ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಕ್ಕರೆ ಕಾರ್ಖಾನೆಗಳು ರೈತರ ಮೇಲೆ ಸವಾರಿ ಮಾಡುತ್ತಿವೆ

ಕಬ್ಬು ಬೆಲೆ ನಿಗದಿ ಕುರಿತಂತೆ ಸಕ್ಕರೆ ಕಾರ್ಖಾನೆ, ಸರ್ಕಾರ, ಕಬ್ಬು ಬೆಳೆಗಾರರ...

Vishwanath S
Updated On : 29 Jun 2014, 1:14 am

ಕಬ್ಬು ಬೆಲೆ ನಿಗದಿ ಕುರಿತಂತೆ ಸಕ್ಕರೆ ಕಾರ್ಖಾನೆ, ಸರ್ಕಾರ, ಕಬ್ಬು ಬೆಳೆಗಾರರ ನಡುವಿನ ಗುದ್ದಾಟ ಕಳೆದ ಆರು ತಿಂಗಳಿಂದ ಬೀದಿ ರಂಪವಾಗಿದೆ. ಬಿಜಾಪುರದಲ್ಲಂತೂ ಕಳೆದ 12 ದಿನದಿಂದ ಜಿಲ್ಲಾಧಿಕಾರಿ ಕಚೇರಿಯ ಆವರಣ ಮುಷ್ಕರ, ಪ್ರತಿಭಟನೆಯ ತಾಣವಾಗಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರತಿಭಟನೆಯ ಬಿಸಿ ತಟ್ಟಿ ಪೊಲೀಸ್ ಭದ್ರತೆಯಲ್ಲಿ ಡಿಸಿ ಕಾರಿನಲ್ಲಿ ಪರಾರಿಯಾಗಬೇಕಾಯಿತು. ಕಬ್ಬು ಬೆಳೆಗಾರರ ಸಮಸ್ಯೆ, ಸಕ್ಕರೆ ಕಾರ್ಖಾನೆಗಳ ತೊಂದರೆ, ಅವರು ನೀಡಿದ್ದ ಭರವಸೆಯೇನು, ಇವರ ಬೇಡಿಕೆಯೇನು ಎಂಬ ಕುರಿತಂತೆ ರೈತ ಹೋರಾಟಗಾರ ಪಂಚಪ್ಪ ಕಲ್ಬುರ್ಗಿ ಅವರೊಂದಿಗೆ ಮಾತನಾಡಿದಾಗ...

ಆರಂಭದಲ್ಲಿ ಸಕ್ಕರೆ ಕಾರ್ಖಾನೆಗಳ ಜೊತೆ ರಾಜಿ ಮಾಡಿಕೊಂಡು, ಷೇರು ಖರೀದಿಸಿ ಅವರಿಂದ ಬೀಜ, ಗೊಬ್ಬರ ಎಲ್ಲವನೂ ಪಡೆದು, ನಿಮ್ಮ ಕಾರ್ಖಾನೆಗೇ ಕಬ್ಬು ಕೊಡುವುದಾಗಿ ಒಪ್ಪಂದ ಮಾಡಿಕೊಂಡು ಕಟಾವಿನ ಸಂದರ್ಭದಲ್ಲಿ ಹೆಚ್ಚಿನ ಬೆಲೆಗಾಗಿ ಬೀದಿರಂಪ ಯಾಕೆ?
ಅನದಾತರು ತಿರುಗಿ ಬೀಳುವ ಜಾಯಮಾನದವರಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ಬೆಲೆ ನಿಗದಿ ಸಮಿತಿ ಮುಂದೆ ಸರ್ಕಾರ ನಿಗದಿಪಡಿಸಿದ ದರ ನೀಡುವುದಾಗಿ ಒಪ್ಪಿಕೊಂಡಿದ್ದರು. ಈಗ ಆ ದರವನು ನೀಡಲು ಆಗುವುದಿಲ್ಲ ಎಂದು ಜಾರಿಕೊಂಡು ಹೈಕೋರ್ಟ್ ಮುಂದೆ ತಗಾದೆ ತಗೆದುಕೊಂಡು ಹೋಗಿದ್ದಾರೆ. ತಿರುಗಿ ಬಿದ್ದವರು ರೈತರೋ, ಸಕ್ಕರೆ ಕಾರ್ಖಾನೆ ಮಾಲೀಕರೋ?
 
ಪ್ರತಿ ಟನ್ ಕಬ್ಬಿಗೆ ರು. 2,000 ದರ ನೀಡಿದರೂ ಕಬ್ಬು ಬೆಳೆಗಾರರಿಗೆ  ಹಾನಿಯಾಗುವುದಿಲ್ಲ ಎಂಬ ವಾದವಿದೆಯಲ್ಲ?
ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರು. 2,000 ನೀಡುವುದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ರಾಜ್ಯದಲ್ಲಿ ಪ್ರತಿ ಎಕರೆಗೆ ಸರಾಸರಿ 40 ರಿಂದ 45 ಟನ್ ಕಬ್ಬು ಬೆಳೆಯಲಾಗುತ್ತದೆ. ರು. 1.10 ಲಕ್ಷ ಆದಾಯ ಬರುತ್ತದೆ. ಆದರೆ, ಒಂದು ಎಕರೆ ಕಬ್ಬು ಬೆಳೆಯಲು ರು. 1 ಲಕ್ಷ ಖರ್ಚು ತಗುಲುತ್ತದೆ. ಉಳಿದ ರು. 10,000 ರಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಹೇಗೆ?

ಒಂದು ಎಕರೆ ಕಬ್ಬು ಬೆಳೆಯಲು ಸಾಧಾರಣವಾಗಿ 40 ರಿಂದ 45 ಸಾವಿರ ಮಾತ್ರ ಖರ್ಚು ಬರುತ್ತದೆ ಎಂದು ಸಕ್ಕರೆ ಕಾರ್ಖಾನೆ ಮಾಲಿಕರು, ಕೆಲ ಕಬ್ಬು ಬೆಳೆಗಾರರೇ ಹೇಳುತ್ತಾರಲ್ಲ?
ಸಾಧ್ಯವೇ ಇಲ್ಲ. 40-45 ಸಾವಿರದಲ್ಲಿ ಕಬ್ಬು ಬೆಳೆಯಲು ಆಗೋದೇ ಇಲ್ಲ. ಎಷ್ಟೇ ಕಡಿಮೆ ಮಾಡಿದರೂ 80 ಸಾವಿರದಿಂದ 1 ಲಕ್ಷ ಬೇಕೇ ಬೇಕು. ಇನು ಕೆಲ ಪ್ರದೇಶದಲ್ಲಿ ಹೆಚ್ಚು ಇಳುವರಿ ಬರಬಹುದು. ಆಗ ರೈತರಿಗೆ ಸ್ವಲ್ಪ ಮಟ್ಟಿನ ಲಾಭ ಬರಬಹುದು. ಎಲ್ಲ ಪ್ರದೇಶಕ್ಕೂ ಇದನು ಅನ್ವಯ ಮಾಡಲು ಆಗೋದಿಲ್ಲ. ಕೆಲವೇ ಕೆಲ ನಿಗದಿತ ಪ್ರದೇಶದಲ್ಲಿ ಮಾತ್ರ ಇಳುವರಿ ಎಕರೆಗೆ 60-65 ಟನ್‌ವರೆಗೂ ಬರೋದಿದೆ.

ಕೆಲ ಸ್ವಯಂಘೋಷಿತ ರೈತ ಮುಖಂಡರು, ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಉದ್ದೇಶಕ್ಕಾಗಿ ಕಾರ್ಖಾನೆಗಳ ವಿರುದ್ಧ ರೈತರನು ಎತ್ತಿ ಕಟ್ಟುತ್ತಿದ್ದಾರಂತಲ್ಲ?
ರೈತರನು ಎತ್ತಿ ಕಟ್ಟುವ ಯೋಚನೆ ಕನಸು ಮನಸ್ಸಿನಲ್ಲಿಯೂ ಬಂದಿಲ್ಲ. ನನ ಜೊತೆಯಲ್ಲಿ ಹೋರಾಟ ಮಾಡುವ ರೈತ ಮುಖಂಡರಲ್ಲೂ ರೈತರನು ಒಕ್ಕಲೆಬ್ಬಿಸುವ, ಎತ್ತಿ ಕಟ್ಟುವ ಕೀಳು ಮಟ್ಟದ ವಿಚಾರ ಇಲ್ಲ. ರೈತರನು ಕಡೆಗಣಿಸಿದ ರಾಜಕಾರಣಿಗಳನಾಗಲಿ, ಸರ್ಕಾರವನಾಗಲಿ ಎಚ್ಚರಿಸಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದು ರೈತರನು ಎತ್ತಿ ಕಟ್ಟಿ ಹೋರಾಟಗಾರರು ಲಾಭ ಪಡೆಯಲು ಅಲ್ಲ. ನಾನೇನೂ ಮುಖ್ಯಮಂತ್ರಿ, ಪ್ರಧಾನಿಯಾಗಲಿಕ್ಕೆ ರೈತರನು ಮುಂದಿಟ್ಟುಕೊಂಡು ಕೊಳಕು ರಾಜಕೀಯ ಮಾಡುವವನಲ್ಲ. ಎಲ್ಲ ರೈತರು ಸೇರಿಕೊಂಡೇ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ.

ಕಬ್ಬು ಬೆಳೆಯಿಂದ ಲಾಭವಾಗದಿದ್ದರೆ, ರೈತರು ಪರ್ಯಾಯ ಬೆಳೆಯತ್ತ ನೋಡುತ್ತಿದ್ದರು. ಇದರಿಂದ ಕಬ್ಬು ಬೆಳೆ ಕ್ಷೇತ್ರ ಕಡಿಮೆಯಾಗಬೇಕು. ಅದರ ಬದಲಾಗಿ ಅದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯಲ್ಲ?
ರೈತರೂ ಮನುಷ್ಯರೇ. ಸಾಲದ ಬಾಧೆ ಹಾಗೂ ಪ್ರಾಪಂಚಿಕ ಖರ್ಚು ಹೆಚ್ಚಾಗುತ್ತಿದೆ. ಅದನು ನಿಭಾಯಿಸಲು ರೈತರು ಇನಷ್ಟು ಕ್ಷೇತ್ರದಲ್ಲಿ ಕಬ್ಬು ಬೆಳೆದರೆ ಹೊರೆ ಕಡಿಮೆಯಾಗುತ್ತದೆ ಎಂಬ ಭಾವನೆಯಿಂದ ಹೆಚ್ಚಿನ ಕ್ಷೇತ್ರದಲ್ಲಿ ಕಬ್ಬು ಬೆಳೆಯಲು ಆಸಕ್ತಿ ಹೊಂದುತ್ತಿದ್ದಾರೆ. ಹೀಗಾಗಿ ಕಬ್ಬು ಬೆಳೆ ಕ್ಷೇತ್ರ ಹೆಚ್ಚಾಗುತ್ತಿದೆ ಹೊರತು ಕಬ್ಬಿನಿಂದ ಸಿಗುವ ಲಾಭದ ಆಸೆಗಾಗಿ ಅಲ್ಲ.

 ಸಕ್ಕರೆ ಕಾರ್ಖಾನೆಗಳನು ನಂಬಿಕೊಂಡು ಕಬ್ಬು ಬೆಳೆಯುವ ಬದಲು ರೈತರೇ ಸ್ವತಃ ತಮ್ಮ ಹೊಲದಲ್ಲಿ ಬೆಲ್ಲ ತಯಾರಿಸುವ ಆಲೆಮನೆ ನಿರ್ಮಿಸಿ ಪರ್ಯಾಯ ಮಾರ್ಗ ಕಂಡುಕೊಳುತ್ತಿಲ್ಲ ಏಕೆ ?
ಆಲೆಮನೆ ನಿರ್ಮಿಸಿಕೊಂಡು ಮಾಡಬಹುದು. ಕಾರ್ಮಿಕರ ಕೊರತೆ, ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗಿದೆ. ಡಿಸೇಲ್ ಮಷಿನ್‌ನಿಂದ ಆಲೆಮನೆ ನಡೆಸುವುದು ದುಬಾರಿಯಾಗುತ್ತದೆ. ರೈತರು ಬೆಳೆದ ಕಬ್ಬು ಬೆಳೆಗಿಂತಲೂ ಹೆಚ್ಚಿನ ವೆಚ್ಚ ಆಲೆಮನೆಗೆ ನೀಡಬೇಕಾದ ಪರಿಸ್ಥಿತಿಯಿದೆ.

ಕಬ್ಬು ಬೆಳೆಯಿಂದ ಹಾನಿಯಾಗುತ್ತದೆ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತೀರಿ. ಆದರೆ, ಪರ್ಯಾಯ ಬೆಳೆ ಬೆಳೆಯಲು ಮನಸ್ಸು ಮಾಡುತ್ತಿಲ್ಲವೇಕೆ ?
ಸಕ್ಕರೆ ಕಾರ್ಖಾನೆಯವರ ಅನ್ಯಾಯಕ್ಕೆ ಬೇಸತ್ತು ರೈತರು ಪರ್ಯಾಯ ಬೆಳೆ ಕಂಡುಕೊಳ್ಳುತ್ತಿದ್ದಾರೆ. ಈಗಾಗಲೇ ರೈತರು ತೊಗರಿ, ಗೋವಿನ ಜೋಳ, ಸೂರ್ಯಪಾನ ಮುಂತಾದ ಪರ್ಯಾಯ ಬೆಳೆ ಬೆಳೆಯಲು ಆಸಕ್ತಿ ಹೊಂದುತ್ತಿದ್ದಾರೆ. ಒಂದೊಮ್ಮೆ ರೈತರು ಕಬ್ಬಿನ ಬೆಳೆ ಬೆಳೆಯುವುದನು ಬಿಟ್ಟು ಬೇರೆ ಬೆಳೆಗೆ ಹೆಚ್ಚಿನ ಒಲವು ತೋರಿದರೆ, ರೈತರಿಗೆ ಪ್ರತಿಯೊಂದರಲ್ಲೂ ಅನ್ಯಾಯ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು ಸಂಪೂರ್ಣ ಬಂದ್ ಆಗುತ್ತವೆ. ಸಕ್ಕರೆ ಕಾರ್ಖಾನೆ ಮಾಲೀಕರು ಇದನು ಅರಿತು ರೈತರಿಗೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕು.

ಕಬ್ಬು ಬೆಳೆಗಾರರ ಹೋರಾಟದಲ್ಲಿ ಒಗ್ಗಟ್ಟಿಲ್ಲ. ಹೋರಾಟಗಾರರಲ್ಲೂ ಪ್ರತಿಷ್ಠೆಯ ಪ್ರಶೆ ಕಾಡುತ್ತಿದೆಯೇ?
ಹೌದು. ನೀವು ಹೇಳುವ ಮಾತಿನಲ್ಲಿ ಸತ್ಯಾಂಶವಿದೆ. ದಕ್ಷಿಣ ಕರ್ನಾಟಕದ ಭಾಗದಲ್ಲಿಯೇ ಪುಟ್ಟಣ್ಣಯ್ಯ, ಕುರಬೂರ ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ ಅವರು ಎಲ್ಲರೂ ಒಂದೊಂದು ಪ್ರತ್ಯೇಕ ಸಂಘಟನೆ ಮಾಡಿಕೊಂಡು ರೈತರ ಸಮಸ್ಯೆಗಳ ನಿವಾರಣೆಗೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ. ಎಲ್ಲ ರೈತ ಹೋರಾಟಗಾರರು ತಮ್ಮ ಸಂಘಟನೆಗಳ ಅಸ್ತಿತ್ವ ಉಳಿಸಿಕೊಂಡು ಒಂದೇ ವೇದಿಕೆಯಲ್ಲಿ ಬರಬೇಕು. ರೈತ ಮುಖಂಡರು ಪ್ರತಿಷ್ಠೆ ಬದಿಗಿಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಹೆಚ್ಚಿದೆ. ಪ್ರತ್ಯೇಕ ಹೋರಾಟ ಮಾಡುವುದರಿಂದ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಅದರ ದುರ್ಲಾಭ ಪಡೆದುಕೊಳ್ಳುತ್ತವೆ. ಇದರಿಂದ ಸರ್ಕಾರಕ್ಕಾಗಲಿ, ಸಕ್ಕರೆ ಕಾರ್ಖಾನೆಗಳಿಗಾಗಲಿ ಯಾವುದೇ ಹಾನಿಯಿಲ್ಲ. ನಿಜವಾದ ಹಾನಿ ರೈತರಿಗೆ ಆಗುತ್ತಿದೆ.

ದಕ್ಷಿಣ ಕರ್ನಾಟಕದಲ್ಲಿ ರೈತರ ಹೋರಾಟ ನಡೆದರೆ ಉತ್ತರ ಕರ್ನಾಟಕದ ಹೋರಾಟಗಾರರು ಬೆಂಬಲ ನೀಡುವುದಿಲ್ಲ. ಉತ್ತರ ಕರ್ನಾಟಕದಲ್ಲಿ ರೈತರು ಹೋರಾಟ ನಡೆಸಿದರೆ ದಕ್ಷಿಣ ಕರ್ನಾಟಕದ ರೈತ ಮುಖಂಡರು ಹೋರಾಟಕ್ಕೆ ಬೆಂಬಲಿಸುತ್ತಿಲ್ಲ ಎಂಬ ಕೂಗು ಇದೆಯಲ್ಲ?
ದಕ್ಷಿಣ ಕರ್ನಾಟಕದಲ್ಲಿನ ರೈತರ ಹೋರಾಟಗಳಿಗೆ ನಾವು ಸಾಕಷ್ಟು ಸಲ ಬೆಂಬಲಿಸಿದ್ದೇವೆ. ಆದರೆ, ಅಲ್ಲಿನ ರೈತ ಮುಖಂಡರು ಉತ್ತರ ಕರ್ನಾಟಕದ ರೈತರ ಹೋರಾಟಗಳಿಗೆ ಸ್ಪಂದಿಸುವುದಿಲ್ಲ. ಇದು ಈ ಭಾಗದ ಎಲ್ಲ ರೈತರ ಕೊರಗೂ ಆಗಿದೆ. ಬಿಜಾಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 13 ದಿನಗಳಿಂದ ಕಬ್ಬು ಬೆಳೆಗಾರರ ಸಮಸ್ಯೆ ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ಕುರಬೂರ ಶಾಂತಕುಮಾರ ಅವರು ಮಾತ್ರ ಬಿಜಾಪುರಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ ಅವರು ಆಗಮಿಸಲಿಲ್ಲ.

ರಾಜ್ಯದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಜನಪ್ರತಿನಿಧಿಗಳೇ ಆಗಿದ್ದಾರೆ. ರೈತರ ಸಮಸ್ಯೆಗಳನು ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಆಡಳಿತ ಪಕ್ಷದ ಜನಪ್ರತಿನಿಧಿಗಳ ಕಿವಿ ಹಿಂಡುವ ಹುನಾರ ನಡೆಸಿದ್ದಾರೆಯೇ ?
ಇದನು ಸಂಪೂರ್ಣವಾಗಿ ಒಪ್ಪಿಕೊಳ್ಳಲಿಕ್ಕೂ ಬರುವುದಿಲ್ಲ. ಇಡಿಯಾಗಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ಜನಪ್ರತಿನಿಧಿಗಳು ಸಕ್ಕರೆ ಕಾರ್ಖಾನೆ ಮಾಲೀಕರು ಆಗುವುದು ತಪ್ಪಲ್ಲ. ರೈತರ ಮತ ಪಡೆದು ಅಧಿಕಾರದ ಗದ್ದುಗೆ ಹಿಡಿದ ನಂತರ ರೈತರ ಶ್ರೇಯೋಭಿವೃದ್ಧಿಯನು ಸಂಪೂರ್ಣ ಮರೆತು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಸ್ವಾರ್ಥ ಪರ ನಿಲುವು ತಾಳುವುದು ಅತ್ಯಂತ ಅಪಾಯಕಾರಿ. ಇದು ಇಡೀ ವ್ಯವಸ್ಥೆಯನೇ ಹಾಳು ಮಾಡುತ್ತದೆ. ಈಗ ಬಹಳಷ್ಟು ಜನಪ್ರತಿನಿಧಿಗಳು ರೈತರ ಹಿತವನು ಕಡೆಗಣಿಸಿರುವುದರಿಂದಲೇ ಇಂದು ರೈತರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ.


- ರುದ್ರಪ್ಪ ಆಸಂಗಿ, ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement