ಷಣಿಕ ಸುಖ ಭೋಗಗಳಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಗೆ ಬುದ್ಧಿಮಾತು ಹೇಳಲು ಸಾಧ್ಯವಿಲ್ಲದಂತಾಗಿದೆ. ಇದು ಹಲವು ಪೋಷಕರ ಅಳಲು. ಕಾರಣ ಯುವಕರು ಗಳಿಸುವ ಹಣದ ಮುಂದೆ ಪೋಷಕರು ಕೂಡಿಟ್ಟಿರುವ ಹಣ ಯಾವ ಲೆಕ್ಕ? ಇಂಥಹ ಸಂದರ್ಭದಲ್ಲಿ ಮಾಧ್ಯಮಗಳು, ಸಿನಿಮಾಗಳು, ಜಾಹಿರಾತುಗಳು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವಂತೆ, ಯುವಜನರ ಹಾದಿ ತಪ್ಪಿಸಲು ನಾ ಮುಂದು ತಾ ಮುಂದು ಪೈಪೋಟಿ ನಡೆಸುತ್ತಿರುವುದು ಸರ್ವವಿಧಿತ. ಇಂತಹ ಡರ್ಬಿ ಕುದುರೆಗಳಿಗೆ ಕಡಿವಾಣ ಹಾಕಲು ಕಾನೂನನ್ನೇ ಬಲಯುತವನ್ನಾಗಿ ಮಾಡಬೇಕಷ್ಟೇ. ಲೈಂಗಿಕ ಶಿಕ್ಷಣದಿಂದ ನಾವು ಹೇಳುವುದಾದರೂ ಏನನ್ನು? ತಪ್ಪಾದ ಹೆಜ್ಜೆ ಇಟ್ಟರೆ ಹೆದರಬೇಡಿ, I-PILL, CONTRACEPTIVES ಮೊದಲಾದುವುಗಳಿವೆ. ಅವುಗಳ ಉಪಯೋಗ ಪಡೆದುಕೊಳ್ಳಿ ಎಂಬುದಾಗಿ. ಇದು ಎಷ್ಟು ಸಮಂಜಸ? ಮನೆಯಲ್ಲಿ ಟಿಂಚರ್, ಬ್ಯಾಂಡ್‌ಏಡ್ ಇದೆ ಎಂದು ಗಾಯ ಮಾಡಿಕೊಳ್ಳಲಾದೀತೇ?
ಲೈಂಗಿಕತೆಯ ಬಗ್ಗೆ ಪೋಷಕರಲ್ಲಿ ಜ್ಞಾನದ ಕೊರತೆ ಇದೆ ಎಂದು ಕೆಲವು ಬುದ್ಧಿವಾದಿಗಳ ಅಂಬೋಣ. ಇಂದಿಗೂ ಮಧ್ಯಮ ವರ್ಗದ ಕುಟುಂಬದವರು ಮದುವೆಗಳಲ್ಲಿ ಹಿರಿಯರು ವಧೂ-ವರರಿಗೆ ಲೈಂಗಿಕತೆಯ ಕುರಿತಾದ ಕೆಲವು ಕಿವಿಮಾತುಗಳನ್ನೂ, ಸಮಯೋಚಿತ ಉಕ್ತಿಗಳನ್ನು ಹೇಳಿ ಅವರನ್ನು ಶೋಭನ ಅಥವಾ ಪ್ರಸ್ಥಕ್ಕೆ ಅಣಿಮಾಡುವ ಪರಿಪಾಠ ಜಾರಿಯಲ್ಲಿದೆ. ಶ್ರೀಮಂತ ವರ್ಗಗಳು, ಸಿನಿಮೀಯ ಜೀವನಕ್ಕೆ ಮಾರಿಹೋದ ಕೆಲ ಕುಟುಂಬಗಳು ಇಂಥ ಸಂಸ್ಕಾರ ಕಾರ್ಯಗಳನ್ನು ಆಡಂಬರ ತೋರಿಸಿಕೊಳ್ಳುವ ವೈಭವದ ಸ್ಥಳಗಳಲ್ಲಿ ಆಚರಿಸುವುದರಿಂದ ಅಲ್ಲಿನ ಗೌಜಲ್ಲಿ ಹಿರಿಯರ ಕಿವಿಮಾತು ಕೇಳಿಸದು. ಪೋಷಕರಿಗೆ ಯಾವುದೇ ವಿಚಾರಗಳ ಬಗ್ಗೆ ಅರಿವಿಲ್ಲವೆಂದಲ್ಲ. ಮಕ್ಕಳಲ್ಲಿ ಇಲ್ಲ ಸಲ್ಲದ, ವಯಸ್ಸಿಗೆ ಮೀರಿದ ಕುತೂಹಲಗಳನ್ನು ಹುಟ್ಟಿಹಾಕುವುದು ಬೇಡವೆಂಬ ಕಾರಣದಿಂದಾಗಿ ಸಮಯದ ನಿರೀಕ್ಷೆಯಲ್ಲಿರುತ್ತಾರೆ.
ಇಷ್ಟೆಲ್ಲಾ ಸೂಕ್ಷ್ಮದಿಂದ ಕೂಡಿದ ಲೈಂಗಿಕ ಶಿಕ್ಷಣದ ವಿಚಾರವನ್ನು ಪಠ್ಯವನ್ನಾಗಿಸಲು ಹೊರಟರೆ, ಮಕ್ಕಳು ತಮ್ಮ ತಂದೆ ತಾಯಿಯರನ್ನು ಹೇಗೆ ನೋಡಬಹುದು? ತಂದೆ ತಾಯಂದಿರು ತಮ್ಮ ಮಕ್ಕಳೊಂದಿಗೆ ವ್ಯವಹರಿಸುವುದಾದರೂ ಹೇಗೆ? ವಿದೇಶದಲ್ಲಿ ಎಲ್ಲವೂ ಸಾಧ್ಯ. ಏಕೆಂದರೆ ಅಲ್ಲಿ ಅರ್ಥ, ಕಾಮಗಳೇ ಪರಮ ಪುರುಷಾರ್ಥ. ಇಲ್ಲಿ ಭಾರತ ಭೂಮಿಯಲ್ಲಿ ಧರ್ಮ, ಮೋಕ್ಷಗಳೆಂಬ ಇನ್ನೂ ಎರಡು ಪುರುಷಾರ್ಥಗಳನ್ನು ಅಂಗೀಕರಿಸಿದ್ದೇವೆ. ಇವೆಲ್ಲವೂ ಕೆಲ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಮೂಢನಂಬಿಕೆಗಳಾಗಿರಬಹುದು. ಆದರೆ, ಪಾಪ-ಪುಣ್ಯಗಳ ಭೀತಿ ಸಮಾಜದಲ್ಲಿ ಅರಾಜಕತೆಯನ್ನು ನಿಯಂತ್ರಿಸುವಲ್ಲಿ ಸಹಕರಿಯಾಗಿದೆ. ಹಾಗಾಗಿ ಗೌಪ್ಯ ವಿಚಾರಗಳನ್ನು ಕಾಲಕ್ಕನುಗುಣವಾಗಿ, ವಯೋಧರ್ವುಕ್ಕನುಗುಣವಾಗಿ ಸಾದರಪಡಿಸುವುದರಲ್ಲೇ ಸಮಾಜದ ಸ್ವಾಸ್ಥ್ಯವಿದೆ.

= ಎಚ್. ಚಂಪಕಧಾಮ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement