ಎನ್ಸೆಫಲೈಟಿಸ್ ಸಿಂಡ್ರೋಮ್ online desk
ಅಂಕಣಗಳು

Encephalitis ಸಿಂಡ್ರೋಮ್ ಎಂದರೇನು?; ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)

ಮೆದುಳಿನ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯಿಂದ ಈ ರೋಗ ಉಂಟಾದಾಗ ಇದನ್ನು ಆಟೋಇಮ್ಯೂನ್ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ರೋಗಕ್ಕೆ ಯಾವುದೇ ಕಾರಣ ಕಂಡುಬರುವುದಿಲ್ಲ.

ಇತ್ತೀಚೆಗೆ ಗುಜರಾತ್ ರಾಜ್ಯವೊಂದರಲ್ಲಿಯೇ ಎನ್ಸೆಫಲೈಟಿಸ್ ಸಿಂಡ್ರೋಮ್‌ಗೆ ನಲವತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ದೇಶಾದ್ಯಂತ ಸಾರ್ವಜನಿಕ ಕಾಳಜಿಗೆ ಕಾರಣವಾಗಿದೆ. ಎನ್ಸೆಫಲೈಟಿಸ್ ಸಿಂಡ್ರೋಮ್ ಮೆದುಳಿನ ಉರಿಯೂತವಾಗಿದೆ. ಇದು ವೈರಲ್ ಅಥವಾ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳ ಸೋಂಕಿನಿಂದ ಉಂಟಾಗಬಹುದು ಅಥವಾ ರೋಗನಿರೋಧಕ ಕೋಶಗಳು ತಪ್ಪಾಗಿ ಮೆದುಳಿನ ಮೇಲೆ ದಾಳಿ ಮಾಡುವುದರಿಂದ ಉಂಟಾಗಬಹುದು. ಸೊಳ್ಳೆಗಳು ಮತ್ತು ಉಣ್ಣಿಗಳಂತಹ ಕೀಟಗಳಿಂದ ಈ ಸೂಕ್ಷ್ಮಾಣುಜೀವಿಗಳು ಮಾನವರಿಗೆ ಹರಡಬಹುದು.

ಎನ್ಸೆಫಲೈಟಿಸ್ ಎಂದರೇನು?

ಮೆದುಳಿನ ತಗುಲಿದ ಸೋಂಕಿನಿಂದ ಉರಿಯೂತ ಉಂಟಾದಾಗ ಅದನ್ನು ಸಾಂಕ್ರಾಮಿಕ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಮೆದುಳಿನ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯಿಂದ ಈ ರೋಗ ಉಂಟಾದಾಗ ಇದನ್ನು ಆಟೋಇಮ್ಯೂನ್ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ರೋಗಕ್ಕೆ ಯಾವುದೇ ಕಾರಣ ಕಂಡುಬರುವುದಿಲ್ಲ.

ಎನ್ಸೆಫಲೈಟಿಸ್ ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು. ಆದ್ದರಿಂದ ಇದರ ರೋಗನಿರ್ಣಯ ಮತ್ತು ಚಿಕಿತ್ಸೆ ತಕ್ಷಣವೇ ಪಡೆಯುವುದು ಮುಖ್ಯವಾಗಿದೆ ಏಕೆಂದರೆ ಎನ್ಸೆಫಾಲಿಟಿಸ್ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲು ಕಷ್ಟವಾಗುತ್ತದೆ.

ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಟೈಪ್ 1 ಮತ್ತು ಟೈಪ್ 2 ಎರಡೂ ಈ ರೋಗಕ್ಕೆ ಕಾರಣ. ಟೈಪ್ 1 ಶೀತ ಹುಣ್ಣುಗಳು ಮತ್ತು ಬಾಯಿಯ ಸುತ್ತಲೂ ಜ್ವರ ಗುಳ್ಳೆಗಳನ್ನು ಉಂಟುಮಾಡುತ್ತದೆ ಮತ್ತು ಟೈಪ್ 2 ಜನನಾಂಗದ ಹರ್ಪಿಸ್ಸಿಗೆ ಕಾರಣವಾಗುತ್ತದೆ. ಟೈಪ್ 1ನಿಂದ ಉಂಟಾಗುವ ಎನ್ಸೆಫಾಲಿಟಿಸ್ ಅಪರೂಪ ಆದರೆ ಗಮನಾರ್ಹವಾದ ಮೆದುಳಿಗೆ ಹಾನಿ ಅಥವಾ ಸಾವಿಗೆ ಕಾರಣವಾಗಬಹುದು.

ಎನ್ಸೆಫಲೈಟಿಸ್ ಲಕ್ಷಣಗಳು

ಎನ್ಸೆಫಲೈಟಿಸ್ ಬಂದರೆ ಗೊಂದಲ, ವ್ಯಕ್ತಿತ್ವದ ಬದಲಾವಣೆಗಳು ಅಥವಾ ಚಲನೆಯ ತೊಂದರೆ ಹಲವು ವಿಭಿನ್ನ ಲಕ್ಷಣಗಳು ಕಂಡುಬರಬಹುದು. ಸಾಮಾನ್ಯವಾಗಿ ತಲೆನೋವು. ಜ್ವರ. ಸ್ನಾಯುಗಳು ಅಥವಾ ಕೀಲುಗಳಲ್ಲಿ ನೋವು. ಆಯಾಸ ಅಥವಾ ದೌರ್ಬಲ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೇ ಕುತ್ತಿಗೆ ಬಿಗಿತ, ಮಾತಿನ ಅಥವಾ ಶ್ರವಣ ಸಮಸ್ಯೆಗಳು ಎದುರಾಗಬಹುದು. ಆಟೋಇಮ್ಯೂನ್ ಎನ್ಸೆಫಲೈಟಿಸ್ ರೋಗಲಕ್ಷಣಗಳು ಹಲವಾರು ವಾರಗಳವರೆಗೆ ನಿಧಾನವಾಗಿ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಾಂಕ್ರಾಮಿಕ ಎನ್ಸೆಫಲೈಟಿಸ್ ಮೆದುಳಿಗೆ ವೈರಸ್ ಸೋಂಕು ತಗುಲಿದಾಗ ಸಂಭವಿಸುತ್ತದೆ. ಇದು ಒಂದು ಭಾಗದ ಮೇಲೆ ಪರಿಣಾಮ ಬೀರಬಹುದು ಅಥವಾ ವ್ಯಾಪಕವಾಗಿರಬಹುದು.

ಕಾಯಿಲೆ ಉಲ್ಬಣಗೊಂಡಾಗ ಸ್ನಾಯುಗಳ ಸೆಡೆತ, ಸ್ನಾಯುಗಳು ನಿತ್ರಾಣವಾಗುವುದು, ಗೊಂದಲ, ಚಡಪಡಿಕೆ ಅಥವಾ ಮರೀಚಿಕೆಗಳನ್ನು ಕಾಣುವುದು, ಶ್ರವಣ ಶಕ್ತಿ ಕುಂದುವುದು, ಮಾತನಾಡಲು ತೊದಲುವುದು ಮತ್ತು ಸ್ಪರ್ಶ ಸಂವೇದನೆ ಕಡಿಮೆಯಾಗುವ ಲಕ್ಷಣಗಳು ಕಾಣಬಹುದು, ಕೆಲವು ಭಾಗಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಮುಖ ಹಾಗೂ ದೇಹದ ಪ್ರಮುಖ ಭಾಗಗಳಲ್ಲಿ ಪಾರ್ಶ್ವವಾಯು ಆವರಿಸುವುದು ಮತ್ತು ಪ್ರಜ್ಞೆಯೇ ಇಲ್ಲದಂತಿರುವ ಪರಿಸ್ಥಿತಿಗಳು ಉಂಟಾಗಬಹುದು.

ಎನ್ಸೆಫಲೈಟಿಸ್ ಗೆ ಚಿಕಿತ್ಸೆ

ಎನ್ಸೆಫಲೈಟಿಸ್ಸಿನ ಚಿಕಿತ್ಸೆಯು ಕಾರಣವನ್ನು ಅವಲಂಬಿಸಿ ಆಂಟಿವೈರಲ್ ಔಷಧಗಳು, ಆಂಟಿಬಯಾಟಿಕ್ಸ್ ಮತ್ತು ಇತರ ಔಷಧಿಗಳನ್ನು ಒಳಗೊಂಡಿರುತ್ತದೆ. ಲಸಿಕೆ ಅಥವಾ ಔಷಧಿಗಳು ಮತ್ತು ಪೋಷಕ ಆರೈಕೆ ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ರೋಗಲಕ್ಷಣಗಳನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ.

ಎನ್ಸೆಫಲೈಟಿಸ್ ತಡೆ ಹೇಗೆ?

ಎನ್ಸೆಫಲೈಟಿಸ್ಸನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು. ಆದ್ದರಿಂದ ಉತ್ತಮ ಆಂತರಿಕ ಮತ್ತು ಬಾಹ್ಯ ನೈರ್ಮಲ್ಯತೆಯನ್ನು ಎಲ್ಲರೂ ಪಾಲಿಸಬೇಕು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಮತ್ತು ಸಂಪೂರ್ಣವಾಗಿ ತೊಳೆಯಬೇಕು. ಶೌಚಾಲಯವನ್ನು ಬಳಸಿದ ನಂತರ ಮತ್ತು ಊಟದ ಮೊದಲು ಮತ್ತು ನಂತರ ಕೈಗಳನ್ನು/ಬಾಯಿಯನ್ನು ಶುಚಿಮಾಡಿಕೊಳ್ಳಬೇಕು.

ಆಹಾರ ಮತ್ತು ಊಟ/ತಿಂಡಿ ಮಾಡು ತಟ್ಟೆ, ಲೋಟ ಮತ್ತು ಪಾತ್ರೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಮನೆಯಲ್ಲಿ ಮತ್ತು ಹೊರಗಡೆ ಮಕ್ಕಳಿಗೂ ಸ್ವಚ್ಛವಾಗಿರುವ ಅಭ್ಯಾಸಗಳನ್ನು ಕಲಿಸಬೇಕು. ಮಕ್ಕಳಿಗೆ ಕೈ ಮತ್ತು ಕಾಲುಗಳಿಗೆ ಬಜೆ ಪುಡಿಯನ್ನು ಲೇಪಿಸಿದರೆ ಸೊಳ್ಳೆಗಳು ಕಡಿಯುವುದಿಲ್ಲ.

ಆರೋಗ್ಯವಾಗಿರಲು ಬೇಕಾದ ಎಲ್ಲಾ ಲಸಿಕೆಗಳನ್ನು ದೊಡ್ಡವರು ಮತ್ತು ಚಿಕ್ಕವರೂ ತಪ್ಪದೇ ಪಡೆದುಕೊಳ್ಳಬೇಕು.

ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಹೊರಗೆ ಹೋಗುವಾಗ ಅದರಲ್ಲಿಯೂ ಮಳೆಗಾಲದಲ್ಲಿ ಉದ್ದ ತೋಳಿನ ಶರ್ಟ್ ಮತ್ತು ಉದ್ದ ಪ್ಯಾಂಟ್ ಧರಿಸಿ.

ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಮುಸ್ಸಂಜೆ ಮತ್ತು ಮುಂಜಾನೆಯಲ್ಲಿ ಹೆಚ್ಚು ಹೊರಗೆ ಹೋಗಬಾರದು. ಸೊಳ್ಳೆಗಳು ಬಾರದಂತೆ ನಿವಾರಕ ರಸಾಯನಿಕಗಳನ್ನು ಬಳಸಬೇಕು. ಸೊಳ್ಳೆ ನಿವಾರಕವನ್ನು ಬಳಸಲು ಮಕ್ಕಳಿಗೆ ಸಹಾಯ ಮಾಡಬೇಕು. ರಾತ್ರಿಯಲ್ಲಿ ಸೊಳ್ಳೆ ಪರದೆ ಬಳಸಿ ನಿದ್ದೆ ಮಾಡಬೇಕು. ಸೂಕ್ತ ಕೀಟನಾಶಕಗಳನ್ನು ಮನೆಯ ಸುತ್ತ ಹಾಕಬೇಕು. ಸೊಳ್ಳೆಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಿಂದ ದೂರವಿರಿ.

ವಸತಿ ಸ್ಥಳಗಳ ಹತ್ತಿರ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಏಕೆಂದರೆ ನಿಂತ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತದೆ. ಅಲ್ಲಿ ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಇಡಬಹುದು. ಹೂಕುಂಡಗಳು ಅಥವಾ ಇತರ ತೋಟಗಾರಿಕೆ ಕಂಟೈನರ್‌ಗಳು, ಹಳೆಯ ಟೈರ್‌ಗಳು ಮತ್ತು ಮುಚ್ಚಿಹೋಗಿರುವ ಗಟಾರಗಳಲ್ಲಿ ನೀರು ನಿಲ್ಲಬಾರದು.

ಎನ್ಸೆಫಲೈಟಿಸ್ ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಉದ್ದೇಶಿತ ಮಧ್ಯಪ್ರವೇಶ ಮತ್ತು ಸಂಶೋಧನೆಗಳ ಮೂಲಕ ಈ ರೋಗವನ್ನು ನಿಯಂತ್ರಣಕ್ಕೆ ತರಲು ಭಾರತ ಸರ್ಕಾರವು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಗಳೊAದಿಗೆ ಕೆಲಸ ಮಾಡುತ್ತಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT