ಷೇರು ಮಾರುಕಟ್ಟೆ online desk
ಅಂಕಣಗಳು

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಇದು ಸಕಾಲವೇ? Success Formula ಗಳ ಬಗ್ಗೆ ಮಾಹಿತಿ (ಹಣಕ್ಲಾಸು)

ಇನ್ನೊಂದು ಚುನಾವಣೆ ಮುಗಿದು ಫಲಿತಾಂಶ ಕೂಡ ಬಂದಿದೆ. ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. (ಹಣಕ್ಲಾಸು-414)

ಇನ್ನೊಂದು ಚುನಾವಣೆ ಮುಗಿದು ಫಲಿತಾಂಶ ಕೂಡ ಬಂದಿದೆ. ಸುಸ್ಥಿರ ಸರಕಾರ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖ ಪಾತ್ರ ವಹಿಸುತ್ತದೆ. ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. ಕೋವಿಡ್ ಸಮಯದಲ್ಲಿ ಕಂಡ ಕುಸಿತ ಕಂಡಿತ್ತು. ಇದರರ್ಥ ಇದು ಹೂಡಿಕೆ ಮಾಡಲು ಸಕಾಲ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಈ ಮಟ್ಟದ ಕುಸಿತ ಕಾಣುವುದು ಅಪರೂಪವಾಗುತ್ತದೆ. ಹೀಗಾಗಿ ಹಣವುಳ್ಳವರಿಗೆ ಹೂಡಿಕೆಗೆ ಇದು ಸರಿಯಾದ ಸಮಯ. ಎಲ್ಲಿ ಹೇಗೆ ಎನ್ನುವುದಕ್ಕೆ ಒಂದಷ್ಟು ಹೂಡಿಕೆ ಸೂತ್ರಗಳನ್ನು ನೋಡೋಣ.

ವ್ಯಾಲ್ಯೂ ಇನ್ವೆಸ್ಟಿಂಗ್: ವಿಶ್ವವಿಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರು ತಮ್ಮ ಸಂಪತ್ತನ್ನು ಗಳಿಸಲು ಬಳಸಿದ ಸೂತ್ರವಿದು. ವ್ಯಾಲ್ಯೂ ಇನ್ವೆಸ್ಟಿಂಗ್ ಅಥವಾ ಇನ್ವೆಸ್ಟರ್ ಯಾವ ಸಂಸ್ಥೆಯ ಷೇರುಗಳ ಅದರ ಮೂಲಭೂತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುತ್ತದೆ ಅಂತಹ ಷೇರುಗಳನ್ನು ಖರೀದಿಸುತ್ತಾರೆ. ಅಂದರೆ ಷೇರಿನ ಇಂಟ್ರಿನ್ಸಿಕ್ ವ್ಯಾಲ್ಯೂ ಎಷ್ಟಿದೆ ಅದಕ್ಕಿಂತ ಕಡಿಮೆ ಇರುತ್ತದೆ. ಷೇರಿನ ನಿಜವಾದ ಮುಖಬೆಲೆ 50 ರೂಪಾಯಿ ಇರುತ್ತದೆ. ಆದರೆ ಹಲವಾರು ಕಾರಣದಿಂದ ಮಾರುಕಟ್ಟೆಯಲ್ಲಿ ಅದು 30 ರುಪಾಯಿಗೆ ಮಾರಾಟವಾಗುತ್ತಿರುತ್ತದೆ. ಫಂಡಮೆಂಟಲ್ ಅನಾಲಿಸಿಸ್ ಮೂಲಕ ಷೇರಿನ ನಿಜ ಬೆಲೆಯನ್ನು ತಿಳಿದುಕೊಳ್ಳಬಹುದು. ಹೀಗೆ ಮೂಲಭೂತ ಲಕ್ಷಣಗಳು ಸರಿಯಿದ್ದು ತಾತ್ಕಾಲಿಕವಾಗಿ ಷೇರಿನ ಬೆಲೆ ಕಡಿಮೆಯಿದ್ದಾಗ ಅಂತಹ ಷೇರನ್ನು ಗಮನಿಸಿ ಹೂಡಿಕೆ ಮಾಡುವುದು ಜಾಣತನ. ವಾರನ್ ಬಫೆಟ್ ಅವರ ಪೋರ್ಟ್ಫೋಲಿಯೋ ದಲ್ಲಿ ಇಂತಹ ಹೂಡಿಕೆಯನ್ನು ಕಾಣಬಹುದು.

ಇಂಡೆಕ್ಸ್ ಇನ್ವೆಸ್ಟಿಂಗ್: ಯಾವುದೇ ಒಂದು ನಿಖರ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡುವ ಬದಲು ಒಟ್ಟಾರೆ ಮಾರುಕಟ್ಟೆಯ ಸೂಚ್ಯಂಕದ ಮೇಲೆ ಹೂಡಿಕೆ ಮಾಡುವುದನ್ನು ಇಂಡೆಕ್ಸ್ ಇನ್ವೆಸ್ಟಿಂಗ್ ಎನ್ನಬಹುದು. ನಿಫ್ಟಿ, ಸೆನ್ಸೆಕ್ಸ್, S&P 500 ಹೀಗೆ ಹಲವಾರು ಸಂಸ್ಥೆಗಳ ಒಟ್ಟು ಪ್ರದರ್ಶನ ಸೂಚ್ಯಂಕವನ್ನು ಸೂಚಿಸುತ್ತದೆ. ಹೀಗಾಗಿ ಒಂದು ಸಂಸ್ಥೆ ಚೆನ್ನಾಗಿ ಪರ್ಫಾರ್ಮ್ ಮಾಡಿಲ್ಲದಿದ್ದರೂ ಇತರೆ ಅಂಶಗಳ ಕಾರಣ ಸೂಚ್ಯಂಕ ಮೇಲೇರುತ್ತದೆ. ಜೊತೆಗೆ ಇಲ್ಲಿನ ಹೂಡಿಕೆಯ ಮೇಲಿನ ಖರ್ಚು ಕೂಡ ಕಡಿಮೆ ಇರುತ್ತದೆ.

ಗ್ರೋಥ್ ಇನ್ವೆಸ್ಟಿಂಗ್: ಮುಂಬರುವ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದುವ ಅವಕಾಶ ಇರುವ ಷೇರುಗಳ ಮೇಲಿನ ಹೂಡಿಕೆಯನ್ನು ಗ್ರೋಥ್ ಇನ್ವೆಸ್ಟಿಂಗ್ ಎನ್ನಲಾಗುತ್ತದೆ. ಉದಾಹರಣೆಗೆ ಎಲೆಕ್ಟ್ರಿಕ್ ವೆಹಿಕಲ್ ತಯಾರಿಸುವ ಸಂಸ್ಥೆಯ ಮೇಲಿನ ಹೂಡಿಕೆಯನ್ನು ಗ್ರೋಥ್ ಇನ್ವೆಸ್ಟ್ ಎನ್ನಬಹುದು. ಎರಡು ವರ್ಷದ ಹಿಂದೆ ಟಾಟಾ ಮೋಟಾರ್ಸ್ ಷೇರಿನ ಬೆಲೆಗೂ ಇಂದಿನ ಬೆಲೆಗೂ ಇರುವ ವ್ಯತ್ಯಾಸವನ್ನು ಗಮನಿಸಿ

ಮೊಮೆಂಟಮ್ ಇನ್ವೆಸ್ಟಿಂಗ್: ಸಮಯಕ್ಕೆ ತಕ್ಕ ಹಾಗೆ ಕೆಲವೊಂದು ಷೇರುಗಳು ಏರಿಕೆಯನ್ನು ಕಾಣುತ್ತವೆ. ಅದಕ್ಕೆ ವಿಶೇಷ ಕಾರಣಗಳು ಇರುತ್ತವೆ , ಕೆಲವೊಮ್ಮೆ ಕಾರಣಗಳು ಬೇಕಿರುವುದಿಲ್ಲ . ಅಂದರೆ ಆ ಸಮಯದಲ್ಲಿ ಯಾವುದು ಟ್ರೆಂಡಿಂಗ್ನಲ್ಲಿರುತ್ತದೆ ಅದರಲ್ಲಿ ಇನ್ವೆಸ್ಟ್ ಮಾಡುವ ಪ್ರಕ್ರಿಯೆಗೆ ಮೊಮೆಂಟಮ್ ಇನ್ವೆಸ್ಟಿಂಗ್ ಎನ್ನಲಾಗುತ್ತದೆ.

ಇನ್ಕಮ್ ಇನ್ವೆಸ್ಟಿಂಗ್: ದೀರ್ಘಾವಧಿಗೆ ಸದಾ ಆದಾಯವನ್ನು ತಂದುಕೊಡುವ ಷೇರಿನ ಮೇಲಿನ ಹೂಡಿಕೆಯನ್ನು ಇನ್ಕಮ್ ಇನ್ವೆಸ್ಟಿಂಗ್ ಎನ್ನಲಾಗುತ್ತದೆ. ಬಾಂಡ್ಗಳ ಮೇಲಿನ ಹೂಡಿಕೆಯನ್ನು ಸಹ ಇಲ್ಲಿ ನಾವು ಪರಿಗಣಿಸಬಹುದು. ಒಟ್ಟಾರೆ ಡೆಟ್ ಅಥವಾ ಈಕ್ವಿಟಿಯಲ್ಲಿನ ಹೂಡಿಕೆ ನಿಗದಿತ ಆದಾಯವನ್ನು ದೀರ್ಘಾವಧಿಗೆ ಪಡೆಯುವ ಉದ್ದೇಶದಿಂದ ಮಾಡಿದ ಹೂಡಿಕೆಯನ್ನು ಇನ್ಕಮ್ ಇನ್ವೆಸ್ಟ್ಮೆಂಟ್ ಎನ್ನಲಾಗುತ್ತದೆ.

ಸೋಶಿಯಲ್ ರೆಸ್ಪೋನ್ಸಿಬಿಲಿಟಿ ಇನ್ವೆಸ್ಟಿಂಗ್: ಪ್ರಸಿದ್ದರು, ಹಣವಂತರು ತಮ್ಮ ಜೇಬು, ಹೊಟ್ಟೆ ತುಂಬಿದ ನಂತರ ಸಮಾಜದ ಒಳಿತಿಗಾಗಿ, ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ನೇರವಾಗಿ ಅಥವಾ ಇಂತಹ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದನ್ನು ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನ್ವೆಸ್ಟಿಂಗ್ ಎನ್ನಲಾಗುತ್ತದೆ.

ಜಗತ್ತಿನಲ್ಲಿ ಅತ್ಯಂತ ಪ್ರಸಿದ್ದರು ಯಶಸ್ವಿ ಹೂಡಿಕೆದಾರರ ದೊಡ್ಡ ಪಟ್ಟಿಯಿದೆ. ಅದರಲ್ಲಿ ನನಗಿಷ್ಟವಾದ ಮೂರು ಜನ ಹೂಡಿಕೆದಾರರ ಸೂತ್ರವನ್ನು ಇಲ್ಲಿ ನೀಡುತ್ತಿದ್ದೇನೆ.

Warren Buffett ಹೂಡಿಕೆ ಸೂತ್ರ

ಜಗದ್ವಿಖ್ಯಾತ ವಾರೆನ್ ಬಫೆಟ್ ಅವರದು ಅತ್ಯಂತ ಸರಳ ಸೂತ್ರ. ಆದರೆ ನೆನಪಿರಲಿ ಅತಿ ಸರಳ ಸೂತ್ರಗಳನ್ನು ಪಾಲಿಸಲು 99 ಪ್ರತಿಶತ ಜನ ಹೆಣಗುತ್ತಾರೆ. ಅದಕ್ಕೆ ನೋಡಿ ಜಗತ್ತಿನ ಸಂಪತ್ತಿನ 99 ಪ್ರತಿಶತ ಒಡೆತನ 1 ಪ್ರತಿಶತ ಜನರ ಕೈಲಿದೆ. ಇದನ್ನು ನೀವು ಕಲಿಯಬಹುದು.

  • ತಾಳ್ಮೆಯಿಂದ ಕಾದು ಹೂಡಿಕೆ ಮಾಡಬೇಕು: ಷೇರು ಮಾರುಕಟ್ಟೆಯ ದೊಡ್ಡ ಶತ್ರು ಆಸೆ ಮತ್ತು ಭಯ. ಅತಿ ದೊಡ್ಡ ಮಿತ್ರ ತಾಳ್ಮೆ. ಆದರೇನು ಮಾಡುವುದು ಕುಸಿತದಾಗ ನಾವು ಮಾರುತ್ತೇವೆ. ಏರಿಕೆಯಾದಾಗ ಕೊಳ್ಳುತ್ತೇವೆ. ಆದರೆ ಮಾಡಬೇಕಿರುವುದು ಇದಕ್ಕೆ ತದ್ವಿರುದ್ದ. ಏರಿಕೆಯಾದಾಗ ಮಾರಬೇಕು ಇಳಿಕೆಯಾದಾಗ ಕೊಳ್ಳಬೇಕು.

  • ಹೂಡಿಕೆಯಲ್ಲಿ ಭರವಸೆ ಇರಲಿ: ಜಸ್ಟ್ ಕೀಪ್ ಬಯಿಂಗ್. ಡೋಂಟ್ ಪ್ಯಾನಿಕ್ ಸೆಲ್: ಇಳಿಕೆ ಎನ್ನುವ ಭಯ ಬೇಡ ಕೀಪ್ ಬಯಿಂಗ್ ಎನ್ನುವುದು ಇವರ ಇನ್ನೊಂದು ಸೂತ್ರ. ಇವರ ಪ್ರಕಾರ ಸಮಾಜ , ವ್ಯಾಪಾರ ಎಲ್ಲವೂ ಏರಿಕೆ ಕಾಣಲೇಬೇಕು. ವರ್ಷದಿಂದ ವರ್ಷಕ್ಕೆ ಏರುವ ಹಣದುಬ್ಬರ , ಜನಸಂಖ್ಯೆ , ಡಿಮ್ಯಾಂಡ್ ಯಾವುದೂ ಕುಸಿಯಲು ಸಾಧ್ಯವಿಲ್ಲ. ಬದುಕಬೇಕಲ್ಲ, ಎಲ್ಲರಿಗೂ ಗ್ರೋಥ್ ಬೇಕು. ಹೀಗಾಗಿ ಕುಸಿತ ತಾತ್ಕಾಲಿಕ. ಕೊಳ್ಳುವ ಶಕ್ತಿಯಿದ್ದರೆ ಜಸ್ಟ್ ಕೀಪ್ ಆನ್ ಬಯಿಂಗ್ ಎನ್ನುತ್ತಾರೆ.

  • ಪಿಕ್ ಬಿಸಿನೆಸ್ ನಾಟ್ ಸ್ಟಾಕ್: ಇವರೇ ಮೂರನೇ ಸೂತ್ರ ಬಹಳ ಇಂಟೆರೆಸ್ಟಿಂಗ್. ಇದರ ಪ್ರಕಾರ ಸಂಸ್ಥೆ ನೋಡಿ ಷೇರು ಖರೀದಿಸಬೇಡ. ಅವರ ವ್ಯಾಪಾರ, ವಲಯ ನೋಡಿ ಖರೀದಿಸು ಎನ್ನುತ್ತಾರೆ. ಸಂಸ್ಥೆಯ ಹೆಸರು ಬಹಳ ಪ್ರಸಿದ್ಧವಿದ್ದು ಮುಂದಿನ ದಿನದಲ್ಲಿ ಆ ಸಂಸ್ಥೆಯ ವ್ಯಾಪಾರಕ್ಕೆ ಭವಿಷ್ಯವಿಲ್ಲದಿದ್ದರೆ ಏನು ಪ್ರಯೋಜನ. ಹೊಸ ಸಂಸ್ಥೆಯಾದರೂ ಭವಿಷ್ಯವಿರುವ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಎನ್ನುವುದು ಇವರ ಮೂರನೇ ಸೂತ್ರದ ಹೂರಣ.

Li ka Shing ಮಾಡಲ್

ಈತ ನನ್ನ ರೋಲ್ ಮಾಡಲ್. ಬಡತನದಲ್ಲಿ ಬದುಕು ಕಟ್ಟಿಕೊಂಡವರು 2023ರ ಜಗತ್ತಿನ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ 33 ನೇ ಸ್ಥಾನದಲ್ಲಿದ್ದರೆ. ವಯಸ್ಸು ಕೇವಲ 95!

  • ನಿಮ್ಮ ಮಾಸಿಕ ಆದಾಯ ಎಷ್ಟೇ ಇರಲಿ ಅದನ್ನು ನೀವು ಈ ಅನುಪಾತದಲ್ಲಿ ವಿಭಾಗಿಸಿ. 30%, 20%, 15%, 10%, ಮತ್ತು 25%. ನೂರು ರೂಪಾಯಿಯಲ್ಲಿ 30 ರೂಪಾಯಿ ಬದುಕಿಗೆ, ಊಟ ಬಟ್ಟೆ, ಬಡ್ಡಿಗೆ ಸಕಲವೂ ಇದರಲ್ಲಿ ಆಗಬೇಕು. 20 ರೂಪಾಯಿ ಸ್ನೇಹ, ನೆಟ್ ವರ್ಕಿಂಗ್ ಬೆಳಸಿಕೊಳ್ಳಲು. 15 ರೂಪಾಯಿ ಓದಿಗೆ, ಕಲಿಕೆಗೆ. 10 ರೂಪಾಯಿ ಓಡಾಟಕ್ಕೆ, ಪ್ರವಾಸಕ್ಕೆ, ಕೊನೆಯ 25 ರೂಪಾಯಿ ತಪ್ಪದೆ ಹೂಡಿಕೆ ಮಾಡಬೇಕು ಎನ್ನುತ್ತಾರೆ.

  • ಬೆಳಗಿನ ಮೊದಲ ಎರಡು ಗಂಟೆ, ಸಂಜೆ /ರಾತ್ರಿಯ ಎರಡು ಗಂಟೆ ಹೇಗೆ ಕಳೆಯುವಿರಿ ಎನ್ನುವುದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗುತ್ತದೆ.

  • ಬಟ್ಟೆ, ಶೂಸ್, ವಾಚ್, ಕಾರು ಇತ್ಯಾದಿ ಮೆಟೀರಿಯಾಲಿಸ್ಟಿಕ್ ವಸ್ತುಗಳ ಮೇಲೆ ಹೆಚ್ಚಿನ ಖರ್ಚು ಬೇಡ.

  • ಬದುಕಿಗೆ ಬೇಕಾಗುವ ಒಂದು ಫಂಡ್ ಸೃಷ್ಟಿ ಮಾಡಿಕೊಳ್ಳಬೇಕು. ನಂತರದ ಪ್ರತಿ ರೂಪಾಯಿಯನ್ನು ನಾವೇನಾಗಬೇಕು ಎಂದು ಬಯಸಿರುತ್ತೇವೆ ಆ ಕನಸಿನ ಮೇಲೆ ಸುರಿಯಬೇಕು.

  • ತಪ್ಪು ಮನುಷ್ಯ ಸಹಜ. ತಪ್ಪಿನಲ್ಲಿ , ನಿನ್ನೆಯಲ್ಲಿ ಜೀವಿಸುವುದು ತಪ್ಪಿಗಿಂತ ದೊಡ್ಡ ತಪ್ಪು . ಬೇಗ ಅದರಿಂದ ಹೊರಬಂದು ಹೊಸ ಬದುಕು ಶುರು ಮಾಡಬೇಕು.

ಆರನೇ ಸೂತ್ರ ನನಗೆ ಅತ್ಯಂತ ಇಷ್ಟವಾದದ್ದು. Life can be designed. Careers can be planned. Happiness can be prepared.ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ.

Rakesh Jhunjhunwala:

ಭಾರತದ ವಾರೆನ್ ಬಫೆಟ್ ಎಂದು ಹೆಸರಾಗಿದ್ದ ರಾಕೇಶ್ ಬದುಕು-ಹೂಡಿಕೆ ಎರಡರಲ್ಲೂ ಜಯಗಳಿಸುವಲ್ಲಿ ವಿಫಲರಾದರೂ ಇವರ ಸೂತ್ರ ಹೂಡಿಕೆಯಲ್ಲಿ ಗೆದ್ದಿದೆ. ತಮ್ಮ ಮೇಲೆ, ತಮ್ಮ ಆರೋಗ್ಯದ ಮೇಲೆ ಹೂಡಿಕೆ ಮಾಡದೆ ಬದುಕಿನಲ್ಲಿ ಸೋತರು. ಹೂಡಿಕೆಯಲ್ಲಿ ಗೆದ್ದರು. ಎರಡರಲ್ಲೂ ಬ್ಯಾಲೆನ್ಸ್ ಬಹಳ ಮುಖ್ಯ.

  • ಸ್ಟೇ ಇನ್ವೆಸ್ಟಡ್ -ಎಲ್ಲದಕ್ಕೂ ಟೈಮ್ ಬೇಕಾಗುತ್ತದೆ. ಕೊಳ್ಳುವುದು, ಮಾರುವುದು ಮಾರುಕಟ್ಟೆಯ ಪ್ರಾಥಮಿಕ ಕಾರ್ಯ. ಆದರೆ ನಿಮ್ಮ ಹೂಡಿಕೆಯಲ್ಲಿ ಸ್ವಲ್ಪ ಸಮಯವನ್ನಾದರೂ ಕಾಯಬೇಕು. ತಕ್ಷಣ ಮಾರುವುದು ಬೇಡ. ಮಾರಿದರೆ ಮತ್ತೆ ಇನ್ನೊಂದು ಹೂಡಿಕೆ ಕೂಡ ಹುಡುಕಬೇಕಾದ ಅವಶ್ಯಕತೆ ಬರುತ್ತದೆ.

  • ಕುರಿಗಳಂತೆ ಇನ್ನೊಬ್ಬರನ್ನು ಹಿಂಬಾಲಿಸಬೇಡಿ: ಸ್ವಂತಿಕೆ ಇರಲಿ. ನಕಲು ಮಾಡಬೇಡಿ.

ಕೊನೆ ಮಾತು: ಗೆದ್ದವರ ಸೂತ್ರಗಳು ಎಲ್ಲವೂ ನಮಗೆ ಸೂಕ್ತ ಎನ್ನುವಂತಿಲ್ಲ. ನಮ್ಮ ಸಮಯ , ಸಂದರ್ಭಕ್ಕೆ ತಕ್ಕಹಾಗೆ ನಾವು ಬದಲಾಯಿಸಿಕೊಳ್ಳಬೇಕು. ನಕಲು ಮಾಡುವುದು ಬೇಡ , ಅವರಿಂದ ಪ್ರೇರಣೆ ಪಡೆಯೋಣ. ಸ್ವಂತಿಕೆ ಮೆರೆಯೋಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT