ಫಲಿತಾಂಶ ತವಕ ಚಿಲಿಪಿಲಿ ಅನೇಕ
ಈ ಸಂಚಿಕೆ ಓದುವ ವೇಳೆಗೆಲ್ಲ ಫಲಿತಾಂಶದ ಟ್ರೆಂಡ್ಗಳು ನಿಧಾನಕ್ಕೆ ...
ಈ ಸಂಚಿಕೆ ಓದುವ ವೇಳೆಗೆಲ್ಲ ಫಲಿತಾಂಶದ ಟ್ರೆಂಡ್ಗಳು ನಿಧಾನಕ್ಕೆ ಲಭ್ಯವಾಗುತ್ತಿದ್ದಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಮುನ್ನಾದಿನದ ತವಕ-ತಲ್ಲಣಗಳೇನಿದ್ದವು ಎಂಬುದರ ಬಿಂಬವನ್ನು ಈ ಟ್ವೀಟ್ಗಳು ಉಸುರುತ್ತಿವೆ. ಹೆಚ್ಚೆಂದರೆ 40 ಸ್ಥಾನಗಳಲ್ಲಿ ಮಾತ್ರ ವಿದ್ಯುನ್ಮಾನ ಮತಯಂತ್ರದ ಮೋಸ ಆಗಿರಬಹುದು. ನಮೋ ಅಲೆ ಉಳಿದೆಲ್ಲ ಕಡೆ ಅದನ್ನು ತಪ್ಪಿಸಿದೆ.
-ಸುಬ್ರಮಣಿಯನ್ ಸ್ವಾಮಿ
ಇವತ್ತು ಫೆಬ್ರವರಿ 14 ಅಲ್ಲದಿದ್ದರೂ ದೇಶದ ಯುವಜನತೆ ಇಷ್ಟು ಕಾತರದಿಂದ ಇರುವುದು ಇದೇ ಮೋದಲೇನೋ?
-ದ ಫಿಂಗರ್
ನಿಮ್ಮ ಜತೆಗೆ, ಇಲ್ಲವೇ ನಿಮ್ಮನ್ನು ಹೊರತುಪಡಿಸಿ ಅಂತ ಕಾಶ್ಮೀರದ ವಿಷಯದಲ್ಲಿ ಪಿವಿ ನರಸಿಂಹರಾವ್ ಪಾಕಿಸ್ತಾನಕ್ಕೆ ಹೇಳಿದ್ದರು. ಅದನ್ನೇ ನಮೋ ಪುನರುಚ್ಚರಿಸಬಹುದಾಗಿದೆ.
-ಸೆಂಟರ್ ಆಫ್ ರೈಟ್
ಜಯಲಲಿತಾ ನಿಜಕ್ಕೂ ಎನ್ಡಿಎ ಸೇರುವುದಕ್ಕೆ ವಿರುದ್ಧವಾಗಿದ್ದಾರೆಯೇ? ಅಥವಾ ಮಲಯಸ್ಮಾಮಿ ಈ ಬಗ್ಗೆ ಮಾತನಾಡಿದ್ದು ಇಷ್ಟವಾಗಲಿಲ್ಲವೇ?
-ಜಹಾಂಗೀರ್ ಪೋಚಾ
ಆಡ್ವಾಣಿಯವರನ್ನು ಸ್ಪೀಕರ್ ಮಾಡುವುದು ಉತ್ತಮ ಯೋಚನೆ ಅಲ್ಲವೇ ಅಲ್ಲ. ಪ್ರತಿಬಾರಿ ಮೋದಿ ಮಾತಿಗೆ ನಿಂತಾಗಲೂ ಅವರಿಗೆ ಅವಕಾಶ ಕಳೆದಂತೆ ಭಾಸವಾಗುತ್ತದೆ.
-ವಿನೋದ್ ಶರ್ಮ
ಮನಮೋಹನ ಸಿಂಗ್ ಅವರ ಮಡದಿ ಸೋನಿಯಾ ಮನೆಗೆ ತೆರಳಿದರಂತೆ- ರಿಮೋಟ್ ವಾಪಸ್ ಪಡೆಯುವುದಕ್ಕೆ.
-ಕಿರಣ್ಕುಮಾರ್ ಎಸ್.
ನೋಡಿ. ನರೇಂದ್ರ ಮೋದಿ ಪ್ರಧಾನಿಯಾಗುವುದು ಸಾಧ್ಯವಾದರೆ ಅದು ಅರ್ನಾಬ್ ಗೋಸ್ವಾಮಿಯವರು ತಮ್ಮ ನಿರ್ಗಮನ ಸಮೀಕ್ಷೆಯ ಅಂಶಗಳನ್ನು ಬದಲಿಸಿದ ನಂತರವಷ್ಟೇ ಎಂಬುದನ್ನು ಗಮನದಲ್ಲಿಡಬೇಕು.
-ರಾಜೀವ್ ಜುನೇಜ
ಸೆಕ್ಯುಲರ್ ಪಕ್ಷಗಳೆಲ್ಲ ಸೇರಿ ಕೋಮುವಾದಿ ಶಕ್ತಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂದಿದ್ದಾರೆ ಶಬನಮ್ ಹಷ್ಮಿ. ಅರೇ, ನಾವು ನ್ಯಾಯಸಮ್ಮತ ಚುನಾವಣೆ ಮುಗಿಸಿದ್ದೇವಲ್ಲವೇ? ಇನ್ನು ಈ ಮಾತಿಗೇನು ಅರ್ಥ?
-ಸುಚೇತ ದಲಾಲ್
ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ಅವರು ಚಹಾ ಪಾರ್ಟಿಯೊಂದನ್ನು ಹಮ್ಮಿಕೊಳ್ಳಬೇಕು ಮತ್ತು ಅದಕ್ಕೆ ಮಣಿಶಂಕರ್ ಅಯ್ಯರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕು.
-ಕೃಷ್ಣ
ಒಳ್ಳೆಯ ದಿನಗಳು ಬಂದಿವೆ. ಭಾರತದ ವಿಕಾಸ ಮತ್ತು ಸಮೃದ್ಧಿಯಾಗಲಿದೆ. ಬರಲಿದೆ ಮೋದಿ ಸರ್ಕಾರ.
-ಶಿವರಾಜ್ ಸಿಂಗ್ ಚೌಹಾಣ್
ಪಾಸ್ ಎಂದು ಮೊದಲೇ ಗೊತ್ತು. ಡಿಸ್ಟಿಂಕ್ಷನ್ನಾ, ರ್ಯಾಂಕಾ, ಫಸ್ಟ್ಕ್ಲಾಸಾ ಅನ್ನೋದೆಲ್ಲ ಬಗೆಹರಿಯಬೇಕಷ್ಟೆ.
-ಅಶೋಕ್
ಸುಬ್ರಮಣಿಯನ್ ಸ್ವಾಮಿಯವರು ಮೋದಿ ಸಂಪುಟದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಬಹುದು.
-ಫೇಕಿಂಗ್ ನ್ಯೂಸ್
ಬೇರುಮಟ್ಟದ ಆರೆಸ್ಸೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಮತ್ತು ಸಾಮಾಜಿಕ ತಾಣಗಳ ಅಭಿಮಾನಿಗಳು ಸೇರಿ ಮೋದಿಯವರನ್ನು ರಾಷ್ಟ್ರೀಯ ನಾಯಕರನ್ನಾಗಿಸಿದ್ದಾರೆ.
-ಪ್ರಸನ್ನ ವಿಶ್ವನಾಥ