ಮೋದಿ ಎಂಬ ರೈಲ್ ಗಾಡಿಗೆ... ಕಾಂಗ್ರೆಸ್ ಎಂಬ ಲೂನಾ ಸಿಕ್ಕು...
ತಿಮ್ಮಾ: ಇನ್ನೂ ಯಾಕ್ ಹೋಗಿಲ್ಲ ಅವಾಡ/ಹೋಗ್ತೇನಿ ಅಂದಾವಾಡಡ..ಮೋದಿ ಪ್ರಧಾನಿ ಆದ ದೇಶದಾಗ ನಾ ಇರಾಂಗಿಲ್ಲಾ ಅಂದಾವಾಡಡ..
ತಮ್ಮಾ: ಇದೇನ ತಿಮ್ಮಾ ಬೇಂದ್ರೆ ಅಜ್ಜನ ಸ್ಟೈಲ್ನ್ಯಾಗ ಬ್ಯಾರೆ ಹಾಡಾ ಹಾಡಕತ್ತಿಯಲಾಡ!!
ತಿಮ್ಮಾ: ನಮ್ಮ ರಾಜ್ಯದ ಸಾಹಿತಿ ಒಬ್ಬರ ಅಲ್ಲ, ಕಿಂಗ ಖಾನಸಾಹೇಬರು ಹಿಂಗಡ ಹೇಳಿದ್ದರು. ಅದಕ್ಕ ನಾನು ಸಾಮೂಹಿಕವಾಗಲಿ ಅಂತ ಜೋರ ಜೋರ ಹಿಂಗ ಹಾಡಾಕತ್ತೇನಿ...
ತಮ್ಮಾ: ನೀ ಎಷ್ಟು ಜೋರ ಹಾಡಿದರೂ ಅವರೇನು ಬಿಟ್ಟು ಹೋಗಂಗಿಲ್ಲ, ಯಾರ ಗಾಡಿ ಖರ್ಚು ಕೊಟ್ಟಾರು, ಈ ಊರು ಈ ದೇಶ ಬಿಟ್ಟು ಹೋಗಂಗಿಲ್ಲ ನಾವು ಅಂತ ಪಟ್ಟ ಹಿಡಿದ ಕೂತಾರ ಈಗವರು.
ತಿಮ್ಮಾ: ಯಾಕ್?
ತಮ್ಮಾ: ಯಾಕಂದರ ಯಾವ ದೇಶದವರು ಇವರನ್ನ ಒಳಗ ಕರಕೊಳ್ಳಾಕಿಲ್ಲಾ ನೋಡ.
ತಿಮ್ಮಾ: ಹೌದಡ ಬಿಡಡ, ಆಗೋಂದು ಈಗ ಇನ್ನೋಂದು ಮಾತಾಡವರನ್ನ ಕಟಿಗೊಂಡ ಏನ್ ಮಾಡ್ತಾರ ಆ ದೇಶದವರು?
ತಮ್ಮಾ: ಇರಲಿ ಬಿಡ್ ತಿಮ್ಮಾ 125 ಕೋಟಿ ಜನಸಂಖ್ಯಾದಾಗ ಇಂಥವರೊಂದು ಅರ್ಧ ಗಿರ್ಧ ಪರಸೆಂಟ್ ಇದ್ದರ ಏನೂ ಫರಕ ಬೀಳುದಿಲ್ಲ...
ತಿಮ್ಮಾ: ಕರೆಕ್ಟ ಹೇಳಿದಿ... ಪ್ರಗತಿ ಬಯಸೋ ಜನಸಾಮಾನ್ಯ ನೀಡಿದ ಜನಾದೇಶಕ್ಕ ನಾ ನಾ ಅಂತ ಹಾರ್ಯಾಡವರೆಲ್ಲಾ ಸೋತ ಹೈರಾಣಾಗ್ಯಾರ ಇನ್ನ ಹಿಂದೋಂದೋ ಒಂದಡ ಕಾಲದಾಗ ಏನ್ ಕಾರಣಕ್ಕೂ ಪ್ರಸಿದ್ಧರಾದವರು ಹಿಂಗ ಬಡಬಡಿಸಿದರ ಏನ್ ಫರಕ ಇಲ್ಲ.
ತಮ್ಮಾ: ಅದಡ ಮಜಾ ನೋಡ, ಮೋದಿಯವರದು ಪ್ರಗತಿ ಮಂತ್ರ... ಮಾತಾಡಿದರ ದೇಶ ಮೊದಲು ಅಂತಾರ
ತಿಮ್ಮಾ: ಆದರ ಕನ್ನಡದಾಗಿನ ಕೆಲವು ಪ್ರಗತಿಪರರು ಬಿಜೆಪಿಗೆ ಬಹುಮತ ಬರಬಾರದಾಗಿತ್ತು... ಬಂದದ್ದು ನಮ್ಮ ದೇಶದ ದುರಂತ ಅಂತಾರಲಾಡಡ...
ತಮ್ಮಾ: ದುರಂತ ದೇಶದ್ದಲ್ಲ, ಅವರ ದುರಂತ...
ತಿಮ್ಮಾ: ಯಾಕಂತಿ?
ತಮ್ಮಾ: ಯಾಕಂದರ ಇವರ ಮಾತನ್ನ ಯಾರು ಕೇಳಂಗಿಲ್ಲ... ಇವರ ಹೇಳಿರೋದನ್ನ ಗಂಭೀರವಾಗಿ ಪರಿಗಣಿಸಂಗಿಲ್ಲ...
ತಿಮ್ಮಾ: ಒಟ್ಟನ್ಯಾಗ ಇವರಿಗೆ 'ಕ್ಯಾರೆ' ಅನ್ನವರು ಇರುದಿಲ್ಲ...
ತಮ್ಮಾ: ಹೌದು... ಇಷ್ಟ ದಿವಸ... ಅಲ್ಲಲ್ಲಿ ಇಷ್ಟ ವರ್ಷ ಇವರ್ಯಾರಿಗೆ ಗೌರವ ಕೊಟ್ಟಿದ್ದರು? ಇವರು ಯಾರ ಮಾತು ಕೇಳಿದ್ದರು.. ದೇಶ, ದೇಶದ ಭದ್ರತೆ... ದೇಶ ಪ್ರೇಮ... ನನ್ನವರಿಗಾಗಿ ಇದು ಅಂತ ಎಂದರೆ ಹೇಳ್ಯಾರಿವರು?
ತಿಮ್ಮಾ: ನನಗಂತು ನೆನಪಿಲ್ಲ ಬಿಡು...
ತಮ್ಮಾ: ನಿನಗೊಬ್ಬಗಡ ಅಲ್ಲ, ಯಾರಿಗೂ ನೆನಪಿಲ್ಲ... ಯಾಕಂದರ ಇವರು ಅಂಥಾ ಮಾತನ್ನು ಹೇಳೇಯಿಲ್ಲ...
ತಿಮ್ಮಾ: ಹೌದು ಇವರು ಏನಿದ್ದರು 'ನಾನು'... 'ನಂದು'... ಅಂತ ಬಾಜಾ ಭಜಂತ್ರಿ ಊದಿದವರು...
ತಮ್ಮಾ: ಖರೇ ಬಿಡು, ಆ ಉದಾತ್ತ ವ್ಯಕ್ತಿತ್ವದ ಹತ್ತರ ಸಹಿತ ಸುಳದಾಡಬಾರದು ಇವರು...
ತಿಮ್ಮಾ: ಈ ರೇಲ್ವೇ ಕ್ರಾಸಿಂಗ್ನ್ಯಾಗ ಬಾಯ್ ಮಿಸ್ಟೇಕ್ ಲೂನಾ ಮೋಪೆಡ್ಗೆ ಮತ್ತ ರೈಲಗಾಡಿಗೆ ಆ್ಯಕ್ಸಿಡೆಂಡ್ ಆದರ ಪರಿಣಾಮ ಏನಾಗಿತದಲಾಡಡ... ಹಾಂಗಾಗೇತಿ ಈ ಚುನಾವಣದಾಗ.
ತಮ್ಮಾ: ಆದರ ಬಿಜೆಪಿ ಮಂದಿ ಇದ್ದದ್ದನ್ನ ಇದ್ದಹಂಗ ಹೇಳಿ ಎದ್ದ ಬಂದಾರ ಅವರು. ಭ್ರಷ್ಟರನ್ನ ನಂಬಬ್ಯಾಡರಿ ಅಂದಾರ... ದೇಶ ಮಾರವರನ್ನ ಅಧಿಕಾರಕ್ಕ ತರಬ್ಯಾಡರಿ ಅಂತ ಹೇಳ್ಯಾರ... ದೇಶಕ್ಕ ಹೆದರಸೋ ಹುಂಬರನ್ನ ದೂರ ಇಡರಿ ಅಂತ ಕೇಳಿಕೊಂಡಾರ...
ತಿಮ್ಮಾ: ಹೌದು, ನಾವು ಹಿಂಗಡ ನಡಕೋತೇವಿ... ಅವರಿಗೆ ಅರವತ್ತು ವರ್ಷ ಅವಕಾಶ ಕೊಟ್ವೀರಿ. ನಮಗ 60 ತಿಂಗಳ ಕೋಡ್ರಿ ಅಂತ ವಿನಂತಿಸಿಕೊಂಡಾರ...
ತಿಮ್ಮಾ: ಯಸ್ ಆ ವಿನಂತಿಯೋಳಗ ವಿನಯ ಅದ, ದೇಶ ಪ್ರೀತಿ ಎದ್ದ ಕಾಣಸ್ತದ...
ತಿಮ್ಮಾ: ಹೌದರಿ, ಮೊನ್ನೆ ಪಾರ್ಲಿಮೆಂಟ್ನ್ಯಾಗ ಕಾಲಿಡೋದಕ್ಕಿಂತ ಮೊದಲ, ಮಂಡಿ ಊರಿ ನಮಸ್ಕಾರ ಮಾಡಿ, ಕಾಲಿಟ್ಟರಲ್ಲರಿ ಆ ಪುಣ್ಯಾತ್ಮ.!!
ತಮ್ಮಾ: ಹೌದು... ಆದರ ದಶಕಗಳಿಂದ ಆ ಹೊಸಲು ತುಳದ ಯಾವ ರಾಜಕಾರಣಿಗೂ ಅದೊಂದು ಪವಿತ್ರ ಸ್ಥಳ ಅನಿಸಿರಲಿಲ್ಲ...
ತಿಮ್ಮಾ: ಯಸ್, ಅದೊಂದು ಅಧಿಕಾರ ಚಲಾಯಿಸುವ ಕೇಂದ್ರ... ತಾನು ತನ್ನವರು ಶ್ರೀಮಂತರಾಗುವ ಸಾಧಿ ಅಂತ ಅನಕೊಂಡಿದ್ದರು ಅವರು.
ತಮ್ಮಾ: ಅದಕ್ಕ ಮಾಡಿದ್ದುಣ್ಣೋ ಮಾರಾಯಾ...
ತಿಮ್ಮಾ: ಆದರ ಸುಮ್ಮನ ಉಣಕೊಂಡ ಇರಲಾರದ... ಇದು ಗಿಮಿಕ್ಕು, ಪಬ್ಲಿಸಿಟಿ ಸ್ಟಂಟ್, ಕಾರ್ಪೋರೆಟ್ ಪದ್ಧತಿ ಪ್ರಚಾರ, ನಿಜವಾದ ಗೆಲುವು ಅಲ್ಲವೇ ಅಲ್ಲ ಅಂತಾರ.!!
ತಮ್ಮಾ: ಸಿಗಲಾರದ ದ್ರಾಕ್ಷಿ ಹುಳಿಯಪಾ... ಬೇಕಾದಷ್ಟು ಕಾರಣ ಕೊಡಬಹುದು ಬಿಡೋ... ನನ್ನ ಪ್ರಕಾರ ಮೋದಿ ಅವರ ಗೆಲುವಿಗೆ ಕಾರಣ ಹುಡುಕೋದಕ್ಕಿಂತ ತಾವು ಯಾಕ್ ಸೋತಿವಿ ಅಂತ ಸೋತವರು ಕಂಡಕೊಳ್ಳೋದರಾಗ ನಮ್ಮ ದೇಶದ ಪ್ರಗತಿ ಅದ ಅಂತ ಅನಸ್ತದಪಾ...
ಯಶವಂತ ಸರದೇಶಪಾಂಡೆ