ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಒಂದೆಡೆ ಸಿಗಲಿ ವೈದ್ಯ ಮಾಹಿತಿ

ನಮ್ಮ ದೇಶದಲ್ಲಿ ಅನುಕೂಲಕರ ದರದಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ ಇನ್ನೂ ಸವಾಲಾಗಿಯೇ ಉಳಿದಿದೆ...

Rashmi Kasaragodu
Updated On : 10 Jun 2014, 12:02 pm

ನಮ್ಮ ದೇಶದಲ್ಲಿ ಅನುಕೂಲಕರ ದರದಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ ಇನ್ನೂ ಸವಾಲಾಗಿಯೇ ಉಳಿದಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರವು ಅನೇಕ ಕ್ರಮಗಳು ಹಾಗೂ ನೀತಿಗಳನ್ನು ಪರಿಚಯಿಸಿದೆಯಾದರೂ, ಅವಶ್ಯಕತೆ ಇರುವವರಿಗೆ ಔಷಧಗಳು ಇನ್ನೂ ಲಭ್ಯವಾಗುತ್ತಿಲ್ಲ. ಇ-ವಾಣಿಜ್ಯ, ತಂತ್ರಜ್ಞಾನದೊಂದಿಗೆ ಆರೋಗ್ಯರಕ್ಷಣೆಯ ಮೇಳೈಸುವಿಕೆಯ ಈ ಯುಗದಲ್ಲಿ, ಭಾರತದಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ನವೀಕರಿಸಿ, ಪುನಶ್ಚೇತನಗೊಳಿಸಬೇಕಿದೆ.
ಬೇನ್ ಕಂಪನಿಯ ವರದಿಯೊಂದರ ಪ್ರಕಾರ ಆರೋಗ್ಯರಕ್ಷಣೆಯ ನವೀನತೆಯ ದೃಷ್ಟಿಕೋನವು ಉತ್ಪನ್ನದಿಂದ ವಿತರಣೆ ಕಡೆಗೆ ಹೊರಳಲಿದೆ. ಆದ್ದರಿಂದ, ಈ ಕ್ಷೇತ್ರದಲ್ಲಿನ ಇತ್ತೀಚಿನ ಹೂಡಿಕೆಗಳು ಆರೋಗ್ಯರಕ್ಷಣೆ ವಿತರಣೆಯ ಹೊಸ ವಿಧಾನಗಳಿಗೆ ಸಂಬಂಧಿಸಿವೆ. ಆರೋಗ್ಯರಕ್ಷಣೆ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಬಲ ಸೇರ್ಪಡೆಗೊಳಿಸುವ ಕಾರ್ಯ ಬಹಳ ಕಾಲದಿಂದ ಬಾಕಿಯುಳಿದಿದ್ದು, ಇದು ಸಾಧ್ಯವಾದರೆ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿದೆ. ಭಾರತದ ಮೂಲೆಮೂಲೆಗೂ ಆರೋಗ್ಯ ರಕ್ಷಣೆ ಸೌಲಭ್ಯಗಳು ತಲುಪುವಂತೆ ತಂತ್ರಜ್ಞಾನವನ್ನು ಸಿದ್ಧಪಡಿಸಬೇಕು. ತಂತ್ರಜ್ಞಾನ ಆಧರಿತ ಗ್ರಾಹಕರ ವರ್ತನೆಯ ಬೆಳವಣಗೆಯಿಂದ ಈ ಸಮಸ್ಯೆಯನ್ನು ಬಹಳಷ್ಟು ಮಟ್ಟಿಗೆ ಪರಿಹರಿಸಬಹುದು ಹಾಗೂ ಮಾಹಿತಿ ವಿನಿಮಯದ ಮೂಲಕ ಅವಶ್ಯಕ ಹಾಗೂ ಲಭ್ಯವಿರುವ ಸೇವೆಯ ನಡುವಿನ ಅಂತರವನ್ನು ವಿಶಿಷ್ಟ, ಆದರೆ ಸರಳ ವಿಧಾನವಾಗಿಸಬಹುದು. ಪ್ರಸ್ತುತ ಲಭ್ಯವಿರುವ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸುವುದು ಇಲ್ಲಿ ಮುಖ್ಯವಾಗುತ್ತದೆ. ಲಭ್ಯವಿರುವ ಆಯ್ಕೆಗಳನ್ನು ಬಳಕೆದಾರರಿಗೆ ತಿಳಿಸುವ ಮೂಲಕ, ಅವರಿಗೆ ಅವಶ್ಯಕತೆ ಇರುವ ಆರೋಗ್ಯ ರಕ್ಷಣೆಯ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುವ ಅಗತ್ಯವಿದೆ ಹಾಗೂ ಈ ಮೂಲಕ ಬಳಕೆದಾರರಿಗೆ ಸರಿಯಾದ ಆಯ್ಕೆ ಮಾಡಿಕೊಳ್ಳಲು ನೆರವಾಗಬೇಕಿದೆ. ಇಂಟರ್ನೆಟ್ ಮೂಲಕ, ಮೊಬೈಲ್ ಉಪಕರಣಗಳ ಮೂಲಕ ಬಳಕೆದಾರರಿಗೆ ಸಾಕಷ್ಟು ಮಾಹಿತಿ ದೊರೆಯುತ್ತಿದೆ ಹಾಗೂ ಈ ಅಂತರ್ಜಾಲ ಚಾನೆಲ್ಗಳ ಬೆಳವಣಿಗೆ ಬಳಕೆದಾರರಿಗೆ ಪ್ರಾಥಮಿಕ ಮಾಹಿತಿಯ ಮೂಲವಾಗಲಿದೆ. ಒಂದು ವೇಳೆ ನಾವು ಆರೋಗ್ಯಸೇವೆ ಒದಗಿಸುವವರಿಗೆ ಬಳಕೆದಾರರೊಂದಿಗೆ ಸಂಪರ್ಕ ಕಲ್ಪಿಸಿದರೆ ಪರಿಸ್ಥಿತಿ ಕೂಡಲೇ ಸುಧಾರಿಸುತ್ತದೆ. ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಇ-ವಾಣಿಜ್ಯ ಸೌಲಭ್ಯವು ಕೇವಲ ಉತ್ಪನ್ನಗಳ ಖರೀದಿಗೆ ಮಾತ್ರ ಸೀಮಿತವಾಗಿವೆ. ಆದರೆ ಈ ಮಾಧ್ಯಮವು ಬಳಕೆದಾರರಿಗೆ ಅವರ ವೈದ್ಯರು, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಹಾಗೂ ತಮ್ಮ ಅಗತ್ಯಗಳಿಗೆ ಪೂರಕವಾದ ದರಗಳ ಮಾಹಿತಿಯೂ ಲಭ್ಯವಾಗುವ ವ್ಯವಸ್ಥೆ ಜಾರಿಯಾಗಬೇಕು. ಆರೋಗ್ಯರಕ್ಷಣೆ ಕ್ಷೇತ್ರವು ಶೂನ್ಯ ಸಹನೆ ವಲಯವಾಗಿರುವುದರಿಂದ ಇಲ್ಲಿ ಗುಣಮಟ್ಟ ನಿರ್ವಹಣೆ ಅನಿವಾರ್ಯ. ಈ ನಿಟ್ಟಿನಲ್ಲಿ ನಿರೀಕ್ಷಿತ ವ್ಯವಸ್ಥೆಗಳನ್ನು ಇ-ರೀಟೆಲರ್ಗಳು ಈಗಾಗಲೇ ಸ್ಥಾಪಿಸಿದ್ದಾರೆ. ಎಲ್ಲಾ ವೈದ್ಯರನ್ನು ಒಂದೇ ವೇದಿಕೆಯ ಮೂಲಕ ಸಂಪರ್ಕಿಸುವುದು ಹಾಗೂ ಬಳಕೆದಾರರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಮಾಡುವುದು ಬೃಹತ್ ಕಾರ್ಯವಾದರೂ, ಅಸಾಧ್ಯವೇನಲ್ಲ.
ಆರೋಗ್ಯರಕ್ಷಣೆಗೆ ಸಂಬಂಧಿಸಿದಂತೆ ಬಳಕೆದಾರರು ಗಮನಿಸುವ ಪ್ರಮುಖ ವಿಷಯಗಳು ದರ, ಸೌಲಭ್ಯ ಹಾಗೂ ಗುಣಮಟ್ಟ. ಈ ಎಲ್ಲಾ ಅಂಶಗಳನ್ನು, ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಸರಿಯಾದ ರೀತಿಯಲ್ಲಿ ಲಭ್ಯವಾಗಿಸಿದರೆ, ಜನರು ತಮಗೆ ಅನುಕೂಲಕರವಾದ ವೈದ್ಯಕೀಯ ಆಯ್ಕೆಯನ್ನು, ಆಸ್ಪತ್ರೆಯ ಒಳಗೆ ಹೋಗುವುದಕ್ಕಿಂತ ಮುಂಚಿತವಾಗಿಯೇ ಮಾಡುವುದು ಸಾಧ್ಯವಾಗುತ್ತದೆ. ಜನರು ತಮ್ಮ ಆರೋಗ್ಯ ರಕ್ಷಣೆಯ ನಿರ್ಧಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುಂತಾದರೆ ಭಾರತದಲ್ಲಿ ಆರೋಗ್ಯರಕ್ಷಣೆಯ ಬಳಕೆಯಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಪ್ರಸ್ತುತ ಭಾರತದ ಆರೋಗ್ಯರಕ್ಷಣೆಯ ಬೇರುಗಳು ವೈದ್ಯ ಹಾಗೂ ರೋಗಿಯ ನಡುವಿನ ವಿವಿಧ ಆಡಳಿತಾತ್ಮಕ ಹಾಗೂ ಸಂವಹನಾತ್ಮಕ ಅಡತಡೆಗಳಿಂದ ಬೇರ್ಪಟ್ಟಿವೆ. ಈ ತೊಂದರೆಯನ್ನು ಹೋಗಲಾಡಿಸಲು ಒಂದೇ ಮಾರ್ಗವೆಂದರೆ ವೈದ್ಯ ಹಾಗೂ ರೋಗಿಯ ನಡುವೆ ನಂಬಿಕಾರ್ಹ ವಾತಾವರಣವನ್ನು ನಿರ್ಮಿಸುವುದು ಹಾಗೂ ಲಭ್ಯತೆಯನ್ನು ಒದಗಿಸುವುದಾಗಿದೆ.

-ಡಾ. ಶ್ರೀನಿವಾಸನ್ ನಾರಾಯಣ
ಸ್ಥಾಪಕ ಡಾಕ್ಟ್ರಿ.ಇನ್ ವರ್ಚ್ಯುಯಲ್ ಆಸ್ಪತ್ರೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement