ಕಚಗುಳಿ ಟ್ವೀಟ್ಸ್
ಕಲ್ಪನೆ ಮಾಡಿಕೊಳ್ಳಿ... ಸಂಸತ್ತಿನಲ್ಲಿ ನೀರಸ ಕಲಾಪ ನಡೆಯುತ್ತಿರುತ್ತದೆ. ಇದೀಗ ಬಿಜೆಪಿ ಸೇರಿಕೊಂಡಿರುವ ರಾಖಿ ಸಾವಂತ್ ಇದ್ದಕ್ಕಿದ್ದಂತೆ ಸ್ಪೀಕರ್ ಬಳಿ ಸಾರಿ ಪರ್ದೇಸಿಯಾ ಅಂತ ಕುಣಿಯೋಕೆ ಶುರು ಮಾಡ್ತಾಳೆ...!
-ಡೊನಾಲ್ಡ್ ಡಕ್
ಸೋಷಿಯಲ್ ಮೀಡಿಯಾ ನಿಯಂತ್ರಿಸುವ ಆಸೆ ಇರಿಸಿಕೊಂಡಿರುವ ಕಾಂಗ್ರೆಸ್ ಟ್ವಿಟ್ಟರ್ ಅನ್ನು ಖರೀದಿಸುವುದು ಒಳ್ಳೆಯದು. ಆಗ ರಾಹುಲ್ ಗಾಂಧಿ, ಸ್ತ್ರೀ ಸಬಲೀಕರಣ, ಸೆಕ್ಯುಲರ್ ಎಂಬ ವಿಷಯಗಳೇ ಯಾವಾಗಲೂ ಟ್ರೆಂಡ್ ಆಗಿರುವಂತೆ ನೋಡಿಕೊಳ್ಳಬಹುದು.
-ಚೇತನ್ ಭಗತ್
ನಮ್ಮಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸುವುದು ತಲೆ ಉಳಿಸಿಕೊಳ್ಳಬೇಕು ಎಂದಲ್ಲ, ಜೇಬು ಉಳಿಸಿಕೊಳ್ಳುವುದಕ್ಕೆ!
-ಕುಹೂ
ಭಾರತದ ರಕ್ಷಣಾ ವ್ಯವಸ್ಥೆಗೆ ಎದುರಾಗಿರುವ ಬಹುದೊಡ್ಡ ಆತಂಕದ ಹೆಸರು ಪಾಕಿಸ್ತಾನ ಅಲ್ಲ, ಎ. ಕೆ. ಆ್ಯಂಟನಿ!
-ಸುಹೇಲ್ ಸೇಠ್