ಕವನ ಪ್ರಕಾಶಿಸುತ್ತಿದೆ
ನವಜಾತ ಶಿಶುವಿನ ಪಾದದಡಿ .. ಒಮ್ಮೆ ನಾಸಿಕವನ್ನು ಇಟ್ಟು ನೋಡಿ....ದೇವಲೋಕದ ಪರಿಮಳ ಸೂಸುತ್ತದೆ!
ನವಜಾತ ಶಿಶುವಿನ ಪಾದದಡಿ
ಒಮ್ಮೆ ನಾಸಿಕವನ್ನು ಇಟ್ಟು ನೋಡಿ
ದೇವಲೋಕದ ಪರಿಮಳ ಸೂಸುತ್ತದೆ!
----
ಅನುಭವವೂ, ಅನುಭೂತಿಯನ್ನೂ ಹಿಡಿದಿಡುವ ಈ ಸಾಲುಗಳಲ್ಲಿ ಕಂದನ ಮುಗ್ದತೆಯೂ, ನವಿರಾದ ಆಸ್ವಾದನೆಯ ಪರಿಯೂ ಇದೆ. ನವಜಾತ ಶಿಶುವಿನ ಪಾದದಡಿ ನಾಸಿಕನ್ನಿಟ್ಟು ನೋಡಿ ಎಂದು ಹೇಳುತ್ತಾ ಮೂರೇ ಮೂರು ಸಾಲುಗಳಲ್ಲಿ ಎಲ್ಲವನ್ನೂ ವಿವರಿಸುವ, ಅದ್ಭುತ ಕಲ್ಪನೆಯ ಈ ಕಿರುಕವನ ವಿಶಿಷ್ಟ ಅನಿಸಿದ್ದು ಈ ಕಾರಣದಿಂದಲೇ.
ಈ ವಾರ ಫೇಸ್ಬುಕ್ನಲ್ಲಿ ಕಂಡಂತೆ ಅಂಕಣಕ್ಕೆ ಈ ಆಯ್ಕೆ ಮಾಡಿಕೊಂಡ ಸ್ಟೇಟಸ್
ಪ್ರಕಾಶ್ ಶ್ರೀನಿವಾಸ್ ಅವರದ್ದು
ಅವರ ಪರಿಚಯ
ಪ್ರಕಾಶ್ ಶ್ರೀನಿವಾಸ್
ಬೆಂಗಳೂರು
-ರಶ್ಮಿ ಕಾಸರಗೋಡು