ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಸೂಕ್ತ ಸಮಯ
ಪ್ರತಿ ವರ್ಷ ಮೇ, ಜೂನ್, ಜುಲೈ ತಿಂಗಳುಗಳು ಬಂದವೆಂದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಗೆ ಸೂಕ್ತ ಸಮಯ ಬಂದಂತೆಯೇ. ವೇತನದಾರರು ಹಾಗೂ ಪಿಂಚಣಿದಾರರು ಹಣಕಾಸಿನ ವರ್ಷ 2013-14 ಅಂದರೆ ತೆರಿಗೆ ನಿರ್ಧಾರಣಾ ವರ್ಷ 2014-15 ಗೆ ಸಂಬಂಧಪಟ್ಟಂತೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ 31ನೇ ಜುಲೈ 2014. ಈ ವರ್ಗಕ್ಕೆ ಸೇರಿದ ತೆರಿಗೆದಾರರು ತಾವೇ ಖುದ್ದಾಗಿ ರಿಟರ್ನ್ ಭರ್ತಿಮಾಡಿ ಸಲ್ಲಿಸಲು ಅನುಕೂಲವಾಗುವಂತೆ, ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಈಚಿನ ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಯು ಆನ್ಲೈನ್ ಮೂಲಕ ರಿಟರ್ನ್ಗಳನ್ನು ಸಲ್ಲಿಸಲು ಸಾಕಷ್ಟು ಒತ್ತು ನೀಡುತ್ತಿರುವುದರಿಂದ, ಅದರ ಬಗ್ಗೆಯೂ ವಿವರ ನೀಡಲಾಗಿದೆ. ಜೊತೆಗೆ, ಯಾರ ಒಟ್ಟು ವಾರ್ಷಿಕ ವರಮಾನ ((Gross Total Income) 5 ಲಕ್ಷ ಮೇಲ್ಪಟ್ಟಿದ್ದರೆ ಅಂಥವರು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಯಾರು ಸಲ್ಲಿಸಬೇಕು?: ಮೊದಲಿಗೆ ಆದಾಯ ತೆರಿಗೆ ರಿಟರ್ನ್ಗಳನ್ನು ಯಾವೊಬ್ಬ ನಾಗರೀಕನ ಒಟ್ಟು ವಾರ್ಷಿಕ ಆದಾಯವು ಅಧ್ಯಾಯ 6-ಎರ ಪ್ರಕಾರ ಲಭ್ಯವಿರುವ ಮುರಿತಕ್ಕಿಂತಲೂ ((Deductions) ಮುಂಚೆ ಆದಾಯ ತೆರಿಗೆಗೆ ನಿಗದಿಪಡಿಸಿರುವ ಗರಿಷ್ಠ ಮಟ್ಟ ಮೀರಿದ್ದರೆ, ಅಂಥವರೆಲ್ಲರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯ. ಇನ್ನು ಹಣಕಾಸಿನ ವರ್ಷ 2013-14 (ನಿರ್ಧಾರಣ ವರ್ಷ 2014-15) ಕ್ಕೆ ಅನ್ವಯವಾಗುವಂತೆ, ತೆರಿಗೆಗೆ ಒಳಪಡದ ಗರಿಷ್ಠ ಆದಾಯ ಮಿತಿ 60 ವರ್ಷಕ್ಕೆ ಮೀರದವರಿಗೆ ರುಪಾಯಿ 2,00,000, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರು. 2,50,000 ಹಾಗೂ 80 ವರ್ಷ ಮೇಲ್ಪಟ್ಟ ಅತಿ ಹಿರಿಯ ನಾಗರಿಕರಿಗೆ ರು. 5,00,000.
ಆದಾಯ ತೆರಿಗೆ ಇಲಾಖೆಯ ಬಗ್ಗೆ ಪೂರ್ಣ ಮಾಹಿತಿ ಎಲ್ಲಿ ಸಿಗುತ್ತದೆ?: ಆದಾಯ ತೆರಿಗೆಯ ಬಗ್ಗೆ ಪೂರ್ಣ ಮಾಹಿತಿ ಅದರ www.incometaxindia.gov.in ನಲ್ಲಿ ಸಿಗುತ್ತದೆ. ಇದರಲ್ಲಿ ಒಟ್ಟು ವಾರ್ಷಿಕ ಆದಾಯದಲ್ಲಿ ಲಭ್ಯವಿರುವ ಮುರಿತಗಳು ಹಾಗೂ ರಿಯಾಯಿತಿಗಳ ಬಗ್ಗೆ (rebates and concessions) ಅದರಲ್ಲೂ ಅಧ್ಯಾಯ 6 ಎ ಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಸಿಗುತ್ತದೆ.
ರಿಟರ್ನ್ ಸಲ್ಲಿಸಲು ನಿಗದಿತ ನಮೂನೆಗಳು ಯಾವುದು?: ಹಣಕಾಸಿನ ವರ್ಷ 2013-14ಕ್ಕೆ ಸಂಬಂಧಪಟ್ಟ ಹಾಗೆ ಆದಾಯ ತೆರಿಗೆ ಇಲಾಖೆಯು, ವೇತನದಾರರಿಗೆ ಹಾಗೂ ಪಿಂಚಣಿದಾರರಿಗೆ ಪ್ರಮುಖವಾಗಿ ಎರಡು ರಿಟರ್ನ್ ನಮೂನೆಗಳನ್ನು ನಿಗದಿಪಡಿಸಿದೆ.
ಐಖಿಖ-1: ಇದನ್ನು ವೇತನದಾರರು ಅಥವಾ ಪಿಂಚಣಿದಾರರು, ಒಂದೇ ಮನೆಯಿಂದ ವರಮಾನ ಹಾಗೂ ಬಡ್ಡಿ ಅಥವಾ ಇತರ ಮೂಲಗಳಿಂದ ವರಮಾನವಿದ್ದಲ್ಲಿ ಉಪಯೋಗಿಸಬೇಕಾಗುತ್ತದೆ. ಆದರೆ ಇನ್ಯಾವುದೇ ವ್ಯಾಪಾರ ಅಥವಾ ವೃತ್ತಿಯಿಂದ ವರಮಾನವಿದ್ದಲ್ಲಿ ಇದನ್ನು ಉಪಯೋಗಿಸುವಂತಿಲ್ಲ.
ಐಖಿಖ-2: ಇದಕ್ಕೆ ಹೊರತಾದ ವೇತನದಾರರು ಅಥವಾ ಪಿಂಚಣಿದಾರರು, ಒಂದಕ್ಕಿಂತ ಹೆಚ್ಚು ಮನೆಗಳಿದ್ದಲ್ಲಿ ಅಥವಾ ಬಂಡವಾಳವೃದ್ಧಿ ತೆರಿಗೆಯ (Capital Gains Tax) ವ್ಯಾಪ್ತಿಗೆ ಒಳಪಟ್ಟಲ್ಲಿ InAÁé-2 ರಿಟರ್ನ್ ಬಳಸಬೇಕಾಗುತ್ತದೆ. ಇಲ್ಲಿಯೂ ಸಹ ಇನ್ಯಾವುದೇ ವ್ಯಾಪಾರ ಅಥವಾ ವೃತ್ತಿಯಿಂದ ವರಮಾನವಿದ್ದಲ್ಲಿ InAÁé-2 -2ನ್ನು ಉಪಯೋಗಿಸುವಂತಿಲ್ಲ.
ಆನ್ಲೈನ್ನಲ್ಲಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ: ತೆರಿಗೆಯ ರಿಟರ್ನ್ ಸಲ್ಲಿಸುವವರು ಅಂತರ್ಜಾಲದ ಮೂಲಕ ತಮ್ಮ ರಿಟರ್ನ್ಗಳನ್ನು ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಈಚೆಗೆ ಒತ್ತು ನೀಡುತ್ತಿದೆ. ತಾವು ನೀಡಬೇಕಾದ ಎಲ್ಲಾ ಮಾಹಿತಿಯನ್ನು ಪೂರ್ವಭಾವಿಯಾಗಿ ತಯಾರಿಸಿಟ್ಟುಕೊಂಡಿದ್ದರೆ, ITR-1 ರಿಟರ್ನ್ ಕೇವಲ 10 ನಿಮಿಷಗಳಲ್ಲಿ ಭರ್ತಿಮಾಡಿ ಸಲ್ಲಿಸಬಹುದಾಗಿದೆ. ಈ ರೀತಿಯಲ್ಲಿ ರಿಟರ್ನ್ ಸಲ್ಲಿಸುವುದು ಒಂದು ಸರಳ ಪ್ರಕ್ರಿಯೆಯಾಗಿದ್ದು ಅದರ ವಿವಿಧ ಹಂತಗಳನ್ನು ಈ ಕೆಳಕಂಡಂತಿದೆ:
1) ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಆನ್ಲೈನ್ ತಾಣವಾದ www.incometaxindiaefiling.gov.in ಹೋಗಿ ಅಲ್ಲಿ ಒಂದು ಸಂಪರ್ಕದ ಹೆಸರು (User Name)ಹಾಗೂ ಗುಪ್ತ ಸಂಖ್ಯೆಯನ್ನು (password) ದಾಖಲಿಸಿ ಲಾಗಿನ್ ಆಗಬೇಕು. ಸಂಪರ್ಕದ ಹೆಸರು ಪಡೆಯಲು ಅರ್ಜಿದಾರರು ತಮ್ಮ ಪ್ಯಾನ್ ಸಂಖ್ಯೆ ಹಾಗೂ ತಮ್ಮ ಜನ್ಮ ದಿನಾಂಕವನ್ನು ದಾಖಲಿಸಬೇಕಾಗುತ್ತದೆ. ಮುಂದೆ ಪ್ರತಿಬಾರಿಯೂ ಈ ತಾಣಕ್ಕೆ ಹೋದಾಗ ಮಾಹಿತಿ ಪಡೆಯಲು ಇದನ್ನು ನಮೂದಿಸಬೇಕಾಗುತ್ತದೆ.
2)ಇಲಾಖೆಯ ವೆಬ್ಸೈಟ್ಗೆ ಲಾಗಿನ್ ಆದ ನಂತರ, ಮೇಲೆ ಮೂಡಿಬರುವ ಪಟ್ಟಿಯಲ್ಲಿ ಜ-ಜ್ಝಿಟಜ' ಆಯ್ಕೆಮಾಡಬೇಕು. ಅದರಡಿಯಲ್ಲಿ ಮೂಡಿಬರುವ ಪಟ್ಟಿಯಿಂದ `Prepare and submit online ITR''ಆಯ್ಕೆಮಾಡಿಕೊಳ್ಳಬೇಕು.
3)ನಂತರ ಮೂಡಿಬರುವ ಕಿಟಕಿಯಲ್ಲಿ ತಮ್ಮ ಪ್ಯಾನ್ ಸಂಖ್ಯೆ ದಾಖಲಿಸಿ, ತುಂಬಬೇಕಾದ ರಿಟರ್ನ್ ಸಂಖ್ಯೆ `ITR-1' ಹಾಗೂ ಕರ ನಿರ್ಧಾರಣಾ ವರ್ಷ (Assessment Year) 2014-15 ವನ್ನು ಆಯ್ಕೆಮಾಡಿಕೊಳ್ಳಬೇಕು. ರಿಟರ್ನ್ನಲ್ಲಿ ತಮ್ಮ ವಿಳಾಸದ ಮಾಹಿತಿಯನ್ನು ಪ್ಯಾನ್ ಮಾಹಿತಿಯಿಂದ ಅಥವಾ ಹಿಂದಿನ ವರ್ಷ ಸಲ್ಲಿಸಲಾದ ರಿಟರ್ನ್ನಿಂದ ಅಥವಾ ಬದಲಾಗಿದ್ದರೆ ಹೊಸದಾಗಿ ನಮೂದಿಸುವುದಾಗಿ ಆಯ್ಕೆ ಮಾಡಿಕೊಳ್ಳಬೇಕು. ಕೊನೆಗೆ ಈ ಎಲ್ಲಾ ಮಾಹಿತಿಯನ್ನು ಅದರಲ್ಲಿರುವ Submit ಬಟನ್ ಒತ್ತಿ ದಾಖಲಿಸಬೇಕು.
4)ಆಗ ITR-1 return form ಆನ್ಲೈನ್ನಲ್ಲಿ ಸಲ್ಲಿಸಲು ತೆರೆದುಕೊಳ್ಳುತ್ತದೆ. ಅದರ ಮೇಲಿರುವ ಬ್ಯಾಂಡ್ನಿಂದ ಮೊದಲಿಗೆ Instructions ಪುಟ ಆಯ್ಕೆ ಮಾಡಿಕೊಂಡು ಆನ್ಲೈನ್ನಲ್ಲಿ ರಿಟರ್ನ್ ಸಲ್ಲಿಸಲು ಕಂಪೂಟ್ಯರ್ನಲ್ಲಿ ಪಾಲಿಸಬೇಕಾದ ಸೂಚನೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
ಪುಟದ ಅಡಿಯಲ್ಲಿ ಸೂಚಿಸಿರುವಂತೆ ಮುಂದಿನ ಪುಟಕ್ಕೆ ಅಥವಾ ಹಿಂದಿನ ಪುಟಕ್ಕೆ ಹೋಗಬಹುದಾಗಿದೆ.
5)ನಂತರ ತೆರೆದುಕೊಳ್ಳುವ Personal Information ಪುಟದಲ್ಲಿ ಮೂಡಿಬರುವ ತಮ್ಮ ವೈಯುಕ್ತಿಕ ಮಾಹಿತಿಯನ್ನು ತೆರಿಗೆದಾರರು ಪರಿಶೀಲಿಸಿ, ಏನಾದರೂ ಬದಲಾವಣೆಗಳಿದ್ದರೆ ತುಂಬಬೇಕು. ಪುಟದ ಕೊನೆಯಲ್ಲಿ Submit, Save Draft and Exit ಎಂಬ ಮೂರು ಆಯ್ಕೆಗಳಿರುತ್ತವೆ. ಪ್ರತಿ ಪುಟದಲ್ಲಿ ಮಾಹಿತಿಯನ್ನು ತುಂಬಿದ ನಂತರ Save Draft ಬಟನ್ ಒತ್ತಿ ಅದನ್ನು ದಾಖಲಿಸಬೇಕಾಗುತ್ತದೆ. ಬೇಕಿದ್ದಲ್ಲಿ ಕೆಲವು ಸಮಯದ ನಂತರ ಪುನಃ ಅದೇ ವೆಬ್ಸೈಟಿಗೆ ಲಾಗಿನ್ ಆಗಿ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆಯನ್ನು ಮುಂದುವರೆಸಬಹುದು.
6) ನಂತರದ ಪುಟಗಳಾದ Income Details, Tax Details, Tax Paid, Verification and 80ಎರಲ್ಲಿ ತೆರಿಗೆದಾರರು ಮಾಹಿತಿಯನ್ನು ತುಂಬ ಬೇಕಾಗುತ್ತದೆ. ಎಲ್ಲಾ ಮಾಹಿತಿಯು ದಾಖಲಾಗಿ, ಅದರ ನಿಖರತೆಯ ಬಗ್ಗೆ ಮತ್ತೊಮ್ಮೆ ಖಚಿತ ಪಡಿಸಿಕೊಂಡ ಮೇಲೆ ತೆರಿಗೆದಾರರು ಕೊನೆಗೆ Submit ಬಟನ್ ಒತ್ತಿ ರಿಟರ್ನ್ ಸಲ್ಲಿಸಬೇಕಾಗುತ್ತದೆ.
7)ಕೆಲವೇ ಕ್ಷಣಗಳಲ್ಲಿ ಇಲಾಖೆಯು ರಿಟರ್ನ್ ಸಲ್ಲಿಸಿದ್ದಕ್ಕಾಗಿ ಒಂದು Transaction ID ಸಂಖ್ಯೆಯನ್ನು ನೀಡುತ್ತದೆ. ಮುಂದೆ ಏನಾದರೂ ತೊಂದರೆಯಾದಲ್ಲಿ, ಈ ಸಂಖ್ಯೆಯೊಂದಿಗೆ ಇಲಾಖೆಯ ಸಹಾಯ ಪಡೆಯಬೇಕಾಗುತ್ತದೆ. ಅದೇ ಪುಟದಲ್ಲಿ, ರಿಟರ್ನ್ ಸಲ್ಲಿಸಿದ್ದಕ್ಕೆ ಇಲಾಖೆಯು ನೀಡುವ ಸ್ವೀಕೃತಿ ರಸೀತಿ ಪಡೆಯಲು ITR V ಬಟನ್ ಒತ್ತಿದರೆ ಅದು pdf.file ಆಗಿ ಮೂಡಿಬರುತ್ತದೆ. pdf.file ಅನ್ನು ತೆರಿಗೆದಾರರು ತಮ್ಮ ಪ್ಯಾನ್ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ ಮುದ್ರಿಸಿಕೊಳ್ಳಬಹುದು ಹಾಗೂ ತಮ್ಮ ಕಂಪ್ಯೂಟರ್ನಲ್ಲಿಯೂ ದಾಖಲಿಸಬಹುದು. ಈ C ITR V ರಸೀತಿಯನ್ನು ತೆರಿಗೆದಾರರ ಇ-ಮೇಲ್ಗೂ ಇಲಾಖೆಯು ರವಾನಿಸುತ್ತದೆ.
8)ಈ ರೀತಿ ಮುದ್ರಿಸಿಕೊಂಡ ಸ್ವೀಕೃತಿ ನಮೂನೆಯನ್ನು (ITR-5) ತೆರಿಗೆದಾರರು ತಮ್ಮ ಸಹಿಯೊಡನೆ ಬೆಂಗಳೂರಿನಲ್ಲಿರುವ ಇಲಾಖೆಯ ಕೇಂದ್ರೀಕೃತ ಕಂಪ್ಯೂಟರ್ ಕೇಂದ್ರಕ್ಕೆ (CPC) ಸಾಧಾರಣ ಅಂಚೆಯ ಮೂಲಕ 120 ದಿನಗಳ ಒಳಗೆ ರವಾನಿಸುವುದರೊಂದಿಗೆ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯವಾಗುತ್ತದೆ.
9)ತಾವು ಸಲ್ಲಿಸಿರುವ ITR-V ರಿಟರ್ನ್ನ ಮುದ್ರಿತ ಪ್ರತಿಯನ್ನು ಅಥವಾ ITR-V ಸ್ವೀಕೃತಿ ರಸೀತಿಯ ಹೆಚ್ಚುವರಿ ಪ್ರತಿಗಳನ್ನು ಪಡೆಯಲು ಮೇಲೆ ತಿಳಿಸಿರುವ ಇಲಾಖೆಯ ವೆಬ್ಸೈಟಿಗೆ ಮೊದಲಿಗೆ ಲಾಗ್ಇನ್ ಆಗಬೇಕು. ನಂತರ Click to view Returns/forms ಆಯ್ಕೆ ಮಾಡಿಕೊಂಡರೆ, View Returns/forms ಕಿಟಕಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿರ್ಧಾರಣಾ ವರ್ಷ 2014-15 ಸಂಬಂಧಪಟ್ಟಹಾಗೆ ಅದರ Acknowledgement No. ಆಯ್ಕೆ ಮಾಡಿಕೊಂಡಾಗ, Details of Ackowledgement No ಎಂಬ ಕಿಟಕಿ ತೆರೆದುಕೊಳ್ಳುತ್ತದೆ. ಅದರಲ್ಲಿ ತಾವು ಸಲ್ಲಿಸಿರುವ ರಿಟರ್ನ್ ಬಗ್ಗೆ ಕಂಡುಬರುವ ITR-V / Ack. ÔÛVÚà ITR form ಗಳನ್ನು ಆಯ್ಕೆ ಮಾಡಿಕೊಂಡು ತಾವು ಸಲ್ಲಿಸಿರುವ ರಿಟರ್ನ್ನ ಪ್ರತಿ ಹಾಗೂ ಸ್ವೀಕೃತಿ ರಸೀತಿಯ ಹೆಚ್ಚುವರಿ ಪ್ರತಿಗಳನ್ನು ಪಡೆಯಬಹುದು ಹಾಗೂ ತಮ್ಮ ಕಂಪ್ಯೂಟರಿನಲ್ಲಿಯೂ ದಾಖಲಿಸಿಕೊಳ್ಳಬಹುದು.
ಆದಾಯ ರಿಟರ್ನ್ ಸಲ್ಲಿಸಲು ನಾಗರಿಕರು ಜುಲೈ 31 ಕೊನೆಯ ದಿನದವರೆಗೂ ಕಾಯುವುದು ಸರಿಯಲ್ಲ. ಸೂಕ್ತ ಪೂರ್ವಭಾವಿ ತಯಾರಿಯೊಡನೆ ಸಕಾಲದಲ್ಲಿ ರಿಟರ್ನ್ ಸಲ್ಲಿಸಿದಲ್ಲಿ ಅದು ಅವರಿಗೂ ಹಾಗೂ ಇಲಾಖೆಗೂ ಸಹಾಯಕವಾಗುತ್ತದೆ. ಇನ್ನು ಬೆಂಗಳೂರು ಹಾಗೂ ಇತರೆಡೆ ಜುಲೈ ತಿಂಗಳಿನ ಕೊನೆಯಲ್ಲಿ ಸ್ಥಾಪಿಸಲಿರುವ ವಿಶೇಷ ಕೇಂದ್ರಗಳಲ್ಲಿ ಆದಾಯ ತೆರಿಗೆ ಇಲಾಖೆಯವರೂ ಸಹ ತೆರಿಗೆದಾರರಿಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಸನ್ನದ್ಧರಾಗಿರುತ್ತಾರೆ. ಇದರ ಪ್ರಯೋಜನ ಪಡೆದು, ತಮ್ಮ ವಾರ್ಷಿಕ ಜವಾಬ್ದಾರಿಯನ್ನು ಎಲ್ಲಾ ತೆರಿಗೆದಾರರು ಸುಗಮವಾಗಿ ನಿರ್ವಹಿಸಿದಲ್ಲಿ ಅದು ದೇಶದ ಸಂಪನ್ಮೂಲ ಅಭಿವೃದ್ಧಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ. (ಲೇಖಕರ ಮೊಬೈಲ್ ಸಂಖ್ಯೆ 9845147080).
-ಬಿ.ಎಸ್. ಮನೋಹರ್, ಆರ್ಥಿಕ ತಜ್ಞರು